My Blog List

Sunday, April 5, 2020

ಕರೋನಾ ಅಂಧಕಾರ ತೊಲಗಿಸಲು ಭಾರತ ಮಾಡಿತು ‘ಬೆಳಕಿನ ಸಂಕಲ್ಪ’

ಕರೋನಾ ಅಂಧಕಾರ ತೊಲಗಿಸಲು ಭಾರತ ಮಾಡಿತುಬೆಳಕಿನ ಸಂಕಲ್ಪಆರಿತು ಲೈಟುಬೆಳಗಿತು ದೀಪ
ನವದೆಹಲಿ: ಕೊರೊನಾವೈರಸ್ (ಕೋವಿಡ್- ೧೯) ಮಹಾಮಾರಿಯ ವಿರುದ್ಧ ನಡೆಯುತ್ತಿರುವ ಹೋರಾಟದ ಸಂದರ್ಭದಲ್ಲಿ ಮಾರಕ ಸೋಂಕು ಹರಡಿರುವ ಕತ್ತಲನ್ನು ನಿವಾರಿಸಿ ಮಾನವ ಜನಾಂಗವನ್ನು ಬೆಳಕಿನ ಕಡೆಗೆ ಒಯ್ಯುವ ಸಂಕಲ್ಪದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಇಡೀ ಭಾರತ 2020 ಏಪ್ರಿಲ್ 5 ಭಾನುವಾರ ರಾತ್ರಿ 9 ಗಂಟೆಗೆ ಸರಿಯಾಗಿ ಲೈಟುಗಳನ್ನು ಆರಿಸಿ ದೀಪಗಳನ್ನು ಬೆಳಗುವ ಮೂಲಕಬೆಳಕಿನ ಸಂಕಲ್ಪವನ್ನು ಮಾಡಿತು.

ದೆಹಲಿಯಿಂದ ಹಿಡಿದು ಹಳ್ಳಿ ಹಳ್ಳಿಗಳವರೆಗೂ ದೇಶಾದ್ಯಂತ ಯಾವುದೇ ಜಾತಿ ಭೇದವಿಲ್ಲದೆ ಎಲ್ಲ ಸಮುದಾಯಗಳ ಜನರು ದೀಪ, ಹಣತೆ, ಕ್ಯಾಂಡಲ್, ಟಾರ್ಚ್ ಇಲ್ಲವೇ ಮೊಬೈಲ್ ಫ್ಲಾಷ್ ಲೈಟುಗಳನ್ನು ಬೆಳಗಿಸಿ ಪ್ರಧಾನಿಯ ಕರೆಗೆ ಓಗೊಟ್ಟರು. ತನ್ಮೂಲಕ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಸಂಕಷ್ಟದ ಸನ್ನಿವೇಶದಲ್ಲಿ ತಮಗಾಗಿ ಹಗಲಿರುಳು ದುಡಿಯುತ್ತಿರುವ ಸೇವಾ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಹೋರಾಟದಲ್ಲಿ ಎಲ್ಲರೂ ಒಟ್ಟಾಗಿದ್ದೇವೆ ಎಂದು ಸಾರಿದರು.

ರಾತ್ರಿ ಗಂಟೆಗೆ ನಿಮಿಷಗಳ ಕಾಲ ನಮ್ಮ ತಮ್ಮ ಮನೆ, ಕಛೇರಿ ಹಾಗೂ ವಾಸ ಸ್ಥಳಗಳಲ್ಲಿನ ವಿದ್ಯುತ್ ದೀಪವವನ್ನು ಆರಿಸಿ ಬೆಳಗಿದ ದೀಪಗಳ ಬೆಳಕಿನಲ್ಲಿ ಇಡೀ ದೇಶ ಪ್ರಜ್ವಲಿಸಿತು.

ಪ್ರಧಾನಿ ಮೋದಿ ಅವರು ತಮ್ಮ ದೆಹಲಿ ನಿವಾಸದಲ್ಲಿ ವಿದ್ಯುತ್ ದೀಪಗಳನ್ನು ಆರಿಸಿ ಎಣ್ಣೆ ಬತ್ತಿ ದೀಪಗಳನ್ನು ಬೆಳಗುವ ಮೂಲಕ ತಾವೂ ಕೂಡಾ ದೀಪ ಅಭಿಯಾನಕ್ಕೆ ಕೈಜೋಡಿಸಿದರು. ರಾತ್ರಿ ಗಂಟೆಗೆ ಸರಿಯಾಗಿ ನಿಮಿಷಗಳ ಕಾಲ ದೀಪ ಹಚ್ಚಿದರು. ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಆತ್ಮಸೈರ್ಯ ತುಂಬಲು ಅಭಿಯಾನ ಪ್ರೇರಕ ಶಕ್ತಿಯಾಯಿತು.

ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಅವರು ಕೂಡಾ ರಾಷ್ಟ್ರಪತಿ ಭವನದ ಸಚಿವಾಲಯದ ಆವರಣದಲ್ಲಿ ತಮ್ಮ ಕುಟುಂಬ ಸಮೇತ ದೀಪ ಹಚ್ಚುವ ಮೂಲಕ ಅಭಿಯಾನಕ್ಕೆ ತಮ್ಮ ಬೆಂಬಲ ಪ್ರದರ್ಶಿಸಿದರು.

ಗುಜರಾತಿನಲ್ಲಿ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಅವರು ರಾತ್ರಿ ಗಂಟೆಗೆ ಸರಿಯಾಗಿ ತಮ್ಮ ಪುತ್ರ ಕರೆ ನೀಡಿದ್ದ ದೀಪ ಅಭಿಯಾನಕ್ಕೆ ಕೈಜೋಡಿಸಿದರು.

ಬೆಳಕಿನ ಸಂಭ್ರಮದಲ್ಲಿ ಮಿಂದೇಳುವ ಮುಂಬೈಯಿಂದ ಹಿಡಿದು ಪುಟ್ಟ ಹಳ್ಳಿಗಳು ಕೂಡಾ  ಕೂಡಾ ದೀಪಗಳೊಂದಿಗೆ ಝಗಮಗಿಸಿ ಲಕ್ಷದೀಪೋತ್ಸವಗಳನ್ನು ನೆನಪಿಸಿದವು. ಹಲವು ದೇವಾಲಯಗಳ ಮುಂದೆ ಅರ್ಚಕರು ಆರತಿ ಬೆಳಗುವ ಮೂಲಕ ಮಾರಕ ಕೊರೋನಾ ಅಳಿಯಲಿ ಎಂದು ಪ್ರಾರ್ಥಿಸಿದರು. ಹಲವಡೆಗಳಲ್ಲಿ ಮುಸ್ಲಿಮ್ ಬಾಲಕ, ಬಾಲಕಿಯರು ಕ್ಯಾಂಡಲ್ ಬೆಳಗಿ ಪ್ರಾರ್ಥಿಸಿದ್ದು ಕೂಡಾ ಗಮನ ಸೆಳೆಯಿತು.

ಪ್ರಧಾನಿ ನರೇಂದ್ರ ಮೋದಿ ಅವರು ದೀಪ ಬೆಳಗಿನ ವಿಡಿಯೋ ಮತ್ತು ರಾಷ್ಟ್ರವ್ಯಾಪಿ ದೀಪೋತ್ಸವದ ಚಿತ್ರಗಳು ನೋಟ ಇಲ್ಲಿದೆಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್ಕಿಸಿ.











No comments:

Advertisement