My Blog List

Friday, May 8, 2020

ಔರಂಗಾಬಾದ್ ದುರಂತ: ರೈಲು ಹರಿದು 16 ವಲಸೆ ಕಾರ್ಮಿಕರ ಸಾವು

ಔರಂಗಾಬಾದ್ ದುರಂತ: ರೈಲು ಹರಿದು 16 ವಲಸೆ ಕಾರ್ಮಿಕರ ಸಾವು
ಮುಂಬೈ: ಮಹಾರಾಷ್ಟ್ರದ  ಔರಂಗಾಬಾದ್ ನಗರದ ರೈಲು ಹಳಿಯಲ್ಲಿ ನಡೆದು ಸುಸ್ತಾಗಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದ ಪರಿಣಾಮವಾಗಿ ೧೬ ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ ದಾರುಣ ಘಟನೆ  2020 ಮೇ 08ರ ಶುಕ್ರವಾರ ನಸುಕಿನಲ್ಲಿ ಘಟಿಸಿದೆ.

ಗಾಯಗೊಂಡವರಲ್ಲಿ
ಮತ್ತೊಬ್ಬ ಆಸ್ಪತ್ರೆಯಲ್ಲಿ  ಮೃತನಾಗಿದ್ದಾನೆ. ದೂರದಲ್ಲಿ ಕುಳಿತಿದ್ದ ನಾಲ್ಕು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದುರಂತ ಸಾವಿಗೀಡಾದ ಮಂದಿ ಮಧ್ಯಪ್ರದೇಶದ ಗ್ರಾಮೀಣ ಭಾಗದ ತಮ್ಮ ಮನೆಗಳಿಗೆ ವಾಪಸಾಗುವ ಸಲುವಾಗಿ ಪಾದಯಾತ್ರೆ ಹೊರಟಿದ್ದರು ಎಂದು ಸುದ್ದಿ ಮೂಲಗಳು ಹೇಳಿವೆ.

೧೬  ಮಂದಿ ಸಾವಿಗೀಡಾಗಿರುದನ್ನು ಪೊಲೀಸರು ದೃಢಪಡಿಸಿದ್ದು, ದಕ್ಷಿಣ ಸೆಂಟ್ರಲ್ ರೈಲ್ವೇಯು ೧೫ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿತು.

ಕಾರ್ಮಿಕರು ರೈಲು ಹಳಿ ಮೂಲಕ ಕಾಲ್ನಡಿಗೆ ಹೊರಟಿದ್ದರು. ನಡೆದು ಸುಸ್ತಾಗಿದ್ದ ಅವರು ಹಳಿಗಳ ಮೇಲೆ ವಿಶ್ರಾಂತಿ ಪಡೆಯುತ್ತಾ ನಿದ್ದೆಗೆ ಜಾರಿದ್ದರು. ಬೆಳಗ್ಗೆ .೧೫ರ ವೇಳೆಗೆ ಜಲ್ನಾ ಮತ್ತು ಔರಂಗಾಬಾದ್ ನಡುವಣ ಗೂಡ್ಸ್ ರೈಲುಗಾಡಿ ಅವರ ಮೇಲೆ ಹಾದುಹೋಯಿತು ಎಂದು ವರದಿಗಳು ಹೇಳಿವೆ.

ಘಟನೆಯಲ್ಲಿ ಗಾಯಗೊಂಡಿದ್ದ ಒಬ್ಬ ವ್ಯಕ್ತಿಯನ್ನು ಸಿವಿಲ್ ಆಸ್ಪತೆಗೆ ದಾಖಲಿಸಲಾಯಿತು. ಬದುಕಿ ಉಳಿದ ನಾಲ್ವರು ಆಘಾತಕ್ಕೆ ಒಳಗಾಗಿದ್ದು, ಅವರಿಗೆ ಪೊಲೀಸರು ಸಾಂತ್ವನ ನೀಡುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೋಕ್ಷದಾ ಪಾಟೀಲ್ ನುಡಿದರು.

ಜಲ್ನಾದ ಕಬ್ಬಿಣದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೊರೋನಾವೈರಸ್ ಲಾಕ್ ಡೌನ್ ಕಾರಣ ಕೆಲಸ ಕಳೆದುಕೊಂಡು ನಡಿಗೆ ಮೂಲಕ ಮಧ್ಯಪ್ರದೇಶಕ್ಕೆ ವಾಪಸ್ ಹೊರಟಿದ್ದರು.

ಕಾರ್ಮಿಕರು ಮಹಾರಾಷ್ಟ್ರದ ಜಲ್ನಾದಿಂದ ೧೭೦ ಕಿಮೀ ದೂರದ ಭುವಸಾಲ್ಗೆ ನಡೆಯುತ್ತಾ ಹೊರಟಿದ್ದರು. ಭುವಸಾಲ್ನಲ್ಲಿ ತಮ್ಮೂರಿಗೆ ವಾಪಸಾಗಲು ರೈಲುಗಾಡಿ ಹಿಡಿಯುವುದು ಅವರ ಉದ್ದೇಶವಾಗಿತ್ತು. ಬಸ್, ರೈಲು ಸೇರಿದಂತೆ ಎಲ್ಲಾ ರೀತಿಯ ವಾಹನ ಸಂಚಾರ ರದ್ದಾಗಿದ್ದವು. ಕಾರಣದಿಂದಾಗಿ ಎಲ್ಲರೂ ರೈಲು ಹಳಿಗಳ ಮೂಲಕ ನಡೆದುಕೊಂಡೇ ಹೋಗಲು ನಿರ್ಧರಿಸಿದ್ದರು. ಸರಕು ಸಾಗಾಣಿಕೆ ರೈಲು ಸಂಚಾರ ಇದ್ದೇ ಇರುತ್ತದೆ ಎಂಬುದು ಅವರ ಅರಿವಿಗೆ ಬಂದಿರಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ರಾತ್ರಿ ೭ಗಂಟೆಗೆ ಜಲ್ನಾದಿಂದ ರೊಟ್ಟಿ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಕಟ್ಟಿಕೊಂಡು ಹೊರಟಿದ್ದರು. ಇವರೆಲ್ಲಾ ರಸ್ತೆಯ ಮೂಲಕವೇ ನಡೆದು ಬರುತ್ತಿದ್ದರು.

ಔರಂಗಾಬಾದ್
ಸಮೀಪ ರಸ್ತೆಯಿಂದ ರೈಲ್ವೆ ಹಳಿಗಳ ಮೂಲಕ ನಡೆದು ಬಂದಿದ್ದರು. ಸುಮಾರು ೩೪ ಕಿಲೋಮೀಟರ್ ದೂರ ನಡೆದು ಬಂದಿದ್ದರು. ನಡೆದು ನಡೆದೂ ಬಳಲಿದ ಕಾರ್ಮಿಕರು ಕಾರ್ನಾಡ್ ಹಾಗೂ ಬದ್ನಾಪುರ್ ರೈಲ್ವೆ ನಿಲ್ದಾಣಗಳ ಮಧ್ಯೆ ಇರುವ ರೈಲ್ವೆ ಹಳಿಗಳಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.

ಸುಮಾರು ೪೫ ಕಿಮೀ ನಡೆದ ಬಳಿಕ ದಣಿವು ಆರಿಸಿಕೊಳ್ಳಲು ಅವರ ರೈಲ್ವೇ ಹಳಿಗಳ ಸಮೀ ವಿರಮಿಸಿದ್ದರು.

ರೈಲುಚಾಲಕ ವಲಸೆ ಕಾರ್ಮಿಕರು ನಿದ್ರಿಸುತ್ತಿದ್ದುದನ್ನು ಗಮನಿಸಿ ಹಾರನ್ ಮೊಳಗಿಸಿದ ಮತ್ತು ರೈಲನ್ನು ನಿಲ್ಲಿಸಲು ಯತ್ನಿಸಿದ, ಆದರೆ ವಿಫಲನಾದ ಎಂದು ರೈಲ್ವೇ ಮೂಲಗಳು ಹೇಳಿವೆ.
ಘಟನೆ ಬಗ್ಗೆ ತನಿಖೆಗೆ ಆಜ್ಞಾಪಿಸಲಾಗಿದೆ.

ನಸುಕಿನ ವೇಳೆಯಲ್ಲಿ ಕೆಲವು ಕಾರ್ಮಿಕರು ಹಳಿಗಳ ಮೇಲೆ ಇದ್ದುದನ್ನು ಕಂಡು ಗೂಡ್ಸ್ ಗಾಡಿಯ ಲೋಕೋ ಪೈಲಟ್ ರೈಲನ್ನು ನಿಲ್ಲಿಸಲು ಯತ್ನಿಸಿದ. ಆದರೆ ಪರ್ಭಾನಿ -ಮನ್ನಾಡ್ ವಿಭಾಗದ ಬದ್ನಾಪುರ ಮತ್ತು ಕರ್ಮಡ್ ನಿಲ್ದಾಣಗಳ ಮಧ್ಯೆ ರೈಲುಗಾಡಿ ಕಾರ್ಮಿಕರ ಮೇಲೆ ಹಾದುಹೋಯಿತು ಎಂದು ರೈಲ್ವೇ ಸಚಿವಾಲಯವು ಟ್ವೀಟಿನಲ್ಲಿ ತಿಳಿಸಿತು.

ಇದು ದುರದೃಷ್ಟಕರ. ರೈಲ್ವೆ ಹಳಿಯಿಂದ ಸ್ವಲ್ಪ ದೂರ ಕುಳಿತುಕೊಂಡಿದ್ದ ನಾಲ್ವರು ಬದುಕಿದ್ದಾರೆ. ಜಲ್ನಾದಿಂದ ಬಂದಿದ್ದ ವಲಸೆ ಕಾರ್ಮಿಕರು ಮನೆಗೆ ಹೋಗಲಿರುವ ರೈಲು ಹತ್ತಲು ಭುವಸಾಲ್ ಕಡೆಗೆ ಹೋಗುತ್ತಿದ್ದರು, ಅವರು ನಿರ್ದಿಷ್ಟವಾಗಿ ಯಾವ ಸ್ಥಳಕ್ಕೆ ಹೋಗುತ್ತಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರ ಜತೆಗಿದ್ದವರಲ್ಲಿ ನಾವು ಮಾತನಾಡುತ್ತಿದ್ದು, ಅವರಿಗೆ ಆಪ್ತ ಸಹಾಯ ನೀಡುತ್ತಿದ್ದೇವೆ ಎಂದು ಮೋಕ್ಷದಾ ಹೇಳಿದರು.

ತನಿಖೆಗೆ ಆದೇಶ: ಗಾಯಗೊಂಡವರನ್ನು ಔರಂಗಬಾದ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲು ರೈಲ್ವೆ ಸಚಿವ ಪೀಯೂಷ್ ಗೋಯಲ್ ಆದೇಶಿಸಿದ್ದಾರೆ.ದುರ್ಘಟನೆಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಟ್ವಿಟ್ಟರ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ
ಪ್ರಧಾನಿ ತೀವ್ರ ಬೇಸರ
ಮಹಾರಾಷ್ಟ್ರದ ಔರಂಗಬಾದಿನಲ್ಲಿ ಸಂಭವಿಸಿದ ರೈಲು ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕುರಿತು ಟ್ವೀಟ್ ಮಾಡಿದ ಅವರು, ಅಗತ್ಯವಿರುವ ಎಲ್ಲ ಸಹಾಯವನ್ನೂ ಒದಗಿಸಲಾಗುವುದು, ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಔರಂಗಾಬಾದಿನಲ್ಲಿ ನಡೆದ ರೈಲು ಅಪಘಾತದಲ್ಲಿ ವಲಸೆ ಕಾರ್ಮಿಕರ ಪ್ರಾಣಹಾನಿಯಾಗಿದ್ದು ತೀವ್ರ ಸಂಕಟ ಉಂಟು ಮಾಡಿದೆ. ಘಟನೆ ಬಗ್ಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಮಾತನಾಡಿದ್ದೇನೆ. ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ, ಎಂದು ಮೋದಿ ಟ್ವೀಟ್ ಮಾಡಿದರು.

ದುರಂತಕ್ಕೆ ವಿಷಾದ ವ್ಯಕ್ತಪಡಿಸಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್, ಪರಿಹಾರ ಕಾರ್ಯಗಳು ನಡೆಯುತ್ತಿವೆ. ಘಟನೆಯ ವಿಚಾರಣೆಗೆ ಆದೇಶ ನೀಡಲಾಗಿದೆ. ಅಗಲಿದ ಆತ್ಮಗಳ ಶಾಂತಿಗಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ, ಎಂದು ಟ್ವೀಟ್ ಮಾಡಿದರು.

No comments:

Advertisement