Friday, May 8, 2020

ಶ್ವೇತಭವನದ ಗುಲಾಬಿ ತೋಟದಲ್ಲಿ ಮಾರ್ದನಿಸಿತು ಶಾಂತಿಮಂತ್ರ

ಶ್ವೇತಭವನದ  ಗುಲಾಬಿ ತೋಟದಲ್ಲಿ ಮಾರ್ದನಿಸಿತು  ಶಾಂತಿಮಂತ್ರ
ವಾಷಿಂಗ್ಟನ್: ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ನರಳುತ್ತಿರುವ ಪ್ರತಿಯೊಬ್ಬರ ಆರೋಗ್ಯ, ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಹಿಂದೂ ಪುರೋಹಿತರೊಬ್ಬರು ಶ್ವೇತಭವನದ ರೋಸ್ ಗಾರ್ಡನ್ನಿನಲ್ಲಿ  2020 ಮೇ 08ರ ಗುರುವಾರ ಶಾಂತಿ ಮಂತ್ರ ಪಠಣ ಮಾಡಿದರು.

ಅಮೆರಿಕದ ರಾಷ್ಟ್ರೀಯ ಪ್ರಾರ್ಥನಾ ಸೇವೆಯ ದಿನ ಶ್ವೇತಭವನದಲ್ಲಿ ಎಲ್ಲ ಧರ್ಮಗಳ ಧರ್ಮಗುರುಗಳಿಂದ ಶಾಂತಿ ಪ್ರಾರ್ಥನೆ ಮಾಡಿಸುವ ಕ್ರಮವಿದೆ. ಅದರಂತೆ ಹಿಂದು ಪುರೋಹಿತರಿಂದ ಗುರುವಾರ ಶಾಂತಿ ಮಂತ್ರ ಪಠಣ ನಡೆಯಿತು.

ನ್ಯೂಜೆರ್ಸಿಯ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದ ಪುರೋಹಿತ ಹರೀಶ ಬ್ರಹ್ಮಭಟ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಶ್ವೇತಭವನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಂತಿಮಂತ್ರವನ್ನು ಪಠಿಸಿದರು.

ಕೊರೊನಾ ವೈರಸ್ ಮತ್ತು ದಿಗ್ಬಂಧನಗಳಿಂದ ತೊಂದgಗೆ ಒಳಗಾಗಿರುವ   ಹೊತ್ತಿನಲ್ಲಿ, ಜನರು ಆತಂಕಕ್ಕೊಳಗಾಗುವುದು ಅಥವಾ ಅವರ ಶಾಂತಿಗೆ ಭಂಗವಾಗುವುದು ಸಹಜ. ಶಾಂತಿ ಮಂತ್ರವು, ಲೌಕಿಕ ಸಂಪತ್ತು, ಯಶಸ್ಸು, ಖ್ಯಾತಿಯನ್ನೂ ಮೀರಿ ಶಾಂತಿಗಾಗಿ ಸಲ್ಲಿಸುವ ಪ್ರಾರ್ಥನೆಯಾಗಿದೆ. ಇದು ಶಾಂತಿಯನ್ನು ಕೋರುವ ಹಿಂದೂ ಪ್ರಾರ್ಥನೆ. ಯಜುರ್ವೇದ ಮೂಲದ ವೈದಿಕ ಮಂತ್ರಎಂದು ಶ್ವೇತಭವನದ ರೋಸ್ ಗಾರ್ಡನ್ನಿನಲ್ಲಿ ಹರೀಶ  ಬ್ರಹ್ಮಭಟ್ ವಿವರಿಸಿದರು.

ಪ್ರಾರ್ಥನೆ, ಮಂತ್ರ ಪಠಣೆಗಾಗಿ ಡೊನಾಲ್ಡ್ ಟ್ರಂಪ್ ಅವರು ಹರೀಶ ಬ್ರಹ್ಮಭಟ್ ಅವರಿಗೆ ಧನ್ಯವಾದ ಅರ್ಪಿಸಿದರು.

ಇತರ ಧರ್ಮಗಳ ಗುರುಗಳಿಂದಲೂ ಸಂದರ್ಭದಲ್ಲಿ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು.

No comments:

Advertisement