Wednesday, May 20, 2020

ಕೋವಿಡ್-19: ಭಾರತವೇ ವಾಸಿ, 15 ರಾಷ್ಟಗಳ ಸ್ಥಿತಿ ನೋಡಿ..!

ಕೋವಿಡ್-19: ಭಾರತವೇ ವಾಸಿ, 15 ರಾಷ್ಟಗಳ ಸ್ಥಿತಿ ನೋಡಿ..!
ನವದೆಹಲಿ: ವಿಶ್ವವನ್ನು ಕಾಡುತ್ತಿರುವ ಕೊರೋನಾವೈರಸ್ ಸೋಂಕು ಅತಿಯಾಗಿ ಬಾಧಿಸಿರುವ ಇತರ ೧೫ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಹಲವು ಪಟ್ಟು ಉತ್ತಮವಾಗಿದೆ ಎಂದು ಕೇಂದ್ರ ಸರ್ಕಾರವು 2020 ಮೇ 20ರ ಬುಧವಾರ ಅಂಕಿ ಸಂಖ್ಯೆಗಳ ಸಹಿತವಾಗಿ ಪ್ರತಿಪಾದಿಸಿತು.

ಪಾಸಿಟಿವ್ ಪ್ರಕರಣಗಳ ಅನುಪಾತ, ಒಟ್ಟು ಜನಸಂಖ್ಯೆ ಮತ್ತು ೧೫ ದೇಗಳ ಒಟ್ಟು ಜನಸಂಖ್ಯೆ ಜೊತೆಗಿನ ಕೋವಿಡ್ ಸಾವಿನ ಅನುಪಾತದ ವಿವರಗಳನ್ನು ಸರ್ಕಾರ ಒದಗಿಸಿತು.

ಆರೋಗ್ಯ ಸಚಿವಾಲಯದ ಅಧಿಕಾರಿ ಒದಗಿಸಿದ ಮಾಹಿತಿ ಪ್ರಕಾರ ವಿಶ್ವದಲ್ಲಿ ಕೊರೋನಾಸೋಂಕಿನಿಂದ ಅತಿಯಾಗಿ ಬಳಲುತ್ತಿರುವ ಅಮೆರಿಕ, ರಶ್ಯಾ, ಸ್ಪೇನ್, ಬ್ರೆಜಿಲ್, ಇಂಗ್ಲೆಂಡ್, ಇಟಲಿ, ಫ್ರಾನ್ಸ್, ಜರ್ಮನಿ, ಟರ್ಕಿ, ಇರಾನ್, ಪೆರು, ಕೆನಡ, ಸೌದಿ ಅರೇಬಿಯಾ, ಬೆಲ್ಜಿಯಂ ಮತ್ತು ಮೆಕ್ಸಿಕೋ ಸೇರಿದಂತೆ ೧೫ ರಾಷ್ಟ್ರಗಳ ಒಟ್ಟು ಜನಸಂಖ್ಯೆ ೧೪೨. ಕೋಟಿಯಾಗಿದ್ದು ರಾಷ್ಟ್ರಗಳಲ್ಲಿ ಒಟ್ಟು ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೩೬.೪೫ ಲಕ್ಷ. ಭಾರತದ ಜನಸಂಖ್ಯೆ ೧೩೭ ಕೋಟಿಯಾಗಿದ್ದು ದಾಖಲಾಗಿರುವ ಒಟ್ಟು ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಮೇ ೧೯ರವರೆಗೆ ಒಂದು ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಅಷ್ಟೆ.

ರಾಷ್ಟ್ರಗಳಲ್ಲಿ ಕೊರೋನಾವೈರಸ್ಸಿಗೆ ಬಲಿಯಾಗಿರುವವರ ಒಟ್ಟು ಸಂಖ್ಯೆ .೭೩ ಲಕ್ಷವಾಗಿದ್ದರೆ, ಭಾರತದಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಕೇವಲ ,೩೦೩.
೧೫ ರಾಷ್ಟ್ರಗಳ ಒಟ್ಟು ಜನಸಂಖ್ಯೆಯ ಪ್ರಮಾಣ ಭಾರತದಷ್ಟೇ ಇದೆ, ಆದರೆ ಅಲ್ಲಿ ಭಾರತಕ್ಕಿಂತ ೩೪ ಪಟ್ಟು ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಭಾರತಕ್ಕಿಂತ ೮೩ ಪಟ್ಟು ಹೆಚ್ಚು ಸಾವುಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು.

ಅಂಕಿ ಸಂಖ್ಯೆಗಳು ಭಾರತದ ಸ್ಥಿತಿಗತಿ ತೃಪ್ತಿಕರವಾಗಿದೆ ಎಂದೇನಲ್ಲ. ಆದರೆ ವೈದ್ಯಕೀಯವಾಗಿ ನಮ್ಮ ನಿರ್ವಹಣೆ, ರೋಗಿಗಳ ಪ್ರಾಣರಕ್ಷಣೆ ಇತ್ಯಾದಿ ವಿಚಾರದಲ್ಲಿ ನಮ್ಮ ಕೆಲಸ ಹೇಗೆ ತೃಪ್ತಿಕರವಾಗಿದೆ ಎಂಬುದನ್ನು ತೋರಿಸುತ್ತಿದೆ ಎಂದು ಅಗರವಾಲ್ ನುಡಿದರು.

ಭಾರತದಲ್ಲಿ ಚೇತರಿಕೆಯ ಪ್ರಮಾಣ ಮಾರ್ಚ್ ೨೫ರಂದು ದಿಗ್ಬಂಧನ ಹೇರುವಾಗ ಶೇಕಡಾ .೧ರಷ್ಟಿತ್ತು. ಎರಡನೇ ಹಂತಕ್ಕೆ ಕಾಲಿಡುವ ವೇಳೆಗೆ ಅದು ಶೇಕಡ ೧೧.೪೨ಕ್ಕೇ ಏರಿತ್ತು. ಬಳಿಕ ಶೇಕಡಾ ೨೬.೫೯ಕ್ಕೆ ಏರಿತು. ಮೇ ೧೯ರ ವೇಳೆಗೆ ಇದು ಶೇಕಡಾ ೩೯.೬೨ಕ್ಕೆ ತಲುಪಿದೆ ಎಂದು ಅವರು ವಿವರಿಸಿದರು.

ಪ್ರಸ್ತುತ ದೇಶದಲ್ಲಿ ೬೧,೦೦೦ ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಪೈಕಿ ಆಮ್ಲಜನಕದ ಬೆಂಬಲದಲ್ಲಿ ಇರುವವರು ಶೇಕಡಾ .೯೪ ಮಾತ್ರ. ಶೇಕಡಾ ೩ರಷ್ಟ ಮಂದಿ ತೀವ್ರ ನಿಗಾ ಘಟಕದಲಿ ಇದ್ದರೆ, ಶೇಕಡಾ .೪ರಷ್ಟು ಮಂದಿ ಮಾತ್ರ ವೆಂಟಿಲೇಟರ್ ಬೆಂಬಲ ಹೊಂದಿದ್ದಾರೆ ಎಂದು ಅಗರವಾಲ್ ನುಡಿದರು.

ಬುಧವಾರದ ಅಂಕಿಸಂಖ್ಯೆ ಪ್ರಕಾರ ಭಾರತದಲ್ಲಿ ಕೊರೋನಾ ಸೋಂಕಿನ ಪ್ರಕರಣ ,೦೭,೦೦ ಇದ್ದರೆ, ಸಾವಿನ ಸಂಖ್ಯೆ ,೩೦೩ ಮತ್ತು ಚೇತರಿಕೆ ಸಂಖ್ಯೆ ೪೨,೨೯೮.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೫೦,೧೭,೮೯೭, ಸಾವು ,೨೫,೬೨೪
ಚೇತರಿಸಿಕೊಂಡವರು- ೧೯,೮೦,೧೧೮
ಅಮೆರಿಕ ಸೋಂಕಿತರು ೧೫,೭೩,೦೪೨, ಸಾವು ೯೩,೬೫೨
ಸ್ಪೇನ್ ಸೋಂಕಿತರು ,೭೮,೮೦೩, ಸಾವು ೨೭,೭೭೮
ಇಟಲಿ ಸೋಂಕಿತರು ,೨೬,೬೯೯, ಸಾವು ೩೨,೧೬೯
ಜರ್ಮನಿ ಸೋಂಕಿತರು ,೭೭,೯೮೯, ಸಾವು ,೨೦೯
ಚೀನಾ ಸೋಂಕಿತರು ೮೨,೯೬೫, ಸಾವು ,೬೩೪
ಇಂಗ್ಲೆಂಡ್ ಸೋಂಕಿತರು ,೪೮,೮೧೮, ಸಾವು ೩೫,೩೪೧
ಅಮೆರಿಕದಲ್ಲಿ ೧೧೯, ಇರಾನಿನಲ್ಲಿ ೬೪, ಬೆಲ್ಜಿಯಂನಲ್ಲಿ ೪೨, ಇಂಡೋನೇಷ್ಯ ೨೧, ನೆದರ್ ಲ್ಯಾಂಡ್ಸ್ನಲ್ಲಿ ೩೩, ರಶ್ಯಾದಲ್ಲಿ ೧೩೫,  ಸ್ವೀಡನ್ನಲ್ಲಿ ೮೮, ಮೆಕ್ಸಿಕೋದಲ್ಲಿ ೩೩೪ ಒಟ್ಟಾರೆ ವಿಶ್ವಾದ್ಯಂತ ೧೦೭೦ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement