My Blog List

Wednesday, May 20, 2020

ಅಪ್ಪಳಿಸಿತು ‘ಅಂಫಾನ್’: ಒಡಿಶಾ, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ತತ್ತರ

ಅಪ್ಪಳಿಸಿತುಅಂಫಾನ್’: ಒಡಿಶಾ, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ತತ್ತರ
ನವದೆಹಲಿ: ಎರಡು ದಶಕಗಳ ಬಳಿಕ ಗಂಟೆಗೆ ೧೦೦ ಕಿಲೋ ಮೀಟರುಗಳಿಗಿಂತಲೂ ಹೆಚ್ಚಿನ ವೇಗದೊಂದಿಗೆ ಅಂಫಾನ್ ಚಂಡಮಾರುತವು ರೌದ್ರಾವತಾರದೊಂದಿಗೆ  2020 ಮೇ 20ರ  ಬುಧವಾರ  ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸಿದ್ದು ಭಾರೀ ಗಾಳಿ, ಮಳೆಯೊಂದಿಗೆ ಅನಾಹುತಗಳನ್ನು ಸೃಷ್ಟಿಸಿ, ಕನಿಷ್ಠ ಮೂವರನ್ನು ಬಲಿ ಪಡೆದಿದೆ ಎಂದು ಪ್ರಾಥಮಿಕ ವರದಿ ತಿಳಿಸಿತು.

ಬೆಳಗ್ಗೆ .೩೦ರ ಸುಮಾರಿಗೆ ಒಡಿಶಾದ ಹಲವಾರು ಭಾಗಗಳಿಗೆ ಅಪ್ಪಳಿಸಿದ ಚಂಡಮಾರುತ ಬಳಿಕ ಮಧ್ಯಾಹ್ನದ ವೇಳೆಗೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಕ್ಕೆ ವ್ಯಾಪಿಸಿತು. ಭಾರೀ ಗಾಳಿ ಮತ್ತು ಮಳೆಯಿಂದಾಗಿ ತೀವ್ರ ಹಾನಿ ಸಂಭವಿಸಿದ್ದು ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ .೫೮ ಲಕ್ಷ ಮಂದಿಯನ್ನು ತೆರವುಗೊಳಿಸಿ ಬೇರೆ ಕಡೆಗಳಿಗೆ ಸ್ಥಳಾಂತರಿಸಲಾಯಿತು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ ಎಫ್) ಮಹಾ ನಿರ್ದೇಶಕ ಎಸ್ ಎನ್ ಪ್ರಧಾನ್ ಹೇಳಿದರು.

ಬಾಂಗ್ಲಾದೇಶದಲ್ಲಿ ಸುಮಾರು ೨೦ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಕರಾವಳಿಯನ್ನು ಹಾದುಹೋಗುವಾಗ ಚಂಡ ಮಾರುತದ ವೇಗ ಗಂಟೆಗೆ ೧೮೫ ಕಿಮೀಗಳಷ್ಟು ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಬಾಂಗ್ಲಾದೇಶದಲ್ಲಿ ಒಂದು ಸಾವು ಸಂಭವಿಸಿದೆ ಎಂದು ವರದಿಗಳು ಹೇಳಿವೆ.

ಪಶ್ಚಿಮ ಬಂಗಾಳದ ದಿಘಾ ಮತ್ತು ಬಾಂಗ್ಲಾದೇಶದ ಹಟಿಯಾ ದ್ವೀಪದ ನಡುವಣ ಪ್ರದೇಶದಲ್ಲಿ ಮಧ್ಯಾಹ್ನ .೩೦ರ ವೇಳೆಗೆ ಭಾರೀ ವೇಗದೊಂದಿಗೆ ಅಪ್ಪಳಿಸಿತು ಎಂದು ಹವಾಮಾನ ಇಲಾಖೆ ತಿಳಿಸಿತು.

ಚಂಡಮಾರುತ ಅಪ್ಪಳಿಸುವ ಹೊತ್ತಿನಲ್ಲಿ ತೀವ್ರ ಬಿರುಗಾಳಿಯೊಂದಿಗೆ ಭಾರೀ ಮಳೆ ಸುರಿಯಿತು. ಪಶ್ಚಿಮ ಬಂಗಾಳದಲ್ಲಿ ಸುಮಾರು ಲಕ್ಷ ಮಂದಿ ಮತ್ತು ಒಡಿಶಾದಲ್ಲಿ ಸುಮಾರು ,೫೮,೬೪೦ ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಎನ್ಡಿಆರ್ಎಫ್ ಮುಖ್ಯಸ್ಥ ಪ್ರಧಾನ್ ನುಡಿದರು.

ಚಂಡಮಾರುತ ಅಪ್ಪಳಿಸುವುದಕ್ಕೂ ಮುಂಚೆ ಸುರಿದ ಭಾರೀ ಗಾಳಿ ಮಳೆಯ ರೌದ್ರ ನರ್ತನದ ವಿಡಿಯೋಗಳು, ಫೊಟೋಗಳು ಸಾಮಾಜಿಕ ಮಾಧ್ಯಮಗಲ್ಲಿ ವೈರಲ್ ಆದವು.ಗಾಳಿಯ ಅಬ್ಬರಕ್ಕೆ ಅನೇಕ ಮರಗಳು, ವಿದ್ಯುತ್, ದೂರವಾಣಿ ಕಂಬಗಳು ನೆಲಕ್ಕುರುಳಿದವು.

ಒಡಿಶಾದ ಭದ್ರಕ್ ಮತ್ತು ಕೇಂದ್ರಪಾಡ ಜಿಲ್ಲೆಗಳಲ್ಲಿ ಅಂಫನ್ ಚಂಡಮಾರುತಕ್ಕೆ ಇಬ್ಬರು ಬಲಿಯಾಗಿದ್ದಾರೆ ಎಂದು ಸರ್ಕಾರಕ್ಕೆ ವರದಿ ಬಂದಿದೆ. ಭದ್ರಕ್ ಜಿಲ್ಲೆಯ ತಿಹಿಡಿಯಲ್ಲಿ ಮಗು ಒಂದು ಸಾವನ್ನಪ್ಪಿದೆ. ಜಿಲ್ಲಾಧಿಕಾರಿಯವರು ತಹಶೀಲ್ದಾರ್, ವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳ ತಂಡ ಕಳುಹಿಸಿದ್ದಾರೆ. ಸಾವಿನ ಕಾರಣ ಇನ್ನೂ ದೃಢಪಟ್ಟಿಲ್ಲ ಎಂದು ವಿಶೇಷ ಪರಿಹಾರ ಕಮಿಷನರ್ ಪ್ರದೀಪ್ ಜೆನಾ ಹೇಳಿದ್ದಾರೆ.

ಇನ್ನೊಂದು ಘಟನೆಯಲ್ಲಿ ೬೭ ವರ್ಷದ ಮಹಿಳೆಯೊಬ್ಬರು ಕೇಂದ್ರಪಾಡ ಜಿಲ್ಲೆಯ ಸಾತಭಯ ಪ್ರದೇಶದಲ್ಲಿ ಸಾವನ್ನಪ್ಪಿದ್ದಾಳೆ ಎಂದು ವರದಿ ತಿಳಿಸಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) ೪೧ ತಂಡಗಳು  ಉಭಯ ರಾಜ್ಯಗಳಲ್ಲೂ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಗಂಟೆಗೆ ಸುಮಾರು ೨೦೦ ಕೀ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ವ್ಯಾಪಕ ನಾಶ, ನಷ್ಟ ಸಂಭವಿಸಿದೆ. ಮರಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಲೆವೆಡೆ ರಸ್ತೆಗಳ ಮೇಲೆ ಮರ ಬಿದ್ದ ಪರಿಣಾಮ ವಾಹನ ಸಂಚಾರಕ್ಕೂ ಅಡ್ಡಿಯುಂಟಾಗಿದೆ. ಹಲವು ಪ್ರದೇಶಗಳಲ್ಲಿ ಮಣ್ಣು ಕುಸಿತ ಉಂಟಾಗಿದೆ.

ದೇಶವು ಕೊರೊನಾ ವೈರಸ್ ಬಿಕ್ಕಟ್ಟು ಎದುರಿಸುತ್ತಿರುವಾಗಲೇ  ಮತ್ತೊಂದು ಪ್ರಕೃತಿ ವಿಕೋಪ ಎದುರಾಗಿದೆ. ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಸಂಚರಿಸಬೇಕಾಗಿದ್ದ ಶ್ರಮಿಕ ವಿಶೇಷ ರೈಲನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ರಾಜ್ಯ ರ್ಕಾರ  ಹಾಗೂ ರಕ್ಷಣಾ ತಂಡಗಳ ಜೊತೆ ಸಮನ್ವಯದೊಂದಿಗೆ ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ ಭಾರತೀಯ ಹವಾಮಾನ ಇಲಾಖೆಯು ಸೂಕ್ತ ರೀತಿಯಲ್ಲಿ ಮುನ್ಸೂಚನೆಯೊಂದಿಗೆ ಚಂಡಮಾರುತ ಪ್ರಭಾವದ ಬಗ್ಗೆ ಮಾಹಿತಿ ನೀಡುತ್ತಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯು ಭಾರ ಕುಸಿತದಿಂದ ಚಂಡಮಾರುತ ಉದ್ಭವಗೊಂಡಿದೆ. ಇದು ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶ ಕರಾವಳಿ ತೀರದತ್ತ ಸಾಗಿದೆ. ಪಶ್ಚಿಮ ಬಂಗಾಳದಲ್ಲಿ ಅಪ್ಪಳಿಸಿರುವ ಚಂಡ ಮಾರುತ ಅಲ್ಲಿಂದ ಬಾಂಗ್ಲಾದೇಶ ಹಟಿಯಾ ಕಡಲ ತೀರದತ್ತ ಸಾಗಿತು.

ಅಂಫನ್ ತೂಫಾನು ೧೯೯೯ರ ಬಳಿಕ ಸೂಪರ್ ಸೈಕ್ಲೋನ್ ಆಗಿ ಪರಿವರ್ತನೆಗೊಂಡು ಬಂಗಾಳ ಕೊಲ್ಲಿಯ ಅಪಾಯಕಾರಿ ಚಂಡಮಾರುತವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿತ್ತು.

ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕಡಲ ತೀರಾ ಪ್ರದೇಶದಲ್ಲಿ ಅಂಫಾನ್ ಚಂಡಮಾರುತ ಪ್ರಭಾವದಿಂದಾಗಿ ಅಪ್ಪಳಿಸುವುದಕ್ಕೂ ಮೊದಲೇ ಗಾಳಿ ಸಹಿತ ಭಾರಿ ಮಳೆ ಸುರಿಯಿತು.

ಅಂಫಾನ್ ಚಂಡಮಾರುತ ಮಣ್ಣು ಕುಸಿತ, ವಿದ್ಯುತ್ ತಂತಿ ಕಡಿತ, ಮರಗಳ ಉರುಳುವಿಕೆ, ಗುಡಿಸಲು ನಾಶ ಸೇರಿದಂತೆ ಭಾರಿ ಅನಾಹುತವನ್ನುಂಟು ಮಾಡಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು.

ದಿನ ಮೊದಲೇ ಪೂರ್ವ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ ಸುರಿಯಲು ಆರಂಭಿಸಿತ್ತು. ಬುಧವಾರ ಬೆಳಗಿನ ವೇಳೆಗೆ ಒಡಿಶಾವನ್ನು ತಲುಪಿದ ಅಂಫಾನ್, ಮಧ್ಯಾಹ್ನದ ಹೊತ್ತಿಗೆ ಪಶ್ಚಿಮ ಬಂಗಾಳವನ್ನು ತಲುಪಿತು. ಸೂಪರ್ ಸೈಕ್ಲೋನ್ ಆಗಿ ಮಾರ್ಪಟ್ಟಿರುವ ಅಂಫಾನ್ ಚಂಡಮಾರುತ ವ್ಯಾಪಕ ಅನಾಹುತಕ್ಕೆ ಕಾರಣವಾಗು ಭೀತಿ ಸೃಷ್ಟಿಯಾಗಿದೆ.

No comments:

Advertisement