Wednesday, May 13, 2020

ಕೋವಿಡ್ -19 : ರೈಲು ಭವನ ಬಂದ್, ಸೋಂಕು ಪ್ರಕರಣ ೭೫,೦೪೮, ಸಾವು ೨೪೪೦

ಕೋವಿಡ್ -19 : ರೈಲು ಭವನ ಬಂದ್, ಸೋಂಕು ಪ್ರಕರಣ ೭೫,೦೪೮, ಸಾವು ೨೪೪೦
ನವದೆಹಲಿ: ರೈಲ್ವೇ ಸುರಕ್ಷತಾ ಪಡೆಯ ಸಿಬ್ಬಂದಿಯೊಬ್ಬರಿಗೆ ಕೊರೋನಾ ವೈರಸ್ ಸೋಂಕು ಹರಡಿದ ಪರಿಣಾಮವಾಗಿ ಕೇಂದ್ರ ದೆಹಲಿಯಲ್ಲಿನ ಭಾರತೀಯ ರೈಲ್ವೇ ಕೇಂದ್ರ ಕಚೇರಿಯನ್ನು 2020 ಮೇ  13ರ ಬುಧವಾರ ಎರಡು ದಿನಗಳ ಅವಧಿಗಾಗಿ ಮುಚ್ಚಲಾಯಿತು. 
ಅಸ್ವಸ್ಥ ನೌಕರ ರೈಲ್ವೇ ಭವನದ ೪ನೇ ಮಹಡಿಯಲ್ಲಿರುವ  ರೈಲ್ವೇ ಸುರಕ್ಷತಾ ಪಡೆಯ (ಆರ್ ಪಿಎಫ್) ಮಹಾ ನಿರ್ದೇಶಕ ಅರುಣ್ ಕುಮಾರ್ ಅವರ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸಮಾಡುತ್ತಿದ್ದು, ಆತನನ್ನು ಮೇ ೬ರಿಂದ ಕ್ವಾರಂಟೈನಿನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ನುಡಿದರು.

ಬುಧವಾರ ಹೊರಡಿಸಲಾಗಿರುವ ಆದೇಶದಂತೆ ರೈಲ್ವೇ ಮಂಡಳಿ ಇರುವ ಕಟ್ಟಡವನ್ನು ಎಲ್ಲ ಕೊಠಡಿಗಳ ಸ್ವಚ್ಚತೆ ಸಲುವಾಗಿ ಮೇ ೧೪ ಮತ್ತು ೧೫ರಂದು ಮುಚ್ಚಲಾಗುವುದು ಎಂದು ತಿಳಿಸಲಾಗಿದೆ.

ಮಧ್ಯೆ, ೩೫೨೫ ಹೊಸ ಪ್ರಕರಣಗಳೊಂದಿಗೆ ಭಾರತದಲ್ಲಿ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ ೭೫,೦೪೮ಕ್ಕೆ ತಲುಪಿದೆ. ೨೪ ಗಂಟೆಗಳಲ್ಲಿ ೧೨೨ ಜನರ ಸಾವಿನೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆ ,೪೪೦ ಕ್ಕೆ ಏರಿದೆ. ೨೪,೩೮೫ ಮಂದಿ ಗುಣಮುಖರಾಗಿದ್ದಾರೆ.

ಜಾಗತಿಕವಾಗಿ ಕೋವಿಡ್ ೧೯ ಸೋಂಕಿಗೆ ಒಳಗಾಗಿರುವವರ ಸಂಖ್ಯೆ ೪೩,೬೩,೯೦೬ಕ್ಕೆ ಏಋಇದ್ದು, ಮೃತರ ಸಂಖ್ಯೆ ,೯೩,೫೪೭ಕ್ಕೆ ಏರಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೪೩,೭೪,೯೧೪, ಸಾವು ,೯೪,೪೧೪
ಚೇತರಿಸಿಕೊಂಡವರು- ೧೬,೨೨,೦೬೯
ಅಮೆರಿಕ ಸೋಂಕಿತರು ೧೪,೧೧,೧೧೮, ಸಾವು ೮೩,೫೬೪
ಸ್ಪೇನ್ ಸೋಂಕಿತರು ,೭೧,೦೯೫, ಸಾವು ೨೭,೧೦೪
ಇಟಲಿ ಸೋಂಕಿತರು ,೨೧,೨೧೬,  ಸಾವು ೩೦,೯೧೧
ಜರ್ಮನಿ ಸೋಂಕಿತರು ,೭೩,೫೪೬, ಸಾವು ,೭೮೦
ಚೀನಾ ಸೋಂಕಿತರು ೮೨,೯೨೬, ಸಾವು ,೬೩೩
ಇಂಗ್ಲೆಂಡ್ ಸೋಂಕಿತರು ,೨೯,೭೦೫, ಸಾವು ೩೩,೧೮೬
ಅಮೆರಿಕದಲ್ಲಿ ೧೩೯೧, ಇರಾನಿನಲ್ಲಿ ೫೦, ಬೆಲ್ಜಿಯಂನಲ್ಲಿ ೮೨, ಸ್ಪೇನಿನಲ್ಲಿ ೧೮೪, ನೆದರ್ ಲ್ಯಾಂಡ್ಸ್ನಲ್ಲಿ ೫೨, ರಶ್ಯಾದಲ್ಲಿ ೯೬, ಸ್ವೀಡನ್ನಲ್ಲಿ ೧೪೭, ಮೆಕ್ಸಿಕೋದಲ್ಲಿ ೩೫೩, ಇಂಗ್ಲೆಂಡಿನಲ್ಲಿ ೪೯೪ ಒಟ್ಟಾರೆ ವಿಶ್ವಾದ್ಯಂತ ,೯೬೩ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement