My Blog List

Thursday, May 14, 2020

ರೈತರಿಗೆ ನಬಾರ್ಡ್ ನೆರವು: ರೂ. 30,000 ಕೋಟಿ ಮೂಲ ಬಂಡವಾಳ

ರೈತರಿಗೆ  ನಬಾರ್ಡ್   ನೆರವು:  ರೂ. 30,000 ಕೋಟಿ ಮೂಲ ಬಂಡವಾಳ
. ಕೋಟಿ ರಿಯಾಯ್ತಿ ಕಿಸಾನ್ ಕ್ರೆಡಿಟ್ ಕಾರ್ಡ್, * ವಲಸಿಗರು, ಬೀದಿ ವ್ಯಾಪಾರಿಗಳಿಗೂ ನೆರವು, * ವಿಶೇಷ ಪ್ಯಾಕೇಜಿನ ೨ನೇ ಕಂತಿನ ವಿವರ ನೀಡಿದ ನಿರ್ಮಲಾ ಸೀತಾರಾಮನ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ೨೦ ಲಕ್ಷ ಕೋಟಿ ರೂ. ವಿಶೇಷ ಕೊಡುಗೆಯ ಮೊದಲ ಕಂತಿನ ವಿವರಗಳನ್ನು  2020 ಮೇ 13ರ ಬುಧವಾರ ವಿವರಿಸಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಣ್ಣ ರೈತರು, ವಲಸೆ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಹಾಗೂ ಸ್ವಯಂ ಉದ್ಯೋಗಿಗಳಿಗೆ ಒದಗಿಸಲಾಗಿರುವ ವಿಶೇಷ ಸವಲತ್ತುಗಳನ್ನು 2020 ಮೇ 14ರ ಗುರುವಾರ  ಪ್ರಕಟಿಸಿದರು.

ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ ಸಚಿವರು ರೈತರಿಗೆ ಬೆಳೆಸಾಲ ಒದಗಿಸುವ ಸಲುವಾಗಿ ನಬಾರ್ಡ್ ಮೂಲಕ ೩೦,೦೦೦ ಕೋಟಿ ರೂಪಾಯಿಗಳ ಹೆಚ್ಚುವರಿ ತುರ್ತು ಮೂಲ ಬಂಡವಾಳ ಒದಗಿಸಲಾಗುವುದು ಎಂದು ಘೋಷಿಸಿದರು. ಕೋಟಿ ರೈತರಿಗೆ ಇದರ ಲಾಭ ಲಭಿಸಲಿದೆ ಎಂದು ಅವರು ನುಡಿದರು.

ಗ್ರಾಮೀಣ ಸಹಕಾರ ಸಂಘಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ನೆರವು ಬಲ ತುಂಬಲಿದೆ ಎಂದು ಸಚಿವರು ನುಡಿದರು.

. ಕೋಟಿ ರೈತರಿಗೆ ಲಕ್ಷ ಕೋಟಿ ರಿಯಾಯ್ತಿ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ವಿತರಿಸಲಾಗುವುದು. ಪಿಎಂ ಕಿಸಾನ್ ಫಲಾನುಭವಿಗಳಿಗೆ ರಿಯಾಯ್ತಿ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ಒದಗಿಸಲು ವಿಶೇಷ ಅಭಿಯಾನ ನಡೆಸಲಾಗುವುದು. ಮೀನುಗಾರರು ಮತ್ತು ಪಶು ಸಂಗೋಪನಾ ರೈತರನ್ನೂ ಅಭಿಯಾನದಲ್ಲಿ ಸೇರಿಸಿಕೊಳ್ಳಲಾಗುವುದು. . ಕೋಟಿ ರೈತರಿಗೆ ಅಭಿಯಾನದ ಮೂಲಕ ಲಕ್ಷ ಕೋಟಿ ರೂಪಾಯಿಗಳ ಸಾಲದ ಹರಿವಿನ ಲಾಭ ದೊರೆಯಲಿದೆ ಎಂದು ಸಚಿವರು ವಿವರಿಸಿದರು.

ಬೆಳೆಸಾಲದ ಮರುಪಾವತಿ ಪ್ರೋತ್ಸಾಹಕವನ್ನು ಮಾರ್ಚ್ ೧ರಿಂದ ಮೇ ೩೧ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಸಮರ್ಪಕವಾಗಿ ಸಾಲಮರುಪಾವತಿ ಮಾಡುವವರಿಗೆ ಲಭಿಸುವ ರಿಯಾಯ್ತಿ ಬಡ್ಡಿ ಅನುಕೂಲಗಳು ಮೇ ೩೧ರವರೆಗೂ ಲಭಿಸಲಿವೆ ಎಂದೂ ನಿರ್ಮಲಾ ಹೇಳಿದರು.

ವಸತಿ ರಂಗಕ್ಕೆ ೭೦,೦೦೦ ಕೋಟಿಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯನ್ನು (ಸಿಎಲ್ಎಸ್ ಎಸ್) ೨೦೨೧ರ ಮಾರ್ಚ್ವರೆಗೆ ವಿಸ್ತರಿಸುವ ಮೂಲಕ ವಸತಿ ರಂಗ ಮತ್ತು ಮಧ್ಯಮ ಆದಾಯದ ವರ್ಗಗಳಿಗೆ ೭೦,೦೦೦ ಕೋಟಿ ರೂಪಾಯಿಗಳನ್ನು ವಸತಿ ರಂಗದ ಚಟುವಟಿಕೆಗಳಿಗೆ ಒತ್ತು ನೀಡಲು ಒದಗಿಸಲಾಗುವುದು ಎಂದು ವಿತ್ತ ಸಚಿವರು ನುಡಿದರು.
ಇದು ೨೦೨೦-೨೧ರಲ್ಲಿ ಕನಿಷ್ಠ . ಲಕ್ಷ ಮಧ್ಯಮ  ಆದಾಯದ (೬ರಿಂದ ೧೮ ಲಕ್ಷ ರೂಪಾಯಿ) ಕುಟುಂಬಗಳಿಗೆ ಅನುಕೂಲ ಕಲ್ಪಿಸುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಮುದ್ರಾ ಶಿಶು ಸಾಲಗಳು
೧೨ ತಿಂಗಳ ಅವಧಿಗೆ ಸಮರ್ಪಕವಾಗಿ ಸಾಲ ಪಾವತಿಸುವವರಿಗೆ ಸರ್ಕಾರವು ಶೇಕಡಾ % ಬಡ್ಡಿ ರಿಯಾಯ್ತಿ  ನೀಡುತ್ತದೆ. ಮುದ್ರಾ ಶಿಶು ಸಾಲಗಾರರಿಗೆ ,೫೦೦ ಕೋಟಿ ರೂ.ಗಳ ಪರಿಹಾರ ನೀಡಲಾಗಿದ್ದು, ಇದರಿಂದ  ಸುಮಾರು ಕೋಟಿ ಫಲಾನುಭವಿಗಳಿಗೆ ಲಾಭವಾಗಲಿದೆ ಸಚಿವರು ನುಡಿದರು.

ವಲಸಿಗರಿಗೆ ಮುಂದಿನ ತಿಂಗಳು ಉಚಿತ ದಿನಸಿ ಪೂರೈಕೆ
ಮುಂದಿನ ಎರಡು ತಿಂಗಳವರೆಗೆ ವಲಸಿಗರಿಗೆ ಉಚಿತ ಆಹಾರ ಧಾನ್ಯ ಪೂರೈಕೆ ಮಾಡಲಾಗುವುದು. ಕಾರ್ಡ್ ರಹಿತರಿಗೆ (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಥವಾ ರಾಜ್ಯಮಟ್ಟದ ಕಾರ್ಡ್ಗಳು) ಕೆಜಿ ಗೋಧಿ ಅಥವಾ ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ ಕೆಜಿ ಮಸಾಲೆ ಸಿಗಲಿದೆ. ವಲಸಿಗರನ್ನು ಉತ್ತೇಜಿಸಲು ಮತ್ತು ಗುರುತಿಸಲು ರಾಜ್ಯ ಸರ್ಕಾರಗಳೊಂದಿಗೆ ನಾವು ನಿರತರಾಗಿದ್ದೇವೆ. ಸುಮಾರು ಕೋಟಿ ವಲಸಿಗರು ಇದರ ಲಾಭ ಪಡೆಯಲಿದ್ದಾರೆ. ಮತ್ತು ಕೇಂದ್ರವು ಇದರ ವೆಚ್ಚವನ್ನು ಭರಿಸಲಿದೆ. ಇದಕ್ಕೆ ,೫೦೦ ಕೋಟಿ ರೂ. ಖರ್ಚು ಮಾಡಲಾಗುವುದು.

ಕೋವಿಡ್ -೧೯ ಅವಧಿಯಲ್ಲಿ ೧೨,೦೦೦ ಸ್ವಸಹಾಯ ಗುಂಪುಗಳು (ಸ್ವಸಹಾಯ ಗುಂಪುಗಳು) ಕೋಟಿಗೂ ಹೆಚ್ಚು ಮುಖಗವಸುಗಳು (ಮಾಸ್ಕ್) ಮತ್ತು . ಲಕ್ಷ ಲೀಟರ್ ಸ್ಯಾನಿಟೈಜರ್ಗಳನ್ನು ಉತ್ಪಾದಿಸಿವೆ. ಕಳೆದ ಎರಡು ತಿಂಗಳಲ್ಲಿ ನಗರ ಬಡವರಿಗಾಗಿ ,೨೦೦ ಹೊಸ ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ ಎಂದು ಅವರು ನುಡಿದರು.

೫೦ ಲಕ್ಷ ಬೀದಿ ವ್ಯಾಪಾರಿಗಳಿಗೆ ೫೦೦೦ ಕೋಟಿ ರೂ  ವಿಶೇಷ ಸಾಲ ಸೌಲಭ್ಯವನ್ನು ಸರ್ಕಾರ ಒದಗಿಸಲಿದೆ.

ಪಿಡಿಎಸ್ ಪಡಿತರ ಕಾರ್ಡ್ ಪೋರ್ಟಬಲ್
ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಪಡಿತರ ಚೀಟಿಗಳನ್ನು  ಸಂಚಾರಿ ಪಡಿತರ ಚೀಟಿಯನ್ನಾಗಿ  (ಪೋರ್ಟಬಲ್) ಮಾಡಲಿದ್ದು, ತನ್ಮೂಲಕ ವಲಸೆ ಕಾರ್ಮಿಕರಿಗೆ ಯಾವುದೇ ರಾಜ್ಯಗಳಲ್ಲಿ ಪಡಿತರ ಚೀಟಿ ಬಳಸಲು ಅವಕಾಶ ಲಭಿಸಲಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನುಡಿದರು.

೨೦೨೧ರ ಮಾರ್ಚ್ ವೇಳೆಗೆ ದೇಶದ ಎಲ್ಲ ನ್ಯಾಯಬೆಲೆ ಅಂಗಡಿಗಳನ್ನು ಡಿಜಿಟಲೀಕರಣಗೊಳ್ಳಲಿದ್ದು, ಒಂದು ದೇಶ, ಒಂದು ರೇಷನ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಡಿ ೨೩ ರಾಜ್ಯಗಳಲ್ಲಿ ೬೭ ಕೋಟಿ ಫಲಾನುಭವಿಗಳು ಅನುಕೂಲ ಪಡೆಯಲಿದ್ದಾರೆ ಎಂದು ಸಚಿವೆ ಸೀತಾರಾಮನ್ ತಿಳಿಸಿದರು.

ಕೈಗೆಟಕುವ ಬಾಡಿಗೆ ಮನೆ
ನಗರಗಳಲ್ಲಿನ ಸರ್ಕಾರಿ ಧನಸಹಾಯವನ್ನು ರಿಯಾಯಿತಿಯ ಮೂಲಕ ಪಿಪಿಪಿ ವಿಧಾನದಲ್ಲಿ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳಾಗಿ (ಎಆರ್ಎಚ್ಸಿ) ಪರಿವರ್ತಿಸುವ ಮೂಲಕ ವಲಸೆ ಕಾರ್ಮಿಕರು ಮತ್ತು ನಗರ ಬಡವರಿಗೆ ಕೈಗೆಟುಕುವ ಬಾಡಿಗೆ ವಸತಿಗಾಗಿ ಯೋಜನೆಯನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದೂ ವಿತ್ತ ಸಚಿವರು ಪ್ರಕಟಿಸಿದರು.

ಮೇ ರವರೆಗೆ ಕನಿಷ್ಠ ೧೪.೬೨ ಕೋಟಿ  ಎಂನರೇಗಾ  ವ್ಯಕ್ತಿಗಳ ಕೆಲಸದ ದಿನಗಳನ್ನು ಸೃಜಿಸಲಾಗಿದೆ. ವರ್ಷದ ಮೇ ೧೩ರವರೆಗೆ ೧೪. ಕೋಟಿ ಮನ್ರೇಗಾ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.೪೦-೫೦ ರಷ್ಟು ಹೆಚ್ಚು. .೮೭ ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ .೩೩ ಕೋಟಿ ವೇತನ ಪಡೆಯುವವರಿಗೆ ಕೆಲಸ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವಿಪಕ್ಷ ಟೀಕೆಗೆ ಎದಿರೇಟು
ನಾವು ಇಂದು ಒಂದು ನಿರ್ದಿಷ್ಟ ಘಟಕದ ಬಗ್ಗೆ ಮಾತನಾಡದಿದ್ದರೆ, ಸರ್ಕಾರವು ನಿರ್ದಿಷ್ಟ ಘಟಕದ ಬಗ್ಗೆ ಮರೆತಿದೆ ಎಂದು ಅರ್ಥವಲ್ಲ. ಹೆಚ್ಚಿನ ಉಪಕ್ರಮಗಳನ್ನು ಘೋಷಿಸಲಾಗುತ್ತಿದೆ ಎಂಬುದಾಗಿ ಹೇಳುವ ಮೂಲಕ ನಿರ್ಮಲಾ ಸೀತಾರಾಮನ್ ಅವರು  ವಿಪಕ್ಷ ಟೀಕೆಗೆ ಎದಿರೇಟು ನೀಡಿದರು.

ಈವರೆಗೂ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ೨೦೨೦ರ  ಮಾರ್ಚ್ ಮತ್ತು ಏಪ್ರಿಲ್ ೩೦ ನಡುವಲ್ಲಿ ಕೃಷಿ ವಲಯಕ್ಕೆ ೮೬,೬೦೦ ಕೋಟಿ ಸಾಲ ಮಂಜೂರು ಮಾಡಿದೆ. ೬೩ ಲಕ್ಷ ರೈತರ ಇದರ ಉಪಯೋಗ ಪಡೆದುಕೊಂಡಿದ್ದಾರೆ. ನಬಾರ್ಡ್ನಿಂದ ಸಹಕಾರ ಬ್ಯಾಂಕ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಿಗೆ ೨೦೨೦ರ ಮಾರ್ಚ್ನಲ್ಲಿ ೨೯,೫೦೦ ಕೋಟಿ ಹಣ ಒದಗಿಸಲಾಗಿದೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ ೨೦೨೦ ಮಾರ್ಚ್ನಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ,೨೦೦ ಕೋಟಿ ರೂ. ನೀಡಲಾಗಿದೆ. ಹಾಗೂ ೨೦೨೦ ಮಾರ್ಚ್ನಿಂದ ರಾಜ್ಯ ಸರಕಾರಿ ಸಂಸ್ಥೆಗಳಿಗೆ ಕೃಷಿ ಉತ್ಪನ್ನಗಳನ್ನು ಖರೀದಿಸಲು ,೭೦೦ ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.

ಸುಮಾರು ಕೋಟಿ ಸಾಮಾನ್ಯ ರೈತರು ಲಕ್ಷ ಕೋಟಿ ರೂ.ಗಳ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆದಿದ್ದಾರೆ. ಅವರಿಗೆ ಆರ್ಬಿಐ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಸೀತಾರಾಮನ್ ಹೇಳಿದರು.

ವಲಸೆ ಕಾರ್ಮಿಕರಿಗೆ ಆಶ್ರಯ ನೀಡಲು ಮತ್ತು ಅನ್ನಾಹಾರ ಒದಗಿಸಲು ರಾಜ್ಯ ವಿಪತ್ತು ಪರಿಹಾರ ನಿಧಿಯನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಲಾಗಿದೆ. ಏಪ್ರಿಲ್ ರಂದು ಸುಮಾರು ೧೧,೦೦೨ ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ ಎಂದು ಹಣಕಾಸು ಸಚಿವರು ತಿಳಿಸಿದರು.

No comments:

Advertisement