My Blog List

Friday, May 15, 2020

ಮ್ಯಾನ್ಮಾರ್ ಸೇನೆಯಿಂದ ಭಾರತಕ್ಕೆ ೨೨ ಈಶಾನ್ಯ ಬಂಡುಕೋರರ ಹಸ್ತಾಂತರ

ಮ್ಯಾನ್ಮಾರ್ ಸೇನೆಯಿಂದ ಭಾರತಕ್ಕೆ ೨೨ ಈಶಾನ್ಯ ಬಂಡುಕೋರರ ಹಸ್ತಾಂತರ
ನವದೆಹಲಿ: ಮ್ಯಾನ್ಮಾರ್ ಸೇನೆಯು ೨೨ ಮಂದಿ ಈಶಾನ್ಯ ಬಂಡುಕೋರರನ್ನು ಭಾರತೀಯ ಸರ್ಕಾರಕ್ಕೆ ಶುಕ್ರವಾರ ಹಸ್ತಾಂತರಿಸಿದೆ. ಮಣಿಪುರ ಮತ್ತು ಅಸ್ಸಾಂ ಸರ್ಕಾರಗಳಿಗೆ ಬೇಕಾಗಿದ್ದ ಬಂಡುಕೋರರನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರಲಾಗುತ್ತಿದೆ ಎಂದು ಸುದ್ದಿ ಮೂಲಗಳು  2020 ಮೇ 15ರ ಶುಕ್ರವಾರ ತಿಳಿಸಿದವು.

ಮ್ಯಾನ್ಮಾರ್ ಸರ್ಕಾರದ ಪಾಲಿಗೆ ಇದೊಂದು ದೊಡ್ಡ ಹೆಜ್ಜೆ ಮತ್ತು ಉಭಯ ರಾಷ್ಟ್ರಗಳ ಮಧ್ಯೆ ಬಾಂಧವ್ಯ ಗಾಢಗೊಳ್ಳೂತ್ತಿರುವುದರ ಪ್ರತಿಫಲನ ಎಂದು ಬಂಡುಕೋರರನ್ನು ಹೊತ್ತ ವಿಮಾನ ಮ್ಯಾನ್ಮಾರಿನಿಂದ ಹೊರಟ ಬಳಿಕ ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ನುಡಿದರು.

ವಿಮಾನವು ಮೊದಲ ಮಣಿಪುರ ರಾಜಧಾನಿ ಇಂಫಾಲ್‌ನಲ್ಲಿ ಇಳಿದು ಬಳಿಕ ಅಸ್ಸಾಮಿನ ಗುವಾಹತಿಯತ್ತ ತೆರಳುವುದು. ಬಂಡುಕೋರರನ್ನು ಉಭಯ ರಾಜ್ಯಗಳ ಸ್ಥಳೀಯ ಪೊಲೀಸರ ವಶಕ್ಕೆ  ಒಪ್ಪಿಸಲಾಗುವುದು ಎಂದು ಅಧಿಕಾರಿ ಹೇಳಿದರು.

ಈಶಾನ್ಯ ಬಂಡುಕೋg ನಾಯಕರನ್ನು ಹಸ್ತಾಂತರಿಸುವಂತೆ ಭಾರತ ಮಾಡಿದ್ದ ಮನವಿಗೆ ಮ್ಯಾನ್ಮಾರ್ ಸರ್ಕಾರವು ಸ್ಪಂದಿಸಿದ್ದು ಇದೇ ಮೊದಲು ಎಂದು ಹಿರಿಯ ರಾಷ್ಟ್ರೀಯ ಭದ್ರತಾ ಯೋಜಕರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಾರ್‍ಯಾಚರಣೆಯ ಬಗ್ಗೆ ಮಾತನಾಡುತ್ತಾ ನುಡಿದರು.

ಉಭಯ ರಾಷ್ಟ್ರಗಳ ಮಧ್ಯೆ ಗುಪ್ತಚರ ಮತ್ತು ರಕ್ಷಣಾ ಸಹಕಾರ ವೃದ್ಧಿಯಗುತ್ತಿರುವುದರ ಪರಿಣಾಮ ಇದು ಎಂದು ಭಾವಿಸಲಾಗಿದೆ.

ಭಾರತಕ್ಕೆ ಹಸ್ತಾಂತರಿಸಲಾಗಿರುವವರ ಪೈಕಿ ಕೆಲವರು ಹಿರಿಯ ಮತ್ತು ದೀರ್ಘ ಕಾಲದಿಂದ ಭಾರತಕ್ಕೆ ಬೇಕಾಗಿದ್ದ ಎನ್‌ಡಿಎಫ್‌ಬಿ(ಎಸ್) ಸ್ವಘೋಷಿತ ಗೃಹ ಕಾರ್‍ಯದರ್ಶಿ ರಾಜನ್ ಡೈಮರಿ, ಯುಎನ್‌ಎಲ್‌ಎಫ್‌ನ ಕ್ಯಾಪ್ಟನ್ ಸನತೋಂಬಾ ನಿಂಗ್ತೌಜಾಮ್ ಮತ್ತು ಪಿಆರ್‌ಇಪಿಎಕೆ (ಪ್ರೊ) ಸಂಘಟನೆಯ ಲೆಫ್ಟಿನೆಂಟ್ ಪಶುರಾಮ್ ಲೈಶ್ರಮ್‌ನಂತವರು ಸೇರಿದ್ದಾರೆ.

೨೨ ಮಂದಿ ಬಂಡುಕೋರರ ಪೈಕಿ ೧೨ ಮಂದಿ ಮಣಿಪುರದ ಯುಎನ್ ಎಲ್ ಎಫ್, ಪಿಆರ್‌ಇಪಿಎಕೆ (ಪ್ರೊ), ಕೆವೈಕೆಎಲ್ ಮತ್ತು ಪಿಎಲ್‌ಎ ನಾಲ್ಕು ಬಂಡಾಯಗುಂಪುಗಳಿಗೆ ಸೇರಿದ್ದಾರೆ.

ವಿಮಾನದಲ್ಲಿ ಇರುವ ಬಂಡುಕೋರರುಎನ್‌ಡಿಎಫ್‌ಬಿ (ಎಸ್) ಸದಸ್ಯರು: ರಾಜೇನ್ ಡೈಮರಿ ಯಾನೆ ರೆಬ್ಬನ್ (ಸ್ವಯಂ ಘೋಷಿತ ಗೃಹ ಕಾರ್‍ಯದರ್ಶಿ), ಸ್ವಯಂ ಘೋಷಿತ ಕ್ಯಾಪ್ಟನ್ ಸಂಸುಮಾ ಬಸುಮಾಟರಿ ಯಾನೆ ಸರೋಂಟೈ, ಗಗರಂ ಬಸುಮಾಟರಿ ಯಾನೆ ಕ್ಯಾಪ್ಟನ್ ಗಂಶಾ, ರ್ಜು ಬ್ರಹ್ಮ ಯಾನೆ ಬ್ರಾಮ್ಮೊ ಸ್ವರ್ಜಿಸುಲಾ ಸುಕುರಾಮ್ ಬ್ರಹ್ಮ.

ಕೆಎಲ್‌ಒ ಸದಸ್ಯರು: ಶಂಕರ್ ದೇಬ್ ಬರ್ಮನ್ ಯಾನೆ ಸಿಲುಕರ್ ಯಾನೆ ಸಿಲುಕ್ಷ್, ಭಜನ್ ಬರ್ಮನ್ ಯಾನೆ ಟೈಗರ್ ಕೋಚ್, ಬಿಶು ರಾಯ್ ಯಾನೆ ಬಿಶ್ವಾ ಸಿಂಘಾ ಕೋಚ್, ಜಿತೇಂದ್ರ ರಾಯ್ ಮಂಗಕ್ ಕೋಚ್ಧೋನೋ ರಾಯ್ ಯಾನೆ ಸಾರ್ಜೆಂಟ್ ಬಹದ್ದೂರ್.

ಯುಎನ್‌ಎಲ್‌ಎಫ್ ಸದಸ್ಯರು: ನವೋಬಾ ಮೀಟೈ ಯಾನೆ ಎನ್‌ಗನ್ಬಾ, ಮಸೂಮ್ ಯಾನೆ ಸಿಂಥೊಯ್, ರಾಮ್ ಬಲರಾಮ್ ತಖೆಲ್ಲಂಬಮ್ ಯಾನೆ ಲೋಜಿಂಗ್ಸ್ವಯಂಘೋಷಿತ ಕ್ಯಾಪ್ಟನ್ ಸನತೊಂಬಾ ನಿಂಗ್ತೌಜಮ್ ಯಾನೆ ಮನೋಬಾ, ಪ್ರತಾಪ್ ಮೀಟೈ ಯಾನೆ ನೈಟೊಂಗನ್‌ಬಾ, ಸಂಜೋಯ್ ಮೈಟೈ ಯಾನೆ ನವೋಚಾ ಅಜೋಯ್ ಅಕೋಜಮ್ ಯಾನೆ ಉತ್ತಮ್.

ಪಿಎಲ್‌ಎ ಸದಸ್ಯರು: ಅಥೋಯಿ ಮೀಟೈ ಯಾನೆ ಕೊಯಿರಾಂಬಾ, ಕೆನಡಿ ಅರಿಬಮ್ ಯಾನೆ ನಾಂಗ್‌ಡ್ರೆನ್.

ಪಿಆರ್‌ಇಪಿಎಕೆ (ಪ್ರೊ) ಸದಸ್ಯರು: ಸ್ವಯಂ ಘೋಷಿತ ಲೆಫ್ಟಿನೆಂಟ್ ಪಶುರಾಮ್ ಲೈಶ್ರಾಮ್ ಯಾನೆ ಅರ್ಜುನ್, ಪ್ರೇಮಾನಂದ ಮೀಟೈ ಯಾನೆ ಹರ್ಜಿತ್
ಕೆವೈಕೆಎಲ್ ಸದಸ್ಯರು: ಸಂತೋಷ್ ಮೀಟೈ ಯಾನೆ ಕಾಂತಾ
ಮ್ಯಾನ್ಮಾರ್ ಜೊತೆಗಿನ ,೬೦೦ ಕಿ.ಮೀ ಉದ್ದದ ಭಾರತೀಯ ಗಡಿಯಲ್ಲಿ ಹಲವಾರು ದಶಕಗಳಿಂದ ಭಾರತ ವಿರೋಧ ಬಂಡಾಯಕೋರರು ನೆಲೆಯಾಗಿದ್ದಾರೆ. ಆದರೆ ಮ್ಯಾನ್ಮಾರ್ ಮಿಲಿಟರಿ ಕಾರ್ಯಾಚರಣೆ ನಡೆಸಲು ಒಪ್ಪಿದ ಬಳಿಕ ಕಳೆದ ಕೆಲವು ವರ್ಷಗಳಿಂದ ಬಂಡುಕೋರ ಗುಂಪುಗಳ ಮೇಲೆ ಒತ್ತಡ ಹೆಚ್ಚಿತ್ತು.

ಕಳೆದ ವರ್ಷ, ಭಾರತೀಯ ಭದ್ರತಾ ಸಂಸ್ಥೆಗಳು ಒದಗಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ೨೦೧೯ರ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಮ್ಯಾನ್ಮಾರ್ ಸೈನ್ಯವು ನಿರಂತರ ಕಾರ್ಯಾಚರಣೆ ನಡೆಸಿತು.

ಮ್ಯಾನ್ಮಾರ್ ಸೈನ್ಯವು ಮೊದಲ ಹಂತದಲ್ಲಿ ಅರುಣಾಚಲ ಪ್ರದೇಶದ ವಿಜಯನಗರದಾದ್ಯಂತ ದೇಶದ ಉತ್ತರದ ಟಾಗಾದಲ್ಲಿ ಬಹು-ಗುಂಪು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿತು ಮತ್ತು ಎರಡನೆಯ ಹಂತದಲ್ಲಿ ಅರಾಕನ್, ನೀಲಗಿರಿ ಮತ್ತು ಹೌಕ್ಯಾಟ್ ಶಿಬಿರಗಳನ್ನು ನಾಶಮಾಡಿತು.

ಕಾರ್ಯಾಚರಣೆಗಳಲ್ಲಿ ೨೨ ಬಂಡುಕೋರರನ್ನು ಸಾಗಿಂಗ್ ಪ್ರದೇಶದಲ್ಲಿ ಮ್ಯಾನ್ಮಾರ್ ಸೈನ್ಯವು ಸೆರೆ ಹಿಡಿಯಿತು.

ಬಂಡುಕೋರರನ್ನು ಹಸ್ತಾಂತರಿಸುವ ಮ್ಯಾನ್ಮಾರ್‌ನ ನಿರ್ಧಾರವು ಭಾರತದೊಂದಿಗೆ ಅದರ ಬಾಂಧವ್ಯವು ಉತ್ತಮವಾಗಿದೆ ಎಂಬ ದೊಡ್ಡ ಸಂದೇಶವನ್ನು ಬಂಡುಕೊರ ಸಂಘಟನೆಗಳಿಗೆ ನೀಡಿದೆ ಎಂದು ರಾಷ್ಟೀಯ ಭದ್ರತಾ ಅಧಿಕಾರಿಯೊಬ್ಬರು ನುಡಿದರು.

ಗಡಿಯುದ್ದಕ್ಕೂ ದಟ್ಟವಾದ ಕಾಡುಗಳು ಇರುವುದರಿಂದ ಯಾವುದೇ ಸೇನಾ ಕಾರ್‍ಯಾಚರಣೆ ಅಸಾಧ್ಯ ಎಂಬುದಾಗಿ  ಭಾವಿಸಿದ್ದ ಗುಂಪುಗಳಿಗೆ ಮ್ಯಾನ್ಮಾರ್‌ನ ಕ್ರಮವು ಬಂಡುಕೋರರಿಗೆ ಖಡಕ್ ಎಚ್ಚರಿಕೆಯಾಗಿದೆ ಎಂದು ಭಾರತೀಯ ಅಧಿಕಾರಿಗಳು ನಿರೀಕ್ಷಿಸಿದ್ದಾರೆ
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕೂಡಾ ಒಂದು ಕಾಲದಲ್ಲಿ ಭಾರತೀಯ ಅಪರಾಧಿಗಳಿಗೆ ಆಶ್ರಯ ತಾಣವೆಂದು ಪರಿಗಣಿಸಲ್ಪಟ್ಟಿತ್ತು. ಆದರೆ ಯುಎಇ ಇಂತಹ ಅಪರಾಧಿಗಳನ್ನು ಮತ್ತು ಭಯೋತ್ಪಾದಕರನ್ನು ಗಡೀಪಾರು ಮಾಡಲು ಆರಂಭಿಸಿದಾಗ ಸೃಷ್ಟಿಯಾದಂತಹುದೇ ಸನ್ನಿವೇಶ ಈಗ ಮ್ಯಾನ್ಮಾರಿನಲ್ಲೂ ಸೃಷ್ಟಿಯಾಗಿದೆ ಎಂದು ಅಧಿಕಾರಿ ಹೇಳಿದರು.

" ಎರಡು ದೇಶಗಳಂತೆ ಪಾಕಿಸ್ತಾನವೂ ಭಯೋತ್ಪಾದಕರ ವಿರುದ್ಧ ವರ್ತಿಸಿದರೆ, ಅಲ್ಲಿ ಯಾವುದೇ ಭಯೋತ್ಪಾದಕ ಗುಂಪು ಇರುವುದಿಲ್ಲ" ಎಂದು ಅಧಿಕಾರಿ ನುಡಿದರು.

No comments:

Advertisement