Sunday, May 17, 2020

ಮೇ 31ರವರೆಗೆ ದಿಗ್ಬಂಧನ ವಿಸ್ತರಣೆ, 4ನೇ ಹಂತದ ಮಾರ್ಗಸೂಚಿ ಬಿಡುಗಡೆ

ಮೇ 31ರವರೆಗೆ ದಿಗ್ಬಂಧನ ವಿಸ್ತರಣೆ, 4ನೇ ಹಂತದ ಮಾರ್ಗಸೂಚಿ ಬಿಡುಗಡೆ
ನವದೆಹಲಿ:  ದೇಶದೆಲ್ಲೆಡೆ 2020 ಮೇ 17 ಭಾನುವಾರ  ೩ನೇ ಹಂತದ  ದಿಗ್ಬಂಧನ  ಮುಕ್ತಾಯಗಕ್ಕೆ ಮುನ್ನವೇ  ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಮೇ 31ರವರೆಗೆ ವಿಸ್ತರಿಸಲಾಗುವುದು ಎಂದು ಪ್ರಕಟಿಸಿ, ನಾಲ್ಕನೇ ಹಂತದ  ದಿಗ್ಬಂಧನ (ಲಾಕ್ ಡೌನ್) ಮಾರ್ಗಸೂಚಿಯನ್ನು ಪ್ರಕಟಿಸಿತು.

4ನೇ ಹಂತದ ದಿಗ್ಬಂಧನ ಮಾರ್ಗಸೂಚಿ ಪ್ರಕಾರ ದೇಶಾದ್ಯಂತ  ಮೇ ೩೧ರವರೆಗೆ ರೈಲು, ಮೆಟ್ರೋ, ವಿಮಾನ ಸಂಚಾರವನ್ನು ನಿಷೇಧಿಸಲಾಯಿತು.  ವೈದ್ಯಕೀಯ ಉಪಕರಣಗಳು  ಮತ್ತು  ಅಗತ್ಯವಸ್ತುಗಳ ಸಾಗಾಟಕ್ಕೆ ಮಾತ್ರ ವಿಮಾನವನ್ನು ಬಳಸಲು ಅವಕಾಶ ನೀಡಲಾಯಿತು.

ಶಾಲೆಗಳು, ಕಾಲೇಜುಗಳು ಮತ್ತಿತರ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಮೇ ೩೧ರವರೆಗೆ ತೆರೆಯುವಂತಿಲ್ಲ. ಶಾಪಿಂಗ್  ಸಮುಚ್ಚಯಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆಯಾ ರಾಜ್ಯಗಳ ಕೆಂಪು, ಕಿತ್ತಳೆ, ಹಸಿರು ವಲಯಗಳಲ್ಲಿ  ನಿಯಮಗಳನ್ನು ಸಡಿಲಗೊಳಿಸುವ ಮತ್ತು ಬಿಗಿಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಯಿತು.
ಕೇಂದ್ರ ಗೃಹ ಸಚಿವಾಲಯವು ಕೋವಿಡ್ ಸಂಬಂಧಿತ ರಾಷ್ಟ್ರವ್ಯಾಪಿ  ದಿಗ್ಬಂಧನವನ್ನು ವಿಸ್ತರಿಸುವ ಆದೇಶವನ್ನು ಭಾನುವಾರ ಹೊರಡಿಸಿ,  ಮಾರ್ಗಸೂಚಿಯನ್ನು ಎಲ್ಲ  ರಾಜ್ಯ ಸರ್ಕಾರಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳಿಗೆ  ಕಳುಹಿಸಿತು.

ಮಾರ್ಗಸೂಚಿಯ ಮುಖ್ಯಾಂಶಗಳು:
* ದೇಶವ್ಯಾಪಿ  ದಿಗ್ಬಂಧನ ಸ್ಥಿತಿ  ಮೇ ೩೧ರವರೆಗೆ ಮುಂದುವರೆಯಲಿದೆ.
* ದೇಶಾದ್ಯಂತ ಎಲ್ಲಾ ಚಟುವಟಿಕೆಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ:
* ಕೇಂದ್ರ ಗೃಹಸಚಿವಾಲಯದ ಅನುಮತಿ ಮೇರೆಗೆ ತುರ್ತು ವೈದ್ಯಕೀಯ ಸೇವೆಗಳು, ಏರ್ ಆಂಬುಲೆನ್ಸ್ ಸೇವೆಗಳು ಮತ್ತು ರಕ್ಷಣಾ ಉದ್ದೇಶಗಳನ್ನು ಹೊರತುಪಡಿಸಿ, ಎಲ್ಲ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನ ಸಂಚಾರ ಇರುವುದಿಲ್ಲ.
* ಯಾವುದೇ ಮೆಟ್ರೋ ರೈಲು ಸೇವೆಗಳು ಇರುವುದಿಲ್ಲ.
* ಶಾಲಾ, ಕಾಲೇಜುಗಳು, ಶಿಕ್ಷಣ/ತರಬೇತಿ ಸಂಸ್ಥೆಗಳು ಇತ್ಯಾದಿ ಯಾವುದೇ ರೀತಿಯ ಶೈಕ್ಷಣಿಕ ಸಂಸ್ಥೆಗಳು ಕಾರ್ಯಾಚರಿಸುವುದಿಲ್ಲ.
* ಹೊಟೇಲ್ ಗಳು, ರೆಸ್ಟೋರೆಂಟ್ ಸಹಿತ ಇತರೇ ಉಪಚಾರ ಸೇವೆಗಳಿಗೆ ನಿರ್ಬಂಧ ಮುಂದುವರೆಯಲಿದೆ. ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಹೋಂ ಡೆಲಿವರಿಗೆ ಮಾತ್ರವೇ ಅವಕಾಶ.
* ಸಿನೆಮಾ ಥಿಯೇಟರ್ ಗಳು, ಶಾಪಿಂಗ್ ಮಾಲ್ ಗಳು, ಜಿಮ್ ಗಳು, ಸ್ವಿಮ್ಮಿಂಗ್ ಪೂಲ್ ಗಳು, ಮನೋರಂಜನಾ ಪಾರ್ಕ್ ಗಳು, ಮಲ್ಟಿಪ್ಲೆಕ್ಸ್ ಗಳು, ಬಾರ್ ಮತ್ತು ರೆಸ್ಟೋರೆಂಟ್ ಗಳು, ಆಡಿಟೋರಿಯಂಗಳು, ಸಭಾಂಗಣಗಳು, ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗಳನ್ನು ತೆರೆಯಲು ಅವಕಾಶವಿದೆ. ಆದರೆ  ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧವಿರುತ್ತದೆ.
* ಎಲ್ಲಾ ರೀತಿಯ ಬೃಹತ್ ಸಾಮಾಜಿಕ, ರಾಜಕೀಯ, ಕ್ರೀಡಾ, ಮನೋರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೇಲೆ ನಿರ್ಬಂಧ.
* ಎಲ್ಲಾ ಧರ್ಮದವರ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹಾಗೂ ಎಲ್ಲಾ ರೀತಿಯ ಧಾರ್ಮಿಕ ಸಮಾರಂಭಗಳಿಗೆ ನಿರ್ರ್ಬಂಧ ಮುಂದುವರೆಯುತ್ತದೆ.
* ಕಂಟೇನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ, ಉಳಿದ ಕಡೆಗಳಲ್ಲಿ ಕೆಳಗಿನ ಕಾರ್ಯಚಟುವಟಿಕೆಗಳನ್ನು ಷರತ್ತುಬದ್ಧವಾಗಿ ನಡೆಸಬಹುದು:
* ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪರಸ್ಪರ ಒಪ್ಪಿಗೆಯ ಮೇರೆಗೆ  ಅಂತರರಾಜ್ಯ ಪ್ರಯಾಣಿಕ ವಾಹನಗಳು, ಬಸ್ಸುಗಳ ಓಡಾಟಕ್ಕೆ ಅವಕಾಶ.

No comments:

Advertisement