My Blog List

Friday, May 8, 2020

ಇಷ್ಟರಲ್ಲೇ ಪರಿಷ್ಕೃತ ಕೋವಿಡ್ ವಲಯ ಪಟ್ಟಿ ಬಿಡುಗಡೆ

ಇಷ್ಟರಲ್ಲೇ ಪರಿಷ್ಕೃತ ಕೋವಿಡ್  ವಲಯ ಪಟ್ಟಿ  ಬಿಡುಗಡೆ
ನವದೆಹಲಿ: ದೇಶದ ಕೊರೋನಾವೈರಸ್ ಪ್ರಕರಣಗಳ ಮಾಹಿತಿಯ ವಿಶ್ಲೇಷಣೆಯ ಬಳಿಕ ಶೀಘ್ರದಲ್ಲೇ ಕೇಂದ್ರವು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳ ಪರಿಷ್ಕೃತ ಪಟ್ಟಿಯನ್ನು ರಾಜ್ಯಗಳಿಗೆ ಕಳುಹಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು 2020 ಮೇ 08ರ ಶುಕ್ರವಾರ ಇಲ್ಲಿ ಪ್ರಕಟಿಸಿದರು.

ದೇಶದ ೨೧೬ ಜಿಲ್ಲೆಗಳಲ್ಲಿ ಪ್ರಸ್ತುತ ಕೊರೋನಾವೈರಸ್ ಪ್ರಕರಣಗಳು ಇಲ್ಲ, ಒಟ್ಟು ೨೯ ಜಿಲ್ಲೆಗಳಲ್ಲಿ ಕಳೆದ ೨೧ ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ ಮತ್ತು ೩೬ ಜಿಲ್ಲೆಗಳಲ್ಲಿ ಕಳೆದ ೧೪ ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ೪೬ ಜಿಲ್ಲೆಗಳಲ್ಲಿ ಕಳೆದ ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

ಮಾರ್ಗಸೂಚಿಗಳನ್ನು
ಸಮರ್ಪಕವಾಗಿ ನಾವು ಪಾಲಿಸಿದ್ದೇ ಆದರೆ ಕೋವಿಡ್ -೧೯ ಪ್ರಕರಣಗಳು ಉತ್ತುಂಗಕ್ಕೆ ಏರಲು ಸಾಧ್ಯವಿಲ್ಲ ಎಂದು ಅವರು ನುಡಿದರು.

ಅಗತ್ಯ ಮುಂಜಾಗರೂಕತೆಗಳನ್ನು ನಾವು ಕೈಗೊಳ್ಳದೇ ಇದ್ದಲ್ಲಿ ಮತ್ತು ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸದೇ ಇದ್ದಲ್ಲಿ ಪ್ರಕರಣಗಳು ಹೆಚ್ಚುವ ಸಾಧ್ಯತೆಯ ಪ್ರಶ್ನೆಗಳು ಯಾವಾಗಲೂ ಇರುತ್ತವೆ ಎಂದು ಅಗರವಾಲ್ ಹೇಳಿದರು.

ದೇಶದಲ್ಲಿ ಕೊರೋನಾ ಸೋಂಕಿಗೆ ಈಡಾದವರು ಚೇತರಿಸುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ಭಾರತದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ,೩೯೦ ಹೊಸ ಕೋವಿಡ್-೧೯ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ,೨೭೩ ಪ್ರಕರಣಗಳು ಚೇತರಿಕೆ ಕಂಡಿವೆ. ೫೬,೩೪೨ ಪ್ರಕರಣಗಳ ಪೈಕಿ ೩೭,೯೧೬ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿವೆ. ೧೬,೫೪೦ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿದ್ದು ಚೇತರಿಕೆಯ ಪ್ರಮಾಣ ಶೇಕಡಾ ೨೯.೩೬ಕ್ಕೆ ಏರಿದೆ ಎಂದು ಅಗರವಾಲ್ ನುಡಿದರು.

ಕಳೆದ ೨೪ ಗಂಟೆಗಳಲ್ಲಿ ೧೦೩ ಸಾವಿನ ಪ್ರಕರಣಗಳೊಂದಿಗೆ ಭಾರತದಲ್ಲಿ ಒಟ್ಟು ಸಾವಿನ ಸಂಖ್ಯೆ ೧೮೮೬ಕ್ಕೇ ಏರಿದೆ ಎಂದೂ ಅಗರವಾಲ್ ನುಡಿದರು.

ಒಟ್ಟು ಕೊರೋನಾವೈರಸ್ ಪ್ರಕರಣಗಳ ಪೈಕಿ ಶೇಕಡಾ  ಶೇಕಡಾ .೨ರಷ್ಟು ಸಕ್ರಿಯ ಕೊರೋನಾ ಪ್ರಕರಣUಳಲ್ಲಿ ರೋಗಿಗಳು ಆಮ್ಲಜನಕದ ಬೆಂಬಲದಲ್ಲಿವೆ. ಶೇಕಡಾ .೨ರಷ್ಟು  ಪ್ರಕರಣಗಳಲ್ಲಿ ರೋಗಿಗಳು  ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ ಮತ್ತು  ಶೇಕಡಾ . ರಷ್ಟು ರೋಗಿಗಳು ವೆಂಟಿಲೇಟರ್ ಆಧಾರದಲ್ಲಿದ್ದಾರೆ ಎಂದು ಅವರು ನುಡಿದರು.

ಕೊರೋನಾವೈರಸ್ ಅತ್ಯಂತ ದೊಡ್ಡ ಸವಾಲಾಗಿದ್ದು, ನಾವು ಅದರ ಜೊತೆಗೆ ಜೀವಿಸುವುದನ್ನು ಕಲಿತುಕೊಳ್ಳಬೇಕಾಗುತ್ತದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಹೇಳಿದರು.

ಅತ್ಯಧಿಕ ಸಾವು ಮಹಾರಾಷ್ಟ್ರದಲ್ಲಿ
ಕಳೆದ ೨೪ ಗಂಟೆಗಳಲ್ಲಿ ವರದಿಯಾದ ೧೦೩ ಕೊರೋನಾ ಸಾವುಗಳಲ್ಲಿ ಅತ್ಯಧಿಕ ಸಾವುಗಳೂ ಮಹಾರಾಷ್ಟ್ರದಿಂದ ವರದಿಯಾಗಿವೆ. ಗುಜರಾತಿನಲ್ಲಿ ೨೯, ಮಧ್ಯಪ್ರದೇಶದಲ್ಲಿ , ಪಶ್ಚಿಮ ಬಂಗಾಳದಲ್ಲಿ , ರಾಜಸ್ಥಾನದಲ್ಲಿ , ತಮಿಳುನಾಡು, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದಲ್ಲಿ ತಲಾ , ಬಿಹಾರ, ದೆಹಲಿ, ಕರ್ನಾಟಕ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ತಲಾ ಸಾವು ಸಂಭವಿಸಿವೆ.

೩೫ ಸಿಐಎಸ್ ಎಫ್ ಸಿಬ್ಬಂದಿಗೆ ಸೋಂಕು
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ ಎಫ್) ೩೫ ಮಂದಿ ಸಿಬ್ಬಂದಿಗೆ ಈವರೆಗೆ ಕೋವಿಡ್ -೧೯ ಪಾಸಿಟಿವ್ ವರದಿ ಬಂದಿದೆ. ಅವರ ಪೈಕಿ ೧೧ ಮಂದಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿತ್ತು, ೧೧ ಮಂದಿ ದೆಹಲಿ ಮೆಟ್ರೋ ರೈಲು ನಿಗಮದಲ್ಲಿ (ಡಿಎಂಆರ್ ಸಿ) ಸೇವೆಯಲ್ಲಿದ್ದರು, ಮಂದಿ ದೆಹಲಿ ಐಜಿಐ ನಿಲ್ದಾಣದಲ್ಲಿ ನಿಯೋಜಿತರಾಗಿದ್ದರು ಮತ್ತು ಇಬ್ಬರು ಮುಂಬೈ ಬಂದರಿನಲ್ಲಿ ಸೇವೆಯಲ್ಲಿದ್ದರು ಎಂದು ಸಿಐಎಸ್ ಎಫ್ ತಿಳಿಸಿದೆ.

ಆಂದ್ರಪ್ರದೇಶದಲ್ಲಿ ೪೦ ಸಾವು
ಮಧ್ಯೆ, ಇನ್ನೂ ಮೂರು ಸಾವುಗಳೊಂದಿಗೆ ಆಂದ್ರಪ್ರದೇಶದಲ್ಲಿ ಕೋವಿಡ್-೧೯ ಸಾವಿನ ಸಂಖ್ಯೆ ಶುಕ್ರವಾರ ೪೦ಕ್ಕೆ ಏರಿತು. ಕಳೆದ ೨೪ ಗಂಟೆಗಳಲ್ಲಿ ರಾಜ್ಯದಲ್ಲಿ ೫೪ ಹೊಸ ಪ್ರಕರಣಗಳು ದಾಖಲಾದವು.

೫೨೩೧ ರೈಲ್ವೇ ಬೋಗಿಗಳು ಕೋವಿಡ್ ಕೇರ್ ಸೆಂಟರ್ಗಳು
ರೈಲ್ವೇಯು ೫೨೩೧ ಬೋಗಿಗಳನ್ನು ಕೋವಿಡ್ ಕಾಳಜಿ ಕೇಂದ್ರಗಳಾಗಿ (ಕೇರ್ ಸೆಂಟರ್) ಪರಿವರ್ತಿಸಿದೆ. ಇವುಗಳನ್ನು ಗುರುತಿಸಲಾದ ೨೧೫ ರೈಲು ನಿಲ್ದಾಣಗಳಲ್ಲಿ ಇರಿಸಲಾಗುವುದು ಮತ್ತು ಸಣ್ಣ ಮತ್ತ ಅತಿ ಸಣ್ಣ ಪ್ರಕರಣಗಳಲ್ಲಿ ಚಿಕಿತ್ಸೆಗಾಗಿ ಬಳಸಲಾಗುವುದು. ಇದೇ ವೇಳೆಗೆ ಶಂಕಿತ ಮತ್ತು ದೃಢಪಟ್ಟ ಪ್ರಕರಣಗಳಿಗೆ ಪ್ರತ್ಯೇಕ ಬೋಗಿಗಳ ವ್ಯವಸ್ಥೆ ಮಾಡಲಾಗುವುದು ಎಂದು ಲವ ಅಗರವಾಲ್ ನುಡಿದರು.

ಅಬುಧಾಬಿಯಿಂದ ಬಂದವರಲ್ಲಿ ಸೋಂಕು
ಮಧ್ಯೆ, ಕೋವಿಡ್ -೧೯ ಲಕ್ಷಣಗಳು ಕಂಡು ಬಂದ ಐವರನ್ನು ಶುಕ್ರವಾರ ಅಲುವ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಇವರು ಕಳೆದ ರಾತ್ರಿ ಅಬುಧಾಬಿಯಿಂದ ಬಂದ ೧೮೧ ಮಂದಿ ಕೇರಳೀಯರ ಗುಂಪಿನಲ್ಲಿ ಇದ್ದರು ಎಂದು ಮೂಲಗಲೂ ಹೇಳಿವೆ.

ಮುಂಬೈಯಲ್ಲಿ ವಿದೇಶದಿಂದ ಬರುತ್ತಿರುವ ನಾಗರಿಕರಿಗಾಗಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ (ಬಿಎಂಸಿ) ಮುಂಬೈಯ ೮೮ ಹೋಟೆಲುಗಳಲ್ಲಿ ,೩೪೩ ಕೊಠಡಿಗಳನ್ನು ಕ್ವಾರಂಟೈನ್ ಸಲುವಾಗಿ ಕಾಯ್ದಿರಿಸಿದೆ. ಏಳು ವಿಮಾನಗಳಲ್ಲಿ ಇವರನ್ನು ಕರೆತರಲಾಗುತ್ತಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೩೯,೫೦,೫೧೭ ಸಾವು ,೭೧,೮೦೨
ಚೇತರಿಸಿಕೊಂಡವರು- ೧೩,೫೯,೫೦೬
ಅಮೆರಿಕ ಸೋಂಕಿತರು ೧೨,೯೫,೧೦೧, ಸಾವು ೭೭,೦೫೯
ಸ್ಪೇನ್ ಸೋಂಕಿತರು ,೬೦,೧೧೭, ಸಾವು ೨೬,೨೯೯
ಇಟಲಿ ಸೋಂಕಿತರು ,೧೫,೮೫೮,  ಸಾವು ೨೯,೯೫೮
ಜರ್ಮನಿ ಸೋಂಕಿತರು ,೬೯,೪೩೦, ಸಾವು ,೩೯೨
ಚೀನಾ ಸೋಂಕಿತರು ೮೨,೮೮೬, ಸಾವು ,೬೩೩
ಇಂಗ್ಲೆಂಡ್ ಸೋಂಕಿತರು ,೦೬,೭೧೫, ಸಾವು ೩೦,೬೧೫
ಅಮೆರಿಕದಲ್ಲಿ ೧೩೧, ಇರಾನಿನಲ್ಲಿ ೫೫, ಬೆಲ್ಜಿಯಂನಲ್ಲಿ ೧೦೬, ಸ್ಪೇನಿನಲ್ಲಿ ೨೨೯, ನೆದರ್ ಲ್ಯಾಂಡ್ಸ್ನಲ್ಲಿ ೭೧, ರಶ್ಯಾದಲ್ಲಿ ೯೮, ಸ್ವೀಡನ್ನಲ್ಲಿ ೧೩೫, ಮೆಕ್ಸಿಕೋದಲ್ಲಿ ೨೫೭, ಒಟ್ಟಾರೆ ವಿಶ್ವಾದ್ಯಂತ ,೩೭೬ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement