My Blog List

Monday, May 18, 2020

ದೇಶಾದ್ಯಂತ ವಿವಿಧ ರಾಜ್ಯಗಳಿಂದ ದಿಗ್ಬಂಧನ ೪.೦: ಮಾರ್ಗಸೂಚಿ ಬಿಡುಗಡೆ

ದೇಶಾದ್ಯಂತ ವಿವಿಧ ರಾಜ್ಯಗಳಿಂದ  ದಿಗ್ಬಂಧನ .: ಮಾರ್ಗಸೂಚಿ ಬಿಡುಗಡೆ
ಭಾರತದಲ್ಲಿ ಕೋವಿಡ್ ಸಂಖ್ಯೆ ೯೬,೧೬೯, ಸಾವು ೩೦೨೯, ಚೇತರಿಕೆ ೩೫,೮೨೩
ನವದೆಹಲಿ: ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ನಾಲ್ಕನೇ ಅವಧಿಗೆ ಮೇ ೩೧ರವರೆಗೆ ವಿಸ್ತರಿಸಿರುವ ಕೇಂದ್ರ ಸರ್ಕಾರ, ಆಯಾ ರಾಜ್ಯಗಳಿಗೆ ಕೆಂಪು, ಕಿತ್ತಳೆ, ಹಸಿರು ವಲಯಗಳ ನಿರ್ಬಂಧ ನಿರ್ಧರಿಸಲು ಅವಕಾಶ ನೀಡಿದ್ದನ್ನು ಅನುಸರಿಸಿ ದೇಶದ ವಿವಿಧ ರಾಜ್ಯಗಳು  2020 ಮೇ 18ರ ಸೋಮವಾರ ತಮ್ಮ ತಮ್ಮ ರಾಜ್ಯಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದವು.

ಭಾರತದಲ್ಲಿ ಸೋಮವಾರ ಒಂದೇ ದಿನ ಅತ್ಯಂತ ಹೆಚ್ಚು ಕೊರೋನಾವೈರಸ್ ಪ್ರಕರಣಗಳು ದಾಖಲಾದವು. ,೨೪೨ ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶದ ಒಟ್ಟು ಸೋಂಕು ಪ್ರಕರಣಗಳು ೯೬,೧೬೯ಕ್ಕೆ ಏರಿಕೆಯಾದವು. ಒಟ್ಟು ಸಾವುಗಳು ೩೦೨೯ಕ್ಕೆ ಏರಿವೆ. ೩೫,೮೨೩ ರೋಗಗಳು ಗುಣಮುಖರಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ೫೩,೧೬೯ ಎಂದು  ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತು.

ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಅಂಗಡಿಗಳನ್ನು ಸಮ-ಬೆಸ ವ್ಯವಸ್ಥೆಯಡಿಯಲ್ಲಿ ತೆರೆಯಲು ಅನುವು ಕಲ್ಪಿಸಿದರು. ಕೌರದ ಅಂಗಡಿಗಳು, ಸ್ಪಾಗಳು ಮತ್ತು ಸಲೂನ್‌ಗಳ ಮೇಲಿನ ನಿಷೇಧ ರಾಜಧಾನಿಯಲ್ಲಿ ಮುಂದುವರೆಯಲಿದ್ದು ಸಂಜೆ ೭ರಿಂದ ಬೆಳಗ್ಗೆ ೭ರವರೆಗೆ ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲ ಚಟುವಟಿಕೆ ನಿಷೇಧಿಸಲಾಗಿದೆ ಎಂದು ಹೇಳಿದರು.

ಟ್ಯಾಕ್ಸಿಗಳು ಮತ್ತು ಕ್ಯಾಬ್‌ಗಳಿಗೆ ಒಂದು ಸಲಕ್ಕೆ ಕೇವಲ ಇಬ್ಬರು ಪ್ರಯಾಣಿಕರನ್ನು ಮಾತ್ರವೇ ಒಯ್ಯಲು ಅವಕಾಶವಿದೆ. ಖಾಸಗಿ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ತೆರೆಯಬಹುದು. ಆದರೆ ಅವರು ಬಹುತೇಕ ಸಿಬ್ಬಂದಿ ಮನೆಗಳಿಂದಲೇ ಕೆಲಸ ಮಾಡುವ ನಿಟ್ಟಿನ ಯತ್ನ ನಡೆಸಬೇಕು. ಮಾರುಕಟ್ಟೆಗಳು ತೆರೆದರೂ ಅಂಗಡಿಗಳು ಸಮ-ಬೆಸ ವ್ಯವಸ್ಥೆಯಲ್ಲಿ ಕಾರ್‍ಯ ನಿರ್ವಹಿಸಬೇಕು. ಕ್ರೀಡಾ ಸಮುಚ್ಚಯಗಳು ಸ್ಟೇಡಿಯಂಗಳು ತೆರೆಯಬಹುದು ಆದರೆ ಪ್ರೇಕ್ಷಕರಿಗೆ ಅವಕಾಶವಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ರಾಜಧಾನಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಸಧ್ಯಕ್ಕೆ ದೆಹಲಿ ಇರುವ ನೌಕರರನ್ನು ಮಾತ್ರವೇ ಬಳಸಬೇಕು ಎಂದು ಅವರು ನುಡಿದರು.

ದೆಹಲಿಯ ಕಂಟೈನ್‌ಮೆಂಟ್ ವಲಯಗಳಲ್ಲಿ ಕಾರು ಪೂಲಿಂಗ್ ಅಥವಾ ಕಾರು -ಶೇರಿಂಗ್ ಗೆ ಅವಕಾಶವಿಲ್ಲ. ಆಟೋರಿಕ್ಷಾ, -ರಿಕ್ಷಾಗಳು ಒಬ್ಬನೇ ಒಬ್ಬ ಪ್ರಯಾಣಿಕನೊಂದಿಗೆ ಸಂಚರಿಸಬಹುದು. ದ್ವಿಚಕ್ರವಾಹನಗಳಲ್ಲಿ ಹಿಂಬದಿ ಸವಾರರಿಗೆ ಅವಕಾಶವಿಲ್ಲ. ಕಂಟೈನ್‌ಮೆಂಟ್ ವಲಯಗಳಲ್ಲಿ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ. ಬಸ್ಸುಗಳಲ್ಲಿ ಒಮ್ಮೆಗೆ ೨೦ ಪ್ರಯಾಣಿಕರಿಗೆ ಮಾತ್ರ ಅವಕಾಶ. ಸಾರಿಗೆ ಇಲಾಖೆಯು ಸಾಮಾಜಿಕ ಅಂತರ ಪಾಲನೆಯ ನಿಯಮಗಳನ್ನು ಬಸ್ ನಿಲುಗಡೆ ಮತ್ತು ಬಸ್ಸುಗಳ ಒಳಗೆ ಅನುಸರಿಸುವಂತೆ ನೋಡಿಕೊಳ್ಳಬೇಕು ಎಂದು ಕೇಜ್ರಿವಾಲ್ ಹೇಳಿದರು.

ಕರ್ನಾಟಕ, ಪಂಜಾಬ್, ಪುದುಚೆರಿ ಮತ್ತು ಕೇರಳ ಸೋಮವಾರ ಕೆಲವು ಸಡಿಲಿಕೆಗಳನ್ನು ಪ್ರಕಟಿಸಿ, ರಾಜ್ಯಗಳಲ್ಲಿ ಅಂಗಡಿಗಳು, ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದವು. . ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ದಿಗ್ಬಂಧನವನ್ನು ಮೇ ೩೧ರವರೆಗೆ ವಿಸ್ತರಿಸಿದವು.

ಪಶ್ಚಿಮ ಬಂಗಾಳ:
ಪಶ್ಚಿಮ ಬಂಗಾಳವು  ಮೇ ೩೧ರವರೆಗೆ ದಿಗ್ಬಂಧನವನ್ನು ವಿಸ್ತರಿಸಿತು. ರಾಜ್ಯದಲ್ಲಿ ಅಧಿಕೃತ ರಾತ್ರಿ ಕರ್ಫ್ಯೂ ಇಲ್ಲವಾದರೂ, ರಾತ್ರಿ ೭ರ ಬಳಿಕ ಹೊರಗಡೆ ಸುತ್ತಾಡಬೇಡಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದರು.

ಪಶ್ಚಿಮ ಬಂಗಾಳದಲ್ಲಿ ಖಾಸಗಿ ಕಚೇರಿಗಳು ಶೇಕಡಾ ೫೦ ಸಿಬ್ಬಂದಿಯೊಂದಿಗೆ ಕಾರ್‍ಯ ನಿರ್ವಹಿಸಬಹುದು. ಶಾಪಿಂಗ್ ಮಾಲ್‌ಗಳ ಒಳಗೂ ಶೇಕಡಾ ೫೦ ಸಿಬ್ಬಂದಿಯೊಂದಿಗೆ ಕೆಲಸ ನಡೆಸಬಹದು. ಮೇ ೨೧ರಿಂದ ಅಂತರಜಿಲ್ಲಾ ಬಸ್ಸುಗಳಿಗೆ ಅವಕಾಶ ಒದಗಿಸಲಾಗುವುದು. ಆಟೋರಿಕ್ಷಾಗಳು ಮೇ ೨೭ರಿಂದ ಸಂಚಾರ ಶುರುಮಾಡಬಹುದು. ಆದರೆ ಒಮ್ಮೆಗೆ ಇಬ್ಬರು ಪ್ರಯಾಣಿಕರನ್ನು ಮಾತ್ರವೇ ಒಯ್ಯಬಹುದು. ಬ್ಯೂಟಿ ಪಾರ್ಲರುಗಳು, ಸಲೂನ್‌ಗಳು ತೆರೆಯಬಹುದು, ಆದರೆ ಉಪಕರಣಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು ಎಂದು ಮಮತಾ ಮುಖರ್ಜಿ ನುಡಿದರು.

ಆಂಧ್ರಪ್ರದೇಶ:
ಆಂದ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಮುಂದಿನ ಕೆಲವೇ ದಿನಗಳಲ್ಲಿ ಸಂಚಾರ ಆರಂಭಿಸಲಿವೆ. - ದಿನಗಳಲ್ಲಿ ರಾಜ್ಯ ಸಾರಿಗೆ ಆರ್ ಟಿಸಿ ಬಸ್ಸುಗಳನ್ನು ಆರಂಭಿಸಲಾಗುವುದು. ನಾಳೆ ಮಾರ್ಗಸೂಚಿ ಪ್ರಕಟಿಸಲಾಗುವುದು.
ದೆಹಲಿ-ಕೇರಳ ವಿಶೇಷ ರೈಲು
ಕೇರಳದ ನಿವಾಸಿಗಳನ್ನು ಹೊತ್ತ ವಿಶೇಷ ರೈಲು ಮೇ ೨೦ರ ಬುಧವಾರ ದೆಹಲಿಯಿಂದ ಕೇರಳಕ್ಕೆ ತೆರಳಲಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ೪ನೇ ಹಂತದ ದಿಗ್ಬಂಧನದ ಮಾರ್ಗಸೂಚಿಯನ್ನು ಪ್ರಕಟಿಸಿದರು. ಅಂತರ-ಜಿಲ್ಲಾ ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಲಾಗಿದೆ, ಆದರೆ ಬಸ್ಸಿನ ಆಸನ ಸಾಮರ್ಥ್ಯದ ಶೇಕಡಾ ೫೦ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ, ಖಾಸಗಿ ವಾಹನಗಳಿಗೆ ಅಂತರ ಜಿಲ್ಲಾ ಪಯಣಕ್ಕೆ ಅವಕಾಶವಿದೆ, ವಿಶೇಷ ಪಾಸುಗಳು ಬೇಕಿಲ್ಲ, ಗುರುತು ಚೀಟಿ (ಐಡಿ) ಇದ್ದರೆ ಸಾಕು ಎಂದು ವಿಜಯನ್ ನುಡಿದರು.

ಟ್ಯಾಕ್ಸಿಸೇವೆ, ಆಟೋರಿಕ್ಷಾ, ಮೋಟಾರುಸೈಕಲ್ ಗಳಿಗೆ ಕೇಂದ್ರ ಮಾರ್ಗಸೂಚಿಯ ನಿಯಮಗಳನ್ನೇ ಅಳವಡಿಸಲಾಗಿದೆ. ಆಟೋರಿಕ್ಷಾದಲ್ಲಿ ಕುಟುಂಬ ಸದಸ್ಯರೇ ಆಗಿದ್ದಲ್ಲಿ ಮೂವರಿಗೆ, ಮೋಟಾರು ಸೈಕಲ್ ನಲ್ಲಿ ಕುಟುಂಬ ಸದಸ್ಯರೇ ಆಗಿದ್ದರೆ ಇಬ್ಬರಿಗೆ ಅವಕಾಶವಿದೆ. ಗರ್ಭಿಣಿಯರು, ಹಿರಿಯರು, ಚಿಕಿತ್ಸೆಯಲ್ಲಿ ಇರುವ ಜನರು ಮನೆಗಳಿಂದ ಹೊರಬರಬಾರದು. ಶಾಪಿಂಗ್ ಸಮುಚ್ಚಯಗಳಲ್ಲಿ ಶೇಕಡಾ ೫೦ ಅಂಗಡಿಗಳಿಗೆ ಪರ್ಯಾಯ ದಿನಗಳಲ್ಲಿ ತೆರೆಯಲು ಅವಕಾಶ ನೀಡಲಾಗುವುದು.

ಪ್ರಿಯಾಂಕಾಗಾಂಧಿ ಸಲಹೆಗೆ ಅಸ್ತು
ವಲಸೆ ಕಾರ್ಮಿಕರಿಗೆ ೧೦೦೦ ಬಸ್ಸುಗಳ ವ್ಯವಸ್ಥೆ ಮಾಡುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಾಡಿದ ಸಲಹೆಗೆ ಉತ್ತರ ಪ್ರದೇಶ ಸರ್ಕಾರ ಸ್ಪಂದಿಸಿದೆ. ಪ್ರಿಯಾಂಕಾಗಾಂಧಿ ವಾದ್ರಾ ಅವರ ಪ್ರಸ್ತಾಪವನ್ನು ಅಂಗೀಕರಿಸಿ ೧೦೦೦ ಬಸ್ಸುಗಳನ್ನು ವಲಸೆ ಕಾರ್ಮಿಕರಿಗಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಹೆಚ್ಚುವರಿ ಮುಖ್ಯ ಕಾರ್‍ಯದರ್ಶಿ (ಗೃಹ) ಅವನೀಶ್ ಅವಸ್ಥಿ ಕಾಂಗ್ರೆಸ್ ನಾಯಕಿಗೆ ಪತ್ರ ಬರೆದಿದ್ದಾರೆ.

ತಮಿಳುನಾಡು
ತಮಿಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಸಲೂನ್‌ಗಳನ್ನು ಪುನಾರಂಭ ಮಾಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಪ್ರಕಟಿಸಿದರು.

ಅಸ್ಸಾಮ್: ಮೇ ೩೧ರವರೆಗೆ ದಿಗ್ಬಂಧನ
ಅಸ್ಸಾಮ್ ಸರ್ಕಾರವು ದಿಗ್ಬಂಧನವನ್ನು ಮೇ ೩೧ರವರೆಗೆ ವಿಸ್ತರಿಸಿದ್ದು, ಸಮಯದಲ್ಲಿ ಅನುಸರಿಬೇಕಾದ ಮಾರ್ಗಸೂಚಿಯನ್ನು ಪ್ರಕಟಿಸಿತು. ಎಲ್ಲ ವಸ್ತುಗಳ -ಕಾಮರ್ಸ್ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು, ರಾತ್ರಿ ಗಂಟೆವರೆಗೆ ಮಾತ್ರ ವಿತರಣೆಗೆ ಅವಕಾಶ, ರಾಜ್ಯದಲ್ಲಿ ಎಲ್ಲ ಅಂಗಡಿಗಳು ಸಂಜೆ ಗಂಟೆವರೆಗೆ ವ್ಯವಹರಿಸಬಹುದು. ಮಾರುಕಟ್ಟೆ ಸಮುಚ್ಚಯಗಳು ಮತ್ತು ಶಾಪಿಂಗ್ ಮಾಲ್‌ಗಳು ಮುಚ್ಚಿರುತ್ತವೆ ಎಂದು ಸರ್ಕಾರ ತಿಳಿಸಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೪೮,೩೭,೩೬೧, ಸಾವು ,೧೭,೩೦೪
ಚೇತರಿಸಿಕೊಂಡವರು- ೧೮,೭೨,೪೧೬
ಅಮೆರಿಕ ಸೋಂಕಿತರು ೧೫,೩೧,೭೨೭, ಸಾವು ೯೧,೦೬೧
ಸ್ಪೇನ್ ಸೋಂಕಿತರು ,೭೭,೭೧೯, ಸಾವು ೨೭,೬೫೦
ಇಟಲಿ ಸೋಂಕಿತರು ,೨೫,೪೩೫, ಸಾವು ೩೧,೯೦೮
ಜರ್ಮನಿ ಸೋಂಕಿತರು ,೭೬,೯೩೩, ಸಾವು ,೦೬೨
ಚೀನಾ ಸೋಂಕಿತರು ೮೨,೯೫೪, ಸಾವು ,೬೩೪
ಇಂಗ್ಲೆಂಡ್ ಸೋಂಕಿತರು ,೪೩,೬೯೫, ಸಾವು ೩೪,೬೩೬
ಅಮೆರಿಕದಲ್ಲಿ ೮೩, ಇರಾನಿನಲ್ಲಿ ೬೯, ಬೆಲ್ಜಿಯಂನಲ್ಲಿ ೨೮, ಇಂಡೋನೇಷ್ಯ ೪೩, ನೆದರ್ ಲ್ಯಾಂಡ್ಸ್‌ನಲ್ಲಿ ೧೪, ರಶ್ಯಾದಲ್ಲಿ ೯೧, ಸ್ವೀಡನ್‌ನಲ್ಲಿ ೧೯, ಮೆಕ್ಸಿಕೋದಲ್ಲಿ ೧೩೨, ಬ್ರೆಜಿಲ್ ೮೩ ಒಟ್ಟಾರೆ ವಿಶ್ವಾದ್ಯಂತ ೭೮೪ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement