Sunday, May 24, 2020

ಮಹಾರಾಷ್ಟ್ರ: ೨೫ ವಿಮಾನ ಹಾರಾಟಕ್ಕೆ ಉದ್ಧವ್ ಅಸ್ತು

ಮಹಾರಾಷ್ಟ್ರ:  ೨೫ ವಿಮಾನ ಹಾರಾಟಕ್ಕೆ  ಉದ್ಧವ್  ಅಸ್ತು
ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಮೇ. ೩೧ರವರೆಗೆ ದೇಶೀಯ ವಿಮಾನ ಸಂಚಾರ ಬೇಡ ಎಂದು 2020 ಮೇ 24ರ ಭಾನುವಾರ ಹೇಳಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರ, ಕೇವಲ ಒಂದೇ ಗಂಟೆಯಲ್ಲಿ  ತಿಪ್ಪರಲಾಗ ಹೊಡೆದು ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿತು.

ಮೇ. ೩೧ರವೆರೆಗೆ ವಿಮಾನ ಹಾರಾಟಕ್ಕೆ ಅನುಮತಿ ನೀಡುವುದು ಕಷ್ಟ ಎಂದಿದ್ದ ಮಹಾರಾಷ್ಟ್ರ ಸರ್ಕಾರ, ಇದೀಗ ರಾಜಧಾನಿ ಮುಂಬೈಗೆ ದಿನಕ್ಕೆ ೨೫ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿತು.

ದಿನಕ್ಕೆ ರಾಜ್ಯದ ರಾಜಧಾನಿ ಮುಂಬೈಗೆ ೨೫ ವಿಮಾನಗಳ ಆಗಮನ ಹಾಗೂ ಮುಂಬೈನಿಂದ ೨೫ ವಿಮಾನಗಳ ನಿರ್ಗಮನಕ್ಕೆ ಉದ್ಧವ್ ಠಾಕ್ರೆ ಸರ್ಕಾರ  ಒಪ್ಪಿಗೆ ಕೊಟ್ಟಿತು.

ಕೇಂದ್ರ ವಿಮಾನಯಾನ ಸಚಿವ ಹರದೀಪ್  ಸಿಂಗ್ ಪುರಿ ಅವರೊಂದಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದೂರವಾಣಿಯಲ್ಲಿ ಮಾತನಾಡಿದ ಬಳಿಕ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವ ನವಾಬ್ ಮಲಿಕ್ ಸ್ಪಷ್ಟಪಡಿಸಿದರು.

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ. ೩೧ರ ಬಳಿಕವೂ ದಿಗ್ಬಂಧನ ವಿಸ್ತರಿಸುವ ಕುರಿತು ಮಾತನಾಡಿದ್ದ ಉದ್ಧವ್ ಠಾಕ್ರೆ, ದೇಶೀಯ ವಿಮಾನ ಸಂಚಾರ ಬೇಡ ಎಂದು ಹಿಂದೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.

No comments:

Advertisement