My Blog List

Sunday, May 24, 2020

ದೇಶದಲ್ಲಿ ಕೊರೋನಾ: ೨೪ ಗಂಟೆಯಲ್ಲಿ ೬,೭೬೭ ಪ್ರಕರಣ, ೧.೩೮ ಲಕ್ಷ ದಾಟಿದ ಸೋಂಕು

ದೇಶದಲ್ಲಿ ಕೊರೋನಾ: ೨೪ ಗಂಟೆಯಲ್ಲಿ ,೭೬೭ ಪ್ರಕರಣ,  .೩೮ ಲಕ್ಷ ದಾಟಿದ ಸೋಂಕು
ನವದೆಹಲಿ:  ಚೀನಾದಲ್ಲಿ ಕಾಣಿಸಿಕೊಂಡ ಮಾರಕ ಕೊರೋನಾ ವೈರಸ್ ಹಾವಳಿ  2020 ಮೇ 24ರ ಭಾನುವಾರವೂ ಭಾರತದಲ್ಲಿ ಮುಂದುವರೆಯಿತು. ಕಳೆದ ೨೪ ಗಂಟೆಯಲ್ಲಿ ದೇಶದಲ್ಲಿ ೬೭೬೭ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದವು.

 ಸತತ ಮೂರನೇ ದಿನವೂ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ ,೩೮,೧೮೧ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿತು.

ಇನ್ನು, ಕೇಂದ್ರದ ಮಾಹಿತಿ ಪ್ರಕಾರ ಒಂದೇ ದಿನ ಮಾರಕ ಕೊರೋನಾಗೆ ೧೪೭ ಮಂದಿ ಬಲಿಯಾಗಿದ್ದಾರೆ. ಇದರ ಪರಿಣಾಮ ಕೋವಿಡ್-೧೯ ಸೋಂಕಿಗೆ ಬಲಿಯಾದವರ ಸಂಖ್ಯೆ ೩೮೬೭ಕ್ಕೆ ಏರಿತು.

ಜಗತ್ತಿನಾದ್ಯಂತ ಇದುವರೆಗೂ ಒಟ್ಟು ೫೪, ೦೧,೨೨೨ ಮಂದಿಗೆ  ಕೊರೋನಾ  ಸೋಂಕು ತಗುಲಿದೆ.
ಜಾನ್ಸ್
ಹಾಪ್ಕಿನ್ಸ್  ಕೊರೋನಾ ವೈರಸ್  ಸಂಪನ್ಮೂಲ ಕೇಂದ್ರದ  ಮಾಹಿತಿ ಪ್ರಕಾರ, ಸೋಂಕಿಗೆ ಜಾಗತಿಕವಾಗಿ ,೪೩,೭೯೯ ಜನರು ಬಲಿಯಾಗಿದ್ದಾರೆ.   ಪೈಕಿ ಅಮೆರಿಕ ಒಂದರಲ್ಲೇ  ೯೮,೬೮೩ ಜನ ಅಸುನೀಗಿದ್ದಾರೆ.

ಅಮೆರಿಕಾದಲ್ಲೇ ಅತೀಹೆಚ್ಚು ಮಂದಿಗೆ ಅದರೆ ಒಟ್ಟು ೧೬, ೬೬,೮೨೮ ಜನರಿಗೆ ಕೋವಿಡ್-೧೯ ಪಾಸಿಟಿವ್ ಪತ್ತೆಯಾಗಿದೆ. ಸದ್ಯ ೧೧, ೨೧,೨೩೧ ಮಂದಿಗೆ ಮಾತ್ರ ಸಕ್ರಿಯವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಬೆನ್ನಲ್ಲೀಗ ಬ್ರೆಜಿಲ್ ದೇಶವು ಕೋವಿಡ್-೧೯ ಹಾಟ್ ಸ್ಪಾಟ್  ಆಗಿ ಬದಲಾಗಿದೆ. ಈಗ ಮಾರಕ ಕೊರೋನಾದಿಂದ ಬಳಲುತ್ತಿರುವವರ ಸಂಖ್ಯೆ ,೪೭,೩೯೮ಕ್ಕೆ ತಲುಪಿದೆ.  ಇವರ ಪೈಕಿ ೨೨,೦೧೩ ಜನರು ಸಾವನ್ನಪ್ಪಿದ್ದಾರೆ.

ಜತೆಗೆ ಇಟಲಿ ೩೨,೭೩೫, ಸ್ಪೇನ್ ೨೮,೬೭೮, ಇಂಗ್ಲೆಂಡ್ ೩೬,೬೭೫, ಪ್ರಾನ್ಸ್ನಲ್ಲಿ ೨೮,೩೩೨ ಮಂದಿ ಸಾವನ್ನಪ್ಪಿದ್ದಾರೆ. ಇವರ ನಂತರದ ಸಾಲಿನಲ್ಲಿ ಭಾರತ ನಿಂತಿದೆ.

No comments:

Advertisement