Tuesday, May 26, 2020

ಜಗತ್ತಿನಲ್ಲಿ ಕೊರೋನಾ ಸಾವು: ಭಾರತದಲ್ಲೇ ಅತ್ಯಂತ ಕಡಿಮೆ

ಜಗತ್ತಿನಲ್ಲಿ ಕೊರೋನಾ ಸಾವು:  ಭಾರತದಲ್ಲೇ ಅತ್ಯಂತ ಕಡಿಮೆ
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಇಡೀ ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಅತ್ಯಂತ ಕಡಿಮೆ ಎಂದು ಭಾರತ ಸರ್ಕಾರ  2020 ಮೇ 26ರ ಮಂಗಳವಾರ ಇಲ್ಲಿ ತಿಳಿಸಿತು.

ದೇಶದಲ್ಲಿ ಪ್ರಸ್ತುತ ಶೇಕಡಾ .೮೭ರಷ್ಟು ಪ್ರಮಾಣದ ಮಂದಿ ಮಾತ್ರ ಕೊರೋನಾವೈರಸ್ ಸೋಂಕಿಗೆ ಬಲಿಯಾಗಿ ಅಸು ನೀಗುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು.

ವಿಶ್ವಾದ್ಯಂತ ಒಂದು ಲಕ್ಷ ಜನಸಂಖ್ಯೆಗೆ ಶೇಕಡಾ .೪ರಷ್ಟು ಸಾವುಗಳು ವರದಿಯಾಗಿವೆ. ಆದರೆ ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ .೩ರಷ್ಟು ಸಾವು ಮಾತ್ರ ಸಂಭವಿಸಿದೆ. ಇದು ಇಡೀ ಜಗತ್ತಿನಲ್ಲೇ ಅತ್ಯಂತ ಕಡಿಮೆ. ದಿಗ್ಬಂಧನ (ಲಾಕ್ ಡೌನ್), ಸಕಾಲಿಕ ಗುರುತಿಸುವಿಕೆ ಮತ್ತು ಕೊರೋನಾವೈರಸ್ ಪ್ರಕರಣಗಳ ನಿರ್ವಹಣೆಯ ಕಾರಣದಿಂದ ಇದು ಸಾಧ್ಯವಾಗಿದೆ ಎಂದು ಅವರು ನುಡಿದರು.

ಈವರೆಗೆ, ಕೋವಿಡ್ -೧೯ ಸಾಂಕ್ರಾಮಿಕದಿಂದ ೬೦,೪೯೦ ಮಂದಿ ಚೇತರಿಸಿದ್ದಾರೆ. ಪ್ರಸ್ತುತ ಚೇತರಿಕೆ ಪ್ರಮಾಣ ಶೇಕಡಾ ೪೧.೬೧ ಎಂದು ಅಗರವಾಲ್ ನುಡಿದರು.

ರಾಜ್ಯಗಳ ಜೊತೆ ಸಮಾಲೋಚನೆ: ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಮಂಗಳವಾರ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶ ಐದು ರಾಜ್ಯಗಳ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದರು. ಕಂಟೈನ್ಮೆಂಟ್ ವಲಯಗಳಲ್ಲಿನ ಪ್ರವೃತ್ತಿ ಬಗ್ಗೆ ವಿಶ್ಲೇಷಣೆ ನಡೆಸಿ ಸೂಕ್ಷ್ಮ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಮತ್ತು ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಅವರು ರಾಜ್ಯಗಳಿಗೆ ಸಲಹೆ ಮಾಡಿದರು. 
ಐಸಿಎಂಆರ್ ಪರೀಕ್ಷೆ ಹೆಚ್ಚಳ
ಕಳೆದ ಕೆಲವು ತಿಂಗಳುಗಳಲ್ಲಿ ಗಂಟಲ ದ್ರವ ಪರೀಕ್ಷಾ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಲಾಗಿದ್ದು ಪ್ರತಿದಿನ . ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾ ನಿರ್ದೇಶಕ ಡಾ. ಬಲರಾಮ್ ಭಾರ್ಗವ ಹೇಳಿದರು.

ಪುಣೆಯಲ್ಲಿ ಹೊಂದಿದ್ದ ಕೇವಲ ಒಂದು ಪ್ರಯೋಗಾಲಯದಿಂದ ಪ್ರಸ್ತುತ ೪೩೦ ಸರ್ಕಾರಿ ಮತ್ತು ೧೮೨ ಖಾಸಗಿ ಪ್ರಯೋಗಾಲಯಗಳವರೆಗೆ ಒಟ್ಟು ೬೧೨ರಷ್ಟು ಸಂಖ್ಯೆಗೆ ದೇಶಾದ್ಯಂತ ಪ್ರಯೋಗಾಲಯಗಳನ್ನು ಕಳೆದ ಮೂರು ತಿಂಗಳುಗಳಲ್ಲಿ ಹೆಚ್ಚಿಸಲಾಗಿದೆ ಎಂದು ಅವರು ನುಡಿದರು.

ಕೋವಿಡ್-೧೯ರ ವಿರುದ್ಧ ಹಲವಾರು ಔಷಧಗಳನ್ನು ಬಳಸಲಾಗುತ್ತಿದೆ. ಅಧ್ಯಯನಗಳ ಆಧಾರದಲ್ಲಿ ನಾವು ಕಟ್ಟುನಿಟ್ಟಾದ ವೈದ್ಯಕೀಯ ನಿಗಾದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸುವಂತೆ ನಾವು ಶಿಫಾರಸು ಮಾಡುತ್ತೇವೆ ಎಂದು ಐಸಿಎಂಆರ್ ಮಹಾನಿರ್ದೇಶಕರು ಹೇಳಿದರು.

ಆರೋಗ್ಯದ ಅಪಾಯವನ್ನು ಗಮನದಲ್ಲಿ ಇರಿಸಿಕೊಂಡು ನಮ್ಮ ಆರೋಗ್ಯ ಕಾರ್ಯಕರ್ತರು ಅದನ್ನು ಬಳಸದಂತೆ ನಿರಾಕರಣೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದರು.
ಮಲೇರಿಯಾ ವಿರುದ್ಧ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಗೆ ತಾತ್ಕಾಲಿಕ ವಿರಾಮ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಹೇಳಿಕೆ ನೀಡಿದ ಒಂದು ದಿನದ ಬಳಿಕ ಐಸಿಎಂಆರ್ ಸಲಹೆಯನ್ನು ನೀಡಿತು.

ಗ್ಲೆನ್ ಮಾರ್ಕ್ ಅಧ್ಯಯನ:
ಮಧ್ಯೆ, ಫವಿಪಿರವೀರ್ ಮತ್ತು ಉಮಿಫೆನೋವೀರ್ ಎರಡು ಎರಡು ವೈರಾಣು ನಿಗ್ರಹ ಔಷಧಗಳ ಮಿಶ್ರಣವನ್ನು ಕೋವಿಡ್-೧೯ ವಿರುದ್ಧ ಬಳಸುವ ಬಗ್ಗೆ ತಾನು ಕ್ಲಿನಿಕಲ್ ಟ್ರಯಲ್ ಆರಂಭಿಸುವುದಾಗಿ ಗ್ಲೆನ್ ಮಾರ್ಕ್ ಫಾರ್ಮಾಸ್ಯೂಟಿಕಲ್ಸ್ ಮಂಗಳವಾರ ತಿಳಿಸಿತು.

ಫಾರ್ಮಾಸ್ಯೂಟಿಕಲ್ ಸಂಸ್ಥೆಯು ಅಧ್ಯಯನಕ್ಕಾಗಿ ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯಿಂದ ಅನುಮತಿ ಪಡೆದುಕೊಂಡಿದೆ ಎಂದು ಕಂಪೆನಿ ತಿಳಿಸಿದೆ.

ಒಟ್ಟು ,೪೫ ಲಕ್ಷ ಮಂದಿಗೆ ಸೋಂಕು:
ಭಾರತದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ಸೋಂಕು ತಗುಲಿದ ಪ್ರಕರಣಗಳ ಸಂಖ್ಯೆ ಮಂಗಳವಾರ ,೪೫,೩೮೦ಕ್ಕೆ ಏರಿದ್ದು, ಕಳೆದ ೨೪ ಗಂಟೆಗಳಲ್ಲಿ ೧೪೬ ಮಂದಿಯ ಸಾವಿನೊಂದಿಗೆ ಸಾವಿನ ಸಂಖ್ಯೆ ,೧೬೭ಕ್ಕೆ ಏರಿತು.

ಭಾರತವು ನಾಲ್ಕು ದಿನಗಳ ಕಾಲ ನಿರಂತರ ಸೋಂಕು ಪ್ರಮಾಣ ಏರಿಕೆಯೊಂದಿಗೆ ಮಂಗಳವಾರ ವಿಶ್ವದ ಅತಿಬಾಧಿತ ೧೦ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿತ್ತು.

ಅಮೆರಿಕವು ಅತಿ ಪೀಡಿತ ರಾಷ್ಟ್ರಗಳಲ್ಲಿ ಮೊದಲನೆಯ ಸ್ಥಾನದಲ್ಲಿದ್ದರೆ, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷಾಂತ್ಯದಲ್ಲಿ ಕೊರೋನಾವೈರಸ್ ಮೊತ್ತ ಮೊದಲಿಗೆ ಪತ್ತೆಯಾಗಿದ್ದ ಚೀನಾ ಈಗ ೧೪ನೇ ಸ್ಥಾನದಲ್ಲಿದೆ.

ಅಮೆರಿಕದಲ್ಲಿ ಕಳೆದ ೨೪ ಗಂಟೆಯಲ್ಲಿ ೫೩೨ ಸಾವಿ ಸಂಭವಿಸಿದ್ದು ಒಟ್ಟು ಸಾವಿನ ಸಂಖ್ಯೆ ೯೮,೨೧೮ಕ್ಕೆ ಏರಿದೆ. ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ ೧೬,೬೨,೩೭೫ಕ್ಕೆ ಏರಿದೆ. ಸಾವು ಮತ್ತು ಸೋಂಕು ಎರಡೂ ಅಮೆರಿಕದಲ್ಲೇ ಅತ್ಯಧಿಕವಾಗಿವೆ.

ಕೊರೋನಾವೈರಸ್ ಸಾಂಕ್ರಾಮಿಕ ವಿಶ್ವಾದ್ಯಂತ ೫೪ ಲಕ್ಷಕ್ಕೂ ಹೆಚ್ಚು ಮಂದಿಗೆ ತಗುಲಿದ್ದು, . ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಭಾರತದಲ್ಲಿ ದಿನಗಳಿಂದ ದಾಖಲೆ ಸಂಖ್ಯೆಯಲ್ಲಿ ಸೋಂಕು ಹೆಚ್ಚಿದ್ದರೂ, ಆಯ್ದ ವಿಮಾನಗಳು ಸೋಮವಾರ ದೇಶೀ ವಿಮಾನಯಾನ ಆರಂಭಿಸಿವೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೫೬,೧೮,೧೨೬, ಸಾವು ,೪೮,೫೪೫
ಚೇತರಿಸಿಕೊಂಡವರು- ೨೩,೯೩,೫೩೯
ಅಮೆರಿಕ ಸೋಂಕಿತರು ೧೭,೦೮,೪೭೩, ಸಾವು ೯೯,೮೪೭
ಸ್ಪೇನ್ ಸೋಂಕಿತರು ,೮೨,೪೮೦, ಸಾವು ೨೬,೮೩೭
ಇಟಲಿ ಸೋಂಕಿತರು ,೩೦,೧೫೮, ಸಾವು ೩೨,೮೭೭
ಜರ್ಮನಿ ಸೋಂಕಿತರು ,೮೦,೮೩೦, ಸಾವು ,೪೩೩
ಚೀನಾ ಸೋಂಕಿತರು ೮೨,೯೯೨, ಸಾವು ,೬೩೪
ಇಂಗ್ಲೆಂಡ್ ಸೋಂಕಿತರು ,೬೧,೧೮೪, ಸಾವು ೩೬,೯೧೪
ಅಮೆರಿಕದಲ್ಲಿ ೪೨೧ ಇರಾನಿನಲ್ಲಿ ೫೭, ಬೆಲ್ಜಿಯಂನಲ್ಲಿ ೨೨, ಇಂಡೋನೇಷ್ಯ ೨೭, ನೆದರ್ ಲ್ಯಾಂಡ್ಸ್ನಲ್ಲಿ ೨೬, ರಶ್ಯಾದಲ್ಲಿ ೧೭೪, ಸ್ವೀಡನ್ನಲ್ಲಿ ೯೬, ಮೆಕ್ಸಿಕೋದಲ್ಲಿ ೨೩೯ ಒಟ್ಟಾರೆ ವಿಶ್ವಾದ್ಯಂತ ೯೩೨ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement