My Blog List

Wednesday, May 27, 2020

ದಿಗ್ಬಂಧನ ಇನ್ನೆರಡು ವಾರ ವಿಸ್ತರಣೆ ಸಂಭವ, ೧೧ ನಗರಗಳತ್ತ ಗಮನ

ದಿಗ್ಬಂಧನ ಇನ್ನೆರಡು ವಾರ ವಿಸ್ತರಣೆ ಸಂಭವ,
೧೧
ನಗರಗಳತ್ತ ಗಮನ
ನವದೆಹಲಿ: ಕೊರೋನವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಮೇ ೩೧ ಬಳಿಕ ಇನ್ನೂ ಎರಡು ವಾರಗಳವರೆಗೆ ಕೆಲವು ವಿಧದ ದಿಗ್ಬಂಧನವನ್ನು (ಲಾಕ್ಡೌನ್) ವಿಸ್ತರಿಸುವ ಸಾಧ್ಯತೆಯಿದೆ. ಆದರೆ ಇನ್ನಷ್ಟು ಹೆಚ್ಚಿನ ಸಡಿಲಿಕೆಗಳು ಇರುವ ಸಂಭವವಿದೆ.

ಸರ್ಕಾರದ ಉನ್ನತ ಮೂಲವೊಂದು ಮುಂದಿನ ಹಂತವನ್ನು "ಲಾಕ್ಡೌನ್ ಸ್ಫೂರ್ತಿಯುತ ವಿಸ್ತರಣೆ" ಎಂದು ವಿವರಿಸಿದೆ ಮತ್ತು ಹೆಚ್ಚಿನ ಅವಧಿಯಲ್ಲಿ ಗಮನವು ಶೇಕಡಾ ೭೦ರಷ್ಟು ಕೋವಿಡ್ ಪ್ರಕರಣಗಳು ಇರುವ ೧೧ ನಗರಗಳ ಮೇಲೆ ಕೇಂದ್ರೀಕರಿಸಲ್ಪಟ್ಟಿರುತ್ತದೆ ಎಂದು 2020 ಮೇ 27ರ ಬುಧವಾರ ಹೇಳಿತು.

ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಅಹಮದಾಬಾದ್ ಮತ್ತು ಕೋಲ್ಕತ-   ಆರು ಪ್ರಮುಖ ಮೆಟ್ರೋ ನಗರಗಳು ಮತ್ತು ಪುಣೆ, ಥಾಣೆ, ಜೈಪುರ, ಸೂರತ್ ಮತ್ತು ಇಂದೋರ್ ೧೧ ನಗರಗಳಲ್ಲಿ ಸೇರಿವೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ . ಲಕ್ಷ ದಾಟಿದ್ದು, ಕಳೆದ ೧೪ ದಿನಗಳಲ್ಲಿ ದ್ವಿಗುಣಗೊಂಡು ೧೫೧,೭೬೭ ಕ್ಕೆ ತಲುಪಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ತಿಳಿಸಿದೆ. ಭಾರತದಲ್ಲಿ ಕೋವಿಡ್ -೧೯ ಸಾವಿನ ಸಂಖ್ಯೆ ಕಳೆದ ಹದಿನಾರು ದಿನಗಳಲ್ಲಿ ದ್ವಿಗುಣಗೊಂಡು ,೩೩೭ ಕ್ಕೆ ತಲುಪಿದೆ.

ಪ್ರಕರಣಗಳ ನಿರಂತರ ಏರಿಕೆಯು ಭಾರತದ ವೈದ್ಯಕೀಯ ಸಾಮರ್ಥ್ಯ ಮತ್ತು ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಮತ್ತು ತೀವ್ರ ಸವಾಲನ್ನು ಒಡ್ಡಿದೆ. ಪ್ರಕರಣಗಳ ಏರಿಕೆ ನಿಧಾನವಾಗಿದ್ದರೂ ಕೊರೋನಾ ಪ್ರಮಾಣವನ್ನು ತಗ್ಗಿಸುವಲ್ಲಿ ಯಶಸ್ವಿಯಾಗದ ಕಾರಣ ಎರಡು ತಿಂಗಳ ದಿಗ್ಬಂಧನ  ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳು ಏಳತೊಡಗಿವೆ.

ದಿಗ್ಬಂಧನದ ನಾಲ್ಕನೇ ಹಂತದಲ್ಲಿ ಕೇಂದ್ರ ಸರ್ಕಾರವು ಕಂಟೈನ್ಮೆಂಟ್ ವಲಯಗಳಲ್ಲಿ ನಿರ್ಬಂಧ ಹೆಚ್ಚಿಸುವತ್ತ ಗಮನ ಕೇಂದ್ರೀಕರಿಸಿತು ಮತ್ತು ಎಲ್ಲ ಮಾರುಕಟ್ಟೆಗಳು, ಕಚೇರಿಗಳು, ಕೈಗಾರಿಕೆಗಳು ಮತ್ತು ವ್ಯವಹಾರಗಳಿಗೆ  ಅವಕಾಶ ಮಾಡಿಕೊಟ್ಟಿತು ಮತ್ತು ಆರ್ಥಿಕತೆಯನ್ನು ಸಂಪೂರ್ಣವಾಗಿ ತೆರೆಯಲು ಕಂಟೈನ್ ಮೆಂಟ್ ಹೊರತಾದ ಇತರ ಎಲ್ಲ ಪ್ರದೇಶಗಳಲ್ಲಿ ಬಸ್ಗಳ ಓಡಾಟಕ್ಕೆ ಅನುವು ಕಲ್ಪಿಸಿತು. ಕಳೆದ ವಾರ, ಸರ್ಕಾರವು ದೇಶೀಯ ವಿಮಾನಗಳ ಕಾರ್ಯಾಚರಣೆಗೂ ಸೀಮಿತ ಪ್ರಮಾಣದ ಅನುಮತಿ ನೀಡಿತು.

ದಿಗ್ಬಂಧನ . (ಲಾಕ್ಡೌನ್ .) ಸಡಿಲಿಕೆಯಲ್ಲಿ ಪೂಜಾ ಸ್ಥಳಗಳನ್ನು ಮತ್ತು ವ್ಯಾಯಾಮಶಾಲೆಗಳನ್ನು ಪುನಃ ತೆರೆಯಲು ಅನುಮತಿ ನೀಡಬಹುದು ಎಂದ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಅರ್ಚಕರು ಸಾಮಾಜಿಕ ಅಂತರ ಪಾಲನೆ ಮತ್ತು ಮುಖಗವಸು (ಮಾಸ್ಕ್) ಧರಿಸಿದರೆ ದೇವಾಲಯಗಳು ಮತ್ತು ಇತರ ಪೂಜಾ ಸ್ಥಳಗಳನ್ನು ತೆರೆಯಲು ಅವಕಾಶ ನೀಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದಾಗ್ಯೂ, ಯಾವುದೇ ಧಾರ್ಮಿಕ ಸಭೆ ಅಥವಾ ಹಬ್ಬ ಆಚರಣೆಗೆ ಅನುಮತಿ ನೀಡಲಾಗುವುದಿಲ್ಲ.

ಜೂನ್ ರಿಂದ ದೇವಾಲಯಗಳು ಮತ್ತು ಚರ್ಚುಗಳನ್ನು ಪುನಃ ತೆರೆಯಲು ತಾನು ಒಲವು ಹೊಂದಿರುವುದಾಗಿ ಕರ್ನಾಟಕ ಸರ್ಕಾರ ಈಗಾಗಲೇ ಹೇಳಿದೆ. ಮಾಲ್ ಮತ್ತು ಧಾರ್ಮಿಕ ಸ್ಥಳಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ ನಂತರ ರಾಜ್ಯ ಸರ್ಕಾರ ಅದಕ್ಕೆ ಅನುಮತಿ ನೀಡುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮುಂದಿನ ಹಂತದ ದಿಗ್ಬಂಧನದಲ್ಲಿ ಮಾಲ್ಗಳು, ಚಿತ್ರಮಂದಿರಗಳು, ಶಾಲೆಗಳು, ಕಾಲೇಜುಗಳು, ಇತರ ಶಿಕ್ಷಣ ಸಂಸ್ಥೆಗಳು ಮತ್ತು ದೊಡ್ಡ ಕೂಟಗಳನ್ನು ನಡೆಸಬಹುದಾದ ಇತರ ಸ್ಥಳಗಳ ಮೇಲೆ ನಿರ್ಬಂಧಗಳನ್ನು ಮುಂದುವರೆಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಲವು ರಾಜ್ಯಗಳು ಜೂನ್ ತಿಂಗಳಲ್ಲಿ ಶಾಲೆಗಳನ್ನು ತೆರೆಯುವ ಆಯ್ಕೆಯನ್ನು ಅನ್ವೇಷಿಸಲು ಪ್ರಾರಂಭಿಸಿವೆ, ಆದರೆ ಕೇಂದ್ರ ಸರ್ಕಾರವು ಇನ್ನೂ ಅದರ ಪರವಾಗಿಲ್ಲ ಎಂದು ಅವರು ಅಧಿಕಾರಿಗಳು ನುಡಿದರು.

No comments:

Advertisement