Monday, May 11, 2020

ರೈಲು ಪುನಾರಂಭಕ್ಕೆ ೪ ರಾಜ್ಯಗಳ ವಿರೋಧ, ಚೇತರಿಕೆ ಪ್ರಮಾಣ ಹೆಚ್ಚಳ

ರೈಲು ಪುನಾರಂಭಕ್ಕೆ ರಾಜ್ಯಗಳ ವಿರೋಧ,  ಚೇತರಿಕೆ ಪ್ರಮಾಣ ಹೆಚ್ಚಳ
ನವದೆಹಲಿ: ಕೋವಿಡ್ -೧೯ ಪ್ರಸರಣ ತಡೆಯ ಸಲುವಾಗಿ ಸ್ಥಗಿತಗೊಳಿಸಲಾಗಿದ್ದ ರೈಲು ಸೇವೆಯ ಪುನಾರಂಭವನ್ನು ಕನಿಷ್ಠ ನಾಲ್ಕು ರಾಜ್ಯಗಳು ವಿರೋಧಿಸಿದ್ದು, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಛತ್ತೀಸ್ ಗಢ ರಾಜ್ಯಗಳ ಮುಖ್ಯಮಂತ್ರಿಗಳು  2020 ಮೇ 11ರ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ವಿಡಿಯೋ ಸಂವಾದದಲ್ಲಿ ರೈಲು ಸೇವೆ ಪುನಾರಂಭಕ್ಕೆ ವಿರೋಧ ವ್ಯಕ್ತ ಪಡಿಸಿದರು.

ರೈಲು ಸೇವೆ ಪುನಾರಂಭದಿಂದ ಶಂಕಿತ ಕೋವಿಡ್-೧೯ ಪ್ರಕರಣಗಳನ್ನು ಪರೀಕ್ಷಿಸಲು, ಪತ್ತೆ ಹಚ್ಚಲು ಮತ್ತು ಪ್ರತ್ಯೇಕಿಸಲು ಅತ್ಯಂತ ಕಠಿಣವಾದೀತು ಮತ್ತು ಇದರ ಪರಿಣಾಮವಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾದೀತು ಎಂದು ಎಚ್ಚರಿಸಿದ ಮುಖ್ಯಮಂತ್ರಿಗಳು ರೈಲು ಸೇವೆ ಪುನರಾಂಭದ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದರು.

ಅತ್ಯಂತ ಹೆಚ್ಚು ಕೋವಿಡ್-೧೯ ಪ್ರಕರಣಗಳೂ ಇರುವ ಕೆಂಪು ವಲಯಗಳನ್ನು ಕಿತ್ತಳೆ ವಲಯವಾಗಿ ಮಾರ್ಪಡಿಸುವ ಅಥವಾ ಹಿಸುರ ವಲಯವಾಗಿ ಮಾರ್ಪಡಿಸುವ ಬಗ್ಗೆ ಮತ್ತು ವ್ಯವಸ್ಥಿತ ರೀತಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಬಗ್ಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದರು.

ಮಂಗಳವಾರದಿಂದ ರೈಲು ಸೇವೆ ಪುನಾರಂಭವನ್ನು ವಿರೋಧಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ನಿಲುವನ್ನು ಬೆಂಬಲಿಸಿದರು. ಉಭಯ ಮುಖ್ಯಮಂತ್ರಿಗಳ ಮಾತನ್ನು ಆಂದ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕೂಡಾ ಸಮರ್ಥಿಸಿದರು.

ರೈಲು ಸೇವೆ ಪುನಾರಂಭದಿಂದ ಸೋಂಕಿತರ ಪರೀಕ್ಷೆ, ಕ್ವಾರಂಟೈನ್ ಗೊಂದಲಮಯವಾಗಲಿದೆ ಎಂದು ಕೆಸಿಆರ್ ಹೇಳಿದರು. ಎಲ್ಲ ರಾಜ್ಯಗಳೂ ವ್ಯಾಪಕ ಹಣಕಸು ಸಂಕಷ್ಟದಲ್ಲಿವೆ. ಯಾವ ರಾಜ್ಯವೂ ಕೇಂದ್ರದ ಸಾಲವನ್ನು ತೀರಿಸಲು ಸಮರ್ಥವಾಗಿಲ್ಲ ಎಂದು ನುಡಿದ ತೆಲಂಗಾಣ ಮುಖ್ಯಮಂತ್ರಿ ರಾಜ್ಯಗಳು ಮರುಪಾವತಿ ಮಾಡಬೇಕಾದ ಸಾಲದ ಮರುಪಾವತಿಯನ್ನು ಮುಂದೂಡಬೇಕು ಎಂದು ಮನವಿ ಮಾಡಿದರು.

೬೭,೦೦೦ಕ್ಕೆ ಏರಿದ ಸೋಂಕು, ಚೇತರಿಕೆ ಪ್ರಮಾಣ ಶೇಕಡಾ ೩೧.೧೫
ಭಾರತದಲ್ಲಿ ಕೋವಿಡ್-೧೯ ಸೋಂಕಿನ ಪ್ರಕರಣಗಳು ಸೋಮವಾರ ೬೭,೧೫೨ಕ್ಕೆ ಏರಿದೆ. ಪೈಕಿ ೨೦,೯೧೭ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ೪೪,೦೨೯ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ,೨೧೩ ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಇದೇ ವೇಳೆಯಲ್ಲಿ ,೫೫೯ ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಚೇತರಿಕೆಯ ಪ್ರಮಾಣ ಶೇಕಡಾ ೩೧.೧೫ಕ್ಕೆ ಏರಿದೆ ಎಂದು ಅವರು ನುಡಿದರು.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ೯೭ ಸಾವುಗಳು ವರದಿಯಾಗಿವೆ.

ಆರೋಗ್ಯ ಸೇತು ಆಪ್ ಬಳಕೆಯ ಮೂಲಕ ಕಳೆದ ಕೆಲವು ದಿನಗಳಲಿ ,೪೦,೦೦೦ ಸೋಂಕಿನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. . ಕೋಟಿ ಸ್ಮಾರ್ಟ್ ಫೋನುಗಳಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್ ಡೌನ್ ಲೋಡ್ ಮಾಡಲಾಗಿದ್ದು, ಮಂಗಳವಾರದಿಂದ ಆಪ್ ಜಿಯೋ ಸ್ಮಾರ್ಟ್ ಫೋನುಗಳಲ್ಲಿಯೂ ಲಭಿಸಲಿದೆ ಎಂದು ಎಂಪವರ್ಡ್ ಗ್ರೂಪ್ ೯ರ ಅಧ್ಯಕ್ಷ ಅಜಯ್ ಸಾಹ್ನಿ ಹೇಳಿದರು.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೪೨,೧೮,೪೯೬, ಸಾವು ,೮೪,೭೬೫
ಚೇತರಿಸಿಕೊಂಡವರು- ೧೫,೦೬,೭೪೩
ಅಮೆರಿಕ ಸೋಂಕಿತರು ೧೩,೭೦,೪೩೩, ಸಾವು ೮೦,೮೬೨
ಸ್ಪೇನ್ ಸೋಂಕಿತರು ,೬೮,೧೪೩, ಸಾವು ೨೬,೭೪೪
ಇಟಲಿ ಸೋಂಕಿತರು ,೧೯,೦೭೦,  ಸಾವು ೩೦,೫೬೦
ಜರ್ಮನಿ ಸೋಂಕಿತರು ,೭೧,೯೯೯, ಸಾವು ,೫೬೯
ಚೀನಾ ಸೋಂಕಿತರು ೮೨,೯೧೮, ಸಾವು ,೬೩೩
ಇಂಗ್ಲೆಂಡ್ ಸೋಂಕಿತರು ,೨೩,೦೬೦, ಸಾವು ೩೨,೦೬೫

ಅಮೆರಿಕದಲ್ಲಿ ೭೫, ಇರಾನಿನಲ್ಲಿ ೪೫, ಬೆಲ್ಜಿಯಂನಲ್ಲಿ ೫೧, ಸ್ಪೇನಿನಲ್ಲಿ ೧೨೩, ನೆದರ್ ಲ್ಯಾಂಡ್ಸ್ನಲ್ಲಿ ೧೬, ರಶ್ಯಾದಲ್ಲಿ ೯೪, ಸ್ವೀಡನ್ನಲ್ಲಿ ೩೧, ಮೆಕ್ಸಿಕೋದಲ್ಲಿ ೧೧೨, ಇಂಗ್ಲೆಂಡಿನಲ್ಲಿ ೨೧೦ ಒಟ್ಟಾರೆ ವಿಶ್ವಾದ್ಯಂತ ,೦೩೧ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement