ಒಡಿಶಾದಲ್ಲಿ ‘ಅಂಫಾನ್’ ಚಂಡ ಮಾರುತದ ಬಳಿಕ ಆಕಾಶ ವರ್ಣಮಯ
ನವದೆಹಲಿ: ಬಿರುಗಾಳಿ ಸಹಿತವಾದ ಧಾರಾಕಾರ ಮಳೆಯೊಂದಿಗೆ ಅಂಫಾನ್ ಚಂಡಮಾರುತ 2020 ಮೇ 20ರ ಬುಧವಾರ ಪಶ್ಚಿಮ ಬಂಗಾಳ ಮತ್ತು
ಒಡಿಶಾದಲ್ಲಿ ರೌದ್ರಾವತಾರ ತಾಳಿ
ಭಾರೀ ಪ್ರಮಾಣದ ಹಾನಿಯನ್ನು ಉಂಟು ಮಾಡಿತು.
ಇದರ
ಮಧ್ಯೆಯೇ ಒಡಿಶಾದ ರಾಜಧಾನಿ ಭುವನೇಶ್ವರದಿಂದ ಕೆಲವು ಚಿತ್ರಗಳು 2020 ಮೇ 21ರ
ಗುರುವಾರ ವೈರಲ್
ಆದವು. ನಗರದ ಮೂಲಕ
ಚಂಡಮಾರುತವು ಹಾದುಹೋದ ನಂತರ
ಒಡಿಶಾದಲ್ಲಿ ಆಕಾಶವು ನೇರಳೆ-ಗುಲಾಬಿ ಬಣ್ಣಕ್ಕೆ ತಿರುಗಿರುವುದನ್ನು ಈ ಚಿತ್ರಗಳು ತೋರಿಸಿದವು.
‘ಅತ್ಯಂತ ಭೀಕರ ಸಮಯ ಕೂಡಾ
ಮಾನವ ಚೈತನ್ಯವನ್ನು ಪುಡಿಗಟ್ಟಲು ಸಾಧ್ಯವಿಲ್ಲ’ ಎಂಬಿತ್ಯಾದಿ ಸ್ಫೂರ್ತಿದಾಯಕ ಟಿಪ್ಪಣಿಗಳೊಂದಿಗೆ ಹಲವಾರು ಮಂದಿ
ಈ ಚಿತ್ರಗಳನ್ನು ಟ್ವೀಟ್ ಮಾಡಿ ಹಂಚಿಕೊಂಡರು.
"ನನ್ನ ನಗರವು
ಎಷ್ಟು ಬಿರುಗಾಳಿಮಯವಾಗಿದ್ದರೂ, ನಾವು
ಅನುಗ್ರಹದೊಂದಿಗೆ ಅರಳಬಲ್ಲೆವು ಎಂಬುದಕ್ಕೆ ಈ ವರ್ಣರಂಜಿತ ಆಕಾಶ
ಉದಾಹರಣೆಯಾಗಿದೆ. ಎಂತಹ ಸುಂದರವಾದ ಸಂಜೆಯ ಆಕಾಶ!’ ಎಂದು
ಟ್ವಿಟ್ಟರ್ ಬಳಕೆದಾರೊಬ್ಬರು ಆಗಸದ
ವರ್ಣಮಯ ನೋಟದ ಚಿತ್ರವನ್ನು ಹಂಚಿಕೊಳ್ಳುತ್ತಾ ಬರೆದರು.
ಇತರ
ಹಲವರು ಕೂಡಾ ನಗರದ
ವಿವಿಧ ಪ್ರದೇಶಗಳಿಂದ ಚಿತ್ರಗಳನ್ನು ಹಂಚಿಕೊಂಡರು ಮತ್ತು ಪ್ರಕೃತಿಯ ಸಹಜ ಸೌಂದರ್ಯದ ಚಿತ್ರಗಳನ್ನು ತೆರೆದಿಟ್ಟರು.
‘ಭುವನೇಶ್ವರದ ಆಕಾಶ
ಅತ್ಯುತ್ತಮವಾಗಿದೆ. ಅಂಫಾನ್ ಚಂಡಮಾರುತ ಶಾಶ್ವತವಾಗಿ ಹೊರಟುಹೋಗಿದೆ’ ಎಂದು
ಈ ಚಿತ್ರವನ್ನು ಹಂಚಿಕೊಳ್ಳುತ್ತಾ ಟ್ವಿಟ್ಟರ್ ಬಳಕೆದಾರರೊಬ್ಬರು ಬರೆದರು.
‘ನೇರಳೆ ಆಕಾಶವು ಎಲ್ಲವನ್ನೂ ಇಂದ್ರಜಾಲದಂತೆ ನಮ್ಮನ್ನು ಮಂತ್ರಮುಗ್ಧಗೊಳಿಸಿದೆ. ಚಂಡಮಾರುತವು ಹಾದುಹೋದ ಬಳಿಕ ನಮ್ಮ ಸರ್ವಶಕ್ತನು ಈ ಆನಂದದಾಯಕ ನೋಟವನ್ನು ಕರುಣಿಸಿದ್ದಾನೆ’ ಎಂದು ಮತ್ತೊಬ್ಬರು ಬರೆದರು.
ಬಂಗಾಳಕೊಲ್ಲಿಯಿಂದ ಹೊರಟ ಅಂಫಾನ್ ಚಂಡಮಾರುತವು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸುವ ಮುನ್ನ ಒಡಿಶಾ ಮೂಲಕ
ಭಾರತದ ಪೂರ್ವ ಕರಾವಳಿಯನ್ನು ಪ್ರವೇಶಿಸಿತ್ತು.
ಇದು
ಕಳೆದ ಎರಡು ದಶಕಗಳಲ್ಲಿ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ಅತ್ಯಂತ ಪ್ರಬಲ ಚಂಡಮಾರುತವಾಗಿದೆ.
ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿನ ಜನರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ ಡಿ ಆರ್ ಎಫ್)
ತಂಡಗಳು ಸಾಧ್ಯವಿರುವ ಎಲ್ಲ ನೆರವು ಒದಗಿಸಲು ಕಾರ್‍ಯ ಮಗ್ನವಾಗಿವೆ.
No comments:
Post a Comment