ಕೊರೋನಾ: ಪ್ರಧಾನಿ ಮೋದಿ, ಶಾ ಸಮಾಲೋಚನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಗರದಲ್ಲಿ 2020 ಮೇ 29ರ ಶುಕ್ರವಾರ ಭೇಟಿಯಾಗಿ ದಿಗ್ಬಂಧನದಿಂದ (ಲಾಕ್ಡೌನ್) ಹೊರಬರುವ ಮಾರ್ಗದ ಕುರಿತು ಸಮಾಲೋಚನೆ ನಡೆಸಿದರು.
ಕಳೆದ ೨೪ ಗಂಟೆಗಳಲ್ಲಿ ಈವರೆಗಿನ ಎಲ್ಲ ದಾಖಲೆಗಳನ್ನು ಮೀರಿ ೭,೪೬೭ ಹೊಸ ಪ್ರಕರಣಗಳು ದಾಖಲಾಗಿದ್ದು ಇದರೊಂದಿಗೆ ದೇಶದಲ್ಲಿನ ಕೊರೋನಾ ಪ್ರಕರಣಗಳ ಂಖ್ಯೆ ೧,೬೫,೭೯೯ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದು ತೀವ್ರ ಆತಂಕವನ್ನು ಸೃಷ್ಟಿಸಿದೆ.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮುಂದಿನ ಹಂತದ ಲಾಕ್ ಡೌನ್ ವಿಸ್ತರಿಸುವ ಮತ್ತು ಭವಿಷ್ಯದ ಕಾರ್ಯತಂತ್ರವನ್ನು ರೂಪಿಸುವ ಬಗ್ಗೆ ಗೃಹ ಸಚಿವರು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಒಂದು ದಿನದ ಬಳಿಕ ಈ ಸಭೆ ನಡೆಯಿತು.
ಆರ್ಥಿಕ ಚಟುವಟಿಕೆಗಳಿಗೆ ಸಾಕಷ್ಟು ಸಡಿಲಿಕೆಯೊಂದಿಗೆ ದಿಗ್ಬಂಧನವನ್ನು ವಿಸ್ತರಿಸಬೇಕು ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಗೃಹ ಸಚಿವರನ್ನು ಆಗ್ರಹಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ದಿಗ್ಬಂಧನವನ್ನು ಇನ್ನೂ ೧೫ ದಿನಗಳವರೆಗೆ ವಿಸ್ತರಿಸಬಹುದು ಎಂದು ನಾನು ಭಾವಿಸುತ್ತೇನೆ. ಹೇಗಾದರೂ, ಕೆಲವು ಸಡಿಲಿಕೆಗಳು ಇರಬೇಕು ಎಂದು ನಾವು ಒತ್ತಾಯಿಸುತ್ತೇವೆ, ಅಂದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಶೇಕಡಾ ೫೦ ರಷ್ಟು ಸಾಮರ್ಥ್ಯದೊಂದಿಗೆ ಆರಂಭಿಸಲು ರೆಸ್ಟೋರೆಂಟ್ಗಳಿಗೆ ಅನುಮತಿ ನೀಡಬೇಕು. ಜಿಮ್ಗಳು ನಾರಂಭಗೊಳ್ಳಬೇಕು ಎಂದು ಅನೇಕ ಜನರು ಬಯಸುತ್ತಾರೆ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಅಮಿತ್ ಷಾಗೆ ಸಲಹೆ ನೀಡಿದ್ದಾರೆ ಎಂದು ಅಧಿಕಾರಿಗಳು ನುಡಿದರು.
ಗೃಹ ಸಚಿ ಅಮಿತ್ ಶಾ ಅವರು ಮುಖ್ಯಮಂತ್ರಿಗಳ ಜೊತೆಗೆ ಸಮಾಲೋಚಿಸುತ್ತಿರುವುದು ಇದೇ ಮೊದಲು. ಇದಕ್ಕೂ ಮೊದಲು ಪ್ರಧಾನಿ ಇಂತಹ ಸಮಾಲೋಚನಾ ಸಭೆಗಳ ಅಧ್ಯಕ್ಷತೆ ವಹಿಸುತ್ತಿದ್ದರು.
ಈ ಬಾರಿ ಪ್ರಧಾನಿಯವರು ಮುಖ್ಯಮಂತ್ರಿಗಳ ಜೊತೆಗೆ ಸಂವಹನ ನಡೆಸದಿರಬಹುದು ಎಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದರು.
ದಿಗ್ಬಂಧನದ ಹಾಲಿ ಹಂತದಲ್ಲಿ, ಕೇಂದ್ರವು ವ್ಯಾಪಕವಾದ ಸಡಿಲಿಕೆಗಳಿಗೆ ಅವಕಾಶ ಮಾಡಿಕೊಟ್ಟಿತು, ಯಾವುದನ್ನು ತೆರೆಯಬೇಕು ಮತ್ತು ಏನು ಮಾಡಬಾರದು ಎಂಬುದನ್ನು ನಿರ್ಧರಿಸುವ ವಿವೇಚನೆಯನ್ನು ಅದು ರಾಜ್ಯಗಳಿಗೆ ಬಿಟ್ಟಿತು.
ದಿಗ್ಬಂಧನದ ಪರಿಣಾಮವಾಗಿ ಕಂಗೆಟ್ಟಿರುವ ಆರ್ಥಿಕತೆಗೆ ಚೇತರಿಕೆ ನೀಡುವ ಬಗ್ಗೆ ಕೇಂದ್ರವು ತೀವ್ರ ಪರಾಮರ್ಶೆ ನಡೆಸುತ್ತಿದೆ.
No comments:
Post a Comment