My Blog List

Friday, May 29, 2020

೫ ರಾಜ್ಯಗಳಿಂದ ವಿಮಾನ, ರೈಲು, ವಾಹನ ನಿಷೇಧಿಸಿದ ಕರ್ನಾಟಕ

ರಾಜ್ಯಗಳಿಂದ ವಿಮಾನ, ರೈಲು, ವಾಹನ ನಿಷೇಧಿಸಿದ ಕರ್ನಾಟಕ

ನವದೆಹಲಿ: ದೇಶಾದ್ಯಂತ ಕೊರೋನಾ ಸಾಂಕ್ರಾಮಿಕ ಸೋಂಕಿನ ಪ್ರಕರಣಗಳು ,೫೮,೩೩೩ಕ್ಕೇ ಏರಿದ್ದು ಸಾವಿನ ಸಂಖ್ಯೆ ೪೫೩೧ಕ್ಕೆ ತಲುಪಿದೆ. ಇದೇ ವೇಳೆಗೆ ಕರ್ನಾಟಕವು ರಾಜ್ಯದಲ್ಲಿ ಸೋಂಕು ಹರಡುವಿಕೆಯನ್ನು ತಡೆಯಲು ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ ಮತ್ತು ರಾಜಸ್ಥಾ- ಐದು ರಾಜ್ಯಗಳಿಂದ ವಿಮಾನ, ರೈಲು ಮತ್ತು ಇತರ ವಾಹನಗಳ ಆಗಮನವನ್ನು  2020 ಮೇ 28ರ ಗುರುವಾರ ಅಮಾನತುಗೊಳಿಸಿತು.

ಐದು ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದ ಕೊರೋನಾ ಸೋಂಕು ಇದ್ದು, ಅಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ೫೬,೦೦೦ ಇದೆ. ತಮಿಳುನಾಡಿನಲ್ಲಿ ೧೮,೦೦೦ ಸೋಂಕು ಪ್ರಕರಣಗಳು ಇದ್ದರೆ ಗುಜರಾತಿನಲ್ಲಿ ೧೫,೦೦೦ಕ್ಕಿಂತಲೂ ಹೆಚ್ಚಿನ ಸೋಂಕು ಪ್ರಕರಣಗಳಿವೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ತಲಾ ೭೦೦೦ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳಿವೆ.

ಕರ್ನಾಟಕದಲ್ಲಿ ಗುರುವಾರ ಕೋವಿಡ್-೧೯ ಸೋಂಕಿನ ೧೧೫ ಹೊಸ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ೨೫೩೩ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿತು.

ಭಾರತದಲ್ಲಿ ದೇಶೀ ವಿಮಾನಯಾನ ಎರಡು ತಿಂUಳುಗಳ ಲಾಕ್ ಡೌನ್ ಅವಧಿಯ ಬಳಿಕ ಸೋಮವಾರ ಆರಂಭವಾಗಿದೆ. ಆದರೆ ಈಗ ಯಾವುದೇ ವಿಮಾನ ಐದು ರಾಜ್ಯಗಳಿಂದ ಬೆಂಗಳೂರಿಗೆ ಬರುವಂತಿಲ್ಲ.

ರೈಲುಗಳ ಪೈಕಿ ಬಹುತೇಕ ಶ್ರಮಿಕ ವಿಶೇಷ ರೈಲುಗಳು ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ಒಯ್ಯುತ್ತಿವೆ.

ಕಪ್ಪು ಪಟ್ಟಿಗೆ ಸೇರಿಸಲಾಗಿರುವ ಐದು ರಾಜ್ಯಗಳ ಪೈಕಿ ಮಹಾರಾಷ್ಟ್ರ ಮತ್ತು ತಮಿಳುನಾಡಿನ ಜೊತೆಗೆ ಕರ್ನಾಟಕ ಗಡಿಗಳನ್ನು ಹಂಚಿಕೊಂಡಿದೆ.

ಭಾರತದಲ್ಲಿ ,೫೬೬ ಹೊಸ ಪ್ರಕರಣ

ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ,೫೬೬ ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಒಟ್ಟು ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆಯನ್ನು ,೫೮,೩೩೩ಕ್ಕೆ ಏರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿ ತಿಳಿಸಿದೆ.

ಒಟ್ಟು ಪ್ರಕರಣಗಳ ಪೈಕಿ ೮೩,೦೦೪  ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು ೬೪,೪೨೫ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ದೇದಲ್ಲಿ ಚೇತರಿಕೆಯ ಪ್ರಮಾಣ ಶೇಕಡಾ ೪೨.೪೫ಕ್ಕೆ ಏರಿದೆ ಎಂದು ಹಿರಿಯ ಆರೋಗ್ಯ ಸಚಿವಾಲಯದ ಅಧಿಕಾರಿ ನುಡಿದರು.

೧೯೪ ಮಂದಿ ಕೊರೋನಾಸೋಂಕಿಗೆ ಕಳೆದ ೨೪ ಗಂಟೆಗಳಲ್ಲಿ ಬಲಿಯಾಗುವುದರೊಂದಿಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ,೫೩೧ಕ್ಕೆ ಏರಿದೆ.

ಕಳೆದ ೨೪ ಗಂಟೆಗಳಲ್ಲಿ ಮೃತರಾದ ೧೯೪ ಮಂದಿಯ ಪೈಕಿ ೯೭ ಮಂದಿ ಮಹಾರಾಷ್ಟ್ರದಲ್ಲಿ, ೨೭ ಗುಜರಾತಿನಲ್ಲಿ, ೧೨ ಮಂದಿ ದೆಹಲಿಯಲ್ಲಿ, ಮಂದಿ ತಮಿಳುನಾಡಿನಲ್ಲಿ, ತಲಾ ಐವರು ಮಧ್ಯಪ್ರದೇಶ, ಉತ್ತರಪ್ರದೇ ಮತ್ತು ಪಶ್ಚಿಮ ಬಂಗಾಳದಲ್ಲಿ ಮೂವರು ರಾಜಸ್ಥಾನದಲ್ಲಿ ಮತ್ತು ತಲಾ ಒಬ್ಬರು ಆಂಧ್ರಪ್ರದೇಶ, ಚಂಡೀಗಢ, ಹರಿಯಾನ, ಜಮ್ಮು ಮತ್ತು ಕಾಶ್ಮೀರ, ಕೇರಳ, ತೆಲಂಗಾಣ ಮತ್ತು ಉತ್ತರಾಖಂಡದಲ್ಲಿ ಅಸು ನೀಗಿದ್ದಾರೆ.

 ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೫೮,೨೪,೬೯೭, ಸಾವು ,೫೮,೧೮೫

ಚೇತರಿಸಿಕೊಂಡವರು- ೨೫,೨೩,೦೦೯

ಅಮೆರಿಕ ಸೋಂಕಿತರು ೧೭,೪೯,೭೧೯, ಸಾವು ,೦೨,೨೪೮

ಸ್ಪೇನ್ ಸೋಂಕಿತರು ,೮೩,೮೪೯, ಸಾವು ೨೭,೧೧೮

ಇಟಲಿ ಸೋಂಕಿತರು ,೩೧,೧೩೯, ಸಾವು ೩೩,೦೭೨

ಜರ್ಮನಿ ಸೋಂಕಿತರು ,೮೧,೮೯೫, ಸಾವು ,೫೩೩

ಚೀನಾ ಸೋಂಕಿತರು ೮೨,೯೯೫, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೬೭,೨೪೦, ಸಾವು ೩೭,೪೬೦

ಅಮೆರಿಕದಲ್ಲಿ ೧೪೧ ಇರಾನಿನಲ್ಲಿ ೬೩, ಬೆಲ್ಜಿಯಂನಲ್ಲಿ ೨೪, ಇಂಡೋನೇಷ್ಯ ೨೩, ನೆದರ್ ಲ್ಯಾಂಡ್ಸ್‌ನಲ್ಲಿ ೩೨, ರಶ್ಯಾದಲ್ಲಿ ೧೭೪, ಸ್ವೀಡನ್‌ನಲ್ಲಿ ೪೬, ಮೆಕ್ಸಿಕೋದಲ್ಲಿ ೪೬೩ ಒಟ್ಟಾರೆ ವಿಶ್ವಾದ್ಯಂತ ೧೨೪೮ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement