My Blog List

Wednesday, May 6, 2020

ಕೊರೋನಾವೈರಸ್ಸಿಗೆ ಇಸ್ರೇಲ್‌ನಿಂದ ಔಷಧ; ವಿಶ್ವಕ್ಕೆ ಹಂಚುವ ಭರವಸೆ

ಕೊರೋನಾವೈರಸ್ಸಿಗೆ  ಇಸ್ರೇಲ್ನಿಂದ ಔಷಧ;
ವಿಶ್ವಕ್ಕೆ ಹಂಚುವ ಭರವಸೆ
ಟೆಲ್ ಅವೀವ್/ ನವದೆಹಲಿ: ವಿಶ್ವಾದ್ಯಂತ ಮಾನವರನ್ನು ಹೈರಾಣಗೊಳಿಸಿರುವ ಕೊರೋನಾವೈರಸ್ಸಿಗೆ ಇಸ್ರೇಲ್ ವಿಜ್ಞಾನಿಗಳು ಔಷಧ ಅಭಿವೃದ್ಧಿ ಪಡಿಸಿದ್ದು, ಶೀಘ್ರದಲ್ಲೇ ನಾವು ಅದನ್ನು ವಿಶ್ವದ ಜೊತೆಗೆ ಹಂಚಿಕೊಳ್ಳಲಿದ್ದೇವೆ ಎಂದು ಇಸ್ರೇಲ್  ಪ್ರಕಟಿಸಿತು.

ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೋನ್ ಮಲ್ಕಾ ಅವರು ಬುಧವಾರ ಕೋವಿಡ್-೧೯ ಪ್ರತಿಕಾಯಗಳನ್ನು ಅಭಿವೃದ್ಧಿ ಪಡಿಸಿರುವ ಇಸ್ರೇಲಿನ ಸಾಧನೆ ಬಗ್ಗೆ ಪ್ರತಿಕ್ರಿಯಿಸುತ್ತಾ ತಾವು ಔಷಧದ ವಿವರಗಳಿಗಾಗಿ ಕಾದಿರುವುದಾಗಿ ನುಡಿದರು.

ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ, ನಾವು ಅತ್ಯಂತ ಮುಂದುವರೆದ ಹಂತದಲ್ಲಿ ಇದ್ದೇವೆ. ಹೌದು, ಖಂಡಿತವಾಗಿ, ನಾವು ಅದನ್ನು ವಿಶ್ವದ ಜೊತೆಗೆ ಹಂಚಿಕೊಳ್ಳಲಿದ್ದೇವೆಎಂದು ಮಲ್ಕಾ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಕೊರೋನಾವೈರಸ್ ಬಿಕ್ಕಟ್ಟು ಭಾರತ ಮತ್ತು ಇಸ್ರೇಲನ್ನು ಅತ್ಯಂತ ಸನಿಹಕ್ಕೆ ತಂದಿದೆ. ಕೊರೋನಾವೈರಸ್ ನಿಗ್ರಹದ ಉತ್ತಮ ವಿಧಾನಗಳನ್ನು ನಾವು ಪರಸ್ಪರ ಹಂಚಿಕೊಳ್ಳುತ್ತಿದ್ದೇವೆ ಮತ್ತು ಹೊಸ ಹೊಸ ಪ್ರಕ್ರಿಯೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ ಎಂದು ಅವರು ನುಡಿದರು.

ವಿಶ್ವಾದ್ಯಂತ ವಿಜ್ಞಾನಿಗಳು ಕೊರೋನಾ ವೈರಸ್ ಔಷಧ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಹಲವು ಕಡೆಗಳಲ್ಲಿ ಔಧದ ಪರೀಕ್ಷೆಗಳೂ ಆರಂಭವಾಗಿವೆ. ಕೊರೋನಾಕ್ಕೆ  ಸಂಬಂಧಿಸಿದಂತೆ ಸದ್ಯ ವಿಶ್ವಾದ್ಯಂತ ಸುಮಾರು ೧೦೦ಕ್ಕೂ ಅಧಿಕ ವ್ಯಾಕ್ಸಿನ್ಗಳು ಕ್ಲಿನಿಕ್ ಪೂರ್ವ ಪರೀಕ್ಷಾ ಹಂತದಲ್ಲಿವೆ.
ಇಂಗ್ಲೆಂಡ್
ಮತ್ತು ಅಮೆರಿಕದಲ್ಲಿ ಪ್ರತಿಯೊಂದು ಲಸಿಕೆಯನ್ನು ಮಾನವರ ಮೇಲೆ ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ಇದುವರೆಗೂ ಯಾವುದೇ ಪರಿಣಾಮಕಾರಿ ವ್ಯಾಕ್ಸಿನ್ ಸಿಕ್ಕಿಲ್ಲ.

ನಡುವೆ ಇಸ್ರೇಲ್ ವಿಜ್ಞಾನಿಗಳು ಕೊರೋನಾ ವೈರಸ್ ಔಷಧಿ ತಯಾರಿಕಾ ಪ್ರಕ್ರಿಯೆಯಲ್ಲಿ ಮಹತ್ವ ಯಶಸ್ಸು ಸಾಧಿಸಿದ್ದಾರೆ ಎಂದು ವರದಿಗಳು ಹೇಳಿವೆ. ಇಸ್ರೇಲ್ ಇನ್ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ (ಐಐಬಿಆರ್) ಸಂಸ್ಥೆಯು ಕೊರೋನಾ ವೈರಸ್ ವಿರುದ್ಧ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಹೇಳಿದ್ದಾರೆ.

ಕೊರೋನಾ ವೈರಸ್ಸನ್ನು ಪ್ರತಿಕಾಯಗಳು ಹೇಗೆ ನಿವಾರಿಸಲಿವೆ ಎಂಬುದರ ಬಗ್ಗೆ ನಫ್ತಾಲಿ ಬೆನೆಟ್ ಮಾಹಿತಿಯನ್ನು ನೀಡಿದ್ದು, ’ಇಸ್ರೇಲಿನ  ಐಐಬಿಆರ್ ಸಂಸ್ಥೆಯಲ್ಲಿ ಲಸಿಕೆ ಅಭಿವೃದ್ಧಿಪಡಿಸುವ ಹಂತ ಈಗ ಪೂರ್ಣಗೊಂಡಿದೆ. ಐಐಬಿಆರ್ ಅಭಿವೃದ್ಧಿ ಪಡಿಸಿರುವ ಪ್ರತಿಕಾಯವು ಕೊರೋನಾ ವೈರಸ್ಸಿನ ವಿರುದ್ಧ ಮೊನೊಕ್ಲೋನಲ್ ರೀತಿಯಲ್ಲಿ ಆಕ್ರಮಣ ಮಾಡುತ್ತದೆ ಮತ್ತು ಅನಾರೋಗ್ಯ ಪೀಡಿತ ಜನರ ದೇಹದೊಳಗಿನ ಕೊರೋನಾವೈರಸ್ಸನ್ನು  ನಿರ್ಮೂಲನೆ ಮಾಡುತ್ತದೆ ಅಥವಾ ಕಾರ್ಯ ನಿರ್ವಹಿಸದಂತೆ ತಟಸ್ಥ ಗೊಳಿಸುತ್ತದೆ ಎಂದು ಬೆನೆಟ್ ಹೇಳಿದ್ದಾರೆ.

 
ಇದರಿಂದ ಮಾರಕ ವೈರಸ್ ದೇಹದ ಇನ್ನೊಂದು ಭಾಗಕ್ಕೆ ಅಥವಾ ಮತ್ತೊಬ್ಬ ವ್ಯಕ್ತಿಗೆ ಹರಡುವುದಿಲ್ಲ ಎಂಬುದನ್ನು ನಾನು ನಿಖರವಾಗಿ ಹೇಳಬಲ್ಲೆ. ಸದ್ಯ ವಿಶ್ವಾದ್ಯಂತ ಇರುವ ವಿವಿಧ ಕಂಪನಿಗಳ ಜೊತೆಗೆ ಔಷಧಿಯ ಉತ್ಪಾದನೆಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತುಕತೆ ನಡೆಸಲಾಗುತ್ತಿದೆ ಎಂದು ಬೆನೆಟ್ ಹೇಳಿದ್ದಾರೆ.

No comments:

Advertisement