Monday, May 25, 2020

೬ ತಿಂಗಳ ಒಳಗೆ ಭಾರತದಿಂದ ೪ ಕೊರೊನಾ ಲಸಿಕೆ: ಕೇಂದ್ರ

ತಿಂಗಳ ಒಳಗೆ ಭಾರತದಿಂದ  ಕೊರೊನಾ ಲಸಿಕೆ: ಕೇಂದ್ರ
ನವದೆಹಲಿ: ಕೋವಿಡ್-೧೯ ಸಾಂಕ್ರಾಮಿಕದ ವಿರುದ್ಧ ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ೧೪ ಸಂಭಾವ್ಯ ಲಸಿಕೆಗಳ (ವ್ಯಾಕ್ಸಿನ್ ಕ್ಯಾಂಡಿಡೇಟ್ಸ್) ಪೈಕಿ ನಾಲ್ಕು ಮುಂದಿನ ಮೂರರಿಂದ ಐದು ತಿಂಗಳ ಒಳಗಾಗಿ ಕ್ಲಿನಿಕಲ್ ಟ್ರಯಲ್ ಹಂತಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್  2020 ಮೇ 25ರ ಸೋಮವಾರ ತಿಳಿಸಿದರು.

ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರೊಂದಿಗೆ ನಡೆದ ಆನ್ ಲೈನ್ ಸಂವಾದದಲ್ಲಿ ಮಾತನಾಡಿದ ಹರ್ಷ ವರ್ಧನ್, ಸೋಂಕು ವ್ಯಾಪಿಸುವುದನ್ನು ತಡೆಯುವ ಉದ್ದೇಶದಿಂದ ಇಡೀ ವಿಶ್ವವೇ ಲಸಿಕೆ ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ. ನೂರಕ್ಕೂ ಅಧಿಕ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇವುಗಳು ಬೇರೆ ಬೇರೆ ಹಂತದಲ್ಲಿವೆ. ವಿಶ್ವ ಆರೋಗ್ಯ ಸಂಸ್ಥೆ ಸಮನ್ವಯದೊಂದಿಗೆ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಗಳು ನಡೆದಿವೆ ಎಂದು ಹೇಳಿದರು.

‘ಈ ಲಸಿಕೆ ತಯಾರಿ ಪ್ರಕ್ರಿಯೆಗೆ ಭಾರತವೂ ನೆರವು ನೀಡುತ್ತಿದೆ. ೧೪ ಸಂಭಾವ್ಯ ಲಸಿಕೆಗಳನ್ನು ಭಾರತ ಅಭಿವೃದ್ಧಿಪಡಿಸಿದೆ. ಪ್ರಸ್ತುತ ಇವುಗಳು ಕ್ಲಿನಿಕಲ್ ಪೂರ್ವ ಪರೀಕ್ಷಾ (ಪ್ರಿ ಕ್ಲಿನಿಕಲ್ ಟ್ರಯಲ್) ಹಂತದಲ್ಲಿವೆ ಎಂದು ಅವರು ನುಡಿದರು.

ಕೋವಿಡ್-೧೯ಕ್ಕೆ ಯಾವಾಗ ಲಸಿಕೆ ಸಿಗುತ್ತದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆದರೆ, ವೈದ್ಯನಾಗಿ ಅನುಭವ ಹೊಂದಿರುವ ಹಿನ್ನೆಲೆಯಲ್ಲಿ ಕನಿಷ್ಠ ವರ್ಷ ಹಿಡಿಯುತ್ತದೆ ಎಂದು ಹೇಳಬಲ್ಲೆ ಎಂದು ಹರ್ಷ ವರ್ಧನ್ ತಿಳಿಸಿದರು.

No comments:

Advertisement