ಜುಲೈ ೧೮ ರಿಂದ ೨೩ ರವರೆಗೆ ಜೆಇಇ, ಜುಲೈ ೨೬ರಂದು ನೀಟ್ ಪರೀಕ್ಷೆ
ನವದೆಹಲಿ: ಪ್ರಸ್ತುತ ವರ್ಷ ವರ್ಷ ಜೆಇಇ (ಮುಖ್ಯ) ಪರೀಕ್ಷೆಯು ಜುಲೈ ೧೮ ರಿಂದ ೨೩ ರವರೆಗೆ ಮತ್ತು ನೀಟ್ ಪರೀಕ್ಷೆಯು ಜುಲೈ ೨೬ ರಂದು ನಡೆಯಲಿದೆ ಎಂದು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು 2020 ಮೇ 05ರ ಮಂಗಳವಾರ ಪ್ರಕಟಿಸಿದರು.
ಇದರೊಂದಿಗೆ ಸುಮಾರು ೨೫ ಲಕ್ಷ ಅಭ್ಯರ್ಥಿಗಳ ಅನಿಶ್ಚಿತತೆಯ ದಿನಗಳು ಕೊನೆಗೊಂಡವು.
ಇದರೊಂದಿಗೆ ಸುಮಾರು ೨೫ ಲಕ್ಷ ಅಭ್ಯರ್ಥಿಗಳ ಅನಿಶ್ಚಿತತೆಯ ದಿನಗಳು ಕೊನೆಗೊಂಡವು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಈ ಹಿಂದೆ ಏಪ್ರಿಲ್ ೫,೭,೮, ಮತ್ತು ೧೧ ರಂದು ನಡೆಯಬೇಕಾಗಿದ್ದ ೨೦೨೦ರ ಜೆಇಇ (ಮುಖ್ಯ) ಪರೀಕ್ಷೆಯನ್ನು ಮೇ ಕೊನೆಯ ವಾರಕ್ಕೆ ಮುಂದೂಡಿತ್ತು.
ಸಿಬಿಎಸ್ಇ ೧೦ ನೇ ತರಗತಿ, ೧೨ ಬೋರ್ಡ್ ಪರೀಕ್ಷೆಗಳ ಕುರಿತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದೂ ಸಚಿವರು ನುಡಿದರು.
ಕೊರೋನಾವೈರಸ್ ಪ್ರಸರಣವನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರವು ಘೋಷಿಸಿದ ಕ್ರಮಗಳ ಹಿನ್ನೆಲೆಯಲ್ಲಿ ಮಾರ್ಚ್ ೧೬ ರಿಂದ ದೇಶಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳನ್ನು ಮುಚ್ಚಲಾಗಿತ್ತು. ನಂತರ, ಮಾರ್ಚ್ ೨೪ ರಂದು ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಲಾಯಿತು. ಕೊರೋನವೈರಸ್ ಸಾಂಕ್ರಾಮಿಕ ರೋU ಹರಡದಂತೆ ತಡೆಯುವ ಸಲುವಾಗಿ ಘೋಷಿಸಲಾದ ದಿಗ್ಬಂಧನವನ್ನು ವಿಸ್ತರಿಸಿದ್ದರಿಂದ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಸಹ ಮುಂದೂಡಲಾಗಿತ್ತು.
"ಜೂನ್ನಲ್ಲಿ ನೀಟ್ ಮತ್ತು ಜೆಇಇ ಯಂತಹ ಪ್ರವೇಶ ಪರೀಕ್ಷೆಗಳನ್ನು ನಡೆಸುವುದು ಯೋಜನೆಯಾಗಿದೆ. ಆದರೆ ಕೋವಿಡ್ -೧೯ ಪರಿಸ್ಥಿತಿಯನ್ನು ಪರಿಶೀಲಿಸುವುದು ಬಹಳ ಮುಖ್ಯ" ಎಂದು ಯುಜಿಸಿ ಅಧಿಕಾರಿಯೊಬ್ಬರು ಏಪ್ರಿಲ್ ೨೫ ರಂದು ತಿಳಿಸಿದ್ದರು.
ಎರಡೂ ಪರೀಕ್ಷೆಗಳ ಅರ್ಜಿಯನ್ನು ಸರಿಪಡಿಸುವ ದಿನಾಂಕವನ್ನು ಎನ್ಟಿಎ ಈ ಹಿಂದೆ ಮೇ ೩ ರವರೆಗೆ ವಿಸ್ತರಿಸಿತ್ತು.
ಕೇಂದ್ರ ಸರ್ಕಾರ ಮಾರ್ಚ್ ೨೭ ರಂದು ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು, ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಗಮನದಲ್ಲಿಟ್ಟುಕೊಂಡು ಜೆಇಇ ಮತ್ತು ನೀಟ್ ಪ್ರವೇಶ ಪರೀಕ್ಷೆಗಳನ್ನು ಮೇ ಕೊನೆಯ ವಾರಕ್ಕೆ ಮುಂದೂಡಲಾಗಿದೆ ಎಂದು ಹೇಳಿತ್ತು.
"ಪೋಷಕರು ಮತ್ತು ವಿದ್ಯಾರ್ಥಿಗಳು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಬೇಕಾಗಿರುವುದರಿಂದ, ಅವರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳುವ ಸಲುವಾಗಿ, ನೀಟ್ (ಯುಜಿ) ೨೦೨೦ ಮತ್ತು ಜೆಇಇ (ಮುಖ್ಯ) ಪರೀಕ್ಷೆಗಳನ್ನು ಮೇ ಕೊನೆಯ ವಾರದವರೆಗೆ ಮುಂದೂಡುವಂತೆ ನಾನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ನಿರ್ದೇಶನ ನೀಡಿದ್ದೇನೆ" ಎಂದು ಪೋಖ್ರಿಯಾಲ್ ತಮ್ಮ ಟ್ವೀಟಿನಲ್ಲಿ ತಿಳಿಸಿದ್ದಾರೆ.
No comments:
Post a Comment