ಗ್ರಾಹಕರ ಸುಖ-ದುಃಖ

My Blog List

Tuesday, May 5, 2020

೧೪,೮೦೦ಕ್ಕೂ ಹೆಚ್ಚು ಭಾರತೀಯರಿಗೆ ತಾಯ್ನಾಡು ಪಯಣ: ಭಾರತ ಸರ್ಕಾರ ಸಿದ್ಧ

೧೪,೮೦೦ಕ್ಕೂ ಹೆಚ್ಚು ಭಾರತೀಯರಿಗೆ ತಾಯ್ನಾಡು ಪಯಣ:  ಭಾರತ ಸರ್ಕಾರ ಸಿದ್ಧ
ನವದೆಹಲಿ: ಕೊರೋನವೈರಸ್ ಲಾಕ್ಡೌನ್ ಹಿನ್ನೆಲೆಯಲ್ಲಿ ವಿದೇಗಳಲ್ಲಿ ಸಿಲುಕಿರುವ ೧೪,೮೦೦ ಕ್ಕೂ ಹೆಚ್ಚು ಭಾರತೀಯರನ್ನು ಶೀಘ್ರದಲ್ಲೇ ಸುಮಾರು ೬೪ ವಿಮಾನಗಳಲ್ಲಿ ಸ್ವದೇಶಕ್ಕೆ ಕರೆ ತರಲಾಗುವುದು. ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್ಪ್ರೆಸ್ ನಿರ್ವಹಿಸುವ ವಿಶೇಷ ವಿಮಾನಗಳು ಮೇ ರಿಂದ ೧೩ ರವರೆಗೆ ವಲಸಿಗರ ಭಾರತೀಯರನ್ನು ಕರೆತರಲಿವೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು 2020 ಮೇ 05ರ ಮಂಗಳವಾರ ತಿಳಿಸಿದರು.

ವಾಪಸಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಭಾರತವು ಒಟ್ಟು ೧೨ ದೇಶಗಳತ್ತ ಗಮನ ಹರಿಸಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಇಂಗ್ಲೆಂಡ್, ಅಮೆರಿಕ, ಕತಾರ್, ಸೌದಿ ಅರೇಬಿಯಾ, ಸಿಂಗಾಪುರ, ಮಲೇಷ್ಯಾ, ಫಿಲಿಪೈನ್ಸ್, ಬಾಂಗ್ಲಾದೇಶ, ಬಹ್ರೇನ್, ಕುವೈತ್ ಮತ್ತು ಓಮನ್ ೧೨ ದೇಶಗಳಿಂದ ಭಾರತೀಯgನ್ನು ಕರೆತರಲು ವಿಶೇಷ ವಿಮಾನಗಳನ್ನು ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಕೊರೋನವೈರಸ್ ಹರಡುವುದನ್ನು ತಡೆಯಲು ಭಾರತವು ಮಾರ್ಚ್ ೨೫ ರಿಂದ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಿಸಿತ್ತು. ದಿಗ್ಬಂಧನವು ಮೇ ೧೭ ರವರೆಗೆ ಮುಂದುವರೆಯಲಿದೆ. ಅವದಿಯಲ್ಲಿ ಎಲ್ಲ ವಾಣಿಜ್ಯ ಪ್ರಯಾಣಿಕರ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.

ಹೀಗಾಗಿ, ಮೇ ರಿಂದ ವಿದೇಶಗಳಲ್ಲಿ ಸಿಲುಕಿರುವ ರೋಗ ಲಕ್ಷಣ ರಹಿತ ಭಾರತೀಯ ಪ್ರಜೆಗಳನ್ನು ಹಂತ ಹಂತವಾಗಿ ವಿಮಾನ ಮತ್ತು ನೌಕಾಪಡೆ ಹಡಗುಗಳ ಮೂಲಕ ಪಾವತಿ ಆಧಾರದ ಮೇಲೆ ಹಿಂದಕ್ಕೆ ಕರೆತರಲಾಗುವುದು ಎಂದು ಎಂದು ಗೃಹ ವ್ಯವಹಾರ ಸಚಿವಾಲಯ ಸೋಮವಾರ ಪ್ರಕಟಿಸಿತು.

ಮೇ ಮತ್ತು ೧೩ ನಡುವಣ ಅವಧಿಯಲ್ಲಿ ಭಾರತವು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ೧೦ ವಿಮಾನಗಳು, ಅಮೆರಿಕ ಮತ್ತು ಇಂಗ್ಲೆಂಡಿಗೆ ತಲಾ ಏಳು ವಿಮಾನಗಳು, ಸೌದಿ ಅರೇಬಿಯಾ ಮತ್ತು ಸಿಂಗಾಪುರಕ್ಕೆ ತಲಾ  ಐದು ವಿಮಾನಗಳು ಮತ್ತು ಕತಾರ್ಗೆ ಎರಡು ವಿಮಾನಗಳನ್ನು ಹಾರಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದರು.

ಇದಲ್ಲದೆ, ಮಲೇಷ್ಯಾ ಮತ್ತು ಬಾಂಗ್ಲಾದೇಶಕ್ಕೆ ತಲಾ ಏಳು, ಕುವೈತ್ ಮತ್ತು ಫಿಲಿಪೈನ್ಸ್ಗೆ ತಲಾ ಐದು, ಒಮಾನ್ ಮತ್ತು ಬಹ್ರೇನ್ಗೆ ತಲಾ ಎರಡು ವಿಮಾನಗಳನ್ನು ಕಳುಹಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ನುಡಿದರು.

೬೪ ವಾಪಸಾತಿ ವಿಮಾನಗಳಲ್ಲಿ ಕೇರಳದಿಂದ ೧೫, ದೆಹಲಿ ಮತ್ತು ತಮಿಳುನಾಡಿನಿಂದ ತಲಾ ೧೧, ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ತಲಾ ಮತ್ತು ಉಳಿದ ವಿಮಾನಗಳು ಇತರ ಐದು ರಾಜ್ಯಗಳಿಂದ ಬರಲಿವೆ ಎಂದು ಅಧಿಕಾರಿಗಳು ತಿಳಿಸಿದರು.

"ಏಳು ದಿನಗಳ ಅವಧಿಯಲ್ಲಿ ಸುಮಾರು ೬೪,೮೦೦ ಭಾರತೀಯ ಪ್ರಜೆಗಳು ೬೪ ವಿಮಾನಗಳ ಮೂಲಕ ದೇಶಕ್ಕೆ ಮರಳುವ ಸಾಧ್ಯತೆಯಿದೆ. ಮೇ ೧೩ ನಂತರ ಸರ್ಕಾರವು ಹೆಚ್ಚಿನ ವಾಪಸಾತಿ ವಿಮಾನಗಳನ್ನು ಕಳುಹಿಸಲಿದೆ" ಎಂದು ಅಧಿಕಾರಿಯೊಬ್ಬರು ನುಡಿದರು.

ಭಾರತದಲ್ಲಿ ಒಟ್ಟು ೪೬,೪೦೦ ಕ್ಕೂ ಹೆಚ್ಚು ಜನರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು, ಈವರೆಗೆ ಸುಮಾರು ,೫೬೦ ಜನರು ಸಾವನ್ನಪ್ಪಿದ್ದಾರೆ.

No comments:

Advertisement