Tuesday, June 2, 2020

ದೆಹಲಿ ಗಡಿ ಒಂದು ವಾರ ಬಂದ್, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ

ದೆಹಲಿ ಗಡಿ ಒಂದು ವಾರ  ಬಂದ್, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ

ನವದೆಹಲಿ: ಉತ್ತರ ಪ್ರದೇಶ ಸರ್ಕಾರವು ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ ಆಡಳಿತಗಳು ದೆಹಲಿಯಿಂದ ಕೊರೋನಾವೈರಸ್ ಸೋಂಕನ್ನು ತಡೆಗಟ್ಟಲು ದೆಹಲಿಯಿಂದ ಯಾರೂ ಬರದಂತೆ ತಮ್ಮ ಗಡಿಗಳನ್ನು ನಿರ್ಬಂಧಿಸಿದ ಬಳಿಕ, ದೆಹಲಿ ಗಡಿಗಳನ್ನು ಒಂದು ವಾರ ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್  2020 ಜೂನ್ 01ರ ಸೋಮವಾರ  ಪ್ರಕಟಿಸಿದರು.

‘ಅಗತ್ಯ ಸೇವೆಗಳಿಗೆ ಅವಕಾಶ ನೀಡಲಾಗುವುದು. ಪಾಸ್ ಹೊಂದಿರುವ ಜನರಿಗೆ ಮಾತ್ರ ರಾಷ್ಟ್ರ ರಾಜಧಾನಿಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಲ್ಲಿ ಹೇಳಿದರು.

"ದೆಹಲಿ ಗಡಿಗಳನ್ನು ಮುಂದಿನ ಒಂದು ವಾರದ ಅವಧಿಗೆ (ಜೂನ್ ೮ರವರೆಗೆ) ಮುಚ್ಚಲಾಗುವುದು. ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಜೂನ್ ೮ರ ಬಳಿಕ ಗಡಿಗಳನ್ನು ತೆರೆಯುವ ಬಗ್ಗೆ ನಾಗರಿಕರ ಸಲಹೆಗಳನ್ನು ಪಡೆದ ನಂತರ ಒಂದು ವಾರದಲ್ಲಿ ಮತ್ತೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ನುಡಿದರು.

ದಿಗ್ಬಂಧನ (ಲಾಕ್ ಡೌನ್) ತೆರವಿಗಾಗಿ ಕೇಂದ್ರದ ಪರಿಷ್ಕೃತ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹರಿಯಾಣ ಗುಡಗಾಂವ್-ದೆಹಲಿ ಗಡಿಗಳನ್ನು ತೆರೆದ ಕೆಲವೇ ಗಂಟೆಗಳಲ್ಲಿ ದೆಹಲಿ ಸರ್ಕಾರ ದೆಹಲಿಯ ಗಡಿಗಳನ್ನು ಮುಚ್ಚವ ಆದೇಶವನ್ನು ಹೊರಡಿಸಿತು.

ದಿಗ್ಬಂಧನ ತೆರವು ಮಾರ್ಗಸೂಚಿ ಘೋಷಿಸುವಾಗ, ಕೇಂದ್ರ ಗೃಹ ಸಚಿವಾಲಯವು ವ್ಯಕ್ತಿಗಳು ಮತ್ತು ಸರಕುಗಳ ಅಂತರ-ರಾಜ್ಯ ಮತ್ತು ಅಂತರ್-ರಾಜ್ಯ ಚಲನವಲನಕ್ಕೆ ಯಾವುದೇ ನಿರ್ಬಂಧವಿಲ್ಲ ಮತ್ತು ಅಂತಹ ಪ್ರಯಾಣಗಳಿಗೆ ಯಾವುದೇ ಹೆಚ್ಚುವರಿ ಅನುಮತಿ ಅಗತ್ಯವಿಲ್ಲ ಎಂದು ಹೇಳಿತ್ತು.

ಆದಾಗ್ಯೂ, ಸಾರ್ವಜನಿಕ ಆರೋಗ್ಯದ ಕಾರಣಗಳು ಮತ್ತು ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ವ್ಯಕ್ತಿಗಳ ಚಲನೆಯನ್ನು ನಿಯಂತ್ರಿಸಲು ಬಯಸಿದರೆ, ಅದು ಅಂತಹ ನಿರ್ಬಂಧಗಳ ಬಗ್ಗೆ ಮತ್ತು ಅನುಸರಿಸಬೇಕಾದ ಸಂಬಂಧಿತ ಕಾರ್ಯವಿಧಾನಗಳ ಬಗ್ಗೆ ಮುಂಚಿತವಾಗಿ ವ್ಯಾಪಕ ಪ್ರಚಾರವನ್ನು ನೀಡಬೇಕು ಎಂದು ಕೇಂದ್ರ ಮಾರ್ಗಸೂಚಿ ತಿಳಿಸಿತ್ತು.

ಶುಕ್ರವಾರದೊಳಗೆ ತಮ್ಮ ಸಲಹೆಗಳನ್ನು ಕಳುಹಿಸಲು ದೂರವಾಣಿ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಮುಖ್ಯಮಂತ್ರಿ ಜನತೆಗೆ ನೀಡಿದರು.

"ದೆಹಲಿ ನಿವಾಸಿಗಳು ಶುಕ್ರವಾರ ಸಂಜೆ ಗಂಟೆಯ ಒಳಗೆ ವಾಟ್ಸಾಪ್ ಸಂಖ್ಯೆ ೮೮೦೦೦೦೭೭೨೨, ಅಥವಾ ehiಛಿm.suggesioಟಿs@gmಚಿi.ಛಿom ಗೆ ಗಡಿ ತೆರೆಯುವ ಕುರಿತು ಸಲಹೆಗಳನ್ನು ಕಳುಹಿಸಬಹುದು" ಎಂದು ಕೇಜ್ರಿವಾಲ್ ಹೇಳಿದರು.

ರಾಷ್ಟ್ರ ರಾಜಧಾನಿಯಿಂದ ಬರುವ ಮತ್ತು ಅಲ್ಲಿಗೆ ಹೋಗುವ ಜನರ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲಾಡಳಿತವು ಭಾನುವಾರ  ಘೋಷಿಸಿತ್ತು. ಕಳೆದ ೨೦ ದಿನಗಳಲ್ಲಿ ಜಿಲ್ಲೆಯಲ್ಲಿ ಪತ್ತೆಯಾದ ಶೇಕಡಾ ೪೨ ರಷ್ಟು ಕೊರೊನಾವೈರಸ್ ಪ್ರಕರಣಗಳಲ್ಲಿ ಸೋಂಕಿನ ಮೂಲ ದೆಹಲಿ ಎಂಬುದಾಗಿ ಪತ್ತೆ ಮಾಡಲಾಗಿದೆ ಎಂದು ಜಿಲ್ಲಾ ಆಡಳಿತ ಹೇಳಿತ್ತು.

ದೆಹಲಿಯಲ್ಲಿ ಕೋವಿಡ್ -೧೯ ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯಿಲ್ಲ ಎಂದು ಕೇಜ್ರಿವಾಲ್ ಭರವಸೆ ನೀಡಿದರು.

ಕೇಂದ್ರವು ಅನುಮತಿ ನೀಡುವ ಎಲ್ಲಾ ಸಡಿಲಿಕೆಗಳನ್ನೂ ದೆಹಲಿ ಸರ್ಕಾರ ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಶನಿವಾರ, ಕೇಜ್ರಿವಾಲ್ "ದೆಹಲಿಯು ಕೊರೋನವೈರಸ್ಸಿಗಿಂತ ನಾಲ್ಕು ಹೆಜ್ಜೆ ಮುಂದಿದೆ" ಎಂದು ಒತ್ತಿ ಹೇಳಿದ್ದರು. ರಾಜ್ಯದಲ್ಲಿ ಶಾಶ್ವತ ದಿಗ್ಬಂಧನ (ಲಾಕ್ ಡೌನ್) ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದರು.

ದೆಹಲಿಯಲ್ಲಿ ಸಲೋನ್ಗಳು, ಕ್ಷೌರದ ಅಂಗಡಿಗಳು ಮತ್ತು ಎಲ್ಲಾ ಮಾರುಕಟ್ಟೆಗಳು ಮತ್ತೆ ತೆರೆಯಲ್ಪಡುತ್ತವೆ ಎಂದು ಕೇಜ್ರಿವಾಲ್ ಹೇಳಿದರು.

ಲಾಕ್ಡೌನ್ ಸಡಿಲಿಕೆ ಕ್ರಮಗಳ ಜೊತೆಗೆ, ಕೋವಿಡ್-೧೯ ಪ್ರಕರಣಗಳು ಮತ್ತು ವೈದ್ಯಕೀಯ ಮೂಲಸೌಕರ್ಯಗಳನ್ನು  ಒದಗಿಸಲು ದೆಹಲಿ ಸರ್ಕಾರವು ಶೀಘ್ರದಲ್ಲೇ ಆಪ್ ಒಂದನ್ನು ಪ್ರಾರಂಭಿಸಲಿದೆ ಎಂದು ಕೇಜ್ರಿವಾಲ್ ಘೋಷಿಸಿದರು.

ಕಂಟೇನ್ಮೆಂಟ್ ವಲಯಗಳಿಗೆ ನಿರ್ಬಂಧಗಳನ್ನು ನಿರ್ಬಂದಿಸಲು ಅವಕಾಶ ನೀಡಿದ ಕೇಂದ್ರದ ಮೂರು-ಹಂತದ ದಿಗ್ಬಂಧನ ತೆರವು (ಅನ್ಲಾಕ್) ಯೋಜನೆ ಜಾರಿಗೆ ಬಂದ ಮೊದಲ ದಿನವೇ ದೆಹಲಿ ಸರ್ಕಾರದಿಂದ ಪ್ರಕಟಣೆ ಬಂದಿತು.

"ಆರೋಗ್ಯ ರಕ್ಷಣೆಯಲ್ಲಿನ ನಮ್ಮ ಹೂಡಿಕೆಯು ಫಲ ನೀಡಿದೆ. ನಮ್ಮ ಆರೋಗ್ಯ ವ್ಯವಸ್ಥೆಗಳು ಕೋವಿಡ್-೧೯  ಪ್ರಕರಣಗಳ ಭಾರ ಹೊರಲು ಸಮರ್ಥವಾಗಿವೆ. ದೆಹಲಿಯಲ್ಲಿ ಕೊರೋನವೈರಸ್ ಪ್ರಕರಣಗಳು ಮತ್ತು ನಮ್ಮ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ನಾವು ಶೀಘ್ರದಲ್ಲೇ ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು.

ಗಡಿಗಳ ಮುಚ್ಚುವಿಕೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬಹುದಾದ ಮುಂದಿನ ಕ್ರಮಗಳ ಕುರಿತು ಪ್ರತಿಕ್ರಿಯೆ ಕೋರಿದ ದೆಹಲಿ ಮುಖ್ಯಮಂತ್ರಿ ನಮ್ಮ ಗಡಿಗಳನ್ನು ನಾವು ಮುಕ್ತವಾಗಿರಿಸಬೇಕೆ ಎಂಬ ಬಗ್ಗೆ ನಿಮ್ಮ ಸಲಹೆ ನನಗೆ ಬೇಕು. ನಾವು ಗಡಿಗಳನ್ನು ತೆರೆದಿಟ್ಟರೆ ದೇಶಾದ್ಯಂತ ಜನರು ಚಿಕಿತ್ಸೆಗಾಗಿ ಬರುತ್ತಾರೆ ಮತ್ತು ಅವರಿಗೆ ಅಥವಾ ದೆಹಲಿಯ ಜನರಿಗೆ ಸಾಕಷ್ಟು ಹಾಸಿಗೆಗಳು ಇರುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು.

ರಾಷ್ಟ್ರೀಯ ರಾಜಧಾನಿಯಲ್ಲಿ ಸೋಮವಾರ ,೧೬೩ ಪ್ರಕರಣಗಳ ಹೆಚ್ಚಳದೊಂದಿಗೆ ಕೋವಿಡ್ ೧೯ ಪಾಸಿಟಿವ್ ಪ್ರಕರಣಗಳು ೧೮,೫೪೯ ಕ್ಕೆ ಏರಿದೆ. ದೆಹಲಿಯಲ್ಲಿ ಇದುವರೆಗೆ ೪೧೬ ಕೊರೋನವೈರಸ್ ಸಾವುಗಳು ದಾಖಲಾಗಿವೆ.

No comments:

Advertisement