My Blog List

Tuesday, June 2, 2020

ನಡುವಿನ ಆಸನ ಖಾಲಿ, ಇಲ್ಲವೇ ನಿಲುವಂಗಿ ವ್ಯವಸ್ಥೆ: ಏರ್ ಲೈನ್ಸ್ ಗಳಿಗೆ ಸೂಚನೆ

ನಡುವಿನ ಆಸನ ಖಾಲಿ, ಇಲ್ಲವೇ ನಿಲುವಂಗಿ ವ್ಯವಸ್ಥೆ: ಏರ್ ಲೈನ್ಸ್ ಗಳಿಗೆ ಸೂಚನೆ

ನವದೆಹಲಿ: ವಿಮಾನಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) 2020 ಜೂನ್ 01ರ ಸೋಮವಾರ ವಿಮಾನಯಾನ ಸಂಸ್ಥೆಗಳಿಗೆ ಮಧ್ಯದ ಆಸನ ಖಾಲಿ ಇರಿಸಲು ಪ್ರಯತ್ನಿಸುವಂತೆ ಸೂಚಿಸಿತು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ಪ್ರಯಾಣಿಕರಿಗೆ ಉದ್ದವಾದ ನಿಲುವಂಗಿ ನೀಡುವಂತೆ ಡಿಜಿಸಿಎ ಸಲಹೆ ಮಾಡಿತು.

‘ಕೊರೋನವೈರಸ್ ವಿರುದ್ಧದ ಯುದ್ಧದಲ್ಲಿ ಸಾಮಾಜಿಕ ಅಂತರವು ಒಂದು ದೊಡ್ಡ ಭಾಗವಾಗಿದೆ. ಮಧ್ಯದ ಆಸನವನ್ನು ಸಾಧ್ಯವಾದಷ್ಟು ಮಟ್ಟಿಗೆ ಖಾಲಿ ಇರಿಸಲು ಪ್ರಯತ್ನಿಸಬೇಕು. ಹೆಚ್ಚಿನ ಹೊರೆಯಿಂದಾಗಿ ಮಧ್ಯದ ಆಸನವನ್ನು ಆಕ್ರಮಿಸಬೇಕಾಗಿ ಬಂದರೆ ಪ್ರಯಾಣಿಕರಿಗೆ ನಿಲುವಂಗಿ ವ್ಯವಸ್ಥೆ ಮಾಡಬೇಕು ಎಂದು ಡಿಜಿಸಿಎ ತನ್ನ ಸುತ್ತೋಲೆಯಲ್ಲಿ ಹೇಳಿತು.

ಕೊರೋನವೈರಸ್ ಕಾಯಿಲೆಯ ಹರಡುವಿಕೆಯನ್ನು ತಡೆಯಲು ದಿಗ್ಬಂಧನ (ಲಾಕ್ ಡೌನ್) ಜಾರಿಗೊಳಿಸಿದ ಕಾರಣ ಎರಡು ತಿಂಗಳ ಹಿಂದೆ ಸ್ಥಗಿತಗೊಂಡಿದ್ದ ವಾಯುಯಾನವನ್ನು ಕ್ರಮೇಣ ಪುನಾರಂಭಿಸುವ ಸಲುವಾಗಿ  ಭಾರತವು ಮೇ ೨೫ ರಿಂದ ದೇಶೀಯ ವಿಮಾನ ಹಾರಾಟವನ್ನು ಮತ್ತೆ ಆರಂಭಿಸಿದೆ.

ಸರ್ಕಾರವು ಮೂರು ತಿಂಗಳವರೆಗೆ (ಆಗಸ್ಟ್ವರೆಗೆ) ವಿಮಾನ ದರವನ್ನು ನಿಗದಿಪಡಿಸಿದೆ. ಶೀಘ್ರದಲ್ಲೇ, ಬಹುಶಃ ವ್ಯಾಪಾರ ವಹಿವಾಟಾಗಿ, ಪ್ರತಿ ವಿಮಾನದಲ್ಲೂ ಮಧ್ಯದ ಆಸನವನ್ನು ಖಾಲಿ ಇಡುವಂತೆ ಡಿಜಿಸಿಎ ತನ್ನ ಹಿಂದಿನ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಬಹುದು.

ಡಿಜಿಸಿಎಯ ನಡೆಯು ವಿಮಾನಯಾನ ಸಂಸ್ಥೆಗಳ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವ ಮತ್ತು ಪ್ರಯಾಣಿಕರನ್ನು ರಕ್ಷಿಸುವ ಪ್ರಯತ್ನದಂತೆ ಕಾಣುತ್ತದೆ.

ಹಿಂದೆ, ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಏರ್ ಇಂಡಿಯಾದ ನಿಗದಿತ ಪರಿಹಾರ ಮತ್ತು ರಕ್ಷಣಾ ವಿಮಾನಗಳಲ್ಲಿ ಮಧ್ಯದ ಆಸನಗಳಿಗೆ ಬುಕಿಂಗ್ ಮಾಡಲು ಅವಕಾಶ ನೀಡಿರುವುದರ ಹಿಂದಿನ ತರ್ಕವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.

‘ಅದು ಯಾರ ಮೇಲೂ ಪರಿಣಾಮ ಬೀರುವುದಿಲ್ಲ ಎಂದು ನೀವು ಹೇಗೆ ಹೇಳುವಿರಿ? ಹೊರಗೆ (ವಿಮಾದ), ಕನಿಷ್ಠ ಅಡಿಗಳಷ್ಟು ಸಾಮಾಜಿಕ ಅಂತರ ಇರಬೇಕು. ವಿಮಾನ ಒಳಗೆ ಇದು ಏಕಿಲ್ಲ? ವೈರಸ್ಸಿಗೆ ತಾನು ವಿಮಾನದಲ್ಲಿ ಇದ್ದೇನೆ ಮತ್ತು ಬೇರೆಯವರಿಗೆ ಸೋಂಕು ತಗುಲಿಸಬಾರದು ಎಂಬುದು ಗೊತ್ತಿರುತ್ತದೆಯೇ? ಎಂದು ಸುಪ್ರಿಂಕೋರ್ಟ್ ಪ್ರಶ್ನಿಸಿತ್ತು.

ಆದಾಗ್ಯೂ, ಇದು ಜೂನ್ ರವರೆಗೆ ಏರ್ ಇಂಡಿಯಾಕ್ಕೆ ಮಧ್ಯದ ಸೀಟುಗಳಲ್ಲಿ ಪ್ರಯಾಣಿಕರನ್ನು ಒಯ್ಯಲು ಪೀಠ ಅವಕಾಶ ನೀಡಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮಾಸಿಕ ಮನ್ ಕಿ ಬಾತ್ ಬಾನುಲಿ ಪ್ರಸಾರದಲ್ಲಿ, ಆರ್ಥಿಕತೆಯ ಒಂದು ದೊಡ್ಡ ಭಾಗವು ತೆರೆದಿದೆ. ರೈಲು ಮತ್ತು ವಿಮಾನ ಸೇವೆಗಳು ಭಾಗಶಃ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ, ಮತ್ತು ಇನ್ನಷ್ಟು ಸಡಿಲಿಕೆಗಳು ಬರಲಿವೆ, ಇಂತಹ ಹೊತ್ತಿನಲ್ಲಿ ಜನರು ತಮ್ಮ ರಕ್ಷಣೆಯತ್ತ ಹೆಚ್ಚಿನ ಗಮನ ಹರಿಸಿಕೊಳ್ಳಬೇಕು ಎಂದು ಎಚ್ಚರಿಸಿದ್ದರು.

ಇಂತಹ "ಕಠಿಣ ತಸ್ಸು ಮತ್ತು ಅನೇಕ ಕಷ್ಟಗಳ ನಂತರ", ದೇಶದ ಪರಿಸ್ಥಿತಿಯನ್ನು ಚತುರತೆಯಿಂದ ನಿಭಾಯಿಸಬೇಕಾದ ಹೊತ್ತಿನಲ್ಲಿ ನಮ್ಮ ತಪಸ್ಸು ಮತ್ತು ಕಷ್ಟಗಳು ವ್ಯರ್ಥವಾಗಬಾರದು ಎಂದು ಪ್ರಧಾನಿ ಹೇಳಿದ್ದರು.

‘ಎರಡು ಗನ ಅಂತರದ ಪಾಲನೆ (ದೋ ಗಜ್ ಕಿ ದೂರಿ), ಕಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸುವುದು ಮತ್ತು ಸಾಧ್ಯವಾದಷ್ಟೂ ಮನೆಯಲ್ಲಿಯೇ ಇರುವುದು ಹಾಗೂ ನಿಗದಿ ಪಡಿಸಿದ ಮಾರ್ಗಸೂಚಿಗಳ ಅನುಸರಣೆಯಲ್ಲಿ ನಮ್ಮಿಂದ ಯಾವುದೇ ಲೋಪ ಆಗಬಾರದು ಎಂದು ಪ್ರಧಾನಿ ಹೇಳಿದ್ದರು. 

‘ನಾವು ಹೋರಾಟವನ್ನು ದುರ್ಬಲಗೊಳ್ಳಲು ಬಿಡಬಾರದು. ಅಸಡ್ಡೆ ಅಥವಾ ಕೊರತೆಯಾಗುವುದು ಒಂದು ಆಯ್ಕೆಯಾಗಿರಲು ಸಾಧ್ಯವಿಲ್ಲ. ಕೊರೋನವೈರಸ್ ವಿರುದ್ಧದ ಹೋರಾಟವು ಇನ್ನೂ ಮುಂದೆಯೂ ಅಷ್ಟೇ ಗಂಭೀರವಾಗಿದೆ. ನೀವು, ನಿಮ್ಮ ಕುಟುಂಬ ಇನ್ನೂ ಕೊರೋನವೈgಸ್ಸಿನ ಗಂಭೀರ ಅಪಾಯವನ್ನು ಎದುರಿಸಬೇಕಾಗಬಹುದು ಎಂದು ಅವರು ಎಚ್ಚರಿಸಿದ್ದರು.

No comments:

Advertisement