Wednesday, June 3, 2020

ಗುಜರಾತ್ ಕಾರ್ಖಾನೆಯಲ್ಲಿ ಸ್ಫೋಟ, ೫ ಕಾರ್ಮಿಕರ ಸಾವು, ೫೭ ಮಂದಿಗೆ ಗಾಯ

ಗುಜರಾತ್ ಕಾರ್ಖಾನೆಯಲ್ಲಿ ಸ್ಫೋಟ, ೫ ಕಾರ್ಮಿಕರ ಸಾವು, ೫೭ ಮಂದಿಗೆ ಗಾಯ

ಭರೂಚ್: ಗುಜರಾತಿನ ಭರೂಚ್ ಜಿಲ್ಲೆಯ ದಹೇಜ್ನಲ್ಲಿ ರಾಸಾಯನಿಕ ಕಾರ್ಖಾನೆಯ ಬಾಯ್ಲರ್ನಲ್ಲಿ 2020 ಜೂನ್ 03ರ ಬುಧವಾರ ಸಂಭವಿಸಿದ ಭಾರಿ ಸ್ಫೋಟ ಹಾಗೂ ಬೆಂಕಿಯಲ್ಲಿ  ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ೫೭ ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು.

ಘಟನೆ ನಡೆದ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿತು.

ಇಲ್ಲಿಯವರೆಗೆ ನಾವು ಐವರು ಉದ್ಯೋಗಿಗಳ ಸಾವನ್ನು ದೃಢ ಪಡಿಸಿದ್ದೇವೆ. ಕೆಲವು ಶವಗಳನ್ನು ಕಾರ್ಖಾನೆಯಿಂದ ಹೊರತರಲಾಗಿದ್ದು, ಕೆಲವರು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆಎಂದು ಭರೂಚ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ವಿ.ಚುದಾಸಮಾ ತಿಳಿಸಿದರು.

ಬುಧವಾರ ಮಧ್ಯಾಹ್ನ ಭರೂಚ್ ದಹೇಜ್ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿರುವ ಯಶಶ್ವಿ ರಸಾಯನ್ ಪ್ರೈವೇಟ್ ಲಿಮಿಟೆಡ್ನಲ್ಲಿನ ಟ್ಯಾಂಕ್ನಲ್ಲಿ ಸಂಭವಿಸಿದ ಸ್ಫೋಟ ಹಾಗೂ ಬೆಂಕಿಯಲ್ಲಿ ಸಿಲುಕಿ ಐವರು ಜನರು ಪ್ರಾಣ ಕಳೆದುಕೊಂಡರು ಮತ್ತು ೫೭ ಜನರು ಗಾಯಗೊಂಡಿದ್ದಾರೆಎಂದು ಭರೂಚ್ ಜಿಲ್ಲಾಧಿಕಾರಿ ಡಾ ಎಂಡಿ ಮೋಡಿಯಾ ತಿಳಿಸಿದರು.

ಗಾಯಗೊಂಡ ಒಟ್ಟು ೫೭ ಕಾರ್ಮಿಕರನ್ನು ಭರೂಚ್ ಮತ್ತು ವಡೋದರಾ ನಗರದ ಸಮೀಪದ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಎಸ್ಪಿ ಹೇಳಿದರು, ರಕ್ಷಣಾ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲವಾದ್ದರಿಂದ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಗಿಯುತ್ತಿದ್ದಂತೆ ಸಾವಿನ ಸಂಖ್ಯೆ ಹೆಚಾಗುವ ಸಾದ್ಯತೆ ಇದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.

ಸ್ಫೋಟ ಸಂಭವಿಸಿದ ಕಾರ್ಖಾನೆಯ ಬಳಿ ಇರುವ ಲಖಿ ಮತ್ತು ಲುವಾರಾ ಗ್ರಾಮಗಳ ನಿವಾಸಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ಭರೂಚ್ ಜಿಲ್ಲಾಧಿಕಾರಿ ಹೇಳಿದರು.

 ಸಮೀಪದ ಗ್ರಾಮಗಳಿಂದ ,೮೦೦ ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರ ಮಾಡಲಾಗಿದೆ ಎಂದೂ ಅವರು ತಿಳಿಸಿದರು.

ವಿಶಾಖಪಟ್ಟಣ ಸಮೀಪದ ಎಲ್.ಜಿ.ಪಾಲಿಮರ್ಸ್ ರಾಸಾಯನಿಕ ಘಟಕದಲ್ಲಿ ಇತ್ತೀಚೆಗೆ ಸ್ಟೈರೀನ್ ಮೊನೊಮರ್ ಅನಿಲ ಸೋರಿಕೆಯಾಗಿ ೧೧ ಮಂದಿ ಮೃತಪಟ್ಟು, ನೂರಾರು ಮಂದಿ ಅಸ್ವಸ್ಥಗೊಂಡಿದ್ದರು.

No comments:

Advertisement