My Blog List

Thursday, June 4, 2020

ಅಫ್ಘಾನಿಸ್ತಾನದಲ್ಲಿ ಜೈಶ್, ಲಷ್ಕರ್ ಉಗ್ರಗುಂಪುಗಳ ಮೇಲೆ ನಿಗಾ

ಅಫ್ಘಾನಿಸ್ತಾನದಲ್ಲಿ ಜೈಶ್, ಲಷ್ಕರ್ ಉಗ್ರಗುಂಪುಗಳ ಮೇಲೆ ನಿಗಾ

ನವದೆಹಲಿ: ಕಳೆದ ಕೆಲವು ತಿಂಗಳುಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಾಗಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳಾದ ಲಷ್ಕರ್--ತೊಯ್ಬಾ ಮತ್ತು ಜೈಶ್--ಮೊಹಮ್ಮದ್ ಸಂಘಟನೆಗಳು, ರಾವಲ್ಪಿಂಡಿ ಜಿಎಚ್‌ಕ್ಯು ನಿರ್ದೇಶನದ ಮೇರೆಗೆ ಅಫ್ಘಾನಿಸ್ತಾನದಲ್ಲಿ ತರಬೇತಿ ಮತ್ತು ಹೋರಾಟಕ್ಕಾಗಿ ಕಾರ್ಯಕರ್ತರನ್ನು ತ್ವರಿತವಾಗಿ ಸಜ್ಜುಗೊಳಿಸುತ್ತಿವೆ ಎಂದು ಸುದ್ದಿ ಮೂಲಗಳು 2020 ಜೂನ್ 04ರ ಗುರುವಾರ  ತಿಳಿಸಿದವು.

ಎರಡೂ ಭಯೋತ್ಪಾದಕ ಗುಂಪುಗಳು ಯುದ್ಧ ಪೀಡಿತ ದೇಶದಲ್ಲಿ ,೦೦೦ ಭಯೋತ್ಪಾದಕ ಕಾರ್ಯಕರ್ತರನ್ನು ಹೊಂದಿವೆ ಎಂದು ಅಂದಾಜು ಮಾಡಲಾಗಿದೆ, ಅವರಲ್ಲಿ ಹೆಚ್ಚಿನವರು ಫೆಬ್ರವರಿಯಲ್ಲಿ ಸಹಿ ಹಾಕಲಾದ ತಾಲಿಬಾನ್ ಮತ್ತು ಅಮೆರಿಕ ನಡುವಣ ಒಪ್ಪಂದದ ನಂತರ ಸೇರ್ಪಡೆಗೊಂಡಿದ್ದು, ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಮೂಲಗಳು ಹೇಳಿದವು.

ಕಳೆದ ಕೆಲವು ತಿಂಗಳುಗಳಲ್ಲಿ, ಸುಮಾರು ೨೦೦ ಲಷ್ಕರ್ ಕಾರ್ಯಕರ್ತರು ಪಾಕಿಸ್ತಾನದ ಬಜೌರ್ ಏಜೆನ್ಸಿಯಿಂದ ಅಫ್ಘಾನಿಸ್ತಾನದ ಕುನಾರ್ ಪ್ರಾಂತ್ಯಕ್ಕೆ ನುಸುಳಿದ್ದರು. ಮೇ ಕೊನೆಯ ವಾರದಲ್ಲಿ, ಮಾಜಿ ಐಎಸ್‌ಐ ಅಧಿಕಾರಿ ಬಿಲಾಲ್ ಅಕಾ ಜರ್ಕಾವಿ ನೇತೃತ್ವದ ೩೦ ಲಷ್ಕರ್-- ತೊಯ್ಬಾ ಭಯೋತ್ಪಾದಕರ ಮತ್ತೊಂದು ಗುಂಪು ಕುನಾರಿನ ದಂಗಮ್ ಜಿಲ್ಲೆಗೆ ಸೇರಿಕೊಂಡಿತ್ತು.

ಹದಿನೈದು ದಿನಗಳ ಹಿಂದೆ, ತಾಲಿಬಾನ್ ಕಮಾಂಡರ್ ಮುಲ್ಲಾ ನೆಕ್ ಮೊಹಮ್ಮದ್ ರಭರ್ ಸಾಕುತ್ತಿದ್ದ ೪೫ ಜೈಶ್ ಕಾರ್ಯಕರ್ತರು ಪಾಕಿಸ್ತಾನದ ಕುರ್ರಾಮ್ ಏಜೆನ್ಸಿ ಮೂಲಕ ನಂಗರ್‌ಹಾರ್‌ನ ಶೆರ್ಜಾದ್ ಪ್ರಾಂತ್ಯವನ್ನು  ಪ್ರವೇಶಿಸಿದ್ದರು.

ದೆಹಲಿ ಮತ್ತು ಕಾಬೂಲ್‌ನಲ್ಲಿನ ಅಧಿಕಾರಿಗಳು ಎರಡು ಭಯೋತ್ಪಾದಕ ಗುಂಪುಗಳು ಅಫ್ಘಾನಿಸ್ತಾನದ ಮೇಲೆ ಕೇಂದ್ರೀಕರಿಸಿದ್ದು, ಅವರ ನಿಯೋಜನೆಗಳು ಮತ್ತು ಕ್ರಮಗಳು ಪಾಕಿಸ್ತಾನದ ಐಎಸ್‌ಐನ ಆದ್ಯತೆಗಳೇನು ಎಂಬುದನ್ನು ಪ್ರತಿಬಿಂಬಿಸುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ

ಸದ್ಯಕ್ಕೆ, ತಾಲಿಬಾನ್-ಅಮೆರಿಕ ಶಾಂತಿ ಪ್ರಕ್ರಿಯೆಯು ರಾಜಕೀಯ ಇತ್ಯರ್ಥಕ್ಕೆ ಕಾರಣವಾದರೆ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರೆಸಲು ಐಎಸ್‌ಐ ಒತ್ತು ನೀಡುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಶ್ಮೀರದಿಂದ ಅಫ್ಘಾನಿಸ್ತಾನದವರೆಗೆ, ಪಾಕಿಸ್ತಾನವು ತನ್ನ ರಾಜತಾಂತ್ರಿಕತೆಯ ಫಲಿತಾಂಶಗಳನ್ನು ಸಾಧಿಸಲು ಭಯೋತ್ಪಾದಕ ಗುಂಪುಗಳನ್ನು ತನ್ನ ಕಾರ್ಯತಂತ್ರದ ತೋಳಾಗಿ ಬಳಸಿಕೊಂಡಿರುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಆದರೆ ಅಫ್ಘಾನಿಸ್ತಾನದಲ್ಲಿ ನಿಯೋಜನೆಯು ಪಾಕಿಸ್ತಾನದ ಹಿತಾಸಕ್ತಿ ಸಲುವಾಗಿ ಯಾವುದೇ ಕಾರಣಕ್ಕೂ ಭಯೋತ್ಪಾದಕರನ್ನು ಹೊರಹಾಕುವ ಹೊಸ ಭಯೋತ್ಪಾದಕ ಕಾರ್ಖಾನೆಯಾಗಿ ಕಾರ್ಯನಿರ್ವಹಿಸುವಂತೆ  ವಿನ್ಯಾಸಗೊಳಿಸಲಾಗಿದೆ.

ಅಫ್ಘಾನಿಸ್ತಾನಕ್ಕೆ ಪ್ರವೇಶಿಸಿದ ೩೦ ಎಲ್‌ಇಟಿ ಭಯೋತ್ಪಾದಕರ ತಂಡವನ್ನು ಮುನ್ನಡೆಸಿದ ಮಾಜಿ ಐಎಸ್‌ಐ ಅಧಿಕಾರಿ ಬಿಲಾಲ್ ಅಕಾ ಜರ್ಕಾವಿ ಹಿಂದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ರಾಜಧಾನಿ ಮುಜಫರಾಬಾದ್‌ನಲ್ಲಿ ಪ್ರಮುಖ ಭಯೋತ್ಪಾದಕ ತರಬೇತಿ ಕೇಂದ್ರವೊಂದರ ಉಸ್ತುವಾರಿ ವಹಿಸಿದ್ದ.

ವರ್ಷದ ಆರಂಭಿಕ ದಾಳಿಗಳಲ್ಲಿ ಲಷ್ಕರ್ ಕಾರ್ಯಕರ್ತರು ಪಾತ್ರವಹಿಸಿದ್ದರೆಂದು ನಂಬಲಾಗಿದೆ, ಕಾಬೂಲಿನ ಹಳೆಯ ನಗರದ ಗುರು ಹರ್ ರೈ ಗುರುದ್ವಾರದಲ್ಲಿ ನಡೆದ ಹತ್ಯಾಕಾಂqದಲ್ಲಿ ೨೫ ಕ್ಕಿಂತಲೂ ಹೆಚ್ಚು ಮಂದಿ ಸತ್ತಿದ್ದರು. ಅವರಲ್ಲಿ ಹೆಚ್ಚಿನವರು ದೇವಾಲಯದಲ್ಲಿ ಪ್ರಾರ್ಥಿಸುವವವರಾಗಿದ್ದರು. ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ (ಐಎಸ್‌ಕೆಪಿ) ಮತ್ತು ತಾಲಿಬಾನ್‌ನ ಹಕ್ಕಾನಿ ನೆಟ್‌ವರ್ಕ್ ಜಂಟಿಯಾಗಿ ನಡೆಸಿದ್ದವು.

ಅಫ್ಘಾನಿಸ್ತಾನದಿಂದ ಹೊಸದಾಗಿ ರೂಪುಗೊಂಡ ಲಷ್ಕರ್ ಗುಂಪಿನ ಉಸ್ತುವಾರಿ ವಹಿಸಿಕೊಂಡಿರುವ ಪಾಕಿಸ್ತಾನದ ರಾಷ್ಟ್ರೀಯ ಮೌಲ್ವಿ ಸಮಿಯುಲ್ಲಾ ಸಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ಅಫ್ಘಾನಿಸ್ತಾನದಿಂದ ಬಂದಿರುವ ಹೊಸ ಮಾಹಿತಿ ತಿಳಿಸಿದೆ.

ಜಮಾತ್ ಅಲ್-ದವಾ ಮತ್ತು ಜೈಶ್--ಸಲಾಫಿಯ ಆಶ್ರಯದಲ್ಲಿ ಲಷ್ಕರ್ ಕಾರ್ಯಕರ್ತರು ಕೆಲವು ಸಂದರ್ಭಗಳಲ್ಲಿ ಅಫ್ಘಾನಿಸ್ತಾನದಲ್ಲಿ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆಂದು ಸೂಚಿಸಲು ಸಾಕ್ಷ್ಯಗಳಿವೆ  ಎಂದು ಭಯೋತ್ಪಾದಕ ನಿಗ್ರಹ ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಎರಡು ಭಯೋತ್ಪಾದಕ ಗುಂಪುಗಳ ಉಪಸ್ಥಿತಿ ಮತ್ತು ಚಟುವಟಿಕೆಗಳನ್ನು ನಕ್ಷೆ ಮಾಡುವ ಪ್ರಯತ್ನ ಇನ್ನೂ ಪ್ರಗತಿಯಲ್ಲಿದೆ ಎಂದು ಅವರಲ್ಲಿ ಒಬ್ಬರು ಹೇಳಿದರು. "ಆದರೆ ಪ್ರಮುಖ ಪಾತ್ರಗಳನ್ನು ನಿರ್ವಹಿಸುವವರಲ್ಲಿ ಕೆಲವರನ್ನು ನಾವು ಗುರುತಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಅಫಘಾನಿಸ್ತಾನದಲ್ಲಿ ಲಷ್ಕರ್ ಭಯೋತ್ಪಾದನೆ:

* ಶೇಖ್ ಖಿತಾಬ್: ಪೂರ್ವ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ರಾಷ್ಟ್ರೀಯ ಮತ್ತು ಲಷ್ಕರ್--ತೊಯ್ಬಾ ಮುಖ್ಯಸ್ಥನಾಗಿದ್ದು ಸಕ್ರಿಯನಾಗಿದ್ದಾನೆ.

* ಮೌಲ್ವಿ ಸಮಿಯುಲ್ಲಾ: ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರೂಪುಗೊಂಡ ಎಲ್‌ಇಟಿ ಗುಂಪಿನ ಪಾಕಿಸ್ತಾನಿ ರಾಷ್ಟ್ರೀಯ ಮತ್ತು ಉಸ್ತುವಾರಿ ವ್ಯಕ್ತಿ. ಮಾರ್ಚ್ ೨೫ ರಂದು ಕಾಬೂಲ್ ಗುರುದ್ವಾರದ ಮೇಲೆ ದಾಳಿ ಮಾಡಿದ ತಂಡಕ್ಕೆ ಸಂಬಂಧಿಸಿದಾತ.

* ಅಬು ಹಮ್ಜಾ: ಪೂರ್ವ ಅಫ್ಘಾನಿಸ್ತಾನದ ಲಷ್ಕರ್‌ನ ಉಸ್ತುವಾರಿ ಮತ್ತು ಕುನಾರ್ ಪ್ರಾಂತ್ಯದಲ್ಲಿ ನೆಲೆಸಿದ್ದಾನೆ. ಈತ ಅಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದವನು.

* ಜುನೈದ್, ಸೈಫುಲ್ಲಾ ಮತ್ತು ಅಬುಜರ್:  ಮೌಲ್ವಿ ಸಮಿಯುಲ್ಲಾ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ಸಕ್ರಿಯ ಎಂದು ವರದಿಯಾಗಿದೆ.

* ಸಯೀದ್ ಅಕ್ಬರ್ ಜಾನ್ ಜರ್ಧಾನ್: ಎಲ್‌ಇಟಿ ಕಮಾಂಡರ್ ಆಗಿದ್ದು, ಅವರು ಪಕ್ತಿಕಾದ ಗಯಾನ್, ಜೆರೋಕ್ ಮತ್ತು ಬಾರ್ಮಲ್ ಜಿಲ್ಲೆಗಳಲ್ಲಿ ಸಕ್ರಿಯ.

* ಕಾರಿಜಿಯಾರ್ ರೆಹಮಾನ್: ಕುನಾರ್‌ನಲ್ಲಿನ ಐಎಸ್‌ಕೆಪಿಯ ಉಪ ಗವರ್ನರ್ ಮತ್ತು ಲಷ್ಕರ್ ಮತ್ತು ಅಲ್ ಖೈದಾ ನಡುವೆ ಸಂಯೋಜಕನಾಗಿ ಕಾರ್ಯನಿರ್ವಹಿಸುತ್ತಾನೆ.

* ಶೇಖ್ ಅಬ್ದುಲ್ ಅಜೀಜ್ ನುರಿಸ್ತಾನಿ: ನೂರಿಸ್ತಾನಿ ಪ್ರಾಂತ್ಯದ ತಾಲಿಬಾನ್‌ನ ಮಾಜಿ ಹಿರಿಯ ನ್ಯಾಯಾಧೀಶ,  ಪೇಶಾವರದ ತಜಾಬಾದ್‌ನಲ್ಲಿರುವ ಜಾಮಿಯಾ ಫಾರೂಕಿಯಾ ಮದರಸಾ ಅಂಗಸಂಸ್ಥೆಗೆ ಸೇರಿದ ವ್ಯಕ್ತಿ. ಪ್ರಸ್ತುತ  ಲಷ್ಕರ್ ಕೆಲದಲ್ಲಿ ತಲ್ಲೀನ.

ಅಫಘಾನಿಸ್ತಾನದಲ್ಲಿ ಜೈಶ್ ಟಾಪ್ ಆಪರೇಟಿವ್ಸ್

* ಖಾಜಿ ಸ್ವಹಿಬುಲ್ಲಾ: ಕುನಾರ್ ಪ್ರಾಂತ್ಯದ ಶಿಲ್ತಾನ್ ಜಿಲ್ಲೆಯ ಪ್ರಮುಖ ನಾಯಕ

* ದಿಲ್ ಮೊಹಮ್ಮದ್: ಮಧ್ಯ ಕುನಾರ್ ಪ್ರಾಂತ್ಯದ ಉಸ್ತುವಾರಿ

* ಫಜಲ್ ಅಕ್ಬರ್ ಸಲಾರ್ಜೈ: ಕುನಾರ್ ಪ್ರಾಂತ್ಯದ ದಂಗಮ್ ಮತ್ತು ಶಿಲ್ತಾನ್ ಜಿಲ್ಲೆಗಳ ನಡುವಿನ ವಲಾರ್ಸರ್‌ಗಾಗಿ ಜೈಶ್ ಉಸ್ತುವಾರಿ.

* ಜೊಹೂರ್ ಜರ್ಕಾವಿ: ಪೂರ್ವ ಅಫಘಾನಿಸ್ತಾನಕ್ಕೆ ಉಸ್ತುವಾರಿ ಮತ್ತು ಪಾಕಿಸ್ತಾನದ ವಾಜಿರಿಸ್ತಾನ್ ಪ್ರದೇಶದ ನಿವಾಸಿ.

No comments:

Advertisement