My Blog List

Thursday, June 4, 2020

ಗರ್ಭಿಣಿ ಆನೆಯ ಹತ್ಯೆ, ತಪ್ಪಿತಸ್ಥರಿಗೆ ಶಿಕ್ಷೆ: ಪಿಣರಾಯಿ ವಿಜಯನ್

ಗರ್ಭಿಣಿ  ಆನೆಯ ಹತ್ಯೆ,  ತಪ್ಪಿತಸ್ಥರಿಗೆ ಶಿಕ್ಷೆ: ಪಿಣರಾಯಿ ವಿಜಯನ್

ನವದೆಹಲಿ:  ಕಳೆದ ತಿಂಗಳ ಕೊನೆಯಲ್ಲಿ ಗರ್ಭಿಣಿ ಆನೆಯನ್ನು ಕ್ರೂರವಾಗಿ ಹತ್ಯೆಗೈದ ನಂತರ ಭುಗಿಲೆದ್ದಿರುವ ಆಕ್ರೋಶವನ್ನು ಶಮನಗೊಳಿಸಲು 2020 ಜೂನ್ 04ರ ಗುರುವಾರ  ತಮ್ಮ ಟ್ವಿಟ್ಟರ್ ಖಾತೆಯನ್ನು ಆಶ್ರಯಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಅಪರಾಧಿಗಳನ್ನು ಕಟಕಟೆಗೆ ತರಲಾಗುವುದು ಎಂದು ಹೇಳಿದರು.

"ಮೂವರು ಶಂಕಿತರನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಘಟನೆ ತನಿಖೆ ನಡೆಸಲಿವೆ. ಜಿಲ್ಲಾ ಪೊಲೀಸ್ ಮುಖ್ಯಸ್ಥ ಮತ್ತು ಜಿಲ್ಲಾ ಅರಣ್ಯ ಅಧಿಕಾರಿ ಇಂದು ಸ್ಥಳಕ್ಕೆ ಭೇಟಿ ನೀಡಿದರು. ಅಪರಾಧಿಗಳನ್ನು ಕಟಕಟೆಗೆ ತರಲು ನಾವು ಎಲ್ಲವನ್ನು ಮಾಡುತ್ತೇವೆ. ನ್ಯಾಯ ದೊರಕಲಿದೆ ಎಂದು ಮುಖ್ಯಮಂತ್ರಿ ಜನರಿಗೆ ಭರವಸೆ ನೀಡಿದರು.

ನಿಮ್ಮಲ್ಲಿ ಅನೇಕರು ನಮ್ಮನ್ನು ತಲುಪಿದ್ದಾರೆ. ನಿಮ್ಮ ಕಾಳಜಿಗಳು ವ್ಯರ್ಥವಾಗುವುದಿಲ್ಲ ಎಂದು ನಾವು ನಿಮಗೆ ಭರವಸೆ ನೀಡ ಬಯಸುತ್ತೇವೆ. ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕೆಲವರು ದುರಂತವನ್ನು ದ್ವೇಷದ ಅಭಿಯಾಕ್ಕಾಗಿ ಬಳಸುತ್ತಿರುವುದು ದುರದೃಷ್ಟಕರ ಎಂದು ವಿಜಯನ್ ಹೇಳಿದರು.

ದ್ವೇಷದ ಅಭಿಯಾನಕ್ಕಾಗಿ ಕೆಲವರು ದುರಂತವನ್ನು ಬಳಸಿದ್ದರಿಂದ ನಮಗೆ ದುಃಖವಾಗಿದೆ. ತಪ್ಪಾದ ವಿವರಣೆಗಳ ಮೇಲೆ ನಿರ್ಮಿಸಲಾದ ಸುಳ್ಳುಗಳು ಮತ್ತು ಸತ್ಯವನ್ನು ಅಳಿಸಲು ಅರ್ಧ ಸತ್ಯಗಳನ್ನು ಬಳಸಿಕೊಳ್ಳಲಾಗಿದೆ. ಕೆಲವರು ಧರ್ಮಾಂಧತೆಯ ನಿರೂಪಣೆಯನ್ನು ತುರುಕಲು ಪ್ರಯತ್ನಿಸಿದರು. ತಪ್ಪಾದ ಆದ್ಯತೆಗಳು ಎಂದು ವಿಜಯನ್ ಬರೆದರು.

ಹಿಂದಿನ ದಿನ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು ಘಟನೆಯ ಬಗ್ಗೆ ಕೇಂದ್ರ ಸರ್ಕಾರ "ಗಂಭೀರವಾಗಿ ಗಮನ" ಹರಿಸಿದೆ ಎಂದು ಹೇಳಿದ್ದರು.

ನಾವು ಸರಿಯಾಗಿ ತನಿಖೆ ನಡೆಸಲು ಮತ್ತು ಅಪರಾಧಿ (ಗಳನ್ನು) ಬಂಧಿಸಲು ಸರ್ವ ಯತ್ನವನ್ನೂ ಮಾಡುತ್ತೇವೆ. ಪಟಾಕಿ ಸಿಡಿಸುವುದು ಮತ್ತು ಕೊಲ್ಲುವುದು ಭಾರತೀಯ ಸಂಸ್ಕೃತಿಯಲ್ಲ ಎಂದು ಜಾವಡೇಕರ್ ಟ್ವೀಟಿನಲ್ಲಿ ತಿಳಿಸಿದ್ದಾರೆ.

ಸ್ಫೋಟಕ ತುಂಬಿದ ಅನಾನಸ್ ತಿಂದಾಗ ಅದು ಬಾಯಿಯಲ್ಲಿ ಸ್ಫೋಟಿಸಿ ಗರ್ಭೀಣಿ ಆನೆಯ ದವಡೆ ಛಿದ್ರಗೊಂಡು, ಅಪಾರ ವೇದನೆಯೊಂದಿಗೆ ಮಾರಣಾಂತಿಕವಾಗಿ  ಗಾಯಗೊಂಡು ಬಳಿಕ ಸಾವನ್ನಪ್ಪಿತ್ತು.

ಅಪಾರ ನೋವಿನೊಂದಿಗೆ ಆನೆ ಸಾವನ್ನಪ್ಪುವಂತಾದ ಘಟನೆಯ ಅಮಾನವೀಯತೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ಘಟನೆ ಮೇ ೨೭ ರಂದು ಸಂಭವಿಸಿದೆ ಎಂದು ನಂಬಲಾಗಿದೆ. ಅರಣ್ಯ ಅಧಿಕಾರಿಗಳ ಪ್ರಕಾರ, ಆನೆಯು ಕಾಡುಹಂದಿಗಳನ್ನು ಹಿಡಿಯುವ ಬಲೆಯಲ್ಲಿದ್ದ ಸ್ಫೋಟಕ ತುಂಬಿದ ತುಂಬಿದ ಹಣ್ಣನ್ನು ನುಂಗಿರಬಹುದು ಎಂದು ಹೇಳಲಾಗಿತ್ತು.

No comments:

Advertisement