Thursday, June 4, 2020

ಪ್ರಧಾನಿ ಮೋದಿ ಖಾಸಗಿ ಕಾರ್ಯದರ್ಶಿ ರಾಜೀವ್ ಟೊಪ್ನೊ ವಿಶ್ವಬ್ಯಾಂಕಿಗೆ ನೇಮಕ

ಪ್ರಧಾನಿ ಮೋದಿ ಖಾಸಗಿ ಕಾರ್ಯದರ್ಶಿ ರಾಜೀವ್ ಟೊಪ್ನೊ  ವಿಶ್ವಬ್ಯಾಂಕಿಗೆ ನೇಮಕ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖ ಸಹಾಯಕರಾಗಿ ಸೇವೆ ಸಲ್ಲಿಸಿರುವ ೧೯೯೬ ತಂಡದ ಐಎಎಸ್ ಅಧಿಕಾರಿ ರಾಜೀವ್ ಟೊಪ್ನೊ ಅವರನ್ನು ವಿಶ್ವಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರರಾಗಿ ನೇಮಿಸಲಾಗಿದೆ.

ಟೋಪ್ನೊ ಅವರ ಮುಂದಿನ ಹುದ್ದೆಯನ್ನು  ಪ್ರಧಾನಿ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿಯು  2020 ಜೂನ್ 04ರ ಗುರುವಾರ ತೆರವುಗೊಳಿಸಿತು. ವಿದೇಶಿ ನಿಯೋಜನೆಗಳಿಗಾಗಿ ಇತರ ಐದು ಅಧಿಕಾರಿಗಳ ಹೆಸರನ್ನು ಸಹ ಸಮಿತಿ ತೆರವುಗೊಳಿಸಿತು.

ಗುಜರಾತ್ ಕೇಡರ್ ಭಾರತೀಯ ಆಡಳಿತ ಸೇವಾ ಅಧಿಕಾರಿಯಾಗಿದ್ದ ಟೊಪ್ನೊ ಅವರು ೨೦೦೯ ರಲ್ಲಿ ಮನಮೋಹನ್ ಸಿಂಗ್ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಿದಾಗ ಉಪ ಕಾರ್ಯದರ್ಶಿಯಾಗಿ ಪ್ರಧಾನ ಮಂತ್ರಿ ಕಚೇರಿಗೆ ಸೇರಿದ್ದರು. ಯುಪಿಎ - ಸರ್ಕಾರದಲ್ಲಿ ಪ್ರಧಾನ ಮಂತ್ರಿಯವರ ಕಾರ್‍ಯಾಲಯದಲ್ಲಿ (ಪಿಎಂಒ) ಟೆಲಿಕಾಂ ಮತ್ತು ಬಂದರುಗಳಂತಹ ಪ್ರಮುಖ ಖಾತೆಗಳನ್ನು ಅವರು ನಿರ್ವಹಿಸಿದ್ದರು.

೨೦೧೪ ರಲ್ಲಿ ಅಧಿಕಾರ ವಹಿಸಿಕೊಂಡಾಗ ಪ್ರಧಾನಿ ಮೋದಿ ಅವರು ತಮ್ಮ ವೈಯಕ್ತಿಕ ಸಿಬ್ಬಂದಿಯಾಗಿ ಟೊಪ್ನೊ ಅವರನ್ನು ಆಯ್ಕೆ ಮಾಡಿದರು. ಗುಜರಾತ್ ತಂಡದ ಅಧಿಕಾರಿಯನ್ನು ತಮ್ಮ ಖಾಸಗಿ ಕಾರ್ಯದರ್ಶಿಯಾಗಿ ಪ್ರಧಾನಿ ನೇಮಿಸಿದರು.

ಸಂಪ್ರದಾಯದ ಪ್ರಕಾರ ಪ್ರಧಾನ ಮಂತ್ರಿಯವರು ಇಬ್ಬರು ಖಾಸಗಿ ಕಾರ್ಯದರ್ಶಿಗಳನ್ನು ಹೊಂದಿರುತ್ತಾರೆ.  ಅವರಲ್ಲಿ ಒಬ್ಬರು ಐಎಎಸ್ ಅಧಿಕಾರಿ, ಎರಡನೆಯವರಾದ ವಿವೇಕ್ ಕುಮಾರ್ ಅವರು ಭಾರತೀಯ ವಿದೇಶಾಂಗ ಸೇವಾ ಅಧಿಕಾರಿ.

೧೯೯೯ ತಂಡದ ಐಎಎಸ್ ಅಧಿಕಾರಿ ಬ್ರಜೇಂದ್ರ ನವನೀತ್ ಅವರನ್ನು ರಾಯಭಾರಿಯಾಗಿ ಮತ್ತು ಜಿನೀವಾದಲ್ಲಿನ ವಿಶ್ವ ವಾಣಿಜ್ಯ ಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿಯಾಗಿ ನೇಮಕ ಮಾಡಿರುವುದನ್ನು ಎಸಿಸಿ ತೆರವುಗೊಳಿಸಿದೆ.

೧೯೯೩ ತಂಡದ ಐಎಎಸ್ ಅಧಿಕಾರಿಯಾಗಿದ್ದ ರವಿ ಕೋಟಾ ಅವರನ್ನು ವಾಷಿಂಗ್ಟನ್ನಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಸಚಿವರಾಗಿ (ಆರ್ಥಿಕ), ಕೇಂದ್ರ ಕಾರ್ಯದರ್ಶಿ ಸೇವೆಯ ಲೇಖನ್ ಠಕ್ಕರ್, ಬೀಜಿಂಗ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಕೌನ್ಸಿಲರ್ ಎಕನಾಮಿಕ್ ಆಗಿ, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನ ಇಡಿ ಸಲಹೆಗಾರರಾಗಿ ಎಚ್ ಅಥೇಲಿ ಅವರನ್ನು ನೇಮಿಸಲಾಗಿದೆ.

ಭಾರತೀಯ
ರೈಲ್ವೆ ಸಂಚಾರ ಸೇವಾ ಅಧಿಕಾರಿ ಅನ್ವರ್ ಹುಸೇನ್ ಶೇಕ್ ಅವರನ್ನು ಜಿನೀವಾದ ಡಬ್ಲ್ಯುಟಿಒಗೆ ಭಾರತದ ಶಾಶ್ವತ ಮಿಷನ್‌ನಲ್ಲಿ ಕೌನ್ಸಿಲರ್ ಆಗಿ ನೇಮಕ ಮಾಡಲಾಗಿದೆ.

No comments:

Advertisement