Friday, June 26, 2020

ಇಂದಿರಾ ಮೊಮ್ಮಗಳು ನಾನು, ಧೈರ್ಯವಿದ್ದರೆ ಕ್ರಮ ಕೈಗೊಳ್ಳಿ: ಪ್ರಿಯಾಂಕಾ ಸವಾಲು

ಇಂದಿರಾ ಮೊಮ್ಮಗಳು ನಾನು,  ಧೈರ್ಯವಿದ್ದರೆ ಕ್ರಮ ಕೈಗೊಳ್ಳಿ:  ಪ್ರಿಯಾಂಕಾ ಸವಾಲು

ನವದೆಹಲಿ: ‘ನಾನು ಇಂದಿರಾ ಗಾಂಧಿ ಮೊಮ್ಮಗಳು. ಬಿಜೆಪಿಯ ಅಘೋಷಿತ ವಕ್ತಾರರಂತೆ ವರ್ತಿಸುತ್ತಿರುವ ವಿರೋಧ ಪಕ್ಷದ ನಾಯಕರ ರೀತಿ ನಾನಲ್ಲ. ಸಾಧ್ಯವಿದ್ದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಿಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶ ಸರ್ಕಾರಕ್ಕೆ  2020 ಜೂನ್ 26ರ ಶುಕ್ರವಾರ ಸವಾಲು ಹಾಕಿದರು.

ಸತ್ಯವನ್ನು ನುಡಿದದ್ದಕ್ಕೆ ವಿವಿಧ ಇಲಾಖೆಗಳ ಮೂಲಕ ಉತ್ತರ ಪ್ರದೇಶ ಸರ್ಕಾರ ನನಗೆ ಬೆದರಿಕೆ ಹಾಕುವ ಕಾರ್ಯದಲ್ಲಿ ತೊಡಗಿದೆಎಂದು ಅವರು ಆರೋಪಿಸಿದರು.

ಕಾನ್ಪುರದ ಮಕ್ಕಳ ಆಶ್ರಯ ನಿಲಯದ ಕುರಿತು ನೀಡಿರುವ ಹೇಳಿಕೆಗೆ ಮೂರು ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಮಕ್ಕಳ ಹಕ್ಕುಗಳ ಆಯೋಗ ನೋಟಿಸ್ ನೀಡಿದ ಬಳಿಕ ಪ್ರಿಯಾಂಕಾ ಪ್ರತಿಕ್ರಿಯೆ ನೀಡಿದರು.

ರಾಜ್ಯ ಸರ್ಕಾರದ ನಿಲಯದಲ್ಲಿ ಇಬ್ಬರು ಬಾಲಕಿಯರು ಗರ್ಭಿಣಿಯರಾಗಿರುವ ಬಗ್ಗೆ ಮಾಧ್ಯಮಗಳು ಪ್ರಕಟಿಸಿದ ವರದಿಯನ್ನು ಪ್ರಸ್ತಾಪಿಸಿ ಪ್ರಿಯಾಂಕಾ ಅವರು ಫೇಸ್ಬುಕ್ನಲ್ಲಿ ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು.

ಜನರ ಸೇವಕಿಯಾಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಸರ್ಕಾರ ಸತ್ಯವನ್ನು ಬಹಿರಂಗಪಡಿಸಬೇಕು. ಸುಳ್ಳು ಹೇಳಬಾರದು. ನನ್ನ ವಿರುದ್ಧ ಯಾವುದೇ ರೀತಿ ಕ್ರಮಕೈಗೊಂಡರೂ ಸತ್ಯವನ್ನೇ ಜನರ ಮುಂದಿಡುತ್ತೇನೆಎಂದು ಪ್ರಿಯಾಂಕಾ ಶುಕ್ರವಾರ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ನನ್ನ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುವ ದೈರ್ ಮಾಡಲಿ. ನಾನು ಸತ್ಯವನ್ನೇ ಎತ್ತಿ ತೋರಿಸುತ್ತೇನೆ. ಸಾರ್ವಜನಿಕ ಸೇವಕಿಯಾಗಿ ಉತ್ತರ ಪ್ರದೇಶದ ಜನರ ಕಡೆಗಿನ ನನ್ನ ಕರ್ತವ್ಯ ಇದು. ಸರ್ಕಾರದ ಅಪಪ್ರಚಾರವನ್ನು ಪ್ರಚಾರ ಮಾಡುವುದು ನನ್ನ ಕರ್ತವ್ಯ ಅಲ್ಲ. ಉತ್ತರ ಪ್ರದೇಶ ಸರ್ಕಾರವು ನನಗೆ ಬೆದರಿಕೆ ಹಾಕಲು ಸಮಯ ವ್ಯರ್ಥ ಮಾಡುತ್ತಿದೆಎಂದು ಪ್ರಿಯಾಂಕಾ ದೂರಿದ್ದಾರೆ.

ರಾಜ್ಯದಲ್ಲಿ ಕೊರೋನವೈರಸ್ ರೋಗ ಹರಡುವಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರಿಯಾಂಕಾ ಅವರು  ಉತ್ತರ ಪ್ರದೇಶ ಸರ್ಕಾರದ ವಿರುದ್ಧ ದಾಳಿ ನಡೆಸುತ್ತಿದ್ದಾರೆ.

ಕಾನ್ಪುರದ ಸರ್ಕಾರಿ ಮಕ್ಕಳ ಆಶ್ರಯ ನಿಲಯದ ೫೭ ಬಾಲಕಿಯರಿಗೆ ಕೊರೋನಾವೈರಸ್ ಸೋಂಕು ತಗುಲಿದೆ. ಇಬ್ಬರು ಬಾಲಕಿಯರು ಗರ್ಭಿಣಿಯರಾಗಿದ್ದು, ಒಬ್ಬಾಕೆ ಎಚ್ಐವಿ ಪೀಡಿತಳಾಗಿದ್ದಾಳೆಎಂದು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸುತ್ತಾ ಪ್ರಿಯಾಂಕಾ ಅವರು ಫೇಸ್ ಬುಕ್ನಲ್ಲಿ ಬರೆದಿದ್ದರು.

ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗಿರುವ ಘಟನೆಯನ್ನು ಬಿಹಾರದ ಮುಜಾಫರ್ಪುರ್ ಬಾಲಕಿಯರ ಆಶ್ರಯಧಾಮದ ಲೈಂಗಿಕ ದೌರ್ಜನ್ಯ ಪ್ರಕರಣದ ಜೊತೆಗೆ ಅವರು ಸಮೀಕರಿಸಿದ್ದರು.

ರಾಜ್ಯ ಮಕ್ಕಳ ಹಕ್ಕುಗಳ ಸಮಿತಿಯು ಗುರುವಾರ ಪ್ರಿಯಾಂಕಾ ಗಾಂಧಿಯವರಿಗೆ ನೋಟಿಸ್ ನೀಡಿ, ಬಾಲಕಿಯರ ಆಶ್ರಯ ನಿಲಯ ಕುರಿತದಾರಿತಪ್ಪಿಸುವಟೀಕೆಗೆ ಮೂರು ದಿನಗಳಲ್ಲಿ ಉತ್ತg ನೀಡುವಂತೆ ನಿರ್ದೇಶಿಸಿತ್ತು.

೨೮ ಕೊರೋನಾ ರೋಗಿಗಳು ಆಗ್ರಾ ಆಸ್ಪತೆಗೆ ದಾಖಲಾದ ೪೮ ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಜೂನ್ ೨೨ ರಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದರು. ಇದರಿಂದಾಗಿ ಉತ್ತರ ಪ್ರದೇಶ ಸರ್ಕಾರ ಪ್ರಚಾರ ಮಾಡಿದ ಆಗ್ರಾ ಮಾದರಿ ಅನಾವರಣಗೊಂಡಿದೆ ಎಂದು ಹೇಳಿದ್ದ ಪ್ರಿಯಾಂಕಾ ತಮ್ಮ ಟ್ವೀಟ್ಗೆ ಇದಕ್ಕೆ ಸಂಬಂಧಿಸಿದ ಸುದ್ದಿಯನ್ನು ಲಗತ್ತಿಸಿದ್ದರು.

ಟ್ವೀಟ್ನ್ನು ಗಮನಿಸಿದ ಆಗ್ರಾ ಜಿಲ್ಲಾಧಿಕಾರಿ ಪ್ರಭು ನರೈನ್ ಸಿಂಗ್ ಮಂಗಳವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯವರಿಗೆ ಟ್ವೀಟ್ ಹಿಂತೆಗೆದುಕೊಳ್ಳುವಂತೆ ಸೂಚಿಸಿದ್ದರು.

ಆದರೆ ಅದಕ್ಕೆ ಜಗ್ಗದ ಪ್ರಿಯಾಂಕಾ ಗಾಂಧಿ ವಾದ್ರಾ, ಆಗ್ರಾದಲ್ಲಿ ಕೋವಿಡ್-೧೯ ಸಾವು ಅತಿಯಾಗಿರುವ ಬಗ್ಗೆ ಸರ್ಕಾರದ ಮೇಲೆ ಅದೇ ದಿನ ದಾಳಿ ನಡೆಸಿದ್ದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ೪೮ ಗಂಟೆಗಳ ಒಳಗೆ "ಜನರನ್ನು ಪ್ರತಿಕೂಲ ಪರಿಸ್ಥಿತಿಗಳಿಗೆ ತಳ್ಳಿದ್ದಕ್ಕೆ ಯಾರು ಜವಾಬ್ದಾರಿಎಂಬುದಾಗಿ ಸ್ಪಷ್ಟ ಪಡಿಸಬೇಕು ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದರು.

ಆಗ್ರಾದಲ್ಲಿ ಕೋವಿಡ್ -೧೯ ಸಾವಿನ ಪ್ರಮಾಣ ಶೇಕಡಾ . ರಷ್ಟಿದ್ದು, ಇದು ದೆಹಲಿ ಮತ್ತು ಮುಂಬೈಗಿಂತ ಹೆಚ್ಚಾಗಿದೆ ಎಂಬ ಮಾಧ್ಯಮ ವರದಿಯನ್ನು ಪ್ರಿಯಾಂಕಾ ತಮ್ಮ ಟ್ವೀಟ್ಗೆ  ಟ್ಯಾಗ್ ಮಾಡಿದ್ದರು.

No comments:

Advertisement