ಗ್ರಾಹಕರ ಸುಖ-ದುಃಖ

My Blog List

Friday, June 26, 2020

ಚೀನಾದ ಯುದ್ಧೋನ್ಮಾದ: ಭಾರತದ ಖಡಕ್ ಎಚ್ಚರಿಕೆ

ಚೀನಾದ ಯುದ್ಧೋನ್ಮಾದ:  ಭಾರತದ ಖಡಕ್ ಎಚ್ಚರಿಕೆ

ಕೆಟ್ಟೀತು ಮೂರು ದಶಕದ ಬಾಂಧವ್ಯ, ನೆನಪಿಡಿ

ನವದೆಹಲಿ: ಪೂರ್ವ ಲಡಾಕ್ನಲ್ಲಿನ ಆಕ್ರಮಣಕಾರಿ ಸೇನಾ ಭಂಗಿಯ ಮೂಲಕ ,೪೮೮ ಕಿಲೋಮೀಟರ್ ಉದ್ದದ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಯುದ್ಧದಂತಹ ಪರಿಸ್ಥಿತಿಯನ್ನು ಹುಟ್ಟುಹಾಕಲು ಪ್ರಯತ್ನಿಸುವ ಮೂಲಕ ಚೀನಾವು ದ್ವಿಪಕ್ಷೀಯ ಬಾಂಧವ್ಯದ ಗಡಿಯಾರವನ್ನು ೧೯೯೦ರ ದಶಕಕ್ಕೆ ತಿರುಗಿಸಿದೆ ಎಂದು ಭಾರತ 2020 ಜೂನ್ 26ರ ಶುಕ್ರವಾರ ಆರೋಪಿಸಿತು.

ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್) ದಂಡನಾಯಕನೂ ಆಗಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ೧೯೯೩ರ ಶಾಂತಿ ಒಪ್ಪಂದವನ್ನು ಚೂರುಚೂರಾಗಿ ಹರಿದು ಹಾಕಿದ್ದಾರೆ ಎಂದು ಹೇಳುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ದ್ವಿಪಕ್ಷೀಯ ಬಾಂಧವ್ಯಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವಂತಹ ಅಂತಿಮ ರಾಜತಾಂತ್ರಿಕ  ಅಂತಿಮ ಎಚ್ಚರಿಕೆ ನೀಡಿತು.

೧೯೯೩ರಲ್ಲಿ ಆಗಿನ ಪ್ರಧಾನಿ ಪಿವಿ ನರಸಿಂಹ ರಾವ್-ಜಿಯಾಂಗ್ ಝಮಿನ್ ಯುಗದಲ್ಲಿ ಸಹಿ ಹಾಕಿದ ಒಪ್ಪಂದವು ಮಿಲಿಟರಿ ಪಡೆಗಳನ್ನು ಎಲ್ಎಸಿಯ ಉದ್ದಕ್ಕೂಕನಿಷ್ಠ ಮಟ್ಟದಲ್ಲಿಇರಿಸಬೇಕು ಎಂದು ಸ್ಪಷ್ಟಪಡಿಸುತ್ತದೆ.

ಇದಕ್ಕೆ ಅನುಗುಣವಾಗಿ ಚೀನಾವು ಎಲ್ಎಸಿಯಿಂದ ಪಿಎಲ್ ಪಡೆಗಳನ್ನು ಹಿಂತೆಗೆದುಕೊಂಡು ಉದ್ವಿಗ್ನತೆ ಶಮನಗೊಳಿಸದೇ ಇದ್ದಲ್ಲಿ ಕಳೆದ ಮೂರು ದಶಕಗಳ ದ್ವಿಪಕ್ಷೀಯ ಬಾಂಧವ್ಯದಲ್ಲಿ ಗಳಿಸಿದ ಎಲ್ಲಾ ಲಾಭಗಳು ನಷ್ಟವಾಗುತ್ತವೆ ಎಂದು ಗುರುವಾರ ತಿಳಿಸುವ ಮೂಲಕ ಮೂಲಕ ಚೀನಾಕ್ಕೆ ಭಾರತ ಕಡೆಯ ಎಚ್ಚರಿಕೆಯನ್ನು ನೀಡಿದೆ.

"ನೈಜ ನಿಯಂತ್ರಣ ರೇಖೆಯಲ್ಲಿ ಚೀನಾದ ಮಿಲಿಟರಿ ಭಂಗಿಯನ್ನು ನಿಭಾಯಿಸಲು ಭಾರತವು ಸಾಕಷ್ಟು ಸಮರ್ಥವಾಗಿದೆ ಆದರೆ ಪಿಎಲ್ ಉದ್ವಿಗ್ನತೆ ಶಮನಗೊಳಿಸದಿದ್ದರೆ ಇಡೀ ಆರ್ಥಿಕ ಸಂಬಂಧವು ಕುಸಿದುಹೋಗುತ್ತದೆ. ಪರಿಸ್ಥಿತಿ ಮುಂದುವರಿದರೆ ಚೀನಾಕ್ಕೆ ಎಂದಿನಂತೆ ವ್ಯವಹಾರಿಸಲು ಸಾಧ್ಯವಿಲ್ಲ. ಎಚ್ಚರಿಕೆಯ ಕರೆಯನ್ನು ಪ್ರಧಾನ ಕಾರ್ಯದರ್ಶಿ ಕ್ಸಿ ಜಿನ್ಪಿಂಗ್ ಗಮನಿಸಬೇಕಾಗಿದೆಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಕಳೆದ ಮೂರು ದಿನಗಳಲ್ಲಿ ಚೀನಾದ ವಾಯುಪಡೆಯಿಂದ ಯಾವುದೇ ಮಿಲಿಟರಿ ಹಾರಾಟ ನಡೆದಿಲ್ಲವಾದರೂ, ಪೀಪಲ್ಸ್ ಲಿಬರೇಶನ್ ಆರ್ಮಿಯು  ಫಿರಂಗಿ ಮತ್ತು ಕ್ಷಿಪಣಿ ಬೆಂಬಲದೊಂದಿಗೆ ನೈಜ ನಿಯಂತ್ರಣ ರೇಖೆಯುದ್ದಕ್ಕೂ ಸೇನೆಯನ್ನು ಜಮಾಯಿಸಿದೆ. ಲಡಾಖ್ ,೫೯೭ ಕಿ.ಮೀ  ಗಡಿ ಉದ್ದಕ್ಕೂ ಅದರ ಭಂಗಿಯು ಕೆಂಪು ಧ್ವಜವನ್ನು ಮೇಲಕ್ಕೆತ್ತಲು ಸಿದ್ಧವಾಗಿರುವ ಸೈನ್ಯದೊಂದಿಗೆ ಬೆದರಿಕೆಯನ್ನು ಒಡ್ಡಿದೆ. ಕಶ್ಗರ್, ಹೋಟನ್, ಯಾರ್ಕಂಡ್, ಕೊರ್ಲಾ ಮತ್ತು ಗೋರ್ ಗುನ್ಸಾದಲ್ಲಿನ ಅದರ ಮಿಲಿಟರಿ ವಾಯುನೆಲೆಗಳು ಕೂಡಾ ಯುದ್ಧಕ್ಕೆ ಸಿದ್ಧವಾಗಿವೆ.

ತನ್ನ ಸಮರ ಸಿದ್ದತೆಗಳ ಹೊರತಾಗಿಯೂ ಭಾರತದ ಮೇಲೆ ಗೂಬೆ ಕೂರಿಸಲು ಯತ್ನಿಸಿರುವ ಚೀನಾ, ಜೂನ್ ೧೫ರ ಗಲ್ವಾನ್ ಪ್ರಕ್ಷುಬ್ಧತೆ, ೧೬ ಬಿಹಾರ ಭಾರತೀಯ ಸೇನಾ ಘಟಕ ಜೊತೆಗಿನ ಘರ್ಷಣೆ ಮತ್ತು ದೌಲತ್ ಬೇಗ್ ಓಲ್ಡಿಯಲ್ಲಿ ಭಾರತೀಯ ಸೇನಾ ಮನೋಭಾವದ ಬದಲಾವಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ದಾರ್ಬುಕ್-ಶ್ಯೋಕ್-ಡಿಬಿಒ ರಸ್ತೆ ಪೂರ್ಣಗೊಂಡ ನಂತರ, ಆಟದ ದಾಳ ಬದಲಿಸಬಲ್ಲಂತಹ ಟಿ -೯೦ ಟ್ಯಾಂಕ್ಗಳು, ರಷ್ಯಾದ ಬಿಎಂಪಿ ಉಭಯಚರ ಕಾಲಾಳುಪಡೆ ಹೋರಾಟದ ವಾಹನಗಳು ಮತ್ತು ಅಮೇರಿಕನ್ ಎಂ -೭೭೭ ೧೫೫ ಎಂಎಂ ಹೊವಿಟ್ಜರ್ಗಳನ್ನು ನಿಯೋಜಿಸುವ ಮೂಲಕ ಭಾರತವು ಕಾರಕೋರಂ ಕಣಿವೆ ಬಳಿ ಪರಿಸ್ಥಿತಿ ಎದುರಿಸಲು ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ.

ದೌಲತ್ ಬೇಗ್ ಓಲ್ಡೀ ಠಾಣೆಯಲ್ಲಿ ಮತ್ತು ನ್ಯೋಮಾ ಸೇರಿದಂತೆ ಎಲ್ಲಾ ಮುಂಚೂಣಿಯ ಲ್ಯಾಂಡಿಂಗ್ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು  ಭಾರತವು ನಿಯೋಜಿಸುವುದರೊಂದಿಗೆ, ಪಿಎಲ್ ನೈಜ ನಿಯಂತ್ರಣ ರೇಖೆಯಲ್ಲಿ ಬೆದರಿಸಲು ಪ್ರಯತ್ನಿಸಿದರೆ ಭಾರಿ ಪ್ರಮಾಣದ ಸಾವುನೋವುಗಳನ್ನು ಅನುಭವಿಸಬೇಕಾಗುತ್ತದೆ.

ಸಿಯಾಚಿನ್ ಗ್ಲೇಸಿಯರ್ಗೆ ಸಂಪರ್ಕ ಕಲ್ಪಿಸುವ ಮೂಲಕ ಲಡಾಖ್ನ್ನು ಆಕ್ರಮಿಸಿಕೊಂಡು ಕಾಶ್ಮೀರದಲ್ಲಿ ಭಾರತೀಯ ಪಡೆಗಳನ್ನು ಹೈರಾಣಗೊಳಿಸುವ ಚೀನಾದ ಎಲ್ಲ ಯೋಜನೆಗಳಿಗೆ ದಾರ್ಬುಕ್- ಶ್ಯೋಕ್ -ದೌಲತ್ ಬೇಗ್ ಓಲ್ಡೀ (ಡಿಎಸ್ಡಿಬಿಒ) ರಸ್ತೆಯನ್ನು ಪೂರ್ಣಗಳಿಸುವ ಕಾರ್ಯತಂತ್ರದ ಮೂಲಕ ಭಾರತೀಯ ಸೇನೆ ಕಲ್ಲು ಹಾಕಿದ್ದು, ವ್ಯೂಹಾತ್ಮಕವಾಗಿ ಭಾರತದ ಪಾಲಿಗೆ ಇದು ಮಹತ್ವದ ತಿರುವನ್ನೇ ನೀಡಿದೆ.

ಸಿಯಾಚಿನ್ನ್ನು ನಿಶ್ಯಸ್ತ್ರೀಕರಣಗೊಳಿಸುವ ಪೀಸೆನಿಕ್ ಹೆಸರಿನ ಒಪ್ಪಂದಕ್ಕೆ ಹಿಂದಿನ ಭಾರತೀಯ ಸರ್ಕಾರಗಳು ಒಪ್ಪಿಕೊಂಡಿದ್ದರೆ, ಚೀನಾದ ಯೋಜನೆ ಸಫಲವಾಗುತ್ತಿತು.

ನೈಜ ನಿಯಂತ್ರಣ ರೇಖೆಯಲ್ಲಿ ಚೀನಾದ ಆಕ್ರಮಣಕಾರಿ ಭಂಗಿ ಮುಂದುವರೆದರೆ ಮತ್ತು ಕೆಲ ವಾರಗಳಲ್ಲಿ ಉದ್ವಿಗ್ನತೆ ಶಮನ ಮತ್ತು ಸೇನಾ ವಾಪಸಾತಿ ಒಪ್ಪಂದ ಸಾಧ್ಯವಾಗದಿದ್ದರೆ, ಆರ್ಥಿಕ ಬಾಗಿಲು ಮುಚ್ಚುವ ಮುಲಕ ಚೀನಾವನ್ನು  ಹೊಡೆಯಲು ಭಾರತ ಮನಸ್ಸು ಮಾಡಿಕೊಂಡಿರುವುದರಿಂದ ಗಡಿಯಾgವು ಈಗ ದ್ವಿಪಕ್ಷೀಯ ಬಾಂಧವ್ಯ ಅಂತ್ಯಕ್ಕೆ ಸಂಬಂಧಿಸಿದಂತೆ ಟಿಕ್ ಟಿಕ್ ಸದ್ದು ಮಾಡುತ್ತಾ ಕ್ಷಣಗಣನೆ ಆರಂಭಿಸಿದೆ.

No comments:

Advertisement