My Blog List

Thursday, June 4, 2020

ವಿದೇಶಿ ತಬ್ಲಿಘಿಗಳಿಗೆ ೧೦ ವರ್ಷ ಭಾರತ ನಿಷೇಧ

ವಿದೇಶಿ ತಬ್ಲಿಘಿಗಳಿಗೆ ೧೦ ವರ್ಷ ಭಾರತ ನಿಷೇಧ

ನವದೆಹಲಿ: ಕೊರೋನಾವೈರಸ್ ಹರಡುವಿಕೆಯನ್ನು ತಡೆಯಲು ಜಾರಿಗೆ ತರಲಾದ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್‌ಡೌನ್) ಸಮಯದಲ್ಲಿ ವೀಸಾ ನಿಯಮಗಳನ್ನು ಉಲ್ಲಂಘಿಸಿ ಭಾರತದಲ್ಲಿ ಉಳಿದುಕೊಂಡಿದ್ದ ಒಟ್ಟು ,೫೫೦ ವಿದೇಶಿ ತಬ್ಲಿಘಿ ಜಮಾತ್ ಸದಸ್ಯರನ್ನು ಗೃಹ ಸಚಿವಾಲಯವು ಕಪ್ಪುಪಟ್ಟಿಗೆ ಸೇರಿಸಿದೆ ಎಂದು ಸುದ್ದಿ ಸಂಸ್ಥೆಯು 2020 ಜೂನ್ 04ರ ಗುರುವಾರ ವರದಿ ಮಾಡಿತು.

ಮುಂದಿನ ೧೦ ವರ್ಷಗಳ ಕಾಲ ,೫೫೦ ವಿದೇಶಿ ಪ್ರಜೆಗಳಿಗೆ ಭಾರತವನ್ನು ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಅಧಿಕಾರಿಗಳನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ ತಿಳಿಸಿತು.

ಮಾರ್ಚ್ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ತಬ್ಲಿಘಿ ಜಮಾತ್ ಆಯೋಜಿಸಿದ್ದ ಸಮಾವೇಶವು ದೇಶದ ಕೋವಿಡ್ -೧೯ ಪ್ರಮುಖ ಹಾಟ್ ಸ್ಪಾಟ್ ಆಗಿ ಬದಲಾಗಿತ್ತು. ಸಮಾವೇಶದಲ್ಲಿ ಭಾಗವಹಿಸಿದ ಕೆಲವರಿಗೆ ಬಳಿಕ ಕೊರೋನವೈರಸ್ ಸೋಂಕು ತಗುಲಿದ್ದು ದೃಢ ಪಟ್ಟಿತ್ತು.

ಪ್ರತಿನಿಧಿಗಳಲ್ಲಿ ಅಷ್ಟರಲ್ಲೇ ದೇಶದ ಉದ್ದಗಲಕ್ಕೂ ಪಯಣಿಸಿ ತಮ್ಮ ತವರು ರಾಜ್ಯಗಳನ್ನು ಸೇರಿದ್ದರು.

ವಿದೇಶಿ ತಬ್ಲಿಘಿ ಜಮಾತ್ ಸದಸ್ಯರನ್ನು ನಿಷೇಧಿಸುವ ನಿರ್ಧಾರವನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಮಸೀದಿಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಯರ ವಿವರಗಳು ಹೊರಬಿದ್ದ ನಂತರ ತೆಗೆದುಕೊಳ್ಳಲಾಯಿತು.

ದೆಹಲಿಯ ತಬ್ಲಿಘಿ ಜಮಾತ್‌ನ ಜಾಗತಿಕ ಪ್ರಧಾನ ಕಚೇರಿಯಾಗಿರುವ ಮರ್ಕಜ್ ನಲ್ಲಿ ಮಾರ್ಚ್ ತಿಂಗಳಲ್ಲಿ  ನಡೆದ ಸಭೆಗಳಲ್ಲಿ ಪಾಲ್ಗೊಂಡಿದ್ದವರಿಂದಾಗಿ ದೇಶಾದ್ಯಂತ ಸಾವಿರಾರು ಮಂದಿಗೆ ಸೋಂಕು ಹರಡಿತ್ತು ಬೆಳಕಿಗೆ ಬಂದಿದೆ.

ಸಾಂಕ್ರಾಮಿಕ ರೋಗಗಳ ಕಾನೂನಿನಡಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಂಥದ ನಾಯಕತ್ವವನ್ನು ಈಗಾಗಲೇ ಪರಿಶೀಲಿಸಲಾಗುತ್ತಿದೆ, ಆದರೆ ವಿದೇಶದಿಂದ ಬಂದ ಸ್ವಯಂಸೇವP ವಿರುದ್ಧ ವೀಸಾ ಮಾನದಂಡಗಳು ಮತ್ತು ವಿದೇಶಿಯರ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

No comments:

Advertisement