My Blog List

Thursday, June 4, 2020

ಭಾರತದಲ್ಲಿ ಕೊರೋನಾ: ಒಟ್ಟು ಸೋಂಕಿತರ ಸಂಖ್ಯೆ ೨.೧೬ ಲಕ್ಷ, ಸಾವು ೬೦೭೫

ಭಾರತದಲ್ಲಿ ಕೊರೋನಾ:  ಒಟ್ಟು ಸೋಂಕಿತರ ಸಂಖ್ಯೆ .೧೬ ಲಕ್ಷ, ಸಾವು ೬೦೭೫

ನವದೆಹಲಿ: ಒಂದೇ ದಿನದಲ್ಲಿ ಭಾರತದಲ್ಲಿ ,೦೦೦ ಕ್ಕೂ ಹೆಚ್ಚು ಕೊರೋನವೈರಸ್ ಪ್ರಕರಣಗಳು 2020 ಜೂನ್ 04ರ ಗುರುವಾರ ಮೊದಲ ಬಾರಿಗೆ ದಾಖಲಾಗಿದ್ದು, ಕಳೆದ ೨೪ ಗಂಟೆಗಳಲ್ಲಿ ,೩೦೪ ಜನರಿಗೆ ವೈರಸ್ ಸೋಂಕು ಪರೀಕ್ಷಾ ವರದಿ ಪಾಸಿಟಿವ್ ಆಗಿ ಬರುವುದರೊಂದಿಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ .೧೬ ಲಕ್ಷವನ್ನು ದಾಟಿದೆ. ಇದರಲ್ಲಿ ,೦೭೫ ಸಾವುಗಳೂ ಸೇರಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆ ತಿಳಿಸಿತು.

ಭಾರತ ಮತ್ತು ಇತರ ರಾಷ್ಟ್ರಗಳು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಬುಧವಾರ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ಪ್ರಾಯೋಗಿಕ ಪರೀಕ್ಷೆಗಳು ಪುನರಾರಂಭಗೊಳ್ಳಲಿವೆ ಎಂದು ಘೋಷಿಸಿತು. ಸುರಕ್ಷತಾ ಪರಿಶೀಲನೆ ನಡೆಸಲು ಪ್ರಯೋಗಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾಗಿ ಡಬ್ಲ್ಯುಎಚ್‌ಒ ಕಳೆದ ತಿಂಗಳು ಹೇಳಿತ್ತು.

ಪ್ರಯೋಗಗಳನ್ನು ನಡೆಸುವ ವಿಧಾನವನ್ನು ಬದಲಾಯಿಸಲು "ಯಾವುದೇ ಕಾರಣವಿಲ್ಲ" ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗ ತೀರ್ಮಾನಿಸಿದೆ.

ಕೊರೋನವೈರಸ್ ಪ್ರಮುಖ ಅಂಶಗಳು:

). ದೇಶದ ಚೇತರಿಕೆ ಪ್ರಮಾಣ - ಅನಾರೋಗ್ಯದ ವಿರುದ್ಧ ಯಶಸ್ವಿಯಾಗಿ ಹೋರಾಡಿದ ರೋಗಿಗಳ ಸಂಖ್ಯೆ - ಗುರುವಾರ ಬೆಳಗ್ಗೆ ಶೇಕಡಾ ೪೭.೯೯ಕ್ಕೆ ಏರಿದೆ. ಒಟ್ಟು ,೦೪,೧೦೭ ಜನರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತು.

). ಭಾರತದಲ್ಲಿ ಅತಿ ಹೆಚ್ಚು ಕೋವಿಡ್-೧೯ ಪ್ರಕರಣಗಳನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರದಲ್ಲಿ ಬುಧವಾರ ೧೨೨ ಸಾವುನೋವುಗಳೊಂದಿಗೆ ಕೊರೋನವೈರಸ್ ಸಾವುಗಳಲ್ಲಿ ಅತಿ ಹೆಚ್ಚು ಏಕದಿನ ಏರಿಕೆಯನ್ನು ದಾಖಲಿಸಿತು. ರಾಜ್ಯದಲ್ಲಿ ಒಟ್ಟು ಸಾವುಗಳ ಸಂಖ್ಯೆ ,೫೮೭ ಕ್ಕೆ ತಲುಪಿತು. ರಾಜ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಈಗ ೭೪,೮೬೦ಕ್ಕೇ ಏರಿದೆ. ಮಹಾರಾಷ್ಟ್ರದಲ್ಲಿ ಬುಧವಾರ ,೫೬೦ ಹೊಸ ಕೋವಿಡ್ -೧೯ ಪ್ರಕರಣಗಳು ವರದಿಯಾಗಿದ್ದು, ಪೈಕಿ ,೨೭೬ ಪ್ರಕರಣಗಳು ಮುಂಬೈಯಲ್ಲಿ ದಾಖಲಾಗಿವೆ.

). ೨೫ ಸಾವಿರಕ್ಕೂ ಹೆಚ್ಚು ವೈರಸ್ ಪ್ರಕರಣಗಳನ್ನು ಹೊಂದಿರುವ ತಮಿಳುನಾಡು ಎರಡನೇ ಅತಿ ಹೆಚ್ಚು ಪ್ರಕರಣU ರಾಜ್ಯವಾಗಿ ಮುಂದುವರೆದಿದೆ. ಸತತ ನಾಲ್ಕನೇ ದಿನ ರಾಜ್ಯದಲ್ಲಿ ,೦೦೦ ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

). ೨೩,೬೪೫ ಕೊರೋನವೈರಸ್ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರ ರಾಜಧಾನಿ ದೆಹಲಿಯು ದೇಶದಲ್ಲಿ ಮೂರನೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿ ಮುಂದುವರೆದಿದೆ. ರೈಲು, ಬಸ್ ಅಥವಾ ವಿಮಾನದ ಮೂಲಕ ನಗರಕ್ಕೆ ಆಗಮಿಸುವ ವ್ಯಕ್ತಿಯು ಈಗ ಒಂದು ವಾರ ಕಡ್ಡಾಯವಾಗಿ ಮನೆ ಕ್ಯಾರೆಂಟೈನ್ ಮಾಡಬೇಕಾಗುತ್ತದೆ ಎಂದು ದೆಹಲಿ ಸರ್ಕಾರ ಬುಧವಾರ ತಿಳಿಸಿದೆ.

). ಅಸ್ಸಾಂನಲ್ಲಿ ಒಂದೇ ದಿನ ೨೬೯ ಪ್ರಕರಣಗಳು ದಾಖಲಾಗಿದ್ದು, ರಾಜ್ಯದ ಒಟ್ಟು ಪ್ರಕರಣಗಳು ,೮೩೦ ಕ್ಕೆ ಏರಿವೆ. ಅಸ್ಸಾಮಿನಲ್ಲಿ ಶೇಕಡಾ ೯೦ರಷ್ಟು ರೋಗಿಗಳು ರೋಗಲಕ್ಷಣವಿಲ್ಲದ ಅಥವಾ ಸೋಂಕಿನ ಲಕ್ಷಣಗಳು ಇಲ್ಲದವರಾಗಿದ್ದಾರೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.

). ಕಳೆದ ೨೪ ಗಂಟೆಗಳಲ್ಲಿ ತೆಲಂಗಾಣವು ೧೨೯ ಹೊಸ ರೋಗಿಗಳು ಮತ್ತು ಏಳು ಸಾವುಗಳೊಂದಿಗೆ ,೦೦೦ ದಾಟಿದೆ. ಆಸ್ಪತ್ರೆಗಳು ವೈರಸ್ ಹಾಟ್‌ಸ್ಪಾಟ್‌ಗಳಾಗಿ ಬದಲಾಗುತ್ತಿರುವುದು ಒಂದು ಆತಂಕವನ್ನು ಸೃಷ್ಟಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ೩೧ ವೈದ್ಯರು ಮತ್ತು ಮೂವರು ಲ್ಯಾಬ್ ತಂತ್ರಜ್ಞರಿಗೆ  ಕೋವಿಡ್ ಪಾಸಿಟಿವ್ ವರದಿ ಬಂದಿದೆ ಎಂದು ವರದಿಗಳು ಹೇಳಿವೆ.

). ವೈರಸ್‌ನಿಂದ ಹೆಚ್ಚು ಹಾನಿಗೊಳಗಾದ ೧೦ ರಾಷ್ಟ್ರಗಳಲ್ಲಿ ಭಾರತವು ಪ್ರಸ್ತುತ ಏಳನೇ ಸ್ಥಾನದಲ್ಲಿದೆ.

). ಅಮೆರಿಕವು ವಿಶ್ವದಲ್ಲೇ ಕೊರೋನಾ ಸೋಂಕಿನಿಂದ ಹೆಚ್ಚು ಹಾನಿಗೊಳಗಾದ ದೇವಾಗಿದ್ದು ಕಳೆದ ೨೪ ಗಂಟೆಗಳಲ್ಲಿ ೯೧೯ ಕೊರೋನವೈರಸ್ ಸಾವುಗಳನ್ನು ದಾಖಲಿಸಿದೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ ,೦೭,೦೯೯ ಕ್ಕೆ ತಲುಪಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಬುಧವಾರ ವರದಿ ಮಾಡಿದೆ.

). ಜಾಗತಿಕವಾಗಿ, ೬೪,೩೦,೮೦೦ ಜನರು ಹೆಚ್ಚು ಸಾಂಕ್ರಾಮಿಕ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.

೧೦). ಕೊರೋನವೈರಸ್ ಸಾಂಕ್ರಾಮಿಕ ಮೊತ್ತ ಮೊದಲ ಬಾರಿಗೆ ಡಿಸೆಂಬರ್‌ನಲ್ಲಿ ಮಧ್ಯ ಚೀನಾದ ನಗರವಾದ ವುಹಾನ್‌ನಲ್ಲಿ ಕಾಣಿಸಿಕೊಂಡಿತ್ತು.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೬೬,೦೯,೬೬೪, ಸಾವು ,೮೮,೬೧೬

ಚೇತರಿಸಿಕೊಂಡವರು- ೩೧,೯೩,೮೭೪

ಅಮೆರಿಕ ಸೋಂಕಿತರು ೧೯,೦೪,೮೯೪, ಸಾವು ,೦೯,೨೦೪

ಸ್ಪೇನ್ ಸೋಂಕಿತರು ,೮೭,೪೦೬, ಸಾವು ೨೭,೧೨೮

ಇಟಲಿ ಸೋಂಕಿತರು ,೩೩,೮೩೬, ಸಾವು ೩೩,೬೦೧

ಜರ್ಮನಿ ಸೋಂಕಿತರು ,೮೪,೪೯೨, ಸಾವು ,೭೦೧

ಚೀನಾ ಸೋಂಕಿತರು ೮೩,೦೨೨, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೭೯,೮೫೬, ಸಾವು ೩೯,೭೨೮

ಭಾರತ ಸೋಂಕಿತರು ,೧೮,೪೩೭, ಸಾವು ೬೧೦೪

ಅಮೆರಿಕದಲ್ಲಿ ೬೨, ಇರಾನಿನಲ್ಲಿ ೫೯, ಬೆಲ್ಜಿಯಂನಲ್ಲಿ ೨೬, ಇಂಡೋನೇಷ್ಯ ೨೩, ನೆದರ್ ಲ್ಯಾಂಡ್ಸ್‌ನಲ್ಲಿ ೧೩, ರಶ್ಯಾದಲ್ಲಿ ೧೬೯, ಪಾಕಿಸ್ತಾನದಲ್ಲಿ ೮೨, ಮೆಕ್ಸಿಕೋದಲ್ಲಿ ೧೦೯೨ ಒಟ್ಟಾರೆ ವಿಶ್ವಾದ್ಯಂತ ೧೮೨೯ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೦೪,೬೨೮ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement