Monday, June 15, 2020

ರಾಜಧಾನಿಯಲ್ಲಿ ಪುನಃ ದಿಗ್ಬಂಧನ ಇಲ್ಲ: ಕೇಜ್ರಿವಾಲ್

ರಾಜಧಾನಿಯಲ್ಲಿ ಪುನಃ ದಿಗ್ಬಂಧನ ಇಲ್ಲ: ಕೇಜ್ರಿವಾಲ್

ನವದೆಹಲಿ: ಕೊರೋನಾವೈರಸ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಪುನಃ ದಿಗ್ಬಂಧನ (ಲಾಕ್ ಡೌನ್) ಜಾರಿ ಮಾಡಬಹುದು ಎಂಬ ವದಂತಿಗಳನ್ನು ಅಲ್ಲಗಳೆದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 2020 ಜೂನ್ 15ರ ಸೋಮವಾರ ಟ್ವೀಟ್ ಮಾಡಿದರು.

ಕೊರೋನಾ ಸೋಂಕು ಪ್ರಸರಣವನ್ನು ತಡೆಗಟ್ಟಲು ಮಾರ್ಚ್ ೨೫ರಂದು ಜಾರಿಗೊಳಿಸಲಾದ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು  (ಲಾಕ್ ಡೌನ್) ಬಳಿಕ ನಾಲ್ಕು ಬಾರಿ ವಿಸ್ತರಿಸಲಾಗಿತ್ತು. ಪ್ರಸ್ತುತ ಕಂಟೈನ್ ಮೆಂಟ್ ವಲಯಗಳಲ್ಲಿ ಮಾತ್ರ ಜೂನ್ ೩೦ರವರೆಗೆ  ಲಾಕ್‌ಡೌನ್ ಜಾರಿಯಲ್ಲಿ ಇದೆ.

ದೆಹಲಿಯಲ್ಲಿ ಮತ್ತೊಮ್ಮೆ ದಿಗ್ಬಂಧನ ಜಾರಿಯಾಗಬಹುದು ಎಂದು ಹಲವರು ಊಹೆಗಳನ್ನು ಮಾಡುತ್ತಿದ್ದಾರೆ. ಆದರೆ ಅಂತಹ ಯಾವ ಯೋಜನೆಗಳೂ ಇಲ್ಲ ಎಂದು ಕೇಜ್ರಿವಾಲ್ ಟ್ವೀಟಿನಲ್ಲಿ ತಿಳಿಸಿದರು.

ಇದಕ್ಕೆ ಮುನ್ನ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಗರದ ಕೊರೋನಾವೈರಸ್ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ದೆಹಲಿಯ ಸರ್ವ ಪಕ್ಷಗಳ ಸಭೆ ನಡೆಯಿತು.

ದೆಹಲಿಯಲ್ಲಿ ಹಾಸಿಗೆಗಳ ಸಾಮರ್ಥ್ಯ ವರ್ಧನೆ, ಪರೀಕ್ಷೆ ಹೆಚ್ಚಳ ಮತ್ತು ಇತರ ಪ್ರಮುಖ ಉಪಕ್ರಮಗಳನ್ನು ಕೈಗೊಳ್ಳಲು ಕಾರ್‍ಯ ಯೋಜನೆಯೊಂದನ್ನು ರೂಪಿಸಲು ಕೇಂದ್ರ ಮತ್ತು ಆಪ್ ಸರ್ಕಾರ ಒಪ್ಪಿದವು ಎಂದು ದೆಹಲಿ ಸರ್ಕಾರ ಸಭೆಯ ಬಳಿಕ ಹೇಳಿಕೆಯೊಂದರಲ್ಲಿ ತಿಳಿಸಿತು.

ಕೊರೋನಾವೈರಸ್ ಪ್ರಕರಣಗಳನ್ನು ನಿಭಾಯಿಸಲು ಲಾಕ್‌ಡೌನ್ ಮರುಜಾರಿ ಮಾಡುವ ಬಗ್ಗೆ ಯಾವುದೇ ಪಕ್ಷವೂ ಸಭೆಯಲ್ಲಿ ಸಲಹೆ ಮಾಡಲಿಲ್ಲ.

ಕೊರೋನಾ ಬಿಕ್ಕಟ್ಟು ಹೆಚ್ಚುತ್ತಿದ್ದರೂ, ರಾಜ್ಯದಲ್ಲಿ , ಹೊಸದಾಗಿ ದಿಗ್ಬಂಧನ ಜಾರಿಗೊಳಿಸಬಹುದು ಎಂಬ ಊಹಾಪೋಹಗಳನ್ನು ಮಹಾರಾಷ್ಟ್ರ ಸರ್ಕಾರ ಕೂಡಾ ಶುಕ್ರವಾರವೇ ತಳ್ಳಿಹಾಕಿತ್ತು. ಅಂತಹ ಯಾವುದೇ ನಿರ್ಧಾರವನ್ನೂ ಮಾಡಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟ ಪಡಿಸಿದ್ದರು.

ತಿಂಗಳ ಆದಿಯಲ್ಲಿ ಕೇಂದ್ರ ಸರ್ಕಾರವು ಅನ್ ಲಾಕ್ -೧ನ್ನು ಆರಂಭಿಸುವ ಘೋಷಣೆ ಮಾಡಿತ್ತು. ದೇವಾಲಯಗಳು, ಶಾಪಿಂಗ್ ಮಾಲ್‌ಗಳು, ರೆಸ್ಟೋರೆಂಟ್Uಳನ್ನು ಹೊಸ ಮಾರ್ಗಸೂಚಿಯೊಂದಿಗೆ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಪ್ರವಾಸಗಳ ಮೇಲಿನ ನಿರ್ಬಂಧವನ್ನೂ ತೆರವುಗೊಳಿಸಿದ ಕೇಂದ್ರ ಸರ್ಕಾರವು  ಎಲ್ಲ ವಿಧದ ಸಾರಿಗೆ ಪುನರಾಂಭಕ್ಕೂ ಅವಕಾಶ ಕಲ್ಪಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಎರಡು ದಿನಗಳಲ್ಲಿ ರಾಜ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ಹೇಗೆ ಉತ್ತಮವಾಗಿ ನಿಭಾಯಿಸಬಹುದು ಎಂಬ ಬಗ್ಗೆ ಚರ್ಚಿಸಲಿದ್ದಾರೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೮೦,೨೮,೩೨೫, ಸಾವು ,೩೬,೨೭೭ ಚೇತರಿಸಿಕೊಂಡವರು- ೪೧,೪೮,೧೩೦

ಅಮೆರಿಕ ಸೋಂಕಿತರು ೨೧,೬೨,೮೯೬, ಸಾವು ,೧೭,೮೬೫

ಸ್ಪೇನ್ ಸೋಂಕಿತರು ,೯೧,೦೦೮, ಸಾವು ೨೭,೧೩೬

ಇಟಲಿ ಸೋಂಕಿತರು ,೩೬,೯೮೯, ಸಾವು ೩೪,೩೪೫

ಜರ್ಮನಿ ಸೋಂಕಿತರು ,೮೭,೭೦೬, ಸಾವು ,೮೭೩

ಚೀನಾ ಸೋಂಕಿತರು ೮೩,೧೮೧, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೯೫,೮೮೯, ಸಾವು ೪೧,೪೯೮

ಭಾರತ ಸೋಂಕಿತರು ,೩೩,೪೭೫, ಸಾವು ,೫೨೪

ಅಮೆರಿಕದಲ್ಲಿ , ಇರಾನಿನಲ್ಲಿ ೧೧೩, ಬೆಲ್ಜಿಯಂನಲ್ಲಿ , ಇಂಡೋನೇಷ್ಯ ೬೪, ನೆದರ್ ಲ್ಯಾಂಡ್ಸ್‌ನಲ್ಲಿ , ರಶ್ಯಾದಲ್ಲಿ ೧೪೩, ಪಾಕಿಸ್ತಾನದಲ್ಲಿ ೯೭, ಮೆಕ್ಸಿಕೋದಲ್ಲಿ ೨೬೯, ಒಟ್ಟಾರೆ ವಿಶ್ವಾದ್ಯಂತ ,೦೯೬ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೬೯,೯೨೭ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement