My Blog List

Friday, June 12, 2020

ಮುಂಬೈ ಕ್ರಾಫರ್ಡ್ ಮಾರುಕಟ್ಟೆಯಲ್ಲಿ ಬೆಂಕಿ

ಮುಂಬೈ ಕ್ರಾಫರ್ಡ್ ಮಾರುಕಟ್ಟೆಯಲ್ಲಿ ಬೆಂಕಿ

ಮುಂಬೈ: ಬ್ರಿಟಿಷ್ ಕಾಲದ ಮುಂಬೈಯ ಕ್ರಾಫರ್ಡ್ ಮಾರುಕಟ್ಟೆಯಲ್ಲಿ 2020 ಜೂನ್ 11ರ ಗುರುವಾರ ಅಗ್ನಿ ದುರಂತ ಸಂಭವಿಸಿತು. ಆದರೆ ಯಾವುದೇ ಸಾವು ನೋವಿನ ವರದಿಯಾಗಲಿಲ್ಲ.

ಸಂಜೆ ಗಂಟೆ ಸುಮಾರಿಗೆ ಅಗ್ನಿ ದುರಂತ ಸಂಭವಿಸಿತು. ಆರು ಅಗ್ನಿಶಾಮಕ ಎಂಜಿನ್ಗಳು ಮತ್ತು ಮೂರು ಜಂಬೋ ಟ್ಯಾಂಕರುಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿಯನ್ನು ಲೆವೆಲ್ ಮಾದರಿಯ ಬೆಂಕಿ ಎಂಬುದಾಗಿ ವರ್ಗೀಕರಿಸಲಾಯಿತು.

ಮಾರುಕಟ್ಟೆಯಲ್ಲಿ ಹಲವಾರು ಅಂಗಡಿಗಳಿದ್ದು, ನಾಲ್ಕು ವಾಣಿಜ್ಯ ಸ್ಥಳಗಳಿಗೆ ಬೆಂಕಿ ಸೀಮಿತವಾಗಿತ್ತು ಎಂದು ವರದಿಗಳು ಹೇಳಿದವು.

ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಮುಂಬೈ ಅಗ್ನಿಶಾಮಕ ದಳದ ಮುಖ್ಯಸ್ಥ ಪ್ರಭಾತ್ ರಹಂಗ್ಡಾಲೆ ಹೇಳಿದರು.

ಪ್ರಾಚೀನ ಐಕಾನಿಕ್ ಮಾರುಕಟ್ಟೆಯು ಛತ್ರಪತಿ ಶಿವಾಜಿ ಮಹರಾಜ್ ಟರ್ಮಿಸ್ ರೈಲ್ವೇ ನಿಲ್ದಾಣದಿಂದ ನಡೆದು ಹೋಗುವಷ್ಟು ದೂರದಲ್ಲಿದೆ.

No comments:

Advertisement