My Blog List

Friday, June 12, 2020

ಭಾರತದಲ್ಲಿ ಸತತ ಮೂರನೇ ದಿನ ಚೇತರಿಕೆಯ ಮೇಲುಗೈ

ಭಾರತದಲ್ಲಿ ಸತತ ಮೂರನೇ ದಿನ ಚೇತರಿಕೆಯ ಮೇಲುಗೈ

ನವದೆಹಲಿ:  ಭಾರತದಲ್ಲಿ  ಒಂದೇ  ದಿನದಲ್ಲಿ ಗರಿಷ್ಠ 10956 ಸೋಂಕಿನ ಪ್ರಕರಣಗಳು ದಾಖಲಾಗುವುದರೊಂದಿಗೆ 2020 ಜೂನ್  12ರ ಶುಕ್ರವಾರ ಕೊರೋನಾವೈರಸ್ ಸೋಂಕು  ಇದುವರೆಗಿನ  ಎಲ್ಲ ದಾಖಲೆಗಳನ್ನು ಮುರಿಯಿತು.

ಗುರುವಾರ ರಾತ್ರಿ ಒಟ್ಟು ಕೊರೋನಾ ಸೋಂಕಿನ ಪ್ರಕರಣಗಳಲ್ಲಿ ಇಂಗ್ಲೆಂಡನ್ನು ಹಿಂದಕ್ಕೆ ತಳ್ಳಿ ವಿಶ್ವದಲ್ಲಿ ಅತಿಬಾಧಿತ ರಾಷ್ಟ್ರಗಳ ಸಾಲಿನಲ್ಲಿ 4ನೇ ಸ್ಥಾನಕ್ಕೆ ಏರಿಸಿರುವ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 396  ಸಾವುಗಳು ಸಂಭವಿಸಿವೆ.

ಇದರೊಂದಿಗೆ ದೇಶದಲ್ಲಿ ಕೊರೋನಾವೈರಸ್  ಸೋಂಕಿನ ಸಂಖ್ಯೆ 2,97,535ಕ್ಕೆ ಏರಿದೆ.

ಆದರೆ, ಆಶಾದಾಯಕ ಬೆಳವಣಿಗೆಯಲ್ಲಿ ಸತತ ಮೂರನೇ ದಿನವೂ ಭಾರತದಲ್ಲಿ ಸಕ್ರಿಯ ರೋಗಿಗಳ ಸಂಖ್ಯೆಯನ್ನು ಗುಣಮುಖರಾಗಿ ಚೇತರಿಸಿದವರ ಸಂಖ್ಯೆ ಹಿಂದಕ್ಕೆ ಹಾಕಿದೆ.

ಒಟ್ಟು 2,97,535 ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,41,842 ಆಗಿದ್ದರೆ, ಗುಣಮುಖರಾಗಿ ಚೇತರಿಸಿದವರ ಸಂಖ್ಯೆ 1,47,195 ಆಗಿದೆ. ದೇಶದಲ್ಲಿ ಕೊರೋನಾವೈರಸ್ಸಿಗೆ ಬಲಿಯಾದವರ  ಒಟ್ಟು ಸಂಖ್ಯೆ 8,498 ಎಂದು ಕೇಂದ್ರ ಆರೋಗ್ಯ ಸಚಿವಾಲಯದ  ಅಂಕಿಸಂಖ್ಯೆಗಳು ತಿಳಿಸಿವೆ.

ಸುದ್ದಿ ಆಲಿಸಲು ಕೆಳಗೆ ಕ್ಲಿಕ್ ಮಾಡಿರಿ:

No comments:

Advertisement