My Blog List

Thursday, June 25, 2020

ಕೊರೋನಾ: ಸಿಬಿಎಸ್‌ಇ ೧೦ ನೇ ತರಗತಿ ಪರೀಕ್ಷೆ ರದ್ದು

ಕೊರೋನಾ: ಸಿಬಿಎಸ್ ೧೦ ನೇ ತರಗತಿ ಪರೀಕ್ಷೆ ರದ್ದು

ನವದೆಹಲಿ: ಸಿಬಿಎಸ್ ೧೦ ನೇ ತರಗತಿ ಪರೀಕ್ಷೆಯನ್ನು ನಡೆಸುವುದಿಲ್ಲ ಮತ್ತು ೧೨ ನೇ ತರಗತಿಯ ವಿದ್ಯಾರ್ಥಿಗಳಿಗೆ ಪರಿಸ್ಥಿತಿಗಳು ಅನುಕೂಲಕರವಾದ ನಂತರ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಸಾಲಿಸಿಟರ್ ಜನರಲ್  2020 ಜೂನ್  25ರ ಗುರುವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದರು.

೧೨ ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಹಾಜರಾಗಲು ಅಥವಾ ಕಳೆದ ಮೂರು ಪರೀಕ್ಷೆಗಳ ಆಧಾರದ ಮೇಲೆ ಮೌಲ್ಯಮಾಪನ ತೆಗೆದುಕೊಳ್ಳಲು ಆಯ್ಕೆ ಸಿಗುತ್ತದೆ. ಜುಲೈ ೧೫ ರೊಳಗೆ ಮೌಲ್ಯಮಾಪನ ಫಲಿತಾಂಶಗಳು ಹೊರಬರುತ್ತವೆ ಎಂದು ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ಹೇಳಿದರು.

ಆಂತರಿಕ ಮೌಲ್ಯಮಾಪನದ ಸರಿಯಾದ ಯೋಜನೆಯನ್ನು ಕೇಂದ್ರವು ಶುಕ್ರವಾರದೊಳಗೆ ಬಿಡುಗಡೆ ಮಾಡಲಿದೆ. ಸಾಲಿಸಿಟರ್ ಜನರಲ್ ಅವರ ಹೇಳಿಕೆಯ ಬಳಿಕ ಪೀಠವು ವಿಷಯದ ವಿಚಾರಣೆಯನ್ನು ಜೂನ್ ೨೬ ಕ್ಕೆ ಮುಂದೂಡಿತು.

ಯೋಜನೆಯ ಬಗ್ಗೆ ಮಾತನಾಡುತ್ತಾ, ಯೋಜನೆಯನ್ನು ಸ್ಪಷ್ಟವಾಗಿ ವಿವರಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿತು.

* ಮೌಲ್ಯಮಾಪನವು ಭವಿಷ್ಯದ ಕೋರ್ಸ್ಗಳಿಗೆ ಪ್ರವೇಶದ ಆಧಾರವಾಗಿರುತ್ತದೆ, * ಪರಿಸ್ಥಿತಿಗಳು ಅನುಕೂಲಕರವಾಗಿದೆಯೆ ಎಂದು ನಿರ್ಣಯಿಸಲು ಸಮಯ-ಚೌಕಟ್ಟು, * ಭವಿಷ್ಯದಲ್ಲಿ ಅಂತಹ ಪರೀಕ್ಷೆಯನ್ನು ಕೇಂದ್ರ ಮಟ್ಟದಲ್ಲಿ ತೆಗೆದುಕೊಳ್ಳುವ ನಿರ್ಧಾರ ಮತ್ತು ರಾಜ್ಯಗಳಿಗೆ ಬಿಡುವುದಿಲ್ಲ _ ವಿಚಾರಗಳ ಬಗ್ಗೆ ಸ್ಪಷ್ಟತೆ ಇರಬೇಕು ಎಂದು ಹೇಳಿದ ಪೀಠವು, ಎಲ್ಲ ಅನುಮಾನ ತೆರವುಗೊಳಿಸುವ ಹೊಸ ಪ್ರಮಾಣಪತ್ರವನ್ನು ಕೇಂದ್ರ ಸಲ್ಲಿಸಿದ ಬಳಿಕ ಶುಕ್ರವಾರ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.

ಪರೀಕ್ಷೆಗಳನ್ನು ನಡೆಸುವಲ್ಲಿ ವಿಳಂಬವಾಗುವುದರಿಂದ ವಿಶ್ವವಿದ್ಯಾಲಯಗಳ ಪ್ರವೇಶ ಪ್ರಕ್ರಿಯೆಯೊಂದಿಗೆ ಘರ್ಷಣೆಯಾಗುವ ಸಂಭವವಿದೆ, ಆದ್ದರಿಂದ ಯೋಜನೆಯಲ್ಲಿ ಸ್ಪಷ್ಟತೆ ಇರಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು.

ಅನುಕೂಲಕರ ಪರಿಸ್ಥಿತಿಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು. ಆದ್ದರಿಂದ, ತಿಂಗಳ ಬಳಿಕವಾದರೂ ಸರಿ, ಅವರು ತಮ್ಮ ನಿರ್ಧಾರವನ್ನು ಯಾವಾಗ ಮರುಪರಿಶೀಲಿಸುತ್ತಾರೆ ಎಂಬುದನ್ನು ಕೇಂದ್ರವು ಪರಿಗಣಿಸಬೇಕು ಎಂದು ನ್ಯಾಯಾಲಯ ಕೇಂದ್ರಕ್ಕೆ ಸೂಚಿಸಿತು.

ಸಿಬಿಎಸ್ ಮಂಡಳಿ ಪರೀಕ್ಷೆಯಲ್ಲಿ ಮಕ್ಕಳು ಹಾಜರಾಗಬೇಕೆಂದು ಕೆಲವು ಪೋಷಕರು ಸಲ್ಲಿಸಿದ್ದ ಮನವಿಯನ್ನು ಭಾರತದ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಬಾಕಿ ಇರುವ ೧೦ ಮತ್ತು ೧೨ ನೇ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲು ಮತ್ತು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸುವ ಬಗ್ಗೆ ಪರಿಗಣಿಸುವಂತೆ ಸುಪ್ರೀಂಕೋರ್ಟ್ ಜೂನ್ ೧೭ ರಂದು ಸಿಬಿಎಸ್ಇಗೆ ಸೂಚಿಸಿತ್ತು.

ಇದಕ್ಕೂ ಮುನ್ನ ಮಂಗಳವಾರ ಸಿಬಿಎಸ್ ಸುಪ್ರೀಂಕೋರ್ಟಿಗೆ ಉಳಿದ ೧೦ ಮತ್ತು ೧೨ ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವ ಚರ್ಚೆಗಳು ಮುಂದುವರೆದ ಹಂತದಲ್ಲಿವೆ ಮತ್ತು ನಿಟ್ಟಿನಲ್ಲಿ ಅಂತಿಮ ತೀರ್ಮಾನವನ್ನು ಬುಧವಾರದೊಳಗೆ ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿಗಳಾದ .ಎಂ.ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ, ಮತ್ತು ಸಂಜೀವ್ ಖನ್ನಾ ಅರ ಪೀಠಕ್ಕೆ ತಿಳಿಸಿತು.

ಸಿಬಿಎಸ್ ನಿರ್ಧಾರಕ್ಕಾಗಿ ಕಾಯುತ್ತೇವೆ ಎಂದು ಹೇಳಿದ ಪೀಠ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಮಧ್ಯೆ ಸಿಬಿಎಸ್ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ ಕೋವಿಡ್-೧೯ ಸೋಂಕಿಗೆ ಒಳಗಾಗಬಹುದು ಎಂದು ಪೋಷಕರು ಮನವಿಯಲ್ಲಿ ತಿಳಿಸಿದ್ದರು. ವಿದೇಶದಲ್ಲಿನ ಸುಮಾರು ೨೫೦ ಶಾಲೆಗಳ ಸಿಬಿಎಸ್ ೧೦ ಮತ್ತು ೧೨ ನೇ ತರಗತಿಯ ಪರೀಕ್ಷೆಯನ್ನು ಮಂಡಳಿ ರದ್ದುಗೊಳಿಸಿದೆ ಮತ್ತು ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಪ್ರಾಯೋಗಿಕ ಪರೀಕ್ಷೆಗಳು ಅಥವಾ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಅಂಕಗಳನ್ನು ನೀಡಲು ನಿರ್ಧರಿಸಿದೆ ಎಂದೂ ಪೋಷಕರು ನ್ಯಾಯಾಲಯಕ್ಕೆ ತಿಳಿಸಿದರು.

ಕೊರೋನವೈರಸ್ ಲಾಕ್ಡೌನ್ ಕಾರಣ ಸಿಬಿಎಸ್ ಮಂಡಳಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಆದಾಗ್ಯೂ, ಮೇ ೧೮ ರಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಬಾಕಿ ಇರುವ ಬೋರ್ಡ್ ಪರೀಕ್ಷೆಗಳಿಗೆ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು.

No comments:

Advertisement