My Blog List

Wednesday, June 24, 2020

ಆಗಸ್ಟ್ ಎರಡನೇ ವಾರದವರೆಗೆ ರೈಲು ಇಲ್ಲ?

ಆಗಸ್ಟ್  ಎರಡನೇ ವಾರದವರೆಗೆ ರೈಲು ಇಲ್ಲ?

ನವದೆಹಲಿ: ನಿಯಂತ್ರಣಗಳೊಂದಿಗೆ ದೇಶೀ ವಿಮಾನ ಹಾರಾಟ ಆರಂಭವಾಗಿದ್ದರೂ, ಆಗಸ್ಟ್ ಮಧ್ಯದವರೆಗೆ ದೇಶದಲ್ಲಿ ರೈಲು ಸಂಚಾರ ಪುನಾರಂಭವಾಗುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗುತ್ತಿದೆ. ಏಕೆಂದರೆ ಭಾರತೀಯ ರೈಲ್ವೇಯು ಎಲ್ಲ ಟಿಕೆಟ್ಗಳ ಹಣ ಮರುಪಾವತಿ ಮಾಡುವಂತೆ ಎಲ್ಲ ರೈಲ್ವೇ ವಲಯಗಳಿಗೂ ಸುತ್ತೋಲೆ ಕಳುಹಿಸಿದೆ.

ರೈಲ್ವೇ ಸಚಿವಾಲಯವು ಏಪ್ರಿಲ್ ೧೪ ಅಥವಾ ಅದಕ್ಕೆ ಮುನ್ನ ಬುಕ್ ಮಾಡಿದ ಟಿಕೆಟ್ ಗಳನ್ನು ರದ್ದು ಪಡಿಸಿ, ಟಿಕೆಟ್ಗಳಿಗೆ ಪೂರ್ತಿ ಹಣ ಮರುಪಾವತಿ ಮಾಡುವಂತೆ ಎಲ್ಲ ರೈಲ್ವೇ ವಲಯಗಳಿಗೂ ಸೂಚಿಸಿದೆ ಎಂದು ವರದಿಯೊಂದು ಹೇಳಿದೆ.

ಬೇಡಿಕೆಯನ್ನು ಪೂರೈಸಲು ಹೆಚ್ಚು ರೈಲುಗಳನ್ನುವಿಶೇಷರೈಲುಗಳ ಹೆಸರಿನಲ್ಲಿ ಓಡಿಸಬಹುದು ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ. ದೇಶದಲ್ಲಿ ಪ್ರಸ್ತುತ ೨೩೦ ಮೈಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳುವಿಶೇಷಹೆಸರಿನಲ್ಲಿ ಓಡುತ್ತಿವೆ.

ರೈಲ್ವೇಯು ೧೨೦ ದಿನಗಳಿಗೆ ಮುನ್ನ ಮುಂಗಡ ಬುಕ್ಕಿಂಗ್ ಅವಕಾಶ ಕಲ್ಪಿಸಿದೆ. ಪ್ರಸ್ತುತ ನಿಯಮಾವಳಿಗಳ ಪ್ರಕಾರ ಪ್ರಯಾಣಿಕರು ಟಿಕೆಟ್ಗಳನ್ನು ರದ್ದು ಪಡಿಸಬೇಕಾಗಿಲ್ಲ, ರೈಲ್ವೇಯು ರೈಲುಗಳನ್ನು ರದ್ದು ಪಡಿಸಿದರೆ ಪೂರ್ಣ ಹಣ ಮರುಪಾವತಿಯ ಪ್ರಕ್ರಿಯೆ ಆಟೋಮ್ಯಾಟಿಕ್ ಆಗಿ ಆರಂಭವಾಗುತ್ತದೆ.

ರೈಲ್ವೇಯು ಹಿಂದೆ ಎಲ್ಲ ನಿಯಮಿತ ರೈಲುಗಳನ್ನು ಜೂನ್ ೩೦ರವರೆಗೆ ರದ್ದು ಪಡಿಸಿತ್ತು.

No comments:

Advertisement