Sunday, June 28, 2020

ಮಕ್ಕಳಿಗೆ ಆನ್ಲೈನ್ ಶಿಕ್ಷಣ: ಕೇಂದ್ರ ಸರ್ಕಾರ ಆದೇಶ

ಮಕ್ಕಳಿಗೆ ಆನ್ಲೈನ್ ಶಿಕ್ಷಣಕೇಂದ್ರ ಸರ್ಕಾರ ಆದೇಶ

ಬೆಂಗಳೂರು: ಆನ್ಲೈನ್ ಶಿಕ್ಷಣದ ಮಾದರಿ ಸಿದ್ಧಪಡಿಸಲು ರಚಿಸಿದ ತಜ್ಞರ ಸಮಿತಿ ವರದಿ ಆಧರಿಸಿ ರಾಜ್ಯ ಸರ್ಕಾರ ಅಂತಿಮ ಮಾರ್ಗಸೂಚಿ ಹೊರಡಿಸುವರೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೊರಡಿಸಿರುವ ಡಿಜಿಟಲೀಕರಣ ಕುರಿತ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಐಸಿಎಸ್, ಸಿಬಿಎಸ್ ಹಾಗೂ ಅಂತರರಾಷ್ಟ್ರೀಯ ಪಠ್ಯಕ್ರಮ ಬೋಧಿಸುವ ಸಂಸ್ಥೆಗಳು ಆನ್ಲೈನ್ ಶಿಕ್ಷಣ ನೀಡಬಹುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೇಂದ್ರದ ಮಾರ್ಗಸೂಚಿ ಸೂತ್ರಗಳ ಪ್ರಕಾರ, ಪೂರ್ವ ಪ್ರಾಥಮಿಕ ಬೋಧಿಸುವ ಶಿಕ್ಷಣ ಸಂಸ್ಥೆಗಳು ವಾರಕ್ಕೆ ಒಂದು ದಿನ ಗರಿಷ್ಠ ೩೦ ನಿಮಿಷ ಪೋಷಕರ ಜೊತೆ ಆನ್ಲೈನ್ ಸಂವಹನ ಮತ್ತು ಮಾರ್ಗದರ್ಶನ ನೀಡಬಹುದು. ೧ರಿಂದ ೫ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ (ದಿನ ಬಿಟ್ಟು ದಿನ) ಎರಡು ಅವಧಿ ೩೦ರಿಂದ ೪೫ ನಿಮಿಷ ಆನ್ಲೈನ್ ಶಿಕ್ಷಣ ನೀಡಬಹುದು.

೬ರಿಂದ ೮ನೇ ತರಗತಿಯ ಮಕ್ಕಳಿಗೆ ವಾರದಲ್ಲಿ ಐದು ದಿನ ಗರಿಷ್ಠ ಎರಡು ಅವಧಿ ೩೦ರಿಂದ ೪೫ ನಿಮಿಷ ಹಾಗೂ ಮತ್ತು ೧೦ನೇ ತರಗತಿ ಮಕ್ಕಳಿಗೆ ವಾರದಲ್ಲಿ ಐದು ದಿನ ೩೦ರಿಂದ ೪೫ ನಿಮಿಷ ಗರಿಷ್ಠ ನಾಲ್ಕು ಅವಧಿ ಆನ್ಲೈನ್ ಶಿಕ್ಷ ನೀಡಬಹುದು.

ಕೋವಿಡ್ ೧೯ ರೋಗ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಿಯಮಿತ ಶಿಕ್ಷಣಕ್ಕೆ ಪೂರಕವಾಗಿ ಆನ್ಲೈನ್ ಶಿಕ್ಷಣ ನೀಡಬೇಕಾಗಿದೆ. ಹೀಗಾಗಿ, ಶಿಕ್ಷಣ ಸಂಸ್ಥೆಗಳು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಬಾರದು. ಶುಲ್ಕವನ್ನು ವಾರ್ಷಿಕ ಬೋಧನಾ ಶುಲ್ಕದಿಂದಲೇ ಭರಿಸಬೇಕು ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

No comments:

Advertisement