ಗ್ರಾಹಕರ ಸುಖ-ದುಃಖ

My Blog List

Sunday, June 28, 2020

ವಿಶ್ವ: ಕೊರೋನಾ ಸೋಂಕಿನ ಸಂಖ್ಯೆ 1.01 ಕೋಟಿ

ವಿಶ್ವ: ಕೊರೋನಾ ಸೋಂಕಿನ ಸಂಖ್ಯೆ 1.01 ಕೋಟಿ

ನವದೆಹಲಿ: ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂದಿನ ಹಂತ ತುಂಬಾ ಅಪಾಯಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟಡ್ರೋಸ್ ಅಧನಂ ಗೆಬ್ರೆಯೇಸಸ್ 2020 ಜೂನ್ 28ರ ಭಾನುವಾರ ವಿಶ್ವದ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದರು. ಸಾವಿನ ಸಂಖ್ಯೆ ಲಕ್ಷ ದಾಟಿದ್ದು, ಜೂನ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಅವರು ಹೇಳಿದರು.

ಕೊರೊನಾ ಸೋಂಕಿನ ಅಂತ್ಯವನ್ನು ನಾವು ಕಂಡಿಲ್ಲ. ಅಲ್ಲದೆ, ಅದರ ಸಂಪೂರ್ಣ ರೂಪವನ್ನೂ ನೋಡಿಲ್ಲ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಅಲಿ ಮೊಕದಾದ್ ಅಭಿಪ್ರಾಯಪಟ್ಟರು. ಇದು ೧೯೧೮ರಲ್ಲಿ ಸಂಭವಿಸಿ ೫೦ ಕೋಟಿ ನಾಗರಿಕರಿಗೆ ಸೋಂಕು ತಗುಲಿದ ಸ್ಪಾನಿಷ್ ಫ್ಲೂಗಿಂತಲೂ ಅತ್ಯಂತ ಅಪಾಯಕಾರಿ ಎಂದು ಅವರು ಹೇಳಿದರು.

ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಸೋಂಕು ನಂತರ ಯೂರೋಪ್ ರಾಷ್ಟ್ರಗಳು, ಅಮೆರಿಕಕ್ಕೆ ಹರಡಿತು. ನಂತರ ಆರೋಗ್ಯ ಕ್ಷೇತ್ರಗಳಲ್ಲಿ ದುರ್ಬಲವಾಗಿರುವ ಬ್ರೆಜಿಲ್ ಹಾಗೂ ಭಾರತದಂತಹ ರಾಷ್ಟ್ರಗಳನ್ನು ಕಾಡುತ್ತಿದೆ ಎಂದು ಅವರು ನುಡಿದರು.

2020 ಜೂನ್ 28ರ ಭಾನುವಾರ ಸಂಜೆಯ ವೇಳೆಗೆ ಸೋಂಕಿತರ ಸಂಖ್ಯೆ . ಕೋಟಿಗೆ ತಲುಪಿತು. ಸಾವಿನ ಸಂಖ್ಯೆ ಲಕ್ಷ ದಾಟಿತು. ಅಮೆರಿಕಾದಲ್ಲಿ ಮೃತರಾದವರ ಸಂಖ್ಯೆ .೨೮ ಲಕ್ಷಕ್ಕೆ ತಲುಪಿತು.

ವಿಶ್ವ ಕೊರೊನಾ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಅಮೆರಿಕಾ, ಎರಡನೆ ಸ್ಥಾನದಲ್ಲಿ ಬ್ರೆಜಿಲ್ , ಮೂರನೇ ಸ್ಥಾನದಲ್ಲಿ ರಷ್ಯಾ ಇವೆ. ಭಾರತದ ನಂತರದ ಸ್ಥಾನದಲ್ಲಿ ಬ್ರಿಟನ್ ಹಾಗೂ ಸ್ಪೇನ್ ರಾಷ್ಟ್ರಗಳಿವೆ.

ವಿಶ್ಶ್ವಾದ್ಯಂತ ೧೦,೧೨೯,೦೫೪ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.ವೈದ್ಯರ ಚಿಕಿತ್ಸೆ, ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದಾಗಿ ೫೪.೯೩ ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ವಿಶ್ವದಲ್ಲಿ ೪೧.೩೩ ಲಕ್ಷ ಮಂದಿ ವಿವಿಧ ಆಸ್ಪತ್ರೆ ಹಾಗೂ ತಾತ್ಕಾಲಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಪ್ರಕರಣಗಳೂ (೫೦೨,೧೮೯) ಹಾಗೂ ಗುಣಮುಖರಾದವರನ್ನೂ (,೪೯೩,೬೦೧) ಸೇರಿ ಒಟ್ಟು ,೯೯೫,೭೯೦ ಪ್ರಕರಣಗಳನ್ನು ಮುಕ್ತಾಯಗೊಳಿಸಿದ ಪ್ರಕರಣಗಳೆಂದು ಪರಿಗಣಿಸಲಾಗಿದೆ.

ಭಾರತದಲ್ಲಿ ಇಲ್ಲಿಯವರೆಗೆ ೫೩೭,೯೫೭ ಪ್ರಕರಣಗಳು ದಾಖಲಾಗಿವೆಭಾರತದಲ್ಲಿ ಸತ್ತವರ ಸಂಖ್ಯೆ ೧೬,೨೪೭ಕ್ಕೆ ಏರಿದೆ. ಬ್ರಿಟನ್ನಿನಲ್ಲಿ ೩೧೦,೨೫೦ ಪ್ರಕರಣಗಳು ದಾಖಲಾಗಿವೆ. ೪೩,೫೧೪ ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ೨೪೦,೧೩೬ ಪ್ರಕರಣಗಳು ದಾಖಲಾಗಿದ್ದು,೩೪,೭೧೬ ಮಂದಿ ಸಾವನ್ನಪ್ಪಿದ್ದಾರೆಸ್ಪೇನಿನಲ್ಲಿ ೨೯೫,೫೪೯ ಪ್ರಕರಣಗಳು ದಾಖಲಾಗಿವೆ. ಪಾಕಿಸ್ತಾನದಲ್ಲಿ ೨೦೨,೯೫೫ ಪ್ರಕರಣಗಳು ದಾಖಲಾಗಿದ್ದು, ,೧೧೮ ಮಂದಿ ಸಾವನ್ನಪ್ಪಿದ್ದಾರೆ.

No comments:

Advertisement