My Blog List

Friday, June 12, 2020

ಭಾರತದಲ್ಲಿ ಒಂದೇ ದಿನ ೧೦,೦೦೦ ಮೀರಿದ ಸೋಂಕು

ಭಾರತದಲ್ಲಿ ಒಂದೇ ದಿನ ೧೦,೦೦೦ ಮೀರಿದ ಸೋಂಕು

ನವದೆಹಲಿ:  ಭಾರತದಲ್ಲಿ  ಒಂದೇ  ದಿನದಲ್ಲಿ ಗರಿಷ್ಠ ೧೦೯೫೬ ಸೋಂಕಿನ ಪ್ರಕರಣಗಳು ದಾಖಲಾಗುವುದರೊಂದಿಗೆ 2020 ಜೂನ್ 12ರ ಶುಕ್ರವಾರ ಕೊರೋನಾವೈರಸ್ ಸೋಂಕು ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿಯಿತು.

ಗುರುವಾರ ರಾತ್ರಿ ಒಟ್ಟು ಕೊರೋನಾ ಸೋಂಕಿನ ಪ್ರಕರಣಗಳಲ್ಲಿ ಇಂಗ್ಲೆಂಡನ್ನು ಹಿಂದಕ್ಕೆ ತಳ್ಳಿ ವಿಶ್ವದಲ್ಲಿ ಅತಿಬಾಧಿತ ರಾಷ್ಟ್ರಗಳ ಸಾಲಿನಲ್ಲಿ ೪ನೇ ಸ್ಥಾನಕ್ಕೆ ಏರಿರುವ ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ೩೯೬ ಸಾವುಗಳು ಸಂಭವಿಸಿವೆ.

ಇದರೊಂದಿಗೆ ದೇಶದಲ್ಲಿ ಕೊರೋನಾವೈರಸ್ ಸೋಂಕಿನ ಸಂಖ್ಯೆ ,೯೭,೫೩೫ಕ್ಕೆ ಏರಿತು.

ಆದರೆ, ಆಶಾದಾಯಕ ಬೆಳವಣಿಗೆಯಲ್ಲಿ ಸತತ ಮೂರನೇ ದಿನವೂ ಭಾರತದಲ್ಲಿ ಸಕ್ರಿಯ ರೋಗಿಗಳ ಸಂಖ್ಯೆಯನ್ನು ಗುಣಮುಖರಾಗಿ ಚೇತರಿಸಿದವರ ಸಂಖ್ಯೆ ಹಿಂದಕ್ಕೆ ಹಾಕಿದೆ.

ಒಟ್ಟು ,೯೭,೫೩೫ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ,೪೧,೮೪೨ ಆಗಿದ್ದರೆ, ಗುಣಮುಖರಾಗಿ ಚೇತರಿಸಿದವರ ಸಂಖ್ಯೆ ,೪೭,೧೯೫ ಆಗಿದೆ. ದೇಶದಲ್ಲಿ ಕೊರೋನಾವೈರಸ್ಸಿಗೆ ಬಲಿಯಾದವರ  ಒಟ್ಟು ಸಂಖ್ಯೆ ,೪೯೮ ಎಂದು ಕೇಂದ್ರ ಆರೋಗ್ಯ ಸಚಿವಾಲಯದ  ಅಂಕಿಸಂಖ್ಯೆಗಳು ತಿಳಿಸಿವೆ.

"ಹೀಗಾಗಿ, ಇದುವರೆಗೆ ಸುಮಾರು ಶೇಕಡಾ ೪೯.೪೭ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಂಕು ದೃಢಪಟ್ಟ ಒಟ್ಟು ಪ್ರಕರಣಗಳಲ್ಲಿ ವಿದೇಶಿಯರು ಸೇರಿದ್ದಾರೆ.

ಶುಕ್ರವಾರ ಬೆಳಗ್ಗಿನವರೆಗೆ ವರದಿಯಾದ ೩೯೬ ಹೊಸ ಸಾವುಗಳಲ್ಲಿ ಮಹಾರಾಷ್ಟ್ರದಲ್ಲಿ ೧೫೨, ದೆಹಲಿಯಲ್ಲಿ ೧೦೧, ಗುಜರಾತ್ನಲ್ಲಿ ೩೮, ಉತ್ತರಪ್ರದೇಶದಲ್ಲಿ ೨೪, ತಮಿಳುನಾಡಿನಲ್ಲಿ ೨೩, ಹರಿಯಾಣದಲ್ಲಿ ೧೨, ಪಶ್ಚಿಮ ಬಂಗಾಳದಲ್ಲಿ ೧೦, ತೆಲಂಗಾಣದಲ್ಲಿ , ರಾಜಸ್ಥಾನದಲ್ಲಿ ಆರು, ಮಧ್ಯಪ್ರದೇಶ ಮತ್ತು ಪಂಜಾಬ್ನಲ್ಲಿ ತಲಾ ನಾಲ್ಕು, ಬಿಹಾರ ಮತ್ತು ಕರ್ನಾಟಕದಲ್ಲಿ ತಲಾ ಮೂರು, ಆಂಧ್ರಪ್ರದೇಶ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ತಲಾ ಎರಡು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಪ್ರಕರಣಗಳು ದಾಖಲಾಗಿವೆ.

ಒಟ್ಟು ,೪೯೮ ಸಾವುನೋವುಗಳಲ್ಲಿ ,೫೯೦ ಸಾವುಗಳೊಂದಿಗೆ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ, ಗುಜರಾತಿನಲ್ಲಿ ,೩೮೫, ದೆಹಲಿಯಲ್ಲಿ ,೦೮೫, ಪಶ್ಚಿಮ ಬಂಗಾಳದಲ್ಲಿ ೪೪೨, ಮಧ್ಯಪ್ರದೇದಲ್ಲಿ ೪೩೧, ತಮಿಳುನಾಡಿನಲ್ಲಿ ೩೪೯, ರಾಜಸ್ಥಾನದಲ್ಲಿ ೨೬೫ ಮತ್ತು ತೆಲಂಗಾಣದಲ್ಲಿ ೧೬೫ ಸಾವುಗಳು ಸಂಭವಿಸಿವೆ.

ಸಾವಿನ ಸಂಖ್ಯೆ ಆಂಧ್ರಪ್ರದೇಶದಲ್ಲಿ ೮೦, ಕರ್ನಾಟಕದಲ್ಲಿ ೭೨, ಹರಿಯಾಣದಲ್ಲಿ ೬೪ ಮತ್ತು ಪಂಜಾಬ್ನಲ್ಲಿ ೫೯ ಕ್ಕೆ ತಲುಪಿದೆ.

ಕೊರೋನವೈರಸ್ ಕಾಯಿಲೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ೫೨ ಸಾವುಗಳು ಸಂಭವಿಸಿವೆ, ಬಿಹಾರದಲ್ಲಿ ೩೬, ಕೇರಳದಲ್ಲಿ ೧೮, ಉತ್ತರಾಖಂಡದಲ್ಲಿ ೧೫, ಒಡಿಶಾದಲ್ಲಿ ಮತ್ತು ಜಾರ್ಖಂಡ್ ರಾಜ್ಯದಲ್ಲಿ ಸಾವುಗಳು ಸಂಭವಿಸಿವೆ.

ಛತ್ತೀಸ್ಗಢ, ಅಸ್ಸಾಂ ಮತ್ತು ಹಿಮಾಚಲ ಪ್ರದೇಶಗಳಲ್ಲಿ ತಲಾ ಕೊರೋನಾ ಸಾವುಗಳು ಸಂಭವಿಸಿವೆ. ಚಂಡೀಗಢದಲ್ಲಿ , ಪುದುಚೇರಿಯಲ್ಲಿ , ಮೇಘಾಲಯ, ತ್ರಿಪುರ ಮತ್ತು ಲಡಾಖ್ ತಲಾ ಒಂದು ಸಾವು ಸಂಭವಿಸಿದೆ ಎಂದು ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಶೇಕಡಾ ೭೦ ರಷ್ಟು ಸಾವುಗಳು ಸಹ ಸಮಸ್ಯೆಗಳಿಂದಗಿ ಸಂಭವಿಸಿವೆ ಎಂದು ಸಚಿವಾಲಯದ ವೆಬ್ಸೈಟ್ ಹೇಳಿದೆ.

ದೇಶದಲ್ಲಿ ಅತಿ ಹೆಚ್ಚು ಸೋಂಕು ದೃಢಪಟ್ಟ ಪ್ರಕರಣಗಳು ಮಹಾರಾಷ್ಟ್ರದಿಂದ ವರದಿಯಾಗಿದ್ದು ರಾಜ್ಯದಲ್ಲಿ ೯೭,೬೪೮ ಪ್ರಕರಣಗಳು ದಾಖಲಾಗಿವೆ. ಬಳಿಕದ ಸ್ಥಾನದಲ್ಲಿ ತಮಿಳುನಾಡು (೩೮,೭೧೬), ದೆಹಲಿ (,೬೮೭), ಗುಜರಾತ್ (೨೨,೦೩೨), ಉತ್ತರ ಪ್ರದೇಶ (೧೨,೦೮೮), ರಾಜಸ್ಥಾನ (೧೧,೮೩೮) ಮತ್ತು ಮಧ್ಯಪ್ರದೇಶ (೧೦,೨೪೧) ಇವೆ.

ಕೋವಿಡ್-೧೯ ಪ್ರಕರಣಗಳ ಸಂಖ್ಯೆ ಪಶ್ಚಿಮ ಬಂಗಾಳದಲ್ಲಿ ,೭೬೮, ಕರ್ನಾಟಕದಲ್ಲಿ ,೨೪೫, ಬಿಹಾರದಲ್ಲಿ ,೯೮೩ ಮತ್ತು ಹರಿಯಾಣದಲ್ಲಿ ,೯೬೮ಕ್ಕೆ ಏರಿದೆ.

ಇದು ಆಂಧ್ರಪ್ರದೇಶದಲ್ಲಿ ,೪೨೯, ಜಮ್ಮು ಮತ್ತು ಕಾಶ್ಮೀರದಲ್ಲಿ ,೫೭೪, ತೆಲಂಗಾಣದಲ್ಲಿ ,೩೨೦ ಮತ್ತು ಒಡಿಶಾದಲ್ಲಿ ,೩೮೬ ಕ್ಕೆ ಏರಿದೆ.

ಅಸ್ಸಾಂನಲ್ಲಿ ಇದುವರೆಗೆ ,೩೧೯ ಕೊರೋನಾವೈರಸ್ ಪ್ರಕರಣಗಳು ವರದಿಯಾಗಿದ್ದರೆ, ಪಂಜಾಬ್ನಲ್ಲಿ ,೮೮೭ ಪ್ರಕರಣಗಳಿವೆ. ಕೇರಳದಲ್ಲಿ ಒಟ್ಟು ,೨೪೪ ಜನರು ಮತ್ತು ಉತ್ತರಾಖಂಡದಲ್ಲಿ ,೬೪೩ ಜನರು ಸೋಂಕಿಗೆ ಒಳಗಾಗಿದ್ದಾರೆ.

ಜಾರ್ಖಂಡ್ನಲ್ಲಿ ,೫೯೯ ಪ್ರಕರಣಗಳು ದಾಖಲಾಗಿದ್ದರೆ ಛತ್ತೀಸ್ಗಢದಿಂದ ,೩೯೮, ತ್ರಿಪುರಾದಿಂದ ೯೧೩, ಹಿಮಾಚಲ ಪ್ರದೇಶದಿಂದ ೪೭೦, ಗೋವಾದಿಂದ ೪೧೭, ಮಣಿಪುರದಿಂದ ೩೬೬ ಮತ್ತು ಚಂಡೀಗಢದಿಂದ ೩೩೨ ಪ್ರಕರಣಗಳು ವರದಿಯಾಗಿವೆ.

ಪುದುಚೇರಿಯಲ್ಲಿ ೧೫೭ ಕೋವಿಡ್-೧೯ ಪ್ರಕರಣಗಳು, ಲಡಾಖ್ನಲ್ಲಿ ೧೩೫, ನಾಗಾಲ್ಯಾಂಡಿನಲ್ಲಿ ೧೨೮, ಮಿಜೋರಾಂನಲ್ಲಿ ೧೦೨, ಅರುಣಾಚಲ ಪ್ರದೇಶದಲ್ಲಿ ೬೧, ಮೇಘಾಲಯದಲ್ಲಿ ೪೪, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇದುವರೆಗೆ ೩೮ ಸೋಂಕುಗಳು ದಾಖಲಾಗಿವೆ.

ಸಿಕ್ಕಿಂನಲ್ಲಿ ೧೪ ಪ್ರಕರಣಗಳು ವರದಿಯಾಗಿದ್ದರೆ, ದಾದರ್ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯುಗಳಲ್ಲಿ ಒಟ್ಟಾಗಿ ೩೦ ಸೋಂಕುಗಳು ವರದಿಯಾಗಿವೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೭೬,೩೮,೧೪೮, ಸಾವು ,೨೪,೭೮೦ ಚೇತರಿಸಿಕೊಂಡವರು- ೩೮,೬೬,೪೮೮

ಅಮೆರಿಕ ಸೋಂಕಿತರು ೨೦,೯೨,೧೩೨, ಸಾವು ,೧೬,೧೦೬

ಸ್ಪೇನ್ ಸೋಂಕಿತರು ,೮೯,೭೮೭, ಸಾವು ೨೭,೧೩೬

ಇಟಲಿ ಸೋಂಕಿತರು ,೩೬,೧೪೨, ಸಾವು ೩೪,೧೬೭

ಜರ್ಮನಿ ಸೋಂಕಿತರು ,೮೬,೯೨೦, ಸಾವು ,೮೫೩

ಚೀನಾ ಸೋಂಕಿತರು ೮೩,೦೬೪, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೯೨,೯೫೦, ಸಾವು ೪೧,೪೮೧

ಭಾರತ ಸೋಂಕಿತರು ,೦೧,೫೭೯, ಸಾವು ,೫೫೩

ಅಮೆರಿಕದಲ್ಲಿ ೭೨, ಇರಾನಿನಲ್ಲಿ ೭೫, ಬೆಲ್ಜಿಯಂನಲ್ಲಿ ೧೦, ಇಂಡೋನೇಷ್ಯ ೪೮, ನೆದರ್ ಲ್ಯಾಂಡ್ಸ್ನಲ್ಲಿ , ರಶ್ಯಾದಲ್ಲಿ ೧೮೩, ಪಾಕಿಸ್ತಾನದಲ್ಲಿ ೧೦೭, ಮೆಕ್ಸಿಕೋದಲ್ಲಿ ೫೮೭, ಒಟ್ಟಾರೆ ವಿಶ್ವಾದ್ಯಂತ ,೬೯೪ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೪೯,೭೬೭ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement