ದೆಹಲಿ: ನಾಲ್ವರಲ್ಲಿ ಒಬ್ಬರಿಗೆ ಕೋರೋನಾವೈರಸ್
ನವದೆಹಲಿ: ಸರ್ಕಾರ ನಡೆಸಿದ ವಿನೂತನ ಸಮೀಕ್ಷೆಯಲ್ಲಿ ೨೧,೩೮೭ ಮಾದರಿಗಳಲ್ಲಿ ಶೇಕಡಾ ೨೩.೪೮ರಷ್ಟು ಮಾದರಿಗಳಲ್ಲಿ ಕೋವಿಡ್-೧೯ ಪ್ರತಿಕಾಯಗಳು ಕಂಡುಬರುವುದರೊಂದಿಗೆ ದೆಹಲಿಯ ನಾಲ್ವರಲ್ಲಿ ಒಬ್ಬರಿಗೆ ಕೊರೋನಾವೈರಸ್ ಸೋಂಕು ಬಾಧಿಸಿರುವುದು ದೃಢಪಟ್ಟಿದೆ. ಆದರೆ ಬಹುತೇಕ ಮಂದಿ ರೋಗಲಕ್ಷಣ ರಹಿತರಾಗಿದ್ದಾರೆ ಎಂಬುದು ಖಚಿತ ಪಟ್ಟಿದೆ ಎಂದು ಸಮೀಕ್ಷೆ 2020 ಜುಲೈ 21ರ ಮಂಗಳವಾರ ಹೇಳಿತು.
ಸೋಂಕು ದೃಢಪಟ್ಟಿರುವ ಸಂಖ್ಯೆಗಿಂತ ಅಧಿಕ ಪ್ರಮಾಣದಲ್ಲಿ ಸೋಂಕು ಹರಡಿದೆ ಎಂಬುದನ್ನು ಸಮೀಕ್ಷೆ ಸ್ಪಷ್ಟ ಪಡಿಸಿದೆ ಎಂದು ಅದು ಹೇಳಿತು.
ದೆಹಲಿಯಲ್ಲಿ ಈವರೆಗೆ ೧,೨೩,೭೪೭ ಕೊರೋನಾವೈರಸ್ ಸೋಂಕಿನ ಪ್ರಕರಣUಳು ದಾಖಲಾಗಿವೆ. ಇದು ನಗರದ ೧.೯೮ ಕೋಟಿ (೧೯.೮ ಮಿಲಿಯನ್)
ಜನಸಂಖ್ಯೆಯ ಶೇಕಡಾ ೧ರಷ್ಟು ಆಗುತ್ತದೆ.
ಸಮೀಕ್ಷೆಯ ಪ್ರಕಾರ ಕೋವಿಡ್-೧೯ ಪ್ರತಿಕಾಯಗಳು ಪತ್ತೆಯಾಗಿರುವ ಶೇಕಡಾ ೨೩.೪೪ರ ಪ್ರಮಾಣಕ್ಕೆ ಜನಸಂಖ್ಯೆಯನ್ನು ಅನ್ವಯಿಸಿದರೆ ನಗರದಲ್ಲಿ ಕೋವಿಡ್-ಸೋಂಕಿಗೆ ಒಳಗಾಗಿರುವವರ ಸಂಖ್ಯೆ ೪೬.೫೦ ಲಕ್ಷದಷ್ಟು
(೪.೬೫ ಮಿಲಿಯನ್)
ಆಗುತ್ತದೆ. ಅಂದರೆ ಬಹುತೇಕ ಸೋಂಕಿತರು ರೋಗ ಲಕ್ಷಣ ರಹಿತರಾಗಿದ್ದಾರೆ ಎಂಬುದನ್ನು ಸಮೀಕ್ಷೆ ಸೂಚಿಸುತ್ತದೆ.
ಹಲವಾರು ಪ್ರದೇಶಗಳಲ್ಲಿ ಜನ ನಿಬಿಡತೆ
ಹೆಚ್ಚಿರುವ ದೆಹಲಿಯಲ್ಲಿ ಶೇಕಡಾ ೨೩.೪೮ ಎಂಬುದು ಸಣ್ಣ ಸಂಖ್ಯೆ. ಆದರೂ ಗಮನಾರ್ಹ ಸಂಖ್ಯೆಯ ಜನರು ಇನ್ನೂ ಅಪಾಯದ ಅಂಚಿನಲ್ಲಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಆದ್ದರಿಂದ ಸುರಕ್ಷತೆಗಾಗಿ ಕಠಿಣ ಕ್ರಮಗಳ ಅನುಸರಣೆ ಅಗತ್ಯ ಎಂದು ಸಮೀಕ್ಷೆ ಹೇಳಿದೆ.
ಈ ಮಾದರಿಯ ಸಮೀಕ್ಷೆ ನಡೆಸಿದ್ದು ಇದು ಭಾರತದಲ್ಲೇ ಪ್ರಥಮ. ರೋಗಾಣುವನ್ನು ಇನ್ನೂ ಚೆನ್ನಾಗಿ ಅರ್ಥೈಸಿಕೊಳ್ಳುವಲ್ಲಿ ಇದು ನಿರ್ಣಾಯಕ ಕೂಡಾ ಎಂದು ತಜ್ಞರು ಹೇಳಿದ್ದಾರೆ.
ಜೂನ್ ತಿಂಗಳಿಗೆ ಹೋಲಿಸಿದರೆ, ಸೋಂಕಿನ ಸಂಖ್ಯೆ ಕಡಿಮೆಯಾಗುವುದರೊಂದಿಗೆ ದೆಹಲಿ ಸ್ವಲ್ಪ ನಿರಾಳವಾಗಿ ಉಸಿರಾಡಿದೆ.ಕಳೆದೆರಡು ವಾರಗಳಲ್ಲಿ ದೆಹಲಿಯಲ್ಲಿ ಪ್ರತಿದಿನ ೧,೨೦೦ರಿಂದ ೧೬೦೦ರಷ್ಟು ಹೊಸ ಪ್ರಕರಣಗಳು ವರದಿಯಾಗಿದ್ದವು. ಆದರೆ ಸೋಮವಾರ ನಗರದಲ್ಲಿ ಕೇವಲ ೯೫೪ ಪ್ರಕರಣಗಳು ವರದಿಯಾಗಿವೆ. ನಗರzಲ್ಲಿ ಕೋವಿಡ್ ಸಾವಿನ ಸಂಖ್ಯೆಯೂ ತಗ್ಗಿದೆ.
No comments:
Post a Comment