Friday, July 17, 2020

ಭಾರತ: ಒಂದೇ ದಿನ ೩೫,೦೦೦ ಸೋಂಕು, ೧೦ ಲಕ್ಷ ಕೋವಿಡ್ ಪ್ರಕರಣ

ಭಾರತ: ಒಂದೇ ದಿನ ೩೫,೦೦೦ ಸೋಂಕು, ೧೦ ಲಕ್ಷ ಕೋವಿಡ್ ಪ್ರಕರಣ, ಚೇತರಿಸಿದವರು .೩೬ ಲಕ್ಷ

ನವದೆಹಲಿ: ದಾಖಲೆ ಪ್ರಮಾಣದ ಒಂದೇ ದಿನದ ಏರಿಕೆಯಲ್ಲಿ ೩೪,೯೫೬ ಹೊಸ ಕೋವಿಡ್-೧೯ ಪ್ರಕರಣಗಳು ಪ್ರಕರಣಗಳು ದಾಖಲಾಗಿದ್ದು, ಭಾರತದ ಕೊರೋನಾ ಪ್ರಕರಣಗಳ ಸಂಖ್ಯೆ 2020 ಜುಲೈ 17ರ ಶುಕ್ರವಾರ ಹತ್ತು ಲಕ್ಷ ದಾಟಿತು.

ಕೋವಿಡ್ ಪ್ರಕರಣಗಳ ಸಂಖ್ಯೆ ಲಕ್ಷ ದಾಟಿದ ಕೇವಲ ಮೂರು ದಿನಗಳ ಬಳಿಕ ಅದು ೧೦ ಲಕ್ಷವನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳು ತಿಳಿಸಿದವು.

ದೇಶದ ಒಟ್ಟು ಕೊರೋನವೈರಸ್ ಪ್ರಕರಣಗಳ ಸಂಖ್ಯೆ ೧೦,೦೩,೮೩೨ ಕ್ಕೆ ಏರಿದರೆ, ಸಾವಿನ ಸಂಖ್ಯೆ ೨೫,೬೦೨ ಕ್ಕೆ ಏರಿದೆ. ಒಂದು ದಿನದಲ್ಲಿ ಅತಿ ಹೆಚ್ಚು ಅಂದರೆ ೬೮೭ ಸಾವುಗಳು ದಾಖಲಾಗಿವೆ ಎಂದು ಶುಕ್ರವಾರ ಬೆಳಿಗ್ಗೆ ಗಂಟೆಗೆ ನವೀಕರಿಸಲಾದ ಮಾಹಿತಿ ಹೇಳಿತು.

ಕಳೆದ ೨೪ ಗಂಟೆಗಳಲ್ಲಿ ಒಟ್ಟು ೨೨,೯೪೨ ಜನರು ಚೇತರಿಸಿಕೊಂಡಿದ್ದು, ಚೇತರಿಕೆ ಕೂಡಾ ಏಕದಿನದಲ್ಲಿ ಅತ್ಯಂತ ಹೆಚ್ಚು ಚೇತರಿಕೆಯ ದಾಖಲೆ ನಿರ್ಮಿಇಸಿದೆ. ಸಂಪೂರ್ಣ ಗುಣಮುಖರಾಗಿ ಚೇತರಿಸಿದವರ ಒಟ್ಟು ಪ್ರಕರಣಗಳ ಸಂಖ್ಯೆ ,೩೫,೭೫೬ಕ್ಕೆ ಏರಿದೆ. ಪ್ರಸ್ತುತ ,೪೨,೪೭೩ ಸಕ್ರಿಯ ಕೋವಿಡ್-೧೯ ಪ್ರಕರಣಗಳಿವೆ.

"ಹೀಗಾಗಿ, ಇದುವರೆಗೆ ಸುಮಾರು ೬೩.೩೩ ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸತತ ಆರನೇ ದಿನ ೨೮,೦೦೦ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಕಳೆದ ೨೪ ಗಂಟೆಗಳಲ್ಲಿ ವರದಿಯಾದ ೬೮೭ ಸಾವುಗಳಲ್ಲಿ ಮಹಾರಾಷ್ಟ್ರದಿಂದ ೨೬೬, ಕರ್ನಾಟಕದಿಂದ ೧೦೪,  ತಮಿಳುನಾಡಿನಿಂದ ೬೯, ದೆಹಲಿಯಿಂದ ೫೮, ಆಂಧ್ರಪ್ರದೇಶದಿಂದ ೪೦, ಉತ್ತರಪ್ರದೇಶದಿಂದ ೩೪, ಪಶ್ಚಿಮ ಬಂಗಾಳದಿಂದ ೨೩, ಬಿಹಾರದಿಂದ ೧೭, ಜಮ್ಮು ಮತ್ತು ಕಾಶ್ಮೀರದಿಂz ೧೬, ತೆಲಂಗಾಣ ಮತ್ತು ಗುಜರಾತ್ನಿಂದ ತಲಾ ೧೦ ಮತ್ತು ಪಂಜಾಬ್ನಿಂದ ಒಂಬತ್ತು ಸಾವುಗಳು ವರದಿಯಾಗಿವೆ.

ರಾಜಸ್ಥಾನದಲ್ಲಿ , ಮಧ್ಯಪ್ರದೇಶದಲ್ಲಿ , ಜಾರ್ಖಂಡ್ನಲ್ಲಿ , ಹರಿಯಾಣದಲ್ಲಿ , ಅಸ್ಸಾಂ, ಕೇರಳ ಮತ್ತು ಒಡಿಶಾ ರಾಜ್ಯಗಳಲ್ಲಿ ತಲಾ ಸಾವು ಸಂಭವಿಸಿದರೆ, ಛತ್ತೀಸ್ಗಢ, ಗೋವಾ ಮತ್ತು ಪುದುಚೇರಿಯಲ್ಲಿ ತಲಾ ಎರಡು ಸಾವು ದಾಖಲಾಗಿವೆ.  

No comments:

Advertisement