My Blog List

Saturday, July 18, 2020

ಭಾರತದ ಕೊರೋನಾ ಸಂಖ್ಯೆ ೧೦,೩೮,೭೧೬, ಚೇತರಿಕೆ ೬,೫೩,೭೫೦

ಭಾರತದ ಕೊರೋನಾ ಸಂಖ್ಯೆ ೧೦,೩೮,೭೧೬,
ಚೇತರಿಕೆ ,೫೩,೭೫೦

ನವದೆಹಲಿ: ಒಂದೇ ದಿನದಲ್ಲಿ ೩೪,೮೮೪ ಜನರಿಗೆ ಹೊಸದಾಗಿ ಕೊರೋನಾವೈರಸ್ ಸೋಂಕು ತಗಲುವುದರೊಂದಿಗೆ, ಭಾರತದ ಕೋವಿಡ್ ೧೯ ಪ್ರಕರಣಗಳ ಸಂಖ್ಯೆ 2020 ಜುಲೈ 18ರ ಶನಿವಾರ ೧೦,೩೮,೭೧೬ಕ್ಕೆ ಏರಿತು. ಆದರೆ ಇದೇ ವೇಳೆಗೆ ಚೇತರಿಸುವವರ ಸಂಖ್ಯೆಯೂ ಗಣನೀಯವಾಗಿ ಏರಿದ್ದು ಒಟ್ಟು ಸೋಂಕಿತರ ಪೈಕಿ ,೫೩,೭೫೦ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

ಒಂದೇ ದಿನದಲ್ಲಿ ೬೭೧ ಮಂದಿ ಸಾವನ್ನಪ್ಪುವುದರೊಂದಿಗೆ ಕೋವಿಡ್-೧೯ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ ೨೬,೨೭೩ಕ್ಕೆ ಏರಿಕೆಯಾಗಿದೆ ಎಂದು ಶನಿವಾರ ಬೆಳಗ್ಗೆ ಗಂಟೆಗೆ ನವೀಕರಿಸಲಾಗಿರುವ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ.

ಪ್ರಸ್ತುತ, ದೇಶದಲ್ಲಿ ,೫೮,೬೯೨ ಸಕ್ರಿಯ ಪ್ರಕರಣಗಳಿವೆ. ಚೇತರಿಸಿದವರ ಸಂಖ್ಯೆ ಏರುವುದರೊಂದಿಗೆ ಚೇತರಿಕೆಯ ಪ್ರಮಾಣ ಶೇಕಡಾ ೬೨.೯೪ಕ್ಕೇ ಏರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ಕೋವಿಡ್- ೧೯ ಪ್ರಕರಣಗಳ ಸಂಖ್ಯೆ ೩೦,೦೦೦ ಕ್ಕಿಂತ ಹೆಚ್ಚಾಗಿರುವುದು ಶನಿವಾರ ಸತತ ಮೂರನೇ ದಿವಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪ್ರಕಾರ, ಜುಲೈ ೧೭ ರವರೆಗೆ ಒಟ್ಟು ,೩೪,೩೩,೭೪೨ ಮಾದರಿಗಳನ್ನು ಕೊರೋನಾ ಸಲುವಾಗಿ ಪರೀಕ್ಷಿಸಲಾಗಿದ್ದು, ,೬೧,೦೨೪ ಮಾದರಿಗಳನ್ನು ಶುಕ್ರವಾರ ಒಂದೇ ದಿನ ಪರೀಕ್ಷಿಸಲಾಗಿದೆ.

ಕಳೆದ ೨೪ ಗಂಟೆಗಳಲ್ಲಿ ವರದಿಯಾದ ೬೭೧ ಸಾವುಗಳಲ್ಲಿ ಮಹಾರಾಷ್ಟ್ರದಿಂದ ೨೫೮, ಕರ್ನಾಟಕದಿಂದ ೧೧೫,  ತಮಿಳುನಾಡಿನಿಂದ ೭೯, ಆಂಧ್ರಪ್ರದೇಶದಿಂದ ೪೨, ಉತ್ತರಪ್ರದೇಶದಿಂದ ೩೮, ಪಶ್ಚಿಮ ಬಂಗಾಳ ಮತ್ತು ದೆಹಲಿಯಿಂದ ತಲಾ ೨೬, ಗುಜರಾತ್‌ನಿಂದ ತಲಾ ೧೭, ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬಿನಿಂದ ತಲಾ , ಮತ್ತು ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದ ತಲಾ ಪ್ರಕರಣಗಳು ವರದಿಯಾಗಿವೆ.

ತೆಲಂಗಾಣದಲ್ಲಿ , ಹರಿಯಾಣದಲ್ಲಿ , ಜಾರ್ಖಂಡ್, ಬಿಹಾರ ಮತ್ತು ಒಡಿಶಾದಲ್ಲಿ ತಲಾ , ಅಸ್ಸಾಂ ಮತ್ತು ಪುದುಚೇರಿಯಲ್ಲಿ ತಲಾ , ಛತ್ತೀಸ್‌ಗಢ ಮತ್ತು ಗೋವಾ ತಲಾ ,  ಕೇರಳ ಮತ್ತು ಉತ್ತರಾಖಂಡ ತಲಾ ಸಾವುಗಳನ್ನು ದಾಖಲಿಸಿವೆ.

ಈವರೆಗೆ ವರದಿಯಾದ ಒಟ್ಟು ೨೬,೨೭೩ ಸಾವುಗಳಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ೧೧,೪೫೨ ಸಾವುಗಳು ಸಂಭವಿಸಿವೆ. ದೆಹಲಿಯಲ್ಲಿ ,೫೭೧, ತಮಿಳುನಾಡು ,೩೧೫, ಗುಜರಾತ್ ,೧೦೬, ಕರ್ನಾಟಕ ,೧೪೭, ಉತ್ತರ ಪ್ರದೇಶ ,೦೮೪, ಪಶ್ಚಿಮ ಬಂಗಾಳ ,೦೪೯, ಮಧ್ಯಪ್ರದೇಶ ೬೯೭ ಮತ್ತು ರಾಜಸ್ಥಾನ ೫೪೬ ಸಾವುಗಳು ಸಂಭವಿಸಿವೆ.

ಆಂಧ್ರಪ್ರದೇಶದಲ್ಲಿ ೫೩೪, ತೆಲಂಗಾಣದಲ್ಲಿ ೪೦೩, ಹರಿಯಾಣದಲ್ಲಿ ೩೨೭, ಪಂಜಾಬ್‌ನಲ್ಲಿ ೨೩೯, ಜಮ್ಮು ಮತ್ತು ಕಾಶ್ಮೀರದಲ್ಲಿ ೨೩೧, ಬಿಹಾರದಲ್ಲಿ ೨೦೧, ಒಡಿಶಾದಲ್ಲಿ ೮೩, ಉತ್ತರಾಖಂಡ ಮತ್ತು ಅಸ್ಸಾಂನಲ್ಲಿ ತಲಾ ೪೬, ಜಾರ್ಖಂಡ್‌ನಲ್ಲಿ ೪೬, ಕೇರಳದಲ್ಲಿ ೩೮ ಜನರು ಕೊರೋನಾಕ್ಕೆ ಬಲಿಯಾಗಿದ್ದಾರೆ.

ಪುದುಚೇರಿಯಲ್ಲಿ ೨೫ ಸಾವುಗಳು, ಛತ್ತೀಸ್ ಗಢದಲ್ಲಿ ೨೩, ಗೋವಾ ೨೧, ಹಿಮಾಚಲ ಪ್ರದೇಶ ಮತ್ತು ಚಂಡೀಗಢದಲ್ಲಿ ೧೧, ಅರುಣಾಚಲ ಪ್ರದೇಶ ಮತ್ತು ತ್ರಿಪುರದಲ್ಲಿ ತಲಾ , ಮೇಘಾಲಯ, ದಾದ್ರಾ ಹಾಗೂ ನಗರ ಹವೇಲಿ ಮತ್ತು ದಮನ್ ಹಾಗೂ ದಿಯುನಲ್ಲಿ ತಲಾ ಸಾವುಗಳು ದಾಖಲಾಗಿವೆ.

ಶೇಕಡಾ ೭೦ ರಷ್ಟು ಸಾವುಗಳು ಸಹ ಆರೋಗ್ಯ ಸಮಸ್ಯೆಗಳಿಂದಾಗಿ ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ಒತ್ತಿಹೇಳಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ,೯೨,೫೮೯ ಪ್ರಕರಣಗಳು ದಾಖಲಾಗಿದ್ದು, ತಮಿಳುನಾಡಿನಲ್ಲಿ ,೬೦,೯೦೭, ದೆಹಲಿಯಲ್ಲಿ ,೨೦,೧೦೭, ಕರ್ನಾಟಕದಲ್ಲಿ ೫೫,೧೧೫, ಗುಜರಾತಿನಲ್ಲಿ ೪೬,೪೩೦, ಉತ್ತರ ಪ್ರದೇಶದಲ್ಲಿ ೪೫,೧೬೩ ಮತ್ತು ತೆಲಂಗಾಣದಲ್ಲಿ ೪೨,೪೯೬ ಪ್ರಕರಣಗಳು ದಾಖಲಾಗಿವೆ.

ಆಂಧ್ರಪ್ರದೇಶದಲ್ಲಿ ೪೦,೬೪೬, ಪಶ್ಚಿಮ ಬಂಗಾಳದಲ್ಲಿ ೩೮,೦೧೧, ರಾಜಸ್ಥಾನದಲ್ಲಿ ೨೭,೭೮೯, ಹರಿಯಾಣದಲ್ಲಿ ೨೪,೭೯೭, ಬಿಹಾರದಲ್ಲಿ ೨೩,೫೮೯ ಮತ್ತು ಮಧ್ಯಪ್ರದೇಶದಲ್ಲಿ ೨೧,೦೮೧ ಕೊರೋನಾ ಪ್ರಕರಣಗಳು ವರದಿಯಾಗಿವೆ.

ಅಸ್ಸಾಂನಲ್ಲಿ ೨೦,೬೪೬ ಸೋಂಕುಗಳು, ಒಡಿಶಾ ೧೬,೧೧೦ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ೧೨,೭೫೭ ಸೋಂಕುಗಳು ಕಂಡುಬಂದಿವೆ. ಕೇರಳದಲ್ಲಿ ಇದುವರೆಗೆ ೧೧,೦೬೬ ಕೊರೊನಾವೈರಸ್ ಸೋಂಕುಗಳು ವರದಿಯಾಗಿದ್ದರೆ, ಪಂಜಾಬ್‌ನಲ್ಲಿ ,೪೪೨ ಪ್ರಕರಣಗಳು ದಾಖಲಾಗಿವೆ.

ಛತ್ತೀಸ್‌ಗಢದಲ್ಲ್ಲಿ ,೯೬೪, ಜಾರ್ಖಂಡ್‌ನಲ್ಲಿ ,೯೨೧, ಉತ್ತರಾಖಂಡದಲ್ಲಿ ,೧೦೨, ಗೋವಾದಲ್ಲಿ ,೩೦೪, ತ್ರಿಪುರಾದಲ್ಲಿ ,೩೬೬, ಪುದುಚೇರಿಯಲ್ಲಿ ,೮೩೨, ಮಣಿಪುರದಲ್ಲಿ ,೮೦೦, ಹಿಮಾಚಲ ಪ್ರದೇಶದಲ್ಲಿ ,೪೧೭ ಮತ್ತು ಲಡಾಖ್‌ನಲ್ಲಿ ,೪೧೭ ಮಂದಿಗೆ ಸೋಂಕು ತಗುಲಿದೆ.

ನಾಗಾಲ್ಯಾಂಡಿನಲ್ಲಿ ೯೫೬ ಕೊರೋನಾ ಪ್ರಕರಣಗಳು, ಚಂಡೀಗಢದಲ್ಲಿ ೬೬೦, ಅರುಣಾಚಲ ಪ್ರದೇಶ ೬೦೯ ಮತ್ತು ದಾದ್ರಾ ಹಾಗೂ ನಗರ ಹವೇಲಿ ಮತ್ತು ದಮನ್ ಹಾಗೂ ದಿಯುವಿನಲ್ಲಿ ಒಟ್ಟು ೫೮೫ ಪ್ರಕರಣUಳು ದಾಖಲಾಗಿವೆ.

ಮೇಘಾಲಯದಲ್ಲಿ ೪೦೩, ಮಿಜೋರಾಂ ೨೮೨, ಸಿಕ್ಕಿಂನಲ್ಲಿ ಇದುವರೆಗೆ ೨೬೬ ಸೋಂಕುಗಳು ದಾಖಲಾಗಿವೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ೧೯೪ ಪ್ರಕರಣಗಳು ವರದಿಯಾಗಿವೆ.

No comments:

Advertisement