My Blog List

Monday, July 20, 2020

ಗೆಹ್ಲೋಟ್- ಪೈಲಟ್ ಜಟಾಪಟಿ ಮುಂದುವರಿಕೆ

ಗೆಹ್ಲೋಟ್- ಪೈಲಟ್  ಜಟಾಪಟಿ ಮುಂದುವರಿಕೆ

ನವದೆಹಲಿ: ಬಂಡಾಯ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರ ವಾಕ್ಸಮರವು 2020 ಜುಲೈ 20ರ ಸೋಮವಾರ ಕೂಡಾ ಮುಂದುವರೆದಿದ್ದು, ಸಚಿನ್ ಪೈಲಟ್ ಅವರು ಸರ್ಕಾರ ಉರುಳಿಸಲು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂದು ಆಪಾದಿಸಿದರೆ, ಪೈಲಟ್ ಅದನ್ನು ಆಧಾರರಹಿತ ಎಂದು ಅಲ್ಲಗಳೆದರು.

ಪಕ್ಷದ ಶಾಸಕರೊಬ್ಬರಿಗೆ ಬಿಜೆಪಿಯತ್ತ ಸಾಗಲು ಹಣ ನೀಡಲಾಗಿದೆಎಂಬ ಆರೋಪದಿಂದ ನನಗೆ ದುಃಖವಾಗಿದೆ, ಆದರೆ ಅಚ್ಚರಿ ಇಲ್ಲಎಂದು ಸಚಿನ್ ಪೈಲಟ್ ಹೇಳಿದರು.

ಹಣ ನೀಡುವ ಆರೋಪ ಆಧಾರ ರಹಿತಎಂಬುದಾಗಿ ಹೇಳಿದ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಇದು ತಮ್ಮ ಪ್ರತಿಷ್ಠೆಯನ್ನು ಹಾಳುಮಾಡುವ ಮತ್ತು ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ತಾವು ಎತ್ತಿರುವ ಮಹತ್ವದ ವಿಷಯದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಸ್ಪಷ್ಟ ಪ್ರಯತ್ನವಾಗಿದೆ ಎಂದು ಹೇಳಿದರು.

"ನಾನು ದುಃಖಿತನಾಗಿದ್ದೇನೆ ಆದರೆ ಇಂತಹ ಆಧಾರರಹಿತ ಮತ್ತು ಅಸಹ್ಯಕರ ಆರೋಪಗಳನ್ನು ನನ್ನ ವಿರುದ್ಧ ಹೊರಿಸಲಾಗುತ್ತಿರುವುದಕ್ಕೆ ಆಶ್ಚರ್ಯವಿಲ್ಲ. ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯ ಮತ್ತು ಶಾಸಕನಾಗಿ ನಾನು ಪಕ್ಷದ ನಾಯಕತ್ವದ ವಿರುದ್ಧ ಎತ್ತಿರುವ ನ್ಯಾಯಸಮ್ಮತವಾದ ಕಳವಳಗಳನ್ನು ತಳ್ಳಿಹಾಕುವ ಸಲುವಾಗಿ ಮಾತ್ರ ಇದನ್ನು ಮಾಡಲಾಗಿದೆ. ಪ್ರಯತ್ನವು ನನ್ನನ್ನು ಕೆಣಕುವ ಮತ್ತು ನನ್ನ ವಿಶ್ವಾಸಾರ್ಹತೆಯ ಮೇಲೆ ಆಕ್ರಮಣ ಮಾಡುವ ಉದ್ದೇಶವನ್ನು ಹೊಂದಿದೆಎಂದು ಸಚಿನ್ ಪೈಲಟ್ ಹೇಳಿಕೆಯೊಂದರಲ್ಲಿ ತಿಳಿಸಿದರು.

ರಾಜಸ್ಥಾನ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಅವರು ಪೈಲಟ್ ಮನೆಯಲ್ಲಿ ನಡೆದ ಮಾತುಕತೆಯಲ್ಲಿ ಬಿಜೆಪಿಯತ್ತ ನಿಷ್ಠೆ ಬದಲಿಸಲು ತಮಗೆ ಹಣದ ಆಮಿಷ ಒಡ್ಡಲಾಯಿತು ಎಂಬುದಾಗಿ ಹೇಳಿದ್ದರು. ಆದರೆ ಹಣದ ಮೊತ್ತವನ್ನು ಅವರು ಪ್ರಕಟಿಸಿರಲಿಲ್ಲ. ಯೋಜನೆಯ ಬಗ್ಗೆ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರಿಗೆ ತಿಳಿಸಿದ್ದೇನೆಎಂದು ಶಾಸಕ ಹೇಳಿದ್ದರು.

ನಾನು ಸಚಿನ್ ಜಿ ಅವರೊಂದಿಗೆ ಮಾತುಕತೆ ನಡೆಸಿದೆ. ಅವರು ಬಿಜೆಪಿಗೆ ಸೇರಲು ನನಗೆ ಹಣ ನೀಡಲಾಗುವುದು ಎಂದು ಹೇಳಿದರು.  ಆದರೆ ನಾನು ಕೇಸರಿ ಪಕ್ಷವನ್ನು ಸೇರುವುದಿಲ್ಲ ಎಂದು ಹೇಳಿ ಅವರ ಆಹ್ವಾನವನ್ನು ನಿರಾಕರಿಸಿದ್ದೇನೆಎಂದು ಮಾಲಿಂಗ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು.

ಕಳೆದ ವಾರ ಉಪಮುಖ್ಯಮಂತ್ರಿ ಹುದ್ದೆ ಮತ್ತು ರಾಜಸ್ಥಾನ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲ್ಪಟ್ಟ ಪೈಲಟ್, ಇಂತಹ ಹೆಚ್ಚು ಸುಳ್ಳುಗಳು ನನ್ನ ವರ್ಚಸ್ಸನ್ನು ಕುಂದಿಸುವ ಸಲುವಾಗಿ ಬರಲಿವೆಎಂದು ಹೇಳಿದರು.

" ಆರೋಪಗಳನ್ನು ಮಾಡಿದ ಶಾಸಕನ ವಿರುದ್ಧ ನಾನು ಸೂಕ್ತ ಮತ್ತು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ನನ್ನ ಸಾರ್ವಜನಿಕ ವರ್ಚಸ್ಸಿಗೆ ಮಸಿ ಬಳಿಯಲು ಇಂತಹ ಇನ್ನಷ್ಟು ಆರೋಪಗಳನ್ನು ನನ್ನ ವಿರುದ್ಧ ಮಾಡಲಾಗುವುದು ಎಂದು ನನಗೆ ಖಾತ್ರಿಯಿದೆ. ಆದರೆ ನಾನು ಅಸ್ಥಿರನಾಗುವುದಿಲ್ಲ, ನನ್ನ ನಂಬಿಕೆಗಳು ಮತ್ತು ನಿಷ್ಠೆಗಲ್ಲಿ ದೃಢವಾಗಿರುತ್ತೇನೆಎಂದು ಪೈಲಟ್ ನುಡಿದರು.

ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಬಾಡಿಯ ಮಾಜಿ ಶಾಸಕ ಹಾಗೂ ಪಕ್ಷದ ಇತರ ಐದು ಶಾಸಕರು ಕಳೆದ ಸೆಪ್ಟೆಂಬರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಆಗ ಬಿಎಸ್ಪಿ ಶಾಸಕಾಂಗ ಪಕ್ಷವನ್ನು ಕಾಂಗ್ರೆಸ್ಸಿನೊಂದಿಗೆ ವಿಲೀನಗೊಳಿಸುವಂತೆ ಶಾಸಕರು ರಾಜ್ಯ ವಿಧಾನಸಭಾ ಅಧ್ಯಕ್ಷ ಸಿ.ಪಿ.ಜೋಶಿ ಅವರಿಗೆ ಅಫಿಡವಿಟ್ ಸಲ್ಲಿಸಿದ್ದರು.

ಇದಕ್ಕೆ ಮುನ್ನ, ಸೋಮವಾರ ಬೆಳಗ್ಗೆ, ಮುಖ್ಯಮಂತ್ರಿ ಗೆಹ್ಲೋಟ್ ಅವರು ತಮ್ಮ ಸಂಪುಟದ ಮಾಜಿ ಉಪ ಮುಖ್ಯಮಂತ್ರಿಯ ವಿರುದ್ಧ ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯೊಂದಿಗೆ ಕೈ ಮಿಲಾಯಿಸಿದ್ದಾರೆ ಎಂಬ ಆರೋಪವನ್ನು ಪುನರಾವರ್ತಿಸಿದ್ದರು.

ಸಚಿನ್ ಪೈಲಟ್ ಬಹುದೂರ ಸಾಗಿದ್ದಾರೆ, ವಾಪಸ್ ಬರುವ ಸಾಧ್ಯತೆ ಇಲ್ಲ ಎಂದು ಹೇಳಿದ್ದ ಗೆಹ್ಲೋಟ್, ಯುವ ನಾಯಕನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

"ಮುಗ್ಧ ಮುಖ" ಹೊಂದಿರುವ ವ್ಯಕ್ತಿಯು ಇಂತಹ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಾನೆ ಮತ್ತು ಮಾಡುತ್ತಾನೆ ಎಂದು ಯಾರಿಗೆ ನಂಬಲು ಸಾಧ್ಯವಿತ್ತು? ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದರು.

ಬಿಜೆಪಿಯೊಂದಿಗೆ ಕೈಜೋಡಿಸುವ ಬಗ್ಗೆ ಸ್ಪಷ್ಟ ನಿರಾಕರಣೆ ಮಾಡಿರುವ ಸಚಿನ್ ಪೈಲಟ್, ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿರುವುದಾಗಿ ತಮ್ಮ ವಿರುದ್ಧ ಬಂದ ಆರೋಪವನ್ನು ಖಂಡತುಂಡವಾಗಿ ತಳ್ಳಿಹಾಕಿದ್ದಾರೆ.

No comments:

Advertisement