My Blog List

Monday, July 20, 2020

ಕೊರೋನಾ: ಆಕ್ಸ್ ಫರ್ಡ್ ಲಸಿಕೆ ಸುರಕ್ಷಿತ, ಪರಿಣಾಮಕಾರಿ

ಕೊರೋನಾ: ಆಕ್ಸ್ ಫರ್ಡ್ ಲಸಿಕೆ ಸುರಕ್ಷಿತ, ಪರಿಣಾಮಕಾರಿ

 ಪ್ರಾಥಮಿಕ ಫಲಿತಾಂಶ ಪ್ರಕಟ

ನವದೆಹಲಿ: ಕೋವಿಡ್-೧೯ರಕ್ಕೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯವು ನಡೆಸಿದ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ  2020 ಜುಲೈ 20ರ ಸೋಮವಾರ ಪ್ರಕಟಗೊಂಡಿದ್ದು, ಲಸಿಕೆಯ ಸುರಕ್ಷಿತ, ಸಹನೆ ಯೋಗ್ಯ ಹಾಗೂ ರೋಗ ನಿರೋಧಕ ಪ್ರತಿಕ್ರಿಯೆ ಉಂಟು ಮಾಡುತ್ತದೆ ಎಂಬುದು ಸ್ಪಷ್ಟವಾಗಿದೆ.

ಪ್ರಾಥಮಿಕ ಪರೀಕ್ಷಾ ವರದಿಯು ಕೋವಿಡ್-೧೯ರ ಸಾಂಕ್ರಾಮಿಕವನ್ನು ಗುಣಪಡಿಸುವ ಭರವಸೆಯನ್ನು ಮೂಡಿಸಿದೆ ಎಂದು ಇಂಗ್ಲೆಂಡಿನ ದಿ ಲಾನ್ಸೆಟ್ವೈದ್ಯಕೀಯ ನಿಯತಕಾಲಿಕದ ಮುಖ್ಯ ಸಂಪಾದಕರು ಬರೆದರು.

ಪ್ರಾಯೋಗಿಕ ಕೊರೋನಾವೈರಸ್ ಲಸಿಕೆಯು ಪ್ರಾಥಮಿಕ ಪರೀಕ್ಷೆಯು ಸುರಕ್ಷಿತ ಮತ್ತು ಜನರಲ್ಲಿ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವುದನ್ನು ಖಚಿತ ಪಡಿಸಿದೆ ಎಂದು ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ.

ವ್ಯಾಪಕವಾಗಿ ಅನುಸರಿಸುತ್ತಿರುವ ಪ್ರಯೋಗವು ಪ್ರಸ್ತುತ ಸುಧಾರಿತ ಹಂತದಲ್ಲಿದೆ, ಇಂಗ್ಲೆಂಡ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗಗಳು ನಡೆಯುತ್ತಿವೆ. ಅಂತಿಮ ಫಲಿತಾಂಶಗಳು ಸಹ ಸಕಾರಾತ್ಮಕವಾಗಿದ್ದರೆ ಲಸಿಕೆಯನ್ನು ಸಾಮೂಹಿಕ ಪ್ರಮಾಣದಲ್ಲಿ ಉತ್ಪಾದಿಸಲು ಆಕ್ಸ್ಫರ್ಡ್, ಇಂಗ್ಲೆಂಡ್ ಸರ್ಕಾರ ಮತ್ತು ಬಯೋಫಾರ್ಮಾ ಸಂಸ್ಥೆ ಆಸ್ಟ್ರಾಜೆನೆಕಾ ನಡುವೆ ಈಗಾಗಲೇ ಸಹಮತಕ್ಕೆ ಬರಲಾಗಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅದರ ಉತ್ಪಾದನೆಗೆ ಜಾಗತಿಕ ಪಾಲುದಾರರಲ್ಲಿ ಒಂದಾಗಿದೆ.

ಚೀನಾದಲ್ಲಿ ಲಸಿಕೆ ಪ್ರಯೋಗದ ನೇ ಹಂತವು ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ ಮತ್ತು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರೇರೇಪಿಸುತ್ತದೆ ಎಂದು ನಿಯತಕಾಲಿಕ ವರದಿ ಮಾಡಿದೆ. ಮರುಸಂಘಟನೆಯ ಅಡೆನೊವೈರಸ್ ಟೈಪ್ --ವೆಕ್ಟರ್ಡ್ ಕೋವಿಡ್ -೧೯ ಲಸಿಕೆ (ಆಡ್ -ವೆಕ್ಟರ್ಡ್ ಕೋವಿಡ್ -೧೯ ಲಸಿಕೆ) ಯಾದೃಚ್ಛಿಕ ನಿಯಂತ್ರಿತ ಪ್ರಯೋಗವನ್ನು ಚೀನಾದಲ್ಲಿ ಏಪ್ರಿಲ್ನಲ್ಲಿ ನಡೆಸಲಾಯಿತು ಮತ್ತು ೫೦೦ ಕ್ಕೂ ಹೆಚ್ಚು ಜನರನ್ನು ಒಳಗೊಂಡಿತ್ತು.

ಮಧ್ಯೆ, ಭಾರತದಲ್ಲಿ ಒಂದೇ ದಿನ ೪೦,೪೨೫ ನೂತನ ಕೊರೋನಾವೈರಸ್ ಪ್ರಕರಣಗಳು ದಾಖಲಾಗುವುದರೊಂದಿಗೆ ದೇಶದ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ ಸೋಮವಾರ ೧೧ ಲಕ್ಷಕ್ಕೆ ತಲುಪಿತು. ಇದೇ ವೇಳೆಗೆ ಸಂಪೂರ್ಣ ಗುಣಮುಖರಾಗಿ ಚೇತರಿಸಿದವರ ಸಂಖ್ಯೆ ಲಕ್ಷವನ್ನು ದಾಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಒಂದೇ ದಿನದಲ್ಲಿ ೬೮೧ ಹೊಸ ಸಾವುಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ ೨೭,೪೯೭ಕ್ಕೆ ಏರಿದೆ.

ಭಾರತದ ಕೊರೋನಾ ಸೋಂಕಿತರ ಸಂಖ್ಯೆಯು ೧೦ ಲಕ್ಷದ ಗಡಿ ದಾಟಿದ ಬಳಿಕ ಕೇವಲ ಮೂರು ದಿನದಲ್ಲಿ ೧೧ ಲಕ್ಷದ ಗಡಿ ದಾಟಿದೆ. ಒಟ್ಟು ಸೋಂಕಿತರ ಪೈಕಿ ,೦೦,೦೮೬ ಜನರು ಚೇತರಿಸಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ,೯೦,೪೫೯ ಎಂದು ವರದಿಗಳು ಹೇಳಿವೆ.

ದಿನಕ್ಕೆ ೩೦,೦೦೦ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾದ ಬಳಿಕ ಸತತವಾಗಿ ದಿನಗಳ ಕಾಲ ಪ್ರಕರಣಗಳು ೩೦,೦೦೦ದ ಗಡಿ ದಾಟಿದ್ದು, ಸೋಮವಾರ ೪೦,೦೦೦ದ ಗಡಿಯನ್ನು ದಾಟಿತು.

ಮಧ್ಯ ಲಕ್ಷಣ ರಹಿತ ರೋಗಿಗಳಿಗೆ ಮನೆಯಲ್ಲೇ ಕ್ವಾರಂಟೈನ್ ಸೌಲಭ್ಯ ಕಲ್ಪಿಸಲು ಉತ್ತರ ಪ್ರದೇಶ ಸರ್ಕಾರ ಸೋಮವಾರ ಒಪ್ಪಿಗೆ ನೀಡಿತು.

ರೋಗಲಕ್ಷಣ ರಹಿತ ಪ್ರಕರಣಗಳಲ್ಲಿ ಹೋಮ್ ಕ್ವಾರಂಟೈನ್  ಮಾಡುವ ಬಗೆಗಿನ ವಿಚಾರವನ್ನು ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ಕೈಗೆತ್ತಿಕೊಂಡಿತ್ತು. ಕೇಂದ್ರ ಸರ್ಕಾರವು ಇಂತಹ ಸಂದರ್ಭಗಳಲ್ಲಿ ಮನೆಗಳಲ್ಲೇ ಕ್ವಾರಂಟೈನ್ ಮಾಡಲು ಮಾರ್ಗಸೂಚಿ ಪ್ರಕಟಿಸಿತ್ತು. ಆದಾಗ್ಯೂ ಉತ್ತರ ಪ್ರದೇಶ ಸರ್ಕಾರವು ಇದನ್ನು ಜಾರಿಗೊಳಿಸಿರಲಿಲ್ಲ ಮತ್ತು ಅಂತಹ ರೋಗಿಗಳನ್ನು ಎಲ್೧ ಕೋವಿಡ್ ಆಸ್ಪತ್ರೆಗಳಿಗೆ ಕಳುಹಿಸುತ್ತಿತ್ತು. ಈಗ ಪ್ರಕರಣಗಳ ಸಂಖ್ಯೆ ಏರಿದ್ದು, ವಿವಿಧ ಜಿಲ್ಲೆಗಳಿಂದ ಮೂಲಸವಲತ್ತುಗಳ ಕೊರತೆ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೋಮ್ ಕ್ವಾರಂಟೈನಿಗೆ ಒಪ್ಪಿಗೆ ನೀಡಿದೆ ಎಂದು ವರದಿಗಳು ಹೇಳಿವೆ.

No comments:

Advertisement