Thursday, July 23, 2020

ಜಗತ್ತಿನ ಟಾಪ್ ೫೦ ಕಂಪೆನಿ ಸಾಲಿಗೆ ಮುಖೇಶ ಅಂಬಾನಿಯ ರಿಲಯನ್ಸ್

ಜಗತ್ತಿನ ಟಾಪ್ ೫೦ ಕಂಪೆನಿ ಸಾಲಿಗೆ
ಮುಖೇಶ ಅಂಬಾನಿಯ ರಿಲಯನ್ಸ್

ನವದೆಹಲಿ: ೧೩ ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮಾರುಕಟ್ಟೆ ಬಂಡವಾಳದೊಂದಿಗೆ ವಿಶ್ವದ ಅತ್ಯಂತ ಮೌಲ್ಯಯುತ (ಟಾಪ್) ೫೦ ಕಂಪೆನಿಗಳ ಸಾಲಿಗೆ ಸೇರಿದ ಭಾರತದ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಗೆ ಕೋಟ್ಯಧೀಶ ಮುಖೇಶ ಅಂಬಾನಿ ಅವರ ರಿಲಯನ್ಸ್ 2020 ಜುಲೈ 23ರ ಗುರುವಾರ ಪಾತ್ರವಾಯಿತು.

ತೈಲದಿಂದ ಟೆಲಿಕಾಮ್ವರೆಗೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಿಸಿರುವ ರಿಲಯನ್ಸ್ ವಿಶ್ವದಲ್ಲಿ ಅತ್ಯಧಿಕ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪೆನಿಗಳ ಪೈಕಿ ೪೮ನೇ ಸ್ಥಾನಕ್ಕೆ ಏರಿದೆ ಎಂದು ಷೇರು ಮಾರುಕಟ್ಟೆ ಅಂಕಿಸಂಖ್ಯೆಗಳು ತಿಳಿಸಿದವು.

ಜಾಗತಿಕವಾಗಿ . ಟ್ರಿಲಿಯನ್ ಅಮೆರಿಕನ್ ಡಾಲರ್ ಮಾರುಕಟ್ಟೆ ಬಂಡವಾಳ ಹೊಂದಿರುವ ಸೌದಿ ಆರ್ಮ್ಯಾಕೋ ವಿಶ್ವದಲ್ಲೇ ಅತ್ಯಂತ ಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪೆನಿಯಾಗಿದೆ. ಅದರ ನಂತರದ ಸ್ಥಾನದಲ್ಲಿ ಆಪಲ್, ಮೈಕ್ರೋಸಾಫ್ಟ್ , ಅಮೆಜಾನ್ ಮತ್ತು ಆಲ್ಫಾಬೆಟ್ ಇವೆ.

ಗುರುವಾರ ರಿಲಯನ್ಸ್ ಷೇರುಬೆಲೆ ಬಿಎಸ್ಇಯಲ್ಲಿ ,೦೬೦.೬೫ ರೂಪಾಯಿಗಳೊಂದಿಗೆ ವಹಿವಾಟು ಮುಗಿಸಿತ್ತು. ಇದು ಹಿಂದಿನ ದಿನದ ಮುಕ್ತಾಯದ ದರಕ್ಕಿಂತ ಶೇಕಡಾ .೮೨ರಷ್ಟು ಹೆಚ್ಚು. ಇದು ಕಂಪೆನಿಗೆ ೧೩ ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಒದಗಿಸಿಕೊಟ್ಟಿತು.

ಯಾವುದೇ ಭಾರತೀಯ ಕಂಪೆನಿಯು ೧೩ ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಈವರೆಗೆ ದಾಟಿಲ್ಲ.

ರಿಲಯನ್ಸ್ ಮಾರುಕಟ್ಟೆ ಬಂಡವಾಳವು ಚೆವ್ರೋನ್ ೧೭೦ ಬಿಲಿಯನ್ ಅಮೆರಿಕನ್ ಡಾಲರ್ ಮಾರುಕಟ್ಟೆ ಬಂಡವಾಳವನ್ನು ಮೀರಿದೆ. ಅದೇ ರೀತಿ ಒರೇಕಲ್, ಯೂನಿಲಿವರ್,  ಬ್ಯಾಂಕ್ ಆಫ್ ಚೈನಾ, ಬಿಎಚ್ ಪಿ ಗ್ರೂಪ್, ರಾಯಲ್ ಡಚ್ ಶೆಲ್ ಮತ್ತು ಸಾಫ್ಟ್ ಬ್ಯಾಂಕ್ ಗ್ರೂಪ್ ಗಳ ಮಾರುಕಟ್ಟೆ ಬಂಡವಾಳಕ್ಕಿಂತ ಹೆಚ್ಚಾಗಿದೆ.

ರಿಲಯನ್ಸ್ ಏಷ್ಯಾದಲ್ಲಿ ಅತ್ಯಂತ ಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ೧೦ನೇ ಕಂಪೆನಿಯಾಗಿದೆ. ಚೀನಾದ ಅಲಿಬಾಬ ಸಮೂಹವು ಜಾಗತಿಕವಾಗಿ ೭ನೇ ಸ್ಥಾನದಲ್ಲಿದೆ.

ಟಾಪ್ ೧೦೦ ಕಂಪೆನಿಗಳ ಸಾಲಿನಲ್ಲಿ ಇರುವ ಭಾರತದ ಬೇರೆ ಏಕೈಕ ಕಂಪೆನಿ ಎಂದರೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್. ಬಿಎಸ್ಇಯಲ್ಲಿ ಟಾಟಾ ಕನ್ಸಲ್ಟೆನ್ಸಿಯ ಮುಕ್ತಾಯದ ದರ ,೧೭೦.೭೫ ರೂಪಾಯಿಯಾಗಿದ್ದು, ಟಿಸಿಎಸ್ ಮಾರುಕಟ್ಟೆ ಬಂಡವಾಳ .೧೪ ಲಕ್ಷ ಕೋಟಿ ರೂಪಾಯಿ ಅಂದರೆ ೧೦೯ ಬಿಲಿಯನ್ ಡಾಲರ್ ಆಗಿದೆ.

No comments:

Advertisement