ಗ್ರಾಹಕರ ಸುಖ-ದುಃಖ

My Blog List

Thursday, July 23, 2020

ಪೂರ್ಣ ಗಾಜಿನ ಸೇತುವೆ: ಚೀನಾ ವಿಶ್ವ ದಾಖಲೆ

ಪೂರ್ಣ ಗಾಜಿನ ಸೇತುವೆ: ಚೀನಾ ವಿಶ್ವ ದಾಖಲೆ

ಬೀಜಿಂಗ್: ಚೀನಾದ ದಕ್ಷಿಣ ಪ್ರಾಂತ್ಯದ ಗುವಾಂಗ್ಡಾಂಗ್ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸಂಪೂರ್ಣ ಗಾಜಿನ ಸೇತುವೆ ಪ್ರವಾಸಿಗರ ಮೈ ನವಿರೇಳಿಸುತ್ತಿದೆ.

ಪ್ರವಾಸಿಗರಿಗೆ ಜೀವಮಾನದ ರೋಮಾಂಚನವನ್ನು ನೀಡುತಿರುವ ಸೇತುವೆ ಲಿಯಾನ್ಝೊವುದಲ್ಲಿನ  ಹುವಾಂಗ್ಚುವಾನ್ ಕಣಿವೆಗಳನ್ನು ವ್ಯಾಪಿಸಿದ್ದು ೫೨೬ ಮೀಟರ್ (,೭೨೫ ಅಡಿ) ಉದ್ದವಾಗಿದೆ. ಇದು ಪ್ರಸ್ತುತ ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೂರು ಕಣಿವೆ ಪ್ರದೇಶದ ರಮ್ಯ ಸ್ಥಳ ಲಿಯಾಂಜಿಯಾಂಗ್ ನದಿಯ ಮೇಲೆ ನಿರ್ಮಿಸಲಾಗಿರುವ ಭವ್ಯವಾದ ರಚನೆಯನ್ನು 2020ರ ಜುಲೈ ೧೮ ರಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.

ಸಾರ್ವಜನಿಕರಿಗಾಗಿ ಮುಕ್ತ ಗೊಳಿಸಿದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಗಿನ್ನೆಸ್ ವಿಶ್ವದಾಖಲೆಯ ಪ್ರತಿನಿಧಿಗಳು ಸದರಿ ರಚನೆಯು ಪ್ರಸ್ತುತ ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಎಂಬುದಾಗಿ ಅಂಗೀಕರಿಸಿದ್ದಾರೆ.

ಸೇತುವೆಯು ಮಧ್ಯದಲ್ಲಿ ನಾಲ್ಕು ವೀಕ್ಷಣಾ ಸ್ಥಳಗಳನ್ನು ಹೊಂದಿದೆ ಮತ್ತು ಏಕಕಾಲದಲ್ಲಿ ೫೦೦ ಪ್ರವಾಸಿಗರು ಇದರ ಮೇಲೆ ಸಾಗಬಹುದು ಎಂದು ವರದಿಗಳು ತಿಳಿಸಿವೆ.

ಇದನ್ನು ಸಾಮಾನ್ಯವಾಗಿ ಕಾಲ್ಸೇತುವೆಯಾಗಿ ಮಾತ್ರ ಬಳಸಲಾಗುತ್ತದೆ. ಆದರೆ ಸೇತುವೆಯಲ್ಲಿ ಬಂಗೀ ಜಂಪಿಂಗ್ ಮತ್ತು ಜಿಪ್ ಲೈನ್ಗಳಂತಹ ಸಾಹಸ ಕ್ರೀಡೆಗಳಿಗೆ ಅವಕಾಶವಿದೆ. ಸೇತುವೆಯನ್ನು ನಿರ್ಮಿಸಲು . ಸೆಂ.ಮೀ ದಪ್ಪದ ಲ್ಯಾಮಿನೇಟೆಡ್ ಗಾಜಿನ ಮೂರು ಪದರಗಳನ್ನು ಬಳಸಲಾಗಿದೆ.

೨೦೧೯ ರಲ್ಲಿ, ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ ಹುವಾಕ್ಸಿ ವರ್ಲ್ಡ್ ಅಡ್ವೆಂಚರ್ ಪಾರ್ಕ್ನಲ್ಲಿ ನಿರ್ಮಾಣಗೊಂಡಿತ್ತು.

೫೧೮ ಮೀಟರ್ ಉದ್ದದ ಸೇತುವೆ ಸಾಹಸ ಉದ್ಯಾನದಲ್ಲಿ ನೆಲಮಟ್ಟಕ್ಕಿಂತ ೧೦೦ ಮೀಟರ್ಗಿಂತಲೂ ಹೆಚ್ಚು ಎತ್ತರದಲ್ಲಿ ತೂಗಾಡುತ್ತದೆ. . ಸೆಂಟಿಮೀಟರ್ ದಪ್ಪವಿರುವ ವಿಶೇಷ ಗಾಜಿನಿಂದ ಸೇತುವೆಯನ್ನು ನಿರ್ಮಿಸಲಾಗಿದೆ. ವಿಶೇಷ ಗಾಜಿನ ಪ್ರತಿ ಫಲಕವು ಗರಿಷ್ಠ . ಟನ್ ತೂಕವನ್ನು  ಹೊರಬಲ್ಲುದು.

ಗಾಜಿನ ಸೇತುವೆ ಏಕಕಾಲದಲ್ಲಿ ಸುಮಾರು ,೬೦೦ ಜನರನ್ನು ಹೊರಬಲ್ಲುದು.

ಸೇತುವೆಯ ಮೇಲೆ ನಡೆಯುವ ಅನುಭವವು ಅದರ ಪಾರದರ್ಶಕ ತಳದಿಂದಾಗಿ ಅಲ್ಲ, ಬದಲಿಗೆ, ಗಾಜು ಚಟಪಟನೆ ಒಡೆದುಹೋಗುವಂತಹ ದೃಶ್ಯ ಹಾಗೂ ಧ್ವನಿ ಸಂಯೋಜನೆಯಿಂದಾಗಿ ಭಯಾನಕ ಅನುಭವವನ್ನು ಉಂಟು ಮಾಡುತ್ತದೆ ಎಂದು ವರದಿಯೊಂದು ತಿಳಿಸಿದೆ.

ಪ್ರವಾಸಿಗರು ಅದರ ಮೇಲೆ ನಡೆಯುವಾಗ ಮೇಲ್ಮೈಯಲ್ಲಿರುವ ಸ್ಪೈಡರ್ ವೆಬ್ ಮಾದರಿಯು ಗಾಜಿನ ಸೇತುವೆ ಬಿರುಕು ಬಿಡುತ್ತಿದೆ ಎಂದು ಭಾವಿಸುವಂತೆ ಮಾಡುತ್ತದೆ.

ಹುವಾಕ್ಸಿ ವರ್ಲ್ಡ್ ಅಡ್ವೆಂಚರ್ ಪಾರ್ಕ್ ಗಾಜಿನ ಸೇತುವೆ ಈಗ ಎರಡನೇ ಅತಿ ಉದ್ದದ ಗಾಜಿನ ಸೇತುವೆಯಾಗಿದೆ.

ಗಾಜಿನ ಸೇತುವೆ ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ

No comments:

Advertisement