ಗ್ರಾಹಕರ ಸುಖ-ದುಃಖ

My Blog List

Wednesday, July 8, 2020

ಲಡಾಖ್: ಹಾಟ್ ಸ್ಪ್ರಿಂಗ್ಸ್ ವಲಯದಿಂದ ಚೀನಾ ಪಡೆ ವಾಪಸ್

ಲಡಾಖ್:  ಹಾಟ್ ಸ್ಪ್ರಿಂಗ್ಸ್ ವಲಯದಿಂದ ಚೀನಾ ಪಡೆ ವಾಪಸ್

ನವದೆಹಲಿ: ನೈಜ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ ಕಡಿಮೆ ಮಾಡುವ ಪ್ರಯತ್ನಗಳ ಭಾಗವಾಗಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್) ಲಡಾಖ್ ಹಾಟ್ ಸ್ಪ್ರಿಂಗ್ಸ್ ವಲಯದ ಪಹರೆ ಪಾಯಿಂಟ್ ೧೫ರಿಂದ ಎರಡು ಕಿಲೋಮೀಟರ್ನಷ್ಟು ಹಿಂದಕ್ಕೆ ಸರಿದಿದೆ.

ಗೋಗ್ರಾದಲ್ಲಿನ ಸೇನಾ ಪಡೆಗಳ ವಾಪಸಾತಿ ಗುರುವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಲ್ಲಿಯೂ ಸಹ ಪೀಪಲ್ಸ್ ಲಿಬರೇಶನ್ ಆರ್ಮಿಯು ಕಿಲೋಮೀಟರ್ ಹಿಂದಕ್ಕೆ ಸಾಗಲಿದೆ ಎಂದು ಮೂಲಗಳು  2020 ಜುಲೈ 8ರ ಬುಧವಾರ ತಿಳಿಸಿದವು.

ಚೀನಾ ಹಿಂದೆ ಪಹರೆ ಪಾಯಿಂಟ್ ೧೪ ರಿಂದ ಸಂಪೂರ್ಣವಾಗಿ ಹಿಂದೆ ಸರಿದಿತ್ತು. ಈಗ ಚೀನಾ ಪಡೆಗಳು ಕಣಿವೆಯಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಪಕ್ಕದಲ್ಲೇ ಇರುವ ಚೀನೀ ಪ್ರದೇಶದಲ್ಲೇ ಇವೆ ಎಂಬುದನ್ನು ಉಪಗ್ರಹ ಚಿತ್ರಗಳು ಖಚಿತ ಪಡಿಸಿವೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡುವಿನ ಮಾತುಕತೆಯು ಧನಾತ್ಮಕವಾಗಿತ್ತು ಎಂಬುದಾಗಿ ಬೀಜಿಂಗ್ ಹೇಳಿದ ಬಳಿಕ ಗಡಿಯ ಮುಂಚೂಣಿ ಸ್ಥಳಗಳಿಂದ ಸೇನಾಪಡೆ ವಾಪಸಾತಿಯ ಪ್ರಕ್ರಿಯೆ ಆರಂಭಗೊಂಡಿದೆ.

ಚೀನಾ ಮತ್ತು ಭಾರv ವಿಶೇಷ ಪ್ರತಿನಿಧಿಗಳಾಗಿರುವ ವಾಂಗ್ ಮತ್ತು ಡೋವಲ್ ಭಾನುವಾರ ಸಂಜೆ ವಿಡಿಯೋ ಸಂಭಾಷಣೆ ಮೂಲಕ ಗಡಿ ಬಿಕ್ಕಟ್ಟು ಇತ್ಯರ್ಥ ಸಾಧ್ಯತೆ ಬಗ್ಗೆ ನಡೆಸಿದ್ದರು.

ಪ್ಯಾಂಗೊಂಗ್ ತ್ಸೊ, ಗಲ್ವಾನ್ ಕಣಿವೆ, ಮತ್ತು ಗೋಗ್ರಾ ಹಾಟ್ ಸ್ಪ್ರಿಂಗ್ ಸೇರಿದಂತೆ ಪೂರ್ವ ಲಡಾಖ್ ಹಲವಾರು ಪ್ರದೇಶಗಳಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಎಂಟು ವಾರಗಳ ಕಾಲ ಮುಖಾಮುಖಿಯಾಗಿದ್ದವು.

ಚೀನೀ ಸೇನೆಯು ಸೋಮವಾರ ಗಲ್ವಾನ್ ಕಣಿವೆ ಮತ್ತು ಗೋಗ್ರಾ ಹಾಟ್ ಸ್ಪ್ರಿಂಗ್ನಿಂದ ಸೈನಿಕರನ್ನು  ಹಿಂತೆಗೆದುಕೊಳ್ಳಲು ಪ್ರಾರಂಭಿಸಿತ್ತು.

ಹಿಂಸಾಚಾರ ಮತ್ತು ಸಾವುನೋವುಗಳಿಗೆ ನೇರವಾಗಿ ಕಾರಣವಾಗಿರುವ "ಪೂರ್ವಯೋಜಿತ ಕ್ರಮವನ್ನು ಚೀನಾ ಕೈಗೊಂಡದ್ದೇ ಹಿಂಸಾತ್ಮಕ ಘಟನೆಗೆ ಕಾರಣವಾಯಿತು ಎಂದು ಭಾರತ ಸ್ಪಷ್ಟವಾಗಿ ಚೀನಾಕ್ಕೆ ತಿಳಿಸಿದೆ.

"ಯಥಾಸ್ಥಿತಿಯನ್ನು ಬದಲಾಯಿಸದಂತೆ ಒಪ್ಪಿಕೊಳ್ಳಲಾಗಿದ್ದ ಎಲ್ಲ ಒಪ್ಪಂದಗಳನ್ನು ಉಲ್ಲಂಘಿಸಿ ಸತ್ಯವನ್ನು ಬದಲಾಯಿಸುವ ಉದ್ದೇಶವನ್ನು ಇದು ಪ್ರತಿಬಿಂಬಿಸಿದೆಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಜೂನ್ ೧೭ ರಂದು ತಮ್ಮ ಫೋನ್ ಸಂಭಾಷಣೆಯ ಸಂದರ್ಭದಲ್ಲಿ ವಾಂಗ್ಗೆ ತಿಳಿಸಿದ್ದರು.

No comments:

Advertisement