Monday, July 13, 2020

ಭಾರತ: ದೈನಂದಿನ ಕೋವಿಡ್ ಪ್ರಕರಣ ೨೮,೭೦೧ಕ್ಕೆ

ಭಾರತ: ದೈನಂದಿನ ಕೋವಿಡ್ ಪ್ರಕರಣ ೨೮,೭೦೧ಕ್ಕೆ

ಚೇತರಿಕೆ ,೬೦,೪೭೨, ಒಟ್ಟು ಸಾವು ೨೩,೩೩೫

ನವದೆಹಲಿ: ಭಾರತದಲ್ಲಿ ಪ್ರತಿದಿನ ದಾಖಲಾಗುವ ಕೊರೋನವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, 2020 ಜುಲೈ 13ರ ಸೋಮವಾರ ಒಂದೇ ದಿನ ೨೮,೭೦೧ ಹೊಸ ಪ್ರಕರಣಗಳು ಮತ್ತು ೫೦೦ ಸಾವುಗಳು ದಾಖಲಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಇದೇ ವೇಳೆಗೆ ಚೇತರಿಕೆಯ ಸಂಖ್ಯೆ ಕೂಡಾ ಗಣನೀಯವಾಗಿ ಹೆಚ್ಚುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಹಿಂದಕ್ಕೆ ತಳ್ಳಿದೆ.

ಭಾರತದಲ್ಲಿ ಕೊರೋನಾವೈರಸ್ ಒಟ್ಟು ಪ್ರಕರಣಗಳ ಸಂಖ್ಯೆ ,೮೯,೩೯೭ಕ್ಕೆ ಏರಿದ್ದರೆ, ಒಟ್ಟು ಸಾವಿನ ಸಂಖ್ಯೆ ೨೩,೩೩೫ಕ್ಕೆ ಏರಿದೆ. ಒಟ್ಟು ಪ್ರಕರಣಗಳ ಪೈಕಿ ಚೇತರಿಸಿ ಗುಣಮುಖರಾದವರ ಸಂಖ್ಯೆ ,೬೦,೪೭೨ಕ್ಕೆ ಏರಿದೆ.

ಚೇತರಿಕೆಯ ಪ್ರಮಾಣ ಗಣನೀಯವಾಗಿ ಸುಧಾರಿಸಿದ್ದರೂ, ಕೊರೋನಾ ಪ್ರಸರಣವು ಭಾರತದಲ್ಲಿ ಇನ್ನೂ ಉತ್ತುಂಗಕ್ಕೆ ಏರಿಲ್ಲ. ಪ್ರಕರಣಗಳು ಉತ್ತುಂಗಕ್ಕೆ ಏರಿದ ಬಳಿಕ, ಕ್ಷೀಣಿಸಲು ಆರಂಭವಾಗುತ್ತದೆ.

ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಕರ್ನಾಟಕ ರಾಜ್ಯಗಳು ಸಾಂಕ್ರಾಮಿಕ ರೋಗಕ್ಕೆ ಅತಿಯಾಗಿ ತುತ್ತಾಗಿವೆ. ಸೋಂಕಿನ ಹರಡುವಿಕೆಯನ್ನು ತಡೆಯಲು ಮತ್ತು ಪರೀಕ್ಷಿಸಲು ದೇಶದ ಹಲವಾರು ಭಾಗಗಳಲ್ಲಿ ಒಂದು ವಾರದಿಂದ ಹದಿನೈದು ದಿನಗಳವರೆಗೆ ದಿಗ್ಬಂಧನಗಳನ್ನು (ಲಾಕ್ ಡೌನ್) ವಿಧಿಸಲಾಗಿದೆ.

ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ತಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಯತ್ನವನ್ನು ಚುರುಕು ಗೊಳಿಸುತ್ತಿದ್ದು, ಯಾವುದೇ ಅಡ್ಡಪರಿಣಾಮಗಳಿಲ್ಲದೆ ಕೋವಿಡ್-೧೯ ವಿರುದ್ಧ ಸಂಪೂರ್ಣ ವಿನಾಯಿತಿ ನೀಡುವ ಲಸಿಕೆ ಅಭಿವೃದ್ಧಿಗೆ ಮುಂದಾಗಿದೆ.

ಸೋಮವಾರ ಸಂಜೆ, ರಷ್ಯಾದ ಸೆಚೆನೋವ್ ಮೊದಲ ಮಾಸ್ಕೋ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯವು ವಿಶ್ವದ ಮೊತ್ತ ಮೊದಲ ಲಸಿಕೆಯನ್ನು ಸ್ವ ಇಚ್ಛೆಯಿಂದ ಮುಂದೆ ಬಂದ ಸ್ವಯಂಸೇವಕರ ಮೇಲೆ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿತು.

ಅಮೆರಿಕದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಮಿಲಿಟರಿ ಆಸ್ಪತ್ರೆಗೆ ಭೇಟಿ ಮುಖಗವಸು (ಮಾಸ್ಕ್) ಧರಿಸಿ ಭೇಟಿ ನೀಡಿದರು. ಮುಖಗವಸುಗಳಿಗೆ ತಾನು ಎಂದಿಗೂ ವಿರೋಧಿಯಲ್ಲ  ಎಂದು ಅವರು ನುಡಿದರು.

ಮಧ್ಯೆ, ೪೪೯ ಹೊಸ ಪ್ರಕರಣಗಳೊಂದಿಗೆ ಕೇರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ,೦೦೦ ದಾಟಿದೆ.

ಕೇರಳದಲ್ಲಿ ದೈನಂದಿನ ಕೋವಿಡ್ -೧೯ ಸೋಂಕುಗಳು ಭಾರಿ ಏರಿಕೆ ಕಂಡಿದ್ದು, ಸೋಮವಾರ ೪೪೯ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕು ಪ್ರಕರಣಗಳ ಸಂಖ್ಯೆ ,೩೨೨ಕ್ಕೆ ತಲುಪಿತು. ಸಾವಿನ ಸಂಖ್ಯೆ ೩೩ಕ್ಕೆ ತಲುಪಿದೆ.

ಸೋಂಕಿತರಲ್ಲಿ ಇಂಡೋ ಟಿಬೆಟಿಯನ್ ಗಡಿ ಪಡೆಯ ೭೭ ಯೋಧರು ಮತ್ತು ಐವರು ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರಂನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

No comments:

Advertisement